Author: kannadanewsnow07

ಮೈಸೂರು: ಮೈಸೂರಿನ ಕೆ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡರು.  ನೀರು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆದೇಶಿಸಿದರು.

Read More

ಭೋಪಾಲ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಧ್ಯಪ್ರದೇಶದ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಬಿಜೆಪಿ ಕಾರ್ಯಕರ್ತ ನವೀನ್ ಝಾ ರಾಂಚಿ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ: ಬಿಜೆಪಿಯಲ್ಲಿ ಕೊಲೆ ಆರೋಪಿ ಅಧ್ಯಕ್ಷನಾಗಬಹುದು, ಆದರೆ ಕಾಂಗ್ರೆಸ್ನಲ್ಲಿ ಇದು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ರಾಹುಲ್ ಅವರ ಹೇಳಿಕೆಯು ತನಗೆ ನೋವುಂಟು ಮಾಡಿದೆ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದೆ, ಆದ್ದರಿಂದ ದೂರು ದಾಖಲಿಸಲಾಗಿದೆ ಎಂದು ನವೀನ್ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ. ಕೊಲೆ ಆರೋಪಿ ಕೂಡ ಅಧ್ಯಕ್ಷರಾಗಬಹುದು, ಆದರೆ ಇದು ಕಾಂಗ್ರೆಸ್ನಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಚೈಬಾಸಾ ನ್ಯಾಯಾಲಯದಲ್ಲಿ ದೂರು ಪ್ರಕರಣವೂ ದಾಖಲಾಗಿದೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸದಿರುವ ಅವಧಿಯನ್ನು ಇಲ್ಲಿನ ನ್ಯಾಯಾಲಯ ವಿಸ್ತರಿಸಿದೆ.

Read More

ನವದೆಹಲಿ: ಚಾಲನಾ ಪರವಾನಗಿ ಪಡೆಯಲು ಸರ್ಕಾರ ನಿಯಮಗಳನ್ನು ಬದಲಾಯಿಸಿದೆ. ವ್ಯಕ್ತಿಗಳು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ಟಿಒ) ಚಾಲನಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಖಾಸಗಿ ಸಂಸ್ಥೆಗಳು ಈಗ ಪರೀಕ್ಷೆಗಳನ್ನು ನಡೆಸಲು ಮತ್ತು ಅವರು ತರಬೇತಿ ಪಡೆದ ಜನರಿಗೆ ಚಾಲನಾ ಪರವಾನಗಿಗಳನ್ನು ನೀಡಬಹುದು ಎಂದು ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಹೊಂದಿವೆ. ಈ ನಿಯಮಗಳು ಜೂನ್ 1, 2024 ರಿಂದ ಜಾರಿಗೆ ಬರಲಿದ್ದು, ಸಾರ್ವಜನಿಕರಿಗೆ ಮಾಹಿತಿ ನೀಡಲು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಹೊಸ ನಿಯಮಗಳ ಗಮನಾರ್ಹ ಅಂಶವೆಂದರೆ ಪರಿಸರದ ಮೇಲೆ ಕೇಂದ್ರೀಕರಿಸುವುದು. ಸುಮಾರು 900,000 ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು ಮತ್ತು ಕಾರು ಹೊರಸೂಸುವಿಕೆಯ ಮೇಲೆ ಕಠಿಣ ನಿಯಮಗಳು ಇರುತ್ತವೆ. ವೇಗದ ಚಾಲನೆಗೆ 1000-2000 ರೂ. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ಅವರು 25,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ವಾಹನದ ಮಾಲೀಕರ ಚಾಲನಾ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಮತ್ತು ಅಪ್ರಾಪ್ತ ವಯಸ್ಕರು 25 ವರ್ಷ ವಯಸ್ಸಿನವರೆಗೆ ಪರವಾನಗಿ ಪಡೆಯಲು ಸಾಧ್ಯವಾಗುವುದಿಲ್ಲ.…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆ ದಿನ. ಆದರೆ ಶುಲ್ಕ ಪಾವತಿಸಲು ಮೇ 22ರವರೆಗೆ ಅವಕಾಶ ನೀಡಲಾಗಿದೆ. ಹುದ್ದೆ ಹೆಸರು : ಗ್ರಾಮ ಆಡಳಿತ ಅಧಿಕಾರಿ (VA – ಗ್ರಾಮ ಲೆಕ್ಕಿಗ) ಹುದ್ದೆಗಳ ಸಂಖ್ಯೆ : 1000 ವೇತನ ಶ್ರೇಣಿ : Rs.21400-42000. ಪಿಂಚಣಿ ಸೌಲಭ್ಯ : ಪಿಂಚಣಿ ರಹಿತ (ಎನ್‌ಪಿಎಸ್‌). ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವಿದ್ಯಾರ್ಹತೆ ವಿವರಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್‌ ಮಾಡಿರಬೇಕು. ಅಥವಾ ಸಿಬಿಎಸ್‌ಇ / ಐಸಿಎಸ್‌ಇ ನಡೆಸುವ 12ನೇ ತರಗತಿ / ಎನ್‌ಐಓಎಸ್‌ ನಡೆಸುವ ಹೆಚ್‌ಎಸ್‌ಸಿ ಅರ್ಹತೆ ಪಡೆದಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೊಮ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್‌ ಅಥವಾ…

Read More

ಮೈಸೂರು : ಮೈಸೂರಿನ ಡಿ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಸಾಲುಂಡಿ ಗ್ರಾಮದ ಕನಕರಾಜು ಎನ್ನಲಾಗಿದೆ. ಮೃತ ಯುವಕ ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇಲ್ಲದೇ ಇನ್ನೂ ನಾಲ್ಕೈದು ಮಂದಿ ಘಟನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಜೆ.ಟಿ ದೇವೇಗೌಡ ಅವರು ಸಿಎಂ ಈ ಕೂಡಲೇ ಮಾಹಿತಿಯನ್ನು ಪಡೆದುಕೊಂಡು ಸಂತ್ರಸ್ಥರ ನೆರವಿಗೆ ದಾವಿಸ ಬೇಕು ಅಂಥ ಆಗ್ರಹಿಸಿದ್ದಾರೆ. ಇದಲ್ಲದೇ ಸ್ಥಳೀಯ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

Read More

ಸಾಲ ಮರುಪಾವತಿ ಮಾಡುವ ಸಲುವಾಗಿ ತನ್ನ ಹೆಂಡತಿ ಹಾಗೂ ಪುತ್ರನನ್ನು ಗೃಹ ಬಂಧನದಲ್ಲಿಟ್ಟಿದ್ದಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಸ್ಲಾಂಪುರದಲ್ಲಿ ನಡೆದಿದೆ. ಮೃತ ರೈತನನ್ನು ರಾಜು ಖೋತಗಿ ಎಂದು ಗುರುತಿಸಲಾಗಿದೆ 5 ತಿಂಗಳ ಹಿಂದೆ 1.5 ಲಕ್ಷ ರೂ. ಸಾಲವನ್ನು ತನ್ನದೇ ಗ್ರಾಮದ ಮಹಿಳೆಯೊಬ್ಬರಿಂದ ಪಡೆದುಕೊಂಡಿದ್ದರು. ಇದೇ ವೇಳೆ ಹಣವನ್ನು ನೀಡದೇ ಇದ್ದ ಸಲುವಾಗಿ ರೈತನ ಪತ್ನಿ ಹಾಗೂ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಳು. ಬಳಿಕ ರೈತನ ಪತ್ನಿ ಹಾಗೂ ಪುತ್ರನನ್ನು ಎರಡು ದಿನದಿಂದ ಗೃಹ ಬಂಧನದಲ್ಲಿಟ್ಟಿದ್ದಳು. ಇದರಿಂದ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಘಟನೆ ಸಂಬಂಧ ಯಮಕನಮರಡಿ ಠಾಣೆ ಪೊಲೀಸರು ದೂರು ದಾಖಲಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

Read More

ಉಡುಪಿ: ಬೆಳ್ತಂಗಡಿಯ ಬಿಜೆಪಿ  ಕಾರ್ಯಕರ್ತರನ್ನ ಮುಟ್ಟಿದ್ರೆ ಪೊಲೀಸರ ಕಾಲರ್ ಹಿಡಿಯಲೂ ರೆಡಿ ಅಂತ BJP ಹರೀಶ್ ಪೂಂಜಾ ವಿವಾದಕ ಹೇಳಿಕೆ ನೀಡಿದ್ದಾರೆ. ಅವರು  ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಎಸ್‍ಪಿಗೆ ಬುದ್ಧಿ ಇಲ್ಲ. ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಅಂಥ ಆರೋಪಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಇದೇ ವೇಳೇ ಅವರು’ಕಾರ್ಯಕರ್ತರನ್ನು ಮುಟ್ಟಿದರೆ ಕಾಲರ್ ಹಿಡಿದು ಎಳೆದು ಹಾಕುತ್ತೇನೆ’ ಎಂದು ಪೊಲೀಸರ ವಿರುದ್ಧ ಅವಾಜ್ ಹಾಕಿದ್ದಾರೆ. ಕಾರ್ಯಕರ್ತರಿಗೆ, ಮತದಾರರಿಗೆ ಅನ್ಯಾಯವಾದದಲ್ಲಿ ತಾನು ಜೈಲಿನಲ್ಲಿ ಕುಳಿತುಕೊಳ್ಳಲು ರೆಡಿಯಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ತಲೆಯಲ್ಲಿ ಕೂದಲು ಮಾತ್ರವಲ್ಲ ಬುದ್ಧಿಯೂ ಇಲ್ಲ. ತಾನು ಅವರಿಗೆ ರಾತ್ರಿ ಎಷ್ಟು ಸಲ ಕಾಲ್ ಮಾಡಿದರೂ ನನ್ನ ಫೋನ್ ಕರೆಗೆ ಉತ್ತರಿಸಲಿಲ್ಲ ಅಂತ ಹೇಳಿದರು.

Read More

ನವದೆಹಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿನಲ್ಲಿ ಇಸ್ರೇಲ್ ಭಾಗಿಯಾಗಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮಿರಬ್ಡೊಲ್ಲಾಹಿಯಾನ್ ಮತ್ತು ಇತರ ಆರು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಬಲಿತೆಗೆದುಕೊಂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮೊಸ್ಸಾದ್ ಭಾಗಿಯಾಗಿದೆ ಎಂಬ ಹೇಳಿಕೆಗಳ ಮಧ್ಯೆ ಈ ಹೇಳಿಕೆಗಳು ಬಂದಿವೆ. “ಅದು ನಾವು ಅಲ್ಲ” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Read More

ನವದೆಹಲಿ: ಗಾರ್ಡಿಯನ್ ವರದಿಯ ಪ್ರಕಾರ, ಸಂಶೋಧಕರು ಮಾನವ ವೃಷಣಗಳಲ್ಲಿ ಮೈಕ್ರೋಪ್ಲಾಸ್ಟಿಕ್ಗಳನ್ನು ಕಂಡುಹಿಡಿದಿದ್ದಾರೆ, ಇದು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಬಹುದು ಎನ್ನಲಾಗಿದೆ. ಪರೀಕ್ಷಿಸಿದ ಪ್ರತಿಯೊಂದು ಮಾದರಿಯಲ್ಲೂ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯವನ್ನು ಅಧ್ಯಯನವು ಕಂಡುಕೊಂಡಿದೆಯಂತೆ. ಇದಲ್ಲದೇ ಅಮೆರಿಕದ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 23 ಮಾನವ ಮತ್ತು 47 ನಾಯಿ ವೃಷಣಗಳನ್ನು ಪರೀಕ್ಷಿಸಲಾಗಿದೆ. ಇದನ್ನು ಮೇ 15 ರಂದು ಟಾಕ್ಸಿಕಾಲಜಿಕಲ್ ಸೈನ್ಸಸ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.ಅಧ್ಯಯನದ ಸಂಶೋಧಕರು ಮತ್ತು ಲೇಖಕರಲ್ಲಿ ಒಬ್ಬರಾದ ಮತ್ತು ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ಸಿಯಾವೊಜಾಂಗ್ ಯು ಅವರು ಗಾರ್ಡಿಯನ್ಗೆ ಈ ಸಂಶೋಧನೆಗಳಿಂದ ಆಶ್ಚರ್ಯಚಕಿತರಾಗಿದ್ದಾರೆ ಎಂದು ಹೇಳಿದರು. “ಆರಂಭದಲ್ಲಿ, ಮೈಕ್ರೋಪ್ಲಾಸ್ಟಿಕ್ಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಭೇದಿಸಬಹುದೇ ಎಂದು ನಾನು ಅನುಮಾನಿಸಿದೆ. ನಾನು ಮೊದಲು ನಾಯಿಗಳ ಫಲಿತಾಂಶಗಳನ್ನು ಪಡೆದಾಗ, ನನಗೆ ಆಶ್ಚರ್ಯವಾಯಿತು. ಮಾನವರ ಫಲಿತಾಂಶಗಳನ್ನು ಪಡೆದಾಗ ನನಗೆ ಇನ್ನೂ ಹೆಚ್ಚು ಆಶ್ಚರ್ಯವಾಯಿತ ಅಂಥ ಹೇಳಿದ್ದಾರೆ. ವೀರ್ಯಾಣುಗಳ ಸಂಖ್ಯೆಯ ಮೇಲೆ ಪರಿಣಾಮ: ಮಾನವ ವೃಷಣಗಳನ್ನು ಸಂರಕ್ಷಿಸಲಾಯಿತು, ವೀರ್ಯಾಣುಗಳ ಎಣಿಕೆಯ ಮಾಪನವನ್ನು ತಡೆಯಲಾಯಿತು.…

Read More

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್​​​ ಶಾಸಕ ಹೆಚ್​.ಡಿ.ರೇವಣ್ಣಗೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಡುವೆ ಎಸ್‌ಐಟಿ ಸಿಬ್ಬಂದಿಗಳು ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಜಾಮೀನು ರದ್ದು ಕೋರಿ ಎಸ್ಐಟಿಯಿಂದ ಹೈಕೋರ್ಟ್​​ಗೆ ಅರ್ಜಿ ಸಾಧ್ಯತೆ ಇದೆ ಎನ್ನಲಾಗಿದೆ.  ಹೈಕೋರ್ಟ್​ನಲ್ಲಿ ಸರ್ಕಾರದ ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್​ ಆಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು ಕೇಸಿಗೆ ಸಂಬಂಧಪಟ್ಟಂತೆ ಕೂತುಹಲ ಇನ್ನೂ ಹೆಚ್ಚಾಗುತ್ತಿದೆ. ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ರೇವಣ್ಣಗೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಕೇಸ್ ಸಂಕಷ್ಟ ತಂದೊಡ್ಡಿದೆ.

Read More