Author: kannadanewsnow07

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತೊಬ್ಬ ವ್ಯಕ್ತಿಯನ್ನು ಅರೆಸ್ಟ್‌ ಮಾಡಲಾಗಿದೆ. ನಾಗರಾಜು ಎನ್ನುವಾತ ಬಂಧಿತ ಆರೋಪಿಯಾಗಿದ್ದು, ಈತ ದರ್ಶನ್‌ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ನಟ ದರ್ಶನ್‌ ಅಭಿಮಾನ ಸಂಘಗಳಲ್ಲಿನ ಸಂಪರ್ಕಹೊಂದಿದ್ದ ಈತ ಎಲ್ಲ ಜವಾಬ್ದಾರಿಯನ್ನು ಈತ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ನಾಗರಾಜ್‌ಗೆ ದರ್ಶನ್‌ ಬಾರ್‌ ಇಟ್ಟುಕೊಂಡಿದ್ದ ಎನ್ನಲಾಗಿದ್ದ, ಈತ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಮೈಸೂರಿನ ಇಪ್ಪೊಂದನೇ ವಾರ್ಡ್‌ನಿಂದ ಈ ಬಾರಿ ಕಾರ್ಪೋರೇಟರ್‌ ಆಗಿ ಕಣಕ್ಕೆ ಇಳಿಯಲು ಸಿದ್ದನಾಗಿದ್ದ ಎನ್ನಲಾಗಿದೆ.

Read More

ಬೆಂಗಳೂರು: ಪೋಕ್ಸೊ ಕೇಸ್​ನಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ಬಂಧನದ ಭೀತಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ತಿಂಗಳ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಸಹೋದರ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಸಂತ್ರಸ್ತೆಯ ತಾಯಿ ಮಾರ್ಚ್ನಲ್ಲಿ ಸಲ್ಲಿಸಿದ ದೂರಿನಿಂದ ಈ ಪ್ರಕರಣ ಹುಟ್ಟಿಕೊಂಡಿದೆ. 2015 ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಕೋರಿ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪ ಅವರು ತಮ್ಮ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ಮೇ 26 ರಂದು ನಿಧನರಾದರು. ತನಿಖಾ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅರ್ಜಿದಾರರು, ಪೊಲೀಸರು ಯಡಿಯೂರಪ್ಪ ಅವರ ನಿವಾಸದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿಲ್ಲ ಅಥವಾ ಪೋಕ್ಸೊ ಪ್ರಕರಣಗಳಲ್ಲಿ ಪ್ರಮಾಣಿತ…

Read More

ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ದೀನ್‍ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ 2024-25 ನೇ ಸಾಲಿನ ಸ್ವಯಂ ಉದ್ಯೋಗ ಕಾರ್ಯಕ್ರಮದ ಉಪ ಘಟಕದ ವ್ಯಕ್ತಿಗತ ಉದ್ದಿಮೆ ಶೀಲತೆ (ಸಾಲ ಮತ್ತು ಸಹಾಯಧನ) ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವ ಸಂಘ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಗುರುತಿನ ಚೀಟಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವ ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿರುವ ಕುಟುಂಬದ ಅರ್ಹ ಫಲಾನುಭವಿಗಳಿಂದ ಗುಂಪು ಉದ್ದಿಮೆ ಶೀಲತೆ (ಸಾಲ ಮತ್ತು ಸಹಾಯಧನ) ಚಟುವಟಿಕೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಮಹಿಳಾ ಸ್ವ-ಸಹಾಯ ಗುಂಪು ಹಾಗೂ ಪ್ರದೇಶ ಮಟ್ಟದ ಒಕ್ಕೂಟವನ್ನು ರಚಿಸಲು ಆಸಕ್ತಿ ಹೊಂದಿದ ಅರ್ಹ ಫಲಾನುಭವಿಗಳು ಅಥವಾ ಗುಂಪುಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸುವ ಫಲಾನುಭವಿಗಳು ಸಿರುಗುಪ್ಪ ನಗರಸಭೆ ನಿವಾಸಿಯಾಗಿದ್ದು, ಬಡತನರೇಖೆ ಕೆಳಗಿನ ಕುಟುಂಬದವರಾಗಿರಬೇಕು, ಅರ್ಜಿ ಸಲ್ಲಿಸುವ ಕೊನೆಯ ದಿನ ಜೂ.29 ಆಗಿರುತ್ತದೆ. ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.…

Read More

ಬಳ್ಳಾರಿ : ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಅವರು ತಿಳಿಸಿದ್ದಾರೆ. ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ಹೋಬಳಿ ಮಟ್ಟದ ಬೆಳೆಗಳಾದ ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಹುರುಳಿ, ಸೂರ್ಯಕಾಂತಿ, ಎಳ್ಳು, ಹತ್ತಿ, ನೆಲಗಡಲೆ, ಈರುಳ್ಳಿ, ಭತ್ತ, ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆಯನ್ನು ಮಾಡಿಸಿಕೊಳ್ಳಬೇಕು. *ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕ ಇಂತಿವೆ:* ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಎಳ್ಳು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ. ಭತ್ತ, ತೊಗರಿ, ರಾಗಿ, ನವಣೆ, ಹುರುಳಿ, ನೆಲಗಡಲೆ ಮತ್ತು ಸಜ್ಜೆ ಬೆಳೆಗಳಿಗೆ…

Read More

ಬೆಂಗಳೂರು: ರೇಣುಕಸ್ವಾಮಿ ಕೊಲೆಗೆ ಬಳಕೆ ಮಾಡಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ರಾಡ್‌, ಮಾರಕಾಸ್ತ್ರಗಳು ಹಾಗೂ ದರ್ಶನ್ ನಂದು ಅಂಥ ಹೇಳಲಾಗಿರುವ ಬೆಲ್ಟ್‌ ಅನ್ನು ಕೂಡ ಪೊಲೀಸರು ಕೂಡ ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಅದನ್ನು ಎಫ್‌ಎಸ್‌ಐಎಲ್‌ ಗೆ ಹೆಚ್ಚಿನ ಮಾಹಿತಿಗಾಗಿ ಕಳುಹಿಸಕೊಡಲಾಗಿದೆ ಎನ್ನಲಾಗಿದೆ.  ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಶರವೇಗದಲ್ಲಿ ಸಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಜನರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ವಿನಯ್ ಮತ್ತು ಪ್ರದೋಶ್ ಹೆಸರಿನಲ್ಲಿ ನೋಂದಣಿಯಾಗಿರುವ ಕೆಂಪು ಬಣ್ಣದ ಒಂದು ಜೀಪ್, ಕಪ್ಪು ಬಣ್ಣದ ಸ್ಕಾರ್ಪಿಯೋ ಗಾಡಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read More

ನವದೆಹಲಿ: ರೈಲ್ವೆಯಲ್ಲಿ ಪ್ರಯಾಣಿಸುವಾಗ ನೀವು ತಿಂಡಿ ಪ್ಯಾಕೆಟ್ ಗಳು, ಚಹಾ ಕಪ್ ಗಳು, ಸಿಹಿತಿಂಡಿಗಳ ಪೆಟ್ಟಿಗೆಯನ್ನು ನಿಮ್ಮ ಆಸನದ ಕೆಳಗೆ ಎಸೆಯುತ್ತೀರಾ? ನೀವು ಸಹ ಇದನ್ನು ಮಾಡಿದರೆ, ಜಾಗರೂಕರಾಗಿರಿ ಏಕೆಂದರೆ ನೀವು 10 ಬಾರಿ ದಂಡವನ್ನು ಪಾವತಿಸಬೇಕಾಗಬಹುದು, ಹೌದು, ಆಗಾಗ್ಗೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ, ಜನರು ಇದನ್ನು ಮಾಡುತ್ತಾರೆ, ಅವರು ಏನು ತಿನ್ನುತ್ತಾರೆ, ಕುಡಿಯುತ್ತಾರೆ, ಎಲ್ಲವನ್ನೂ ಸೀಟಿನ ಕೆಳಗೆ ಎಸೆಯುತ್ತಾರೆ. ರೈಲ್ವೆಯಲ್ಲಿ ಪ್ರಯಾಣಿಸುವಾಗ ನೀವು ತಿಂಡಿ ಪ್ಯಾಕೆಟ್ ಗಳು, ಚಹಾ ಕಪ್ ಗಳು, ಸಿಹಿತಿಂಡಿಗಳ ಪೆಟ್ಟಿಗೆಯನ್ನು ನಿಮ್ಮ ಆಸನದ ಕೆಳಗೆ ಎಸೆಯುತ್ತೀರಾ? ನೀವು ಸಹ ಇದನ್ನು ಮಾಡಿದರೆ, ಜಾಗರೂಕರಾಗಿರಿ ಏಕೆಂದರೆ ನೀವು 10 ಬಾರಿ ದಂಡವನ್ನು ಪಾವತಿಸಬೇಕಾಗಬಹುದು. ಹೌದು ರೈಲಿನಲ್ಲಿ ಕಸ ಹಾಕಿದ್ದ ಸಲುವಾಗಿ 304 ಪ್ರಯಾಣಿಕರಿಂದ 1,23,075 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದ್ದು, 22 ಪ್ರಯಾಣಿಕರಿಂದ ಕಸ ಹಾಕಿದ್ದಕ್ಕಾಗಿ 2,400 ರೂ. ಟಿಕೆಟ್ ರಹಿತ 243 ಪ್ರಯಾಣಿಕರಿಂದ ಸುಮಾರು 1,02,945 ರೂ.ಗಳನ್ನು ಸಂಗ್ರಹಿಸಲಾಗಿದೆ. ಒಟ್ಟು 2,43,750 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ ಎನ್ನಲಾಗಿದೆ.…

Read More

ನವದೆಹಲಿ: ನೀವು ಇನ್ನೂ ನಿಮ್ಮ ಆಧಾರ್ ಅನ್ನು ಪಡಿತರ ಚೀಟಿ ಅಥವಾ ಆಹಾರ ಸಬ್ಸಿಡಿ ಖಾತೆಗೆ ಲಿಂಕ್ ಮಾಡದಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡುವ ಗಡುವನ್ನು ಸರ್ಕಾರ ವಿಸ್ತರಿಸಿದೆ. ಆಹಾರ ಸಬ್ಸಿಡಿ ಖಾತೆಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ: ಆಧಾರ್ ಅನ್ನು ಪರಿಶೀಲಿಸಲು ಅಥವಾ ಲಿಂಕ್ ಮಾಡಲು ಹೊಸ ಗಡುವನ್ನು ಜೂನ್ 30, 2024 ರ ಬದಲು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಈ ಗಡುವನ್ನು ಸರ್ಕಾರವು ಈ ಹಿಂದೆ ಹಲವಾರು ಬಾರಿ ವಿಸ್ತರಿಸಿದೆ. ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡುವುದು ಅವಶ್ಯಕ. ಫೆಬ್ರವರಿ 2017 ರಲ್ಲಿ, ಪಿಡಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಪಡಿತರ…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ನಟ ದರ್ಶನ್‌ ಸ್ನೇಹಿತ ಹಾಗೂ ಅವರೊಂದಿಗೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ, ಪ್ರದೋಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ ಎನ್ನಲಾಗಿದ್ದು, ದರ್ಶನ್ ಜೊತೆಗೆ ಸ್ನೇಹವನ್ನು ಹೊಂದಿದ್ದ ಎನ್ನಲಾಗಿದೆ.

Read More

ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹಾವು ರಕ್ಷಣಾ ಕಾರ್ಯಕರ್ತರ ಕೌಶಲ್ಯಗಳನ್ನು ಹೆಚ್ಚಿಸಲು ಕರ್ನಾಟಕ ಅರಣ್ಯ ಇಲಾಖೆಯು ಜೂನ್ 19 ಮತ್ತು 20 ರಂದು ಬನ್ನೇರುಘಟ್ಟ ಪ್ರಾಕೃತಿಕ ಶಿಬಿರ – ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಾವು ರಕ್ಷಕರಿಗೆ ಎರಡು ದಿನಗಳ ತರಬೇತಿ ಆಯೋಜಿಸಿದೆ. ತರಬೇತಿಯಲ್ಲಿ ಹಾವುಗಳ ರಕ್ಷಣೆ, ಹಾವುಗಳ ಸುರಕ್ಷತೆಗೆ ನಿರ್ವಹಣೆ ವಿಧಾನಗಳು, ಕಾರ್ಯತಂತ್ರಗಳು, ಉರುಗಶಾಸ್ತ್ರ, ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ, ದಾಖಲಾತಿಗಳ ನಿರ್ವಹಣೆ ಮತ್ತು ಅರಣ್ಯ ಇಲಾಖೆಯೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ನೋಂದಣಿ ಮಾಡಿಕೊಂಡವರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿದ್ದು, ಆಸಕ್ತರು ಲಿಂಕ್ https:/bit.ly/kfdswblr and https://forms.gle/mT8gNW2oK7usEhx58 ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಯಾವ ದಿನ ಜನಿಸಿದ ಮಕ್ಕಳು ಅದೃಷ್ಟವಂತರು ಹೇಗೆ ಆಗುತ್ತಾರೆ. ಎಂದು ತಿಳಿದುಕೊಳ್ಳೋಣ. ಪ್ರತಿಯೊಬ್ಬರು ತಮ್ಮ ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಹಲವಾರು ರೀತಿಯ ಉಪಾಯಗಳನ್ನು ಮಾಡುತ್ತಾರೆ . ಹೋಮ – ಹವನ , ಯಜ್ಞ , ಪೂಜೆ , ಪಾಠ ಇತ್ಯಾದಿಗಳನ್ನು ಮಾಡಿರುತ್ತಾರೆ. ಆದರೆ ಮಗು ಯಾವ ದಿನ ಜನಿಸಿದರೆ ಅದೃಷ್ಟವಂತರು ಆಗಿರುತ್ತಾರೆ , ಎಂಬುದನ್ನು ತಿಳಿಯೋಣ . ಎಲ್ಲಾ ದಿನಗಳನ್ನು ಭಗವಂತನೇ ಸೃಷ್ಟಿ ಮಾಡಿರುತ್ತಾನೆ. ಇವುಗಳಲ್ಲಿ ಯಾವುದಾದರೂ ಒಂದು ದಿನವನ್ನು ಅದೃಷ್ಟ ಶಾಲಿ ಅನ್ನೋದು ಸರಿಯಾಗುತ್ತದೆಯೇ , ಇಲ್ಲಿ ಏಳು ದಿನಗಳಲ್ಲಿ ಒಂದು ದಿನ ಚೆನ್ನಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ . ಇಲ್ಲಿ ನಾವು ತಿಳಿಸುವ ವಿಷಯ ಏನೆಂದರೆ , ಜನ್ಮ ಕುಂಡಲಿ, ಜನ್ಮ ತಿಥಿ , ಹಸ್ತ ರೇಖೆಗಳ ಅನುಸಾರವಾಗಿ , ವ್ಯಕ್ತಿಯ ಸ್ವಭಾವವನ್ನು ತಿಳಿಯಬಹುದು . ಆದರೆ ಇವುಗಳ…

Read More