Author: kannadanewsnow07

ಮೈಸೂರು: ಮೈಸೂರು: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಹೊರ ಬಂದಿದೆ ಅಂಥ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಅವರು ಇಂದು ಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಹೇಗೆ? ಇದರ ಹಿಂದೆ ಸಿಎಂ ಖುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಮುಡಾ ಫ್ಯಾಕ್ಟರಿ ಶುರುವಾಯಿತು ಎಂದು ಹೇಳಿದರು.

Read More

ಬೆಂಗಳೂರು: ನಾಗೇಂದ್ರರ ರೀತಿ ನಿಮ್ಮ ರಾಜೀನಾಮೆ ಯಾವಾಗ ಸಿದ್ದರಾಮಯ್ಯನವರೇ ಅಂತ ರಾಜ್ಯ ಬಿಜೆಪಿ ಘಟನ ಟ್ವಿಟ್‌ ಮಾಡಿ ವ್ಯಂಗ್ಯ ಮಾಡಿದೆ. ಇದೇ ವೇಳೆ ಟ್ವಿಟ್‌ನಲ್ಲಿ ಆರ್ ಅಶೋಕ್‌ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾದ ₹4,000 ಕೋಟಿ ಮೌಲ್ಯದ ಮುಡಾ ಹಗರಣದಲ್ಲಿ ದಿನಕ್ಕೊಂದು ಕರ್ಮಕಾಂಡ ಬಯಲಾಗುತ್ತಿದೆ. ಮುಖ್ಯಮಂತ್ರಿ ಅವರ ಪತ್ನಿಗೆ ಮಂಜೂರಾಗಿರುವ 35 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳಿಗೆ ಸಂಬಂಧಪಟ್ಟ ಕಡತಗಳನ್ನ ತಿರುಚುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವ ಅವರು ಕಡತಗಳನ್ನು ಬೆಂಗಳೂರಿಗೆ ತಂದಿರುವ ಗುಮಾನಿ ಇದೆ. ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಕಡತಗಳನ್ನ ಬಹಿರಂಗ ಮಾಡಿ ಸಾರ್ವಜನಿಕರ ಮುಂದಿಡಬೇಕು ಎಂದು ಸಿಎಂ ಅವರನ್ನ ಒತ್ತಾಯಿಸುತ್ತೇನೆ ಅಂತ ಹೇಳಿದ್ದಾರೆ. https://twitter.com/BJP4Karnataka/status/1809068226443145687

Read More

ಬೆಂಗಳೂರು: ರಾಜ್ಯದ ಎಲ್ಲಾ ಇಲಾಖೆಗಳ ಸರ್ಕಾರಿ ಕಛೇರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಯಂತ್ರದ ದಾಖಲಿಸುತ್ತಿರುವ ಕುರಿತು ಮಾಹಿತಿ ಒದಗಿಸುವ ಬಗ್ಗೆ ಮಾಹಿತಿಯನ್ನು ನೀಡುವಂತೆ ಅಧೀನ ಅಧಿಕಾರಿಗಳಿಂದ ಮಾಹಿತಿಯನ್ನು ಕೇಳಿದೆ. ಅದರಂತೆ. ರಾಜ್ಯ ಜ್ಯ ಸರ್ಕಾರವು ಹಲವು ಸುತ್ತೋಲೆಗಳ ಮೂಲಕ ರಾಜ್ಯ ಸರ್ಕಾರದ ಕಛೇರಿಗಳು ಸೇರಿದಂತೆ ಅಧೀನಕ್ಕೊಳಪಡುವ ಎಲ್ಲಾ ನಿಗಮ / ಮಂಡಳಿ / ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿ / ನೌಕರರ ದೈನಂದಿನ ಹಾಜರಾತಿಯನ್ನು ಬಯೋಮೆಟ್ರಿಕ್ ಯಂತ್ರದ ಮೂಲಕ ದಾಖಲಿಸಲು ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ದೇಶನಗಳನ್ನು ನೀಡಿರುತ್ತದೆ. ಅದಾಗ್ಯೂ ಹಲವಾರು ಕಛೇರಿಯನ್ನೊಳಗೊಂಡಂತೆ ಅಧೀನ ಸಂಸ್ಥೆಗಳಲ್ಲಿ ಪ್ರಸ್ತುತದವರೆಗೂ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗುತ್ತಿವೆ. ಈ ನಿಟ್ಟಿನಲ್ಲಿ ತಮ್ಮ ಇಲಾಖೆಯ ಅಧೀನಕ್ಕೊಳಪಡುವ ಸರ್ಕಾರಿ ಕಛೇರಿಗಳು ಸೇರಿದಂತೆ ಅಧೀನ ಸಂಸ್ಥೆ/ನಿಗಮ/ಮಂಡಳಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಿರುವ ಬಗ್ಗೆ ದಿನಾಂಕ: 06/07/2024ರೊಳಗಾಗಿ ಈ ಕಛೇರಿಗೆ ವರದಿ ಕಳುಹಿಸುವಂತೆ ತಿಳಿಸಿದೆ.

Read More

ನವದೆಹಲಿ: ರಿಷಿ ಸುನಕ್ ನೇತೃತ್ವದ 14 ವರ್ಷಗಳ ಕನ್ಸರ್ವೇಟಿವ್ ಆಡಳಿತವನ್ನು ಕೊನೆಗೊಳಿಸುವ ಮೂಲಕ ಸಂಸದೀಯ ಚುನಾವಣೆಯಲ್ಲಿ ಅವರ ಕೇಂದ್ರ-ಎಡ ಲೇಬರ್ ಪಕ್ಷವು ಗಮನಾರ್ಹ ಬಹುಮತವನ್ನು ಗೆಲ್ಲುವ ನಿರೀಕ್ಷೆಯಿದ್ದು, ಕೈರ್ ಸ್ಟಾರ್ಮರ್ ಬ್ರಿಟನ್ನ ಮುಂದಿನ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.  ಕನ್ಸರ್ವೇಟಿವ್ಗಳು ಇಲ್ಲಿಯವರೆಗೆ ಕೇವಲ 70 ಸ್ಥಾನಗಳನ್ನು ಗೆದ್ದಿದ್ದಾರೆ. ಪಕ್ಷವು ಇತಿಹಾಸದಲ್ಲಿ ತನ್ನ ಅತ್ಯಂತ ಕೆಟ್ಟ ಪ್ರದರ್ಶನದ ಹಾದಿಯಲ್ಲಿದೆ. ಜೀವನ ವೆಚ್ಚದ ಬಿಕ್ಕಟ್ಟು, ಸಾರ್ವಜನಿಕ ಸೇವೆಗಳ ವೈಫಲ್ಯ ಮತ್ತು ಸರಣಿ ಹಗರಣಗಳಂತಹ ಸಮಸ್ಯೆಗಳಿಗೆ ಮತದಾರರು ಹೆಚ್ಚಾಗಿ ಕನ್ಸರ್ವೇಟಿವ್ ಗಳನ್ನು ದೂಷಿಸಿದ್ದಾರೆ. ನಿರ್ಗಮನ ಹೌಸ್ ಆಫ್ ಕಾಮನ್ಸ್ ನಲ್ಲಿ ಭಾರತೀಯ ಮೂಲದ 15 ಸಂಸದರು ಇದ್ದರು ಮತ್ತು ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಯುಕೆ ಸಾರ್ವತ್ರಿಕ ಚುನಾವಣೆ 2024 ರಲ್ಲಿ, ಲಭ್ಯವಿರುವ 680 ಸ್ಥಾನಗಳಿಗೆ ಒಟ್ಟು 107 ಬ್ರಿಟಿಷ್-ಭಾರತೀಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಿಂಗ್ ಚಾರ್ಲ್ಸ್ ಅವರಿಗೆ ರಾಜೀನಾಮೆ ಸಲ್ಲಿಸಲು ಪ್ರಧಾನಿ ರಿಷಿ ಸುನಕ್ ಅವರು ಟೀಸೈಡ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳಿದ್ದಾರೆ ಎಂದು ಬಿಬಿಸಿ ವರದಿ…

Read More

ಲಂಡನ್‌: ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ನಂತರ ಯುಕೆಯ ಲೇಬರ್ ಪಕ್ಷವು ಹೌಸ್ ಆಫ್ ಕಾಮನ್ಸ್ನಲ್ಲಿ ಕಾರ್ಯನಿರತ ಬಹುಮತಕ್ಕಾಗಿ 326 ಸ್ಥಾನಗಳ ಮಿತಿಯನ್ನು ದಾಟಿ ಅಧಿಕಾರಕ್ಕೆ ಬಂದಿದೆ. ಅನೇಕ ಕ್ಯಾಬಿನೆಟ್ ಸದಸ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಂಡ ನಂತರ ರಿಷಿ ಸುನಕ್ ಸೋಲನ್ನು ಒಪ್ಪಿಕೊಂಡರು ಈ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯ ಕ್ಯಾಬಿನೆಟ್ ಮಂತ್ರಿಗಳು ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಗ್ರಾಂಟ್ ಶಾಪ್ಸ್ – ರಕ್ಷಣಾ ಕಾರ್ಯದರ್ಶಿ ಸೈಮನ್ ಹಾರ್ಟ್ – ಮುಖ್ಯ ಸಚೇತಕ ಗಿಲಿಯನ್ ಕೀಗನ್ – ಶಿಕ್ಷಣ ಕಾರ್ಯದರ್ಶಿ ಅಲೆಕ್ಸ್ ಚಾಕ್ – ನ್ಯಾಯಾಂಗ ಕಾರ್ಯದರ್ಶಿ ಪೆನ್ನಿ ಮೊರ್ಡಾಂಟ್ – ಕಾಮನ್ಸ್ ನಾಯಕ ಲೂಸಿ ಫ್ರೇಜರ್ – ಸಂಸ್ಕೃತಿ ಕಾರ್ಯದರ್ಶಿ ಜಾನಿ ಮರ್ಸರ್ – ಅನುಭವಿ ಸಚಿವ ಮಿಚೆಲ್ ಡೊನೆಲಾನ್ – ವಿಜ್ಞಾನ, ನಾವೀನ್ಯತೆ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಡೇವಿಡ್ ಡೇವಿಸ್ – ವೇಲ್ಸ್ ಕಾರ್ಯದರ್ಶಿ ವಿಕ್ಟೋರಿಯಾ ಪ್ರಿಂಟಿಸ್ – ಅಟಾರ್ನಿ ಜನರಲ್ ಮಾರ್ಕ್ ಹಾರ್ಪರ್ – ಸಾರಿಗೆ ಕಾರ್ಯದರ್ಶಿ

Read More

ಬೆಂಗಳೂರು: ಮುಡಾದವರು ಹಂಚಿಕೆ ಮಾಡಿರುವ ನಿವೇಶನಗಳನ್ನು ಬೇಕಾದರೆ ವಾಪಸ್‌ ಪಡೆದು ತಮ್ಮ ಜಮೀನಿನ ಮೌಲ್ಯದ 62 ಕೋಟಿ ರೂ. ಗಳನ್ನು ಕಾನೂನು ರೀತ್ಯ ಮುಡಾ ತಮಗೆ ಕೊಟ್ಟುಬಿಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ. ವಿಷಯವೇ ಇಲ್ಲ. ಮುಡಾ ನಮ್ಮ 3.16 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ. ಹಾಗಿದ್ದಲ್ಲಿ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಬೇಕಾ ಅವರು ಇದೇ ವೇಳೆ ತಿಳಿಸಿದರು.ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿ-ಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯತಿಳಿಸಿದರು.

Read More

ಮಂಗಳೂರು: ಮಂಗಳೂರು ಮಣ್ಣು ಕುಸಿತ ಪ್ರಕರಣ ಸಂಬಂಧ ಗುತ್ತಿಗೆದಾರ ಸೇರಿ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಡುವೆ ಘಟನೆಯಲ್ಲಿ ಸಾವನ್ನಪ್ಪಿದ ಕಾರ್ಮಿಕ ಚಂದನ್ ಕುಮಾರ್ ಕುಟುಂಬಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಎರಡು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದೆ. ಜಿಲ್ಲಾಡಳಿತದ ಮುತುವರ್ಜಿಯಿಂದ ಗುರುವಾರವೇ ಮಂಡಳಿ ಮೃತ ಕಾರ್ಮಿಕರ ಪತ್ನಿ ಕಿರಣ ದೇವಿ ಅವರಿಗೆ ಪರಿಹಾರದ ಚೆಕ್ ನೀಡಿದ್ದು, ಕಟ್ಟಡ ನಿರ್ಮಾಣದ ಗುತ್ತಿಗೆದಾರರೂ ಎರಡು ಲಕ್ಷ ರೂ. ಪರಿಹಾರ ಹಾಗೂ ಕಾರ್ಮಿಕ ಪರಿಹಾರ ಕಾಯಿದೆಯಡಿಯಲ್ಲಿಯೂ ಕಾರ್ಮಿಕರ ಕುಟುಂಬಕ್ಕೆ ವಿಮಾ ಮೊತ್ತ ದೊರಕಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Read More

ಬೆಂಗಳೂರು: 21 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೇ ಯಾರು ಎಲ್ಲಿಂದ ಎಲ್ಲಿಗೆ ಎನ್ನುವುದರ ವಿವರ ಈ ಕೆಳಕಂಡತಿದೆ.

Read More

ಕೋಲಾರ್: ಕೋಚಿಮುಲ್‌ ರೈತರ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಈ ಮೂಲಕ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ರೈತರ ಆದಾಯಕ್ಕೆ ಕೊಕ್ಕೆ ಬಿದಿದ್ದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್‌) ರೈತರಿಗೆ ಆಘಾತ ಕೊಟ್ಟಿದ್ದು, ಹಾಲು ಖರೀದಿ ದರ 2 ರೂಪಾಯಿ ಕಡಿತಗೊಳಿಸಿ ಆದೇಶಿಸಿರುವುದರಿಂದ ರೈತರಲ್ಲಿ ಆಕ್ರೋಶ ಮನೆ ಮಾಡಿದೆ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಕಡಿತಗೊಳಿಸಿ ಆದೇಶಿಸಿದ್ದು, ಪ್ರತಿ ಲೀಟರ್‌ಗೆ ಇನ್ನು ಮುಂದೆ 33.4 ರೂ. ಬದಲಿಗೆ 31.4 ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.  ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್‌ಗೆ 9.65 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್‌ಗೆ 12.37 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ ಈಗಾಗಲೇ ಲೀಟರ್‌ಗೆ 2 ರೂ. ಹೆಚ್ಚಳ ಮಾಡಿ ಕೆಎಂಎಫ್‌ ಆದೇಶ ಹೊರಡಿಸಿದೆ. ಈಗ ರೈತರಿಗೆ 2 ರೂ.…

Read More

ಕೊಚ್ಚಿ: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ 12 ವರ್ಷದ ಬಾಲಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿಗೆ ಬಲಿಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಇಂತಹ ಮೂರನೇ ಸಾವು ಸಂಭವಿಸಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.  ಮೃತರನ್ನು ಫಿರೋಕ್ ನಿವಾಸಿ ಮೃದುಲ್ ಇಪಿ ಎಂದು ಗುರುತಿಸಲಾಗಿದ್ದು, ಅವರು ಕೋಝಿಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ತೀವ್ರ ತಲೆನೋವು, ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ 7 ನೇ ತರಗತಿಯ ಬಾಲಕನನ್ನು ಜೂನ್ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ತನ್ನ ನೆರೆಹೊರೆಯ ಕೊಳದಲ್ಲಿ ಸ್ನಾನ ಮಾಡಿದ ನಂತರ ಬಾಲಕನಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕೊಳಗಳು ಮತ್ತು ಸರೋವರಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಮುಕ್ತ-ಜೀವಂತ ಅಮೀಬಾ ಜಾತಿಯ ನಾಗ್ಲೇರಿಯಾ ಫೌಲೆರಿಯಿಂದ ಅಪರೂಪದ ಆದರೆ ಮಾರಣಾಂತಿಕ ಸೋಂಕು ಉಂಟಾಗುತ್ತದೆ. ಅಮೀಬಾ ಮೂಗಿನ ಮೂಲಕ ಮಾನವ ವ್ಯವಸ್ಥೆಯನ್ನು ಪ್ರವೇಶಿಸುತ್ತದೆ ಮತ್ತು ಕೇಂದ್ರ ನರಮಂಡಲವನ್ನು ಗುರಿಯಾಗಿಸುತ್ತದೆ. ಇದು ಮೆದುಳಿನ ಜೀವಕೋಶಗಳನ್ನು ತಿನ್ನುತ್ತದೆ ಮತ್ತು ವ್ಯಾಪಕ ಅಂಗಾಂಶ…

Read More