Author: kannadanewsnow05

ಆಂಧ್ರಪ್ರದೇಶ : ಸಾಮಾನ್ಯವಾಗಿ ಯಾರೇ ನಿದ್ದೆಗಣ್ಣಲ್ಲಿ ಇದ್ದರೂ ಕೂಡ ಗಂಟಲಿನಲ್ಲಿ ಹೋಗುವಂತ ಚಿಕ್ಕ ವಸ್ತುಗಳು ನುಂಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ನಿದ್ದೆ ಮಾಡುತ್ತಲೇ ಹಲ್ಲಿನ ಸೆಟ್ ಒಂದು ನುಂಗಿ ಶ್ವಾಸಕೋಶದಲ್ಲಿ ಸಿಲುಕಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ಹೌದು ಅಮರಾವತಿಯ 52 ವರ್ಷದ ಈ ವ್ಯಕ್ತಿ ಕಳೆದ 7 ವರ್ಷಗಳಿಂದ ಹಲ್ಲುಸೆಟ್‌ ಬಳಸುತ್ತಿದ್ದರು. ಕಾಲಕ್ರಮೇಣ ಅದು ಸಡಿಲವಾಗಿದ್ದು, ಅವರು ನಿದ್ರಿಸುತ್ತಿದ್ದಾಗ ಶ್ವಾಸಕೋಶಗಳ ಒಳಗೆ ಹೋಗಿದೆ. ಇದರಿಂದಾಗಿ ಅವರಿಗೆ ಕೆಮ್ಮು ಶುರುವಾಗಿದ್ದು, ಚಿಕಿತ್ಸೆಗಾಗಿ ವಿಶಾಖಪಟ್ಟಣಂನ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್‌ ನಡೆಸಿದ ವೈದ್ಯರು ಬ್ರಾಂಕೋಸ್ಕೋಪಿಯ ಮೂಲಕ ಹಲ್ಲು ಸೆಟ್‌ ಅನ್ನು ಹೊರತೆಗೆದಿದ್ದಾರೆ.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಶುಕ್ರವಾರದಂದು ಹೈಕೋರ್ಟ್ ಕೊಲೆ ಆರೋಪಿಗಳಾದಂತಹ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಉಳಿದ ಎಲ್ಲಾ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತು. ಈ ಹಿನ್ನೆಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಕೊಲೆ ಆರೋಪಿ A1 ಪವಿತ್ರ ಗೌಡ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ತುಮಕೂರು ಹಾಗೂ ಕಲ್ಬುರ್ಗಿ ಕೇಂದ್ರ ಕಾರಾ ಗ್ರಹಗಳಲ್ಲಿರುವ ಇತರೆ ಆರೋಪಿಗಳು ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೆ ಬಿಜಿಎಸ್ ಆಸ್ಪತ್ರೆಯಿಂದ ಇಂದು ಮಧ್ಯಾಹ್ನದ ಬಳಿಕ ದರ್ಶನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಕಳೆದ ಒಂದುವರೆ ತಿಂಗಳಿನಿಂದ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಂತರ ಜಾಮಿನು ಪಡೆದುಕೊಂಡು ನಟ ದರ್ಶನ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದುಕೊಂಡಿದ್ದಾರೆ. ಫಿಜಿಯೋಥೆರಫಿ ಮಾಡಿಸಿ ಬೇಲ್…

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಸಾಕ್ಷಿಗೆ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಬೆದರಿಕೆ ಹಾಕಿದ ಯುವಕನ ವಿರುದ್ಧ ಕೇಸ್‌ ದಾಖಲಾಗಿದೆ. ಕೋರ್ಟಿಗೆ ತೆರಳಿ ಸಾಕ್ಷಿ ಹೇಳದಂತೆ ಸಾಕ್ಷಿದಾರನಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಇದೀಗ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹರ್ಷ ಹತ್ಯೆ ಪ್ರಕರಣದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿ ಸಾಕ್ಷಿಯಾಗಿದ್ದ. ಡಿಸೆಂಬರ್ 12ರಂದು ಎನ್ಐಎ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದ ಯುವಕ ಅನಂತರ ಸಾಕ್ಷಿ ಹೇಳದಂತೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಹಾಕಲಾಗಿತ್ತು. ಮರುದಿನ ಕೋರ್ಟ್ ಸೂಚನೆಯ ಮೇರೆಗೆ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಸೀಗೆಹಟ್ಟಿ ಬಳಿ ಎರಡು ವರ್ಷದ ಹಿಂದೆ ಹರ್ಷ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬನನ್ನು NIA ಸಾಕ್ಷಿಯಾಗಿ ಪರಿಗಣಿಸಿತ್ತು.ಈಗ ಆತನಿಗೆ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹರ್ಷ ಹತ್ಯೆಯಾದ ದಿನ…

Read More

ಬೆಂಗಳೂರು : ಕಳೆದ ಹಲವು ದಿನಗಳಿಂದ ಮಳೆರಾಯ ತಣ್ಣಗಾಗಿದ್ದ ಎನ್ನುವಷ್ಟರಲ್ಲಿ ಇದೀಗ ಮತ್ತೆ ವರ್ಣಾರ್ಭಟ ಆರಂಭವಾಗಲಿದ್ದು, ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ರಾಜ್ಯಾದ್ಯಂತ ಚಳಿಯ ವಾತಾವರಣವಿದೆ.ಆದರೆ ಬೆಂಗಳೂರು ಸೇರಿ ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಡಿಸೆಂಬರ್ 18ರಿಂದ ಮಳೆಯಾಗಲಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

Read More

ಬೆಂಗಳೂರು : ರೌಡಿಶೀಟರ್ ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ರೌಡಿಶೀಟರ್ ಕಾಲಿಗೆ ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ. ಹೌದು ಮಾಯಸಂದ್ರದ ಬಳಿ ರೌಡಿಶೀಟರ್ ಕಾಲಿಗೆ ಪೊಲೀಸರಿಂದ ಫೈರಿಂಗ್ ನಡೆದಿದೆ. ರೌಡಿಶೀಟರ್ ಮನೋಜ್ ಮೇಲೆ ಲೋಕಿ ಗ್ಯಾಂಗ್ ದಾಳಿ ಮಾಡಿತ್ತು. ಘಟನೆ ಬಳಿಕ ಲೋಕಿ ಮತ್ತು ಆತನ ಗ್ಯಾಂಗ್ ತಲೆಮೆರೆಸಿಕೊಂಡಿತ್ತು.ಇಂದು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೇನೆ ಲೋಕಿ ಹಲ್ಲೆಗೆ ಯತ್ನಿಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಲೋಕೇಶ್ ಯತ್ನಿಸಿ ಪರಾರಿಯಾಗುವ ವೇಳೆ ಆತ್ಮ ರಕ್ಷಣೆಗಾಗಿ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡಿರುವ ರೌಡಿ ಶೀಟರ್ ಲೋಕಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ನವದೆಹಲಿ : ಖ್ಯಾತ ತಬಲಾ ವಾದಕ ಮತ್ತು ಉಸ್ತಾದ್ ಅಲ್ಲಾ ರಖಾ ಅವರ ಹಿರಿಯ ಪುತ್ರ ಉಸ್ತಾದ್ ಜಾಕೀರ್ ಹುಸೇನ್ ಪ್ರಸ್ತುತ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಅವರು ನಿಧನರಾಗಿದ್ದಾರೆ ಬಲ್ಲ ಮೂಲಗಳಿಂದ ಎಂದು ತಿಳಿದುಬಂದಿದೆ.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವ್ರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಧ್ಯ ಜಾಕೀರ್ ಹುಸೇನ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅಂದ್ಹಾಗೆ, ಜಾಕೀರ್ ಹುಸೇನ್ ಅವ್ರ ಹೆಸರನ್ನ ಸಂಗೀತ ಜಗತ್ತಿನಲ್ಲಿ ಗೌರವದಿಂದ ತೆಗೆದುಕೊಳ್ಳಲಾಗುತ್ತದೆ. 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದ ಉಸ್ತಾದ್ ಜಾಕಿರ್ ಹುಸೇನ್ ಅವರಿಗೆ 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನ ನೀಡಲಾಯಿತು. ಜಾಕಿರ್ ಹುಸೇನ್ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನ ಸಹ ಪಡೆದಿದ್ದಾರೆ.

Read More

ತುಮಕೂರು : ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದ ಪೊಲೀಸರು ಇದೀಗ ನಿನ್ನೆ ಡ್ರೋನ್ ಪ್ರತಾಪ್ ನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಸೇರಿದಂತೆ ಮೂವರ ಪೊಲೀಸ್ ಕಸ್ಟಡಿ ಇಂದು ಮುಕ್ತಾಯವಾಗಲಿದೆ. ಡ್ರೋನ್ ಪ್ರತಾಪ್, ಸ್ನೇಹಿತ ಪ್ರಜ್ವಲ್ ಹಾಗೂ ಕ್ಯಾಮರಾ ಮೆನ್ ವಿನಯ್ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಬೆಳಿಗ್ಗೆ 11:30 ಕ್ಕೆ ತುಮಕೂರು ಜಿಲ್ಲೆಯ ಮಧುಗಿರಿ ಕೋರ್ಟ್ ಗೆ ಮೂವರು ಹಾಜರಾಗಲಿದ್ದಾರೆ. ಕೋರ್ಟಿಗೆ ಮಿಡಿಗೇಶಿ ಪೊಲೀಸರು ಮೂವರನ್ನು ಹಾಜರುಪಡಿಸಲಿದ್ದಾರೆ. ಕೃಷಿಹೊಂಡದಲ್ಲಿ ಡೋಂಡ್ರೋನ್ ಟ್ ಪ್ರತಾಪ್ ಸೋಡಿಯಂ ಎಸೆದು ಸ್ಪೋಟಿಸಿದ್ದ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೊಟಿ ಬಳಿ ಈ ಒಂದು ಘಟನೆ ನಡೆದಿತ್ತು.ಈ ಸಂಬಂಧ ಬಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು ಶನಿವಾರ ತಡರಾತ್ರಿ ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವ…

Read More

ಬೆಳಗಾವಿ : ವಕ್ಫ್ ಆಸ್ತಿ ಕಬಳಿಕೆ ಕುರಿತು ಮೌನವಾಗಿರಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅನ್ವರ್‌ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂಪಾಯಿ ಆಮಿಷ ಒಡ್ಡಿರುವ ಆರೋಪ, ಕೋವಿಡ್ ಅಕ್ರಮಗಳ ಕುರಿತ ನ್ಯಾಯಮೂರ್ತಿ ಡಿಕುನ್ಹ ವರದಿ, ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸ್‌ ಪ್ರಕರಣವನ್ನು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಾಂಗ್ರಸ್ ಸಿದ್ಧತೆ ನಡೆಸಿದೆ. ಇಂದಿನಿಂದ ಎರಡನೇ ವಾರದ ವಿಧಾನ ಮಂಡಲದ ಕಲಾಪ ಆರಂಭವಾಗಲಿದ್ದು, ಕಲಾಪದ ವೇಳೆ ಬಳ್ಳಾರಿ ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಹಾಗೂ ಶಿಶುಗಳ ಸಾವು, ಅಲ್ಲದೇ ಅಬಕಾರಿ ಸಚಿವರಿಂದ 700 ಕೋಟಿ ರೂ. ವಸೂಲಿ ಆರೋಪದ ವಿಷಯಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ಪ್ರತಿತಂತ್ರ ರೂಪಿಸಿದೆ. ಕಳೆದ ಶುಕ್ರವಾರ ನಡೆದ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿವೈ ವಿಜಯೇಂದ್ರ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಮೌನವಾಗಿರಲು ಬಿಜೆಪಿಯ ಮುಖಂಡ ಅನ್ವರ್ ಮಣಿಪಾಡಿಗೆ 150 ಕೋಟಿ ರೂಪಾಯಿ…

Read More

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ನಿನ್ನೆ ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಬಳೆ ಕಳ್ಳರಿಬ್ಬರು ಮೊಬೈಲ್ ಕದ್ದುಪರಾರಿಯಾಗಲು ಯತ್ನಿಸಿದಾಗ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ಚೇಸ್ ಮಾಡಿ ಅವರ ಬೈಕ್ ಗೆ ಗುದ್ದಿ ಬೀಳಿಸಿದ್ದ ಘಟನೆ ನಡೆದಿತ್ತು. ಇದೀಗ ತಡರಾತ್ರಿ ಕೂಡ ಬೆಂಗಳೂರಿನ ಶಿವಾಜಿನಗರದಲ್ಲಿ ಮೊಬೈಲ್ ಅಂಗಡಿ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ. ಹೌದು ಬೆಂಗಳೂರಿನ ಶಿವಾಜಿನಗರದ ಬಳಿ ಇರು ವಿಶ್ವಾಸ್ ಕಮ್ಯುನಿಕೇಷನ್ ಎಂಬ ಮೊಬೈಲ್ ಅಂಗಡಿಯ ಶಟರ್ ಮುರಿದ ಬಳಿಕ ಮುಖಕ್ಕೆ ಮಾಸ್ಕ ಧರಿಸಿದ ಖದೀಮರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಮುಖ ಕಾಣಬಾರದೆಂದು ಈ ರೀತಿ ಪ್ಲಾನ್ ಮಾಡಿದ್ದಾರೆ. ಈ ವೇಳೆ ಅವರು ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಹೌದು ಬೆಂಗಳೂರಿನಲ್ಲಿ ರಾತ್ರೋರಾತ್ರಿ ಮೊಬೈಲ್ ಕಳ್ಳತನ ಮಾಡಲಾಗಿದೆ. ರಾತ್ರೋರಾತ್ರಿ ಮೊಬೈಲ್ ಅಂಗಡಿ ಲೂಟಿ ಮಾಡಿದ್ದಾರೆ. ಶೆಟರ್ ಮುರಿದು,…

Read More

ಬೆಂಗಳೂರು : ಬಿಜೆಪಿ ಮುಖಂಡ ಅನ್ವರ್ ಮಣಪ್ಪಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ವಕ್ಫ್ ವಿಚಾರವಾಗಿ ಮೌನವಹಿಸುವಂತೆ 150 ಕೋಟಿ ರೂಪಾಯಿ ಆಫರ್ ನೀಡಿದರು ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಸಚಿವ ಕೃಷ್ಣ ಭೈರೇಗೌಡ ಈ ಪ್ರಕರಣದ ಕುರಿತಂತೆ ಬಿವೈ ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಭೈರೇಗೌಡ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಬಿಜೆಪಿ ಮುಖಂಡರೇ ಆದ ಅನ್ವರ್ ಮಾಣಪ್ಪಾಡಿ 150 ಕೋಟಿ ರು. ಆಮಿಷದ ಆರೋಪ ಮಾಡಿದ್ದರೂ ಸಿಬಿಐ ಹಾಗೂ ಇಡಿ ಏನು ಮಾಡುತ್ತಿವೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ಹೊರ ಹಾಕಿದರು. ಶಾಸಕ ಬಸನಗೌಡ ಯತ್ನಾಳ ಕೂಡ ಇದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹೀಗಾಗಿ ಸಿಬಿಐ ತನಿಖೆ ನಡೆಯಬೇಕು ಎಂದರು. ಸುಳ್ಳು ಆರೋಪಿಗಳಿಗೆಲ್ಲಾ ಇ.ಡಿ ಹಾಗೂ ಸಿಬಿಐ…

Read More