Author: kannadanewsnow05

ಬಳ್ಳಾರಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ವಿಚಾರವಾಗಿ ಬಳ್ಳಾರಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಸಿದ್ದರಾಮಯ್ಯ ಅವರಿಗೆ 14 ಸೈಟ್ ಅಷ್ಟೇ ಅಲ್ಲ 3000 ಕೋಟಿ ಕೂಡ ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ಭಾಗ್ಯ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಒಂದುವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಹಗರಣದಲ್ಲಿ ಮುಳುಗಿದೆ. ಸಿಎಂ ಸಿದ್ದರಾಮಯ್ಯ ನಾನು ತೆರೆದ ಪುಸ್ತಕ ಅಂತ ಹೇಳುತ್ತಾರೆ. ಆದರೆ ತೆರೆದು ನೋಡಿದರೆ ಎಲ್ಲಾ ಕಪ್ಪು ಇದೆ. ಸಿಎಂ ಸಿದ್ದರಾಮಯ್ಯಗೆ 14 ಸೈಟ್ಗಳು ಯಾವ ಲೆಕ್ಕನೂ ಇಲ್ಲ. 3,000 ಕೋಟಿ ಹಣ ಅಂದರೆ ಸಿಎಂ ಸಿದ್ದರಾಮಯ್ಯಗೆ ಲೆಕ್ಕಾನೆ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿ ಮಾಡಿದ್ದಾರೆ. ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಇದ್ದಂತಹ ಹಣವನ್ನು ಲೂಟಿ ಮಾಡಿದ್ದಾರೆ 187 ಕೋಟಿ ಅಧಿಕ ಹಣ ಲೂಟಿಯಾಗಿದೆ ಅಂದರೆ 87 ಕೋಟಿ ಅಂತ ಹೇಳಿದರು…

Read More

ರಾಮನಗರ : ಚನ್ನಪಟ್ಟಣ ಚುನಾವಣೆಯ ತೀವ್ರ ರಂಗೇರಿದ್ದು ಇದೀಗ ಪರಸ್ಪರ ನಾಯಕರುಗಳ ವಾಕ್ಸಮರ ತಾರಕಕ್ಕೆ ಏರಿದೆ. ಇಂದು ಮಾಜಿ ಸಂಸದ ಡಿಕೆ ಸುರೇಶ್ ಅವರು ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿರುವಂತಹ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತಾಗಿ ಎಚ್ ಡಿ ಕುಮಾರಸ್ವಾಮಿ ಇದು ನಾನು ವಿಧಾನಸೌಧದಲ್ಲಿ ಮಾತನಾಡಿರುವ ಹಳೆಯ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ವಿಧಾನಸಭೆಯಲ್ಲಿ ಮಾತನಾಡಿದ್ದು, ಒಂದು ವಾರದಿಂದ ಅದನ್ನು ಕಟಿಂಗ್ ಮಾಡಿ ಹಂಚುತ್ತಿದ್ದಾರೆ. ಅದು ನನ್ನ ಹೇಳಿಕೆಯಲ್ಲ. ವಾಸ್ತವ ಪರಿಸ್ಥಿತಿ ಬಗ್ಗೆ ಮಾತನಾಡಿದ್ದೆ. ಪಕ್ಕದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಹೇಳಿದ್ದೆ. ಇಸ್ಪೀಟ್ ಕ್ರಿಕೆಟ್‌ ಬೆಟ್ಟಿಂಗ್ ದಂಧೆ ನಡೆಸುವವರು 5 ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಅಂದ ವಿಚಾರದ ಬಗ್ಗೆ ಹೇಳಿದ್ದೆ. ಅದನ್ನು ಮದ್ದೂರು ವಿಷಯಕ್ಕೆ ಹೇಳಿದ್ದು ಎಂದು ಸ್ಪಷ್ಟಪಡಿಸಿದರು. ಹಾಸನದಲ್ಲೂ ಇದಕ್ಕಿಂತ ಕೆಟ್ಟದಾಗಿ ಮಾಡಿದರು. ನನ್ನ ಮೇಲೆ ಹೇಳಲು ಏನು ಇಲ್ಲವಲ್ಲ…

Read More

ಹುಬ್ಬಳ್ಳಿ : ಇದೇ ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಾದ ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾವಿಯಲ್ಲಿ ಉಪಚುನಾವಣೆ ನಡೆಯಲಿದ್ದು, ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಉಪಚುನಾವಣೆ ನಡೆಯುವ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ಈಗಾಗಲೇ ಸಂಡೂರು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಮೂರೂ ಕ್ಷೇತ್ರಗಳಲ್ಲೂ ಒಳ್ಳೆಯ ವಾತಾವರಣ ಇದೆ.ಶಿಗ್ಗಾವಿಯಲ್ಲಿ ಕಾರ್ಯಕರ್ತರ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ.ಬಸವರಾಜ್ ಬೊಮ್ಮಾಯಿ ವಿರುದ್ಧ ಜನಾಕ್ರೋಶ ಇದೆ ಅಂತೆ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇನೆ ಎಂದು ಕೊಟ್ಟಿಲ್ಲವಂತೆ ಹೀಗಾಗಿ ನಾವೇ ಶಿಗ್ಗಾವಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಹಲೋ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ನೌಕರ ಸೂಸೈಡ್ ಮಾಡಿಕೊಂಡಿರುವ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಆಪ್ತರಾಗಲಿ ಯಾರೇ ಆಗಲಿ ನಿರ್ದಾಕ್ಷಿಣ್ಯ ಕ್ರಮವಾಗುತ್ತದೆ. ಚುನಾವಣಾ ಸಮಯದಲ್ಲಿ ಈ ರೀತಿಯ ಆರೋಪ ಇರುವುದೇ. ಕೆಲವರು ಚುನಾವಣಾ ಸಂದರ್ಭದಲ್ಲಿ ಇಂತಹದನ್ನು…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೈಕೋರ್ಟಿಗೆ ನಟ ದರ್ಶನ್ ಗೆ ನೀಡಬೇಕಾದಂತಹ ಚಿಕಿತ್ಸೆ ವರದಿ ಸಲ್ಲಿಕೆಯಾಗಿದೆ. ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟಿಗೆ ನಟ ದರ್ಶನ್ ಚಿಕಿತ್ಸೆ ಸಂಪೂರ್ಣ ವರದಿ ಇಂದು ಸಲ್ಲಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದರು. ಅವರಿಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಇದೇ ಕಾರಣದಿಂದ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ನೀಡಿತ್ತು. ಇದೀಗ ಜೈಲಿನಿಂದ ಬಿಡುಗಡೆಯಾದ ಬಳಿಕ ಒಂದು ವಾರದ ಒಳಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು.ಇದೀಗ ಇಂದು ನಟ ದರ್ಶನ್ ಅವರ ವೈದ್ಯಕೀಯ ವರದಿ ಸಲ್ಲಿಕೆಯಾಗಿದೆ. ಬೆಂಗಳೂರು ನಗರದ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ ಕಳೆದ ಆರು ದಿನಗಳ ಹಿಂದೆ ದಾಖಲಾಗಿದ್ದಾರೆ. ಈ ವೇಳೆ ನಟ ದರ್ಶನ್ ಅವರಿಗೆ ಎಂ ಆರ್ ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ಹಾಗೂ ಬ್ಲಡ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನು ವೈದ್ಯರು…

Read More

ಬೆಂಗಳೂರು : ಅಪಾರ್ಟ್ಮೆಂಟಿನ ನಾಲ್ಕನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ಆಯತಪ್ಪಿ ಬಿದ್ದು ಧಾರವಾಡವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದ ಬಳಿ ಇರುವ ಅಪಾರ್ಟ್ಮೆಂಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ನಿನ್ನೆ ಅಪಾರ್ಟ್ಮೆಂಟ್ನ 4ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಯಲಹಂಕದ ಅಪಾರ್ಟ್ಮೆಂಟ್ ನಲ್ಲಿ ನಿನ್ನೆ ಈ ಒಂದು ದುರ್ಘಟನೆ ಸಂಭವಿಸಿದೆ. ಆಯತಪ್ಪಿ ಬಿದ್ದು ಬಿಹಾರ ಮೂಲದ ಕಾರ್ಮಿಕ ಅಬಿದುಲ್ಲಾ ಎಂದು ಹೇಳಲಾಗುತ್ತಿದೆ. ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕಟ್ಟಡದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಕಾರ್ಮಿಕನ ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಇದೀಗ ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು : ಮುಡಾದಲ್ಲಿ ನಡೆದಂತಹ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ, ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಎಂದು ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಅಕ್ಟೋಬರ್ 28ರಂದು ಇಡಿ ಅಧಿಕಾರಿಗಳು ಮುಡಾ ಮಾರಿ ಅಧ್ಯಕ್ಷ ದಿನೇಶ್ ಕುಮಾರ್ ನಿವಾಸದ ಮೇಲೆ ದಾಳಿ ಮಾಡಿದರು. ವಿಡಿಯೋ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನುವ ವಿಚಾರ ತೆಳೆಯದು ದಿನೇಶ್ ಕುಮಾರ್ ವಾಕಿಂಗ್ ಹೋಗುವ ಸ್ಥಳದಿಂದಲೇ ನಾಪತ್ತೆಯಾಗಿದ್ದರು. ದಿನೇಶ್ ಕುಮಾರ್ ನಾಪತ್ತೆ ಆಗಿರುವ ವಿಚಾರ ತಿಳಿದು ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗದೆ ಹೋದರೆ ವಾರಂಟ್ ಜಾರಿ ಮಾಡಿ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೋಟಿಸ್ ನೀಡಿದ್ದರು. ಇದೀಗ ದಿನೇಶ್ ಕುಮಾರ್ ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸುರಕ್ಷತೆ ಇಲ್ಲದಂತಹ ಆಗಿದೆ. ಎಲ್ಲೆಂದರಲ್ಲಿ ಮಹಿಳೆಯರ ಮೇಲೆ ಯುವತಿರ ಮೇಲೆ ದೌರ್ಜನ್ಯ ಕಿರುಕುಳ ನಡೆಯುತ್ತಲೇ ಇವೆ. ಇದೀಗ ಬೆಂಗಳೂರಿನಲ್ಲಿ ಉತ್ತರ ಭಾರತದ ಇವತಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಈ ಒಂದು ಘಟನೆ ನಡೆದಿದ್ದು, ಬಿಟಿಎಂ ಲೇಔಟ್ ನಲ್ಲಿ ವಾಸವಾಗಿರುವ ಹಿಂದಿ ಭಾಷಿಕ ಯುವತಿ ರಸ್ತೆಯಲ್ಲಿ ಹೋಗುವಾಗ ವಿಡಿಯೋ ಮಾಡುವುದನ್ನು ನೋಡಿದ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನು ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು ಹಾಕಿದ್ದಾಳೆ. ಯುವಕನಿಂದ ಕಿರುಕುಳಕ್ಕೆ ಒಳಗಾದ ಯುವತಿ ನೇಹಾ ಬಿಸ್ವಾಲ್. ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದ ಈ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ, ತನಗೆ ಇಷ್ಟವಾದಂತಹ ಒಳ್ಳೆ ವಿಡಿಯೋಗಳನ್ನು ವ್ಲಾಗ್ ಮಾಡುತ್ತಾ, ಚೆನ್ನಾಗಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದಳು. ಅಲ್ಲದೆ ಇವತ್ತಿಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಜನ ಫಾಲೋವರ್ಸ್ ಕೂಡ ಇದ್ದಾರೆ. ಘಟನೆ ಕುರಿತು…

Read More

ರಾಮನಗರ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ 2 ಗಂಟೆ ವಿಚಾರಣೆ ಎದುರಿಸಿದ ಬಳಿಕ ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಾವು ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿ ಇರುತ್ತೇವೆ ಎಂದು ತಿಳಿಸಿದರು. ಇದು ಹೊಸ ಸರ್ಕಾರ ರಚನೆ ಮಾಡುವ ಚುನಾವಣೆ ಅಲ್ಲ. ಯೋಗೇಶ್ವರ್ ಗೆದ್ದರೆ 136 ರಿಂದ 137 ಆಗುತ್ತೇವೆ. ನಾವು ಜನಪರ ಕಾರ್ಯಕ್ರಮ ಕೊಟ್ಟಿದ್ದೇವೆ. ನಮ್ಮನ್ನು ಗೆಲ್ಲಿಸಿದರೆ ನಮ್ಮ ಸರ್ಕಾರಕ್ಕೆ ಶಕ್ತಿ ಕೊಟ್ಟ ಹಾಗೆ ಆಗುತ್ತದೆ. ನಾವು ಇನ್ನೂ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತೇವೆ ಎಂದು ತಿಳಿಸಿದರು. ಬಿಜೆಪಿ ಜೆಡಿಎಸ್ ನವರು ಏನೆಲ್ಲಾ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಮೇಲೆ ಮಸಿ ಬಳಿದು ನನ್ನನ್ನು ಅಧಿಕಾರದಿಂದ ತೆಗೆದುಹಾಕಿ ಮತ್ತೆ ಅವರು ಅಧಿಕಾರಕ್ಕೆ ಬರಬೇಕು ಎಂದು ಹವಣಿಸಿದರೆ ಅದು ಅವರ ಈ ದೃಷ್ಟ ಪ್ರಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಬಿಜೆಪಿಯವರು…

Read More

ಹುಬ್ಬಳ್ಳಿ : ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯಿಂದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಕರೆ ಮತ್ತು 5 ಕೋಟಿ ರೂಪಾಯಿ ನೀಡುವಂತೆ ಒತ್ತಡ ಬಂದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿರುವ ಆರೋಪಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಇದ್ದಾನೆ ಎಂಬ ಮಾಹಿತಿ ಮೊಬೈಲ್ ಪೊಲೀಸರಿಗೆ ದೊರಕಿದೆ. ಹೌದು ಕರ್ನಾಟಕದ ಹುಬ್ಬಳ್ಳಿಯಲ್ಲಿ ಶಂಕಿತ ಆರೋಪಿಯ ಜಾಡು ಪತ್ತೆಯಾಗಿದೆ. ತಕ್ಷಣಕ್ಕೆ ಆತನನ್ನು ಬಂಧಿಸಿಲ್ಲವಾದರೂ, ಪೊಲೀಸ್ ತಂಡ ಹುಬ್ಬಳ್ಳಿಗೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ವ್ಯಕ್ತಿಯೋರ್ವ ಸಲ್ಮಾನ್​​ಗೆ ಬೆದರಿಕೆ ಹಾಕಿದ್ದ. ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ಸಹಾಯವಾಣಿ ವಾಟ್ಸ್ಆ್ಯಪ್​ ಸಂಖ್ಯೆಗೆ ಸಂದೇಶ ಕಳುಹಿಸಲಾಗಿತ್ತು. 1998ರ ಕೃಷ್ಣಮೃಗ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು ಎಂಬ ವಾಟ್ಸಪ್ ಸಂದೇಶ ಸಲ್ಮಾನ್ ಖಾನ್ ಅವರಿಗೆ ಬಂದಿತ್ತು. ವರ್ಲಿಯಲ್ಲಿರುವ ಮುಂಬೈ ಸಂಚಾರ…

Read More

ಬೆಳಗಾವಿ : ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ತೋಟವೊಂದರಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಅಥಣಿ ಹೊರವಲಯದಲ್ಲಿರುವ ಮದಭಾವಿ ರಸ್ತೆ ಹೊಂದಿಕೊಂಡಂತಹ ಚೌವ್ಹಾಣ ಎನ್ನುವವರ ತೋಟದಲ್ಲಿ ನಾನಾ ಸಾಹೇಬ್ ಬಾಬು ಚೌವ್ಹಾಣ್ (58) ಮತ್ತು ಜಯಶ್ರೀ ನಾನಾ ಸಾಹೇಬ್ ಚೌವ್ಹಾಣ್ (50) ಮೃತಪಟ್ಟ ದಂಪತಿ ಎಂದು ತಿಳಿದುಬಂದಿದೆ. ಸುಮಾರು ಐದಾರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯ ಸುತ್ತಲೂ ದುರ್ವಾಸನೆ ಬರುತ್ತಿದ್ದಂತೆ ಪಕ್ಕದ ಮನೆಯವರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಗಳನ್ನು ಕೊಲೆ ಮಾಡಿ ಬಿಸಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Read More