Subscribe to Updates
Get the latest creative news from FooBar about art, design and business.
Author: kannadanewsnow05
ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಇದುವರೆಗೆ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಇಂದು ಫಿಲಂ ಚೇಂಬರ‍್ನ ಪದಾಧಿಕಾರಿಗಳು ಸೇರಿ ಚಿತ್ರದುರ್ಗದ ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಭೇಟಿ ಬಳಿಕ ಮಾತನಾಡಿದ ಫಿಲಂ ಚೇಂಬರ್ ನ ಅಧ್ಯಕ್ಷ ಎನ್ಎಂ ಸುರೇಶ್ ಅವರು ಚಿತ್ರರಂಗದಿಂದ ದರ್ಶನ್ ಫ್ಯಾನ್ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲು ಆಗಲ್ಲ ಎಂದು ತಿಳಿಸಿದರು. ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿ ಕುಟುಂಬದ ಭೇಟಿ ಬಳಿಕ ಮಾತನಾಡಿದ ಅವರು, ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೆವು. ಬಹಳ ನೋವಾಗಿದೆ ಎಂದು ಚಿತ್ರದುರ್ಗದಲ್ಲಿ ಫಿಲಂ ಅಧ್ಯಕ್ಷ ಎಂ ಎನ್ ಸುರೇಶ್ ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಎನ್ ಎಂ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಯಾರೇ ಮಾಡಿದರು ತಪ್ಪು ತಪ್ಪೇ. ವಾಣಿಜ್ಯ ಮಂಡಳಿ ತಪ್ಪುಗಳನ್ನು ಖಂಡಿಸುತ್ತದೆm ರೇಣುಕಾಸ್ವಾಮಿ ತಂದೆ ತಾಯಿ ಕಣ್ಣೀರು ಹಾಕಿದ್ದು…
ಉತ್ತರಖಂಡ : ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 23 ಜನರಿದ್ದ ಟೆಂಪೋ ಟ್ರಾವೆಲರ್ ಒಂದು ಅಲಕನಂದ ನದಿಗೆ ಹೂಳಿ ಬಿದ್ದು ಸುಮಾರು 10 ಜನರು ಸಾವನ್ನಪ್ಪಿದ್ದು 7 ಜನರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಉತ್ತರಖಾಂಡಿನ ರುದ್ರಪ್ರಯಾಗದ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅಲಕನಂದ ನದಿಗೆ ಟಿಟಿ ಉರುಳಿ ಬಿದ್ದು 10 ಪ್ರಯಾಣಿಕರ ಸಾವನ್ನಾಪ್ಪಿದ್ದರೆ. ಉತ್ತರಖಾಂಡಿನ ರುದ್ರ ಪ್ರಯಾಗದಲ್ಲಿ ಈ ಒಂದು ರಸ್ತೆ ಅಪಘಾತ ಸಂಭವಿಸಿದೆ. ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ 7 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಟೆಂಪೋ ಟ್ರಾವೆಲರ್ ನಲ್ಲಿ 23 ಪ್ರಯಾಣಿಕರು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ರುದ್ರಪ್ರಯಾಗ್ ನಗರದಿಂದ ಐದು ಕಿಲೋಮೀಟರ್ ಮುಂದಿರುವ ಬದರೀನಾಥ್ ಹೆದ್ದಾರಿಯ ರಟೋಲಿ ಬಳಿ ಟೆಂಪೋ ಟ್ರಾವೆಲರ್ ಅಲಕನಂದಾ ನದಿಗೆ ಬಿದ್ದಿದೆ. ವಾಹನದಲ್ಲಿ 23 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಮಾಹಿತಿಯ ಮೇರೆಗೆ ಪೊಲೀಸ್ ಆಡಳಿತ, ಜಿಲ್ಲಾ…
ಬೆಳಗಾವಿ : ಶಾರ್ಟ್ ಸರ್ಕ್ಯೂಟ್ ನಿಂದ ಅಕ್ಕ ಪಕ್ಕದಲ್ಲಿ ಇದ್ದಂತಹ ಎರಡು ಮನೆಗಳು ಸುಟ್ಟು ಭಸ್ಮವಾಗಿದ್ದು ಮದುವೆಗೆ ಎಂದು ತಂದಿಟ್ಟದ 6 ಲಕ್ಷ ರೂಪಾಯಿ ನಗದು ಹಣ ಕೂಡ ಈ ವೇಳೆ ಸುಟ್ಟು ಬೂದಿಯಾಗಿರುವ ಘಟನೆ ಇಂದು ಬೆಳಗಾವಿಯ ಹೊಸೂರ ಹರಿಜನ ಗಲ್ಲಿಯಲ್ಲಿ ನಡೆದಿದೆ. ಹೌದು ಬೆಳಗಾವಿಯ ಶಿವರಾಜ್ ಹೊಸೂರ ಹರಿಜನ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಶೋಕ್ ಮೊದಗೆ ಹಾಗೂ ಶಶಿಕಾಂತ ಮೊದಗೆ ಎಂಬುವವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಶಿವರಾಜ್ ಮೊದಗೆ ಮದುವೆ ಕಾರ್ಯಕ್ಕೆಂದು ದುಡ್ಡು ಮನೆಯಲ್ಲಿಟ್ಟಿದ್ದರು. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಮನೆ ಸದಸ್ಯರು ಮನೆಯಿಂದ ಹೊರ ಓಡಿ ಬಂದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಪರಿಕರ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿರುವ ಕಾರ್ಯ ನಡೆದಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ : ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾ ಸ್ವಾಮಿ ನಿವಾಸಕ್ಕೆ ಇಂದು ಫಿಲಂ ಚೇಂಬರ್ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ. ಚಿತ್ರದುರ್ಗದ ವಿ ಆರ್ ಎಸ್ ಬಡಾವಣೆಯಲ್ಲಿರುವ ರೇಣುಕಾ ಸ್ವಾಮಿ ನಿವಾಸಕ್ಕೆ ಇದೀಗ ಫಿಲಂ ಚೇಂಬರ್ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ. ಇದೆ ವೇಳೆ ಫಿಲಂ ಚೇಂಬರ್ ಪದಾಧಿಕಾರಿಗಳು ರೇಣುಕಾ ಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಹೌದು ಇಂದು ಫಿಲಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ಸಾರಾ ಗೋವಿಂದು, ಚಿನ್ನೇಗೌಡ, ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಕುಮಾರ್, ಕರಿಸುಬ್ಬು ಸೇರಿ ಚಿತ್ರರಂಗದ ಹಲವರು ಭೇಟಿ ನೀಡಿ ಕುಟುಂಬಸ್ಥರಿಗೆ ಫಿಲಂ ಚೇಂಬರ್ ನ ಪದಾಧಿಕಾರಿಗಳು ಸಾಂತ್ವನ ಹೇಳಿದರು.ಇದೇ ವೇಳೆ ಶಾಸಕರಾದ ವೀರೇಂದ್ರ ಪಪ್ಪಿ ಅವರು ಕೂಡ ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 2 ಲಕ್ಷ ರೂಪಾಯಿಯ ಪರಿಹಾರದ ಚೆಕ್ ಅನ್ನು ನೀಡಿದರು. ಇದೆ…
BREAKING: ಕಿಡ್ನ್ಯಾಪ್ ಕೇಸಲ್ಲಿ ಭವಾನಿ ರೇವಣ್ಣಗೆ ತಾತ್ಕಾಲಿಕ ರಿಲೀಫ್: ನಿರೀಕ್ಷಣಾ ಜಾಮೀನು ವಿಸ್ತರಿಸಿ ಕೋರ್ಟ್ ಆದೇಶ
ಬೆಂಗಳೂರು : ಮೈಸೂರು ಜಿಲ್ಲೆಯ ಕೆ.ಆರ್.ನಗರ ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಸ್ತರಿಸಿದೆ. ಈಗಾಗಲೇ ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣವಾಗಿದ್ದು, ಜಾಮೀನು ಅರ್ಜಿ ಸಂಬಂಧ ಆದೇಶ ಕಾಯ್ದಿರಿಸಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯ ಮಗ ದೂರು ನೀಡಿದ್ದ HD ರೇವಣ್ಣ, ಭವಾನಿ ರೇವಣ್ಣ ಹಾಗೂ ಸಂಬಂಧಿಯಾಗಿರುವ ಬಾಬು ಮೇಲೆ ಸಂತ್ರಸ್ತೆಯ ಮಗ ದೂರು ನೀಡಿದ್ದ. ಎಸ್ಐಟಿ ಅಧಿಕಾರಿಗಳು ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು.ನಂತರ ಭವಾನಿ ರೇವಣ್ಣಗು ಕೂಡ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಸಂಬಂಧ ಎಸ್ಐಟಿ ಭವಾನಿ ರೇವಣ್ಣ ಅವರಿಗೆ ಎರಡೆರಡು ನೋಟಿಸ್ ಕೊಟ್ಟಿತ್ತು. ನೋಟಿಸ್ ನೀಡುತ್ತಿದ್ದಂತೆ ಭವಾನಿ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕತಿಸಿತ್ತು. ಅರ್ಜಿ…
ಧಾರವಾಡ : ಭಜರಂಗದಳದ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಯನ್ನು ಖಂಡಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನಿಸಿರುವ ಘಟನೆ ಧಾರವಾಡ ನಗರದ ಹಳೆ ಎಪಿಎಂಸಿ ಬಳಿ ನಡೆದಿದೆ. ಗೋ ರಕ್ಷಣೆ ಮಾಡಲು ಹೋದಾಗ ಸೋಮಶೇಖರ ಚನ್ನಶೆಟ್ಟಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಧಾರವಾಡ ನಗರದ ಹಳೆ ಎಪಿಎಂಸಿ ಬಳಿ ಹಲ್ಲೆ ನಡೆಸಿರುವ ಆರೋಪ ಈಗ ಕೇಳಿ ಬಂದಿದೆ. ಹಲ್ಲೆಗೆ ಒಳಗಾದ ಸೋಮಶೇಖರ ಚೆನ್ನಶೆಟ್ಟಿ ಪ್ರಾಣಿ ರಕ್ಷಕ ಹಾಗೂ ಉರಗ ರಕ್ಷಕನು ಕೂಡ ಆಗಿದ್ದಾನೆ. ಠಾಣೆಯ ಮುಂದೆ ಕುಳಿತು ಇದೀಗ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು : ನೇರಳೆ ಮಾರ್ಗದ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣದಿಂದ ಜೂನ್ 17ರಂದು ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ. ಬೆಳಗ್ಗೆ 05:00 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ಮಧ್ಯಾಹ್ನ 1ಗಂಟೆಯ ಬಳಿಕ ರೈಲು ಸೇವೆ ಚಲ್ಲಘಟ್ಟ ಟು ವೈಟ್‌ಫೀಲ್ಡ್ ನಡುವೆ ಸಂಪೂರ್ಣ ಸಂಚಾರ ಲಭ್ಯವಿರಲಿದೆ. ಆದಾಗ್ಯೂ, ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಯಾದಗಿರಿ : ಖಾಸಗಿ ಏಜೆನ್ಸಿ ಸರಬರಾಜು ಮಾಡಿದ್ದ ಆಹಾರವನ್ನು ಸೇವಿಸಿದ ಶಾಲೆಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ವಾಂತಿ, ಬೇದಿಯಿಂದ ಅಸ್ವಸ್ಥರಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಶಾಲೆಯಲ್ಲಿ ಬಿಸಿ ಊಟ ಸೇವಿಸಿದ್ದ 50 ಕ್ಕೂ ಹೆಚ್ಚು ಮಕ್ಕಳು ಇದೀಗ ಅಸ್ವಸ್ಥರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ. ಮಹಾಂತೇಶ್ವರ ಪ್ರಾಥಮಿಕ ಶಾಲೆ ಹಾಗೂ ಅಂಬೇಡ್ಕರ್ ಶಾಲೆಯಲ್ಲಿ ಈ ಒಂದು ದುರಂತ ಸಂಭವಿಸಿದೆ. ಖಾಸಗಿ ಏಜೆನ್ಸಿ ಸರಬರಾಜು ಮಾಡಿದ್ದ ಆಹಾರವನ್ನು ಮಕ್ಕಳು ಸೇವಿಸಿದ್ದರು ಎನ್ನಲಾಗಿದೆ. ನಾಲ್ಕು ಶಾಲೆಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿಭೇದಿ ಅಸ್ವಸ್ಥಗೊಂಡ ಮಕ್ಕಳಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನೆಕ್ಕೆ ಆರೋಗ್ಯ ಅಧಿಕಾರಿಗಳು ಸೇರಿದಂತೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ : ಸ್ಕೂಲ್ ಬಸ್ಗೆ ಟಿಪ್ಪರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದೆ 40ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಹೌದು ಕೊಲ್ಹಾಪುರದಿಂದ ಪ್ರವಾಸಕ್ಕೆ ಎಂದು ಬಂದಿದ್ದ ವಿದ್ಯಾರ್ಥಿಗಳು, ಶಾಲಾ ಬಸ್ ನಲ್ಲಿ ತೆರಳುತ್ತಿದ್ದ ವೇಳೆ, ವೇಗವಾಗಿ ಬಂದಂತಹ ಟಿಪ್ಪರ್ ಒಂದು ಬಸ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿವೆ ತಕ್ಷಣ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲ್ಲಾಪುರದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ರಾಣಿ ಚೆನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಪ್ರಾಣಿ ಸಂಗ್ರಹಾಲಯದಿಂದ ವಾಪಸಾಗುವಾಗ ಈ ಒಂದು ಅಪಘಾತ ಸಂಭವಿಸಿದೆ.ಗಯಾಳು ವಿದ್ಯಾರ್ಥಿಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಕಾಕತಿ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು : ಲೋಕಸಭೆ ಚುನಾವಣೆಯ ಬಳಿಕ ಕಾಂಗ್ರೆಸ್ಸಿನ ಐದು ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದು,ಮತಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಗ್ಯಾರಂಟಿ ಯೋಜನೆಗಳು ಪುನರ್ ಪರಿಶೀಲನೆಯೂ ಆಗಲ್ಲ.ಮತಕ್ಕಾಗಿ ನಾವು ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ. ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದರು. ಇನ್ನು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಬಾರಿ ನಮಗೆ ರಾಜ್ಯದಲ್ಲಿ ಕೇವಲ ಒಂದು ಸ್ಥಾನ ಬಂದಿತ್ತು. ಆದರೆ ಇದೀಗ ಒಂದರಿಂದ 9ಕ್ಕೆ ಏರಿದೆ. ಮೈಸೂರಲ್ಲಿ ನಮಗೆ ಸೋಲು ಆಗಿರಬಹುದು ಆದರೆ ಚಾಮರಾಜನಗರವನ್ನು…












