Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮೈಸೂರಿನ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಧೀಶರಾದ ಸಂತೋಷ್ ಗಜಾನನ ಭಟ್ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಭವಾನಿ ರೇವಣ್ಣರನ್ನು ಈವರೆಗೂ ಆರೋಪಿಯನ್ನಾಗಿ ಮಾಡಿಲ್ಲ. FIR ನಲ್ಲಿ ಸೇರಿಸದೆ ಬಂಧಿಸಬಾರದು ಎಂದೇನಿಲ್ಲ.ಆದರೆ ಮಧ್ಯಂತರ ಜಾಮೀನು ಪರಿಗಣಿಸಲು ಏನಾದರೂ ದಾಖಲೆ ಬೇಕು. ಎಸ್ಐಟಿ ಮೊದಲು ಆಕ್ಷೇಪಣೆಯನ್ನು ಸಲ್ಲಿಸಲಿ ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅಭಿಪ್ರಾಯ ತಿಳಿಸಿ ವಿಚಾರಣೆಯನ್ನುಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ ಮುಂದೂಡಿತು. ಮೈಸೂರು ಜಿಲ್ಲೆಯ ಕೆಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭವಾನಿ ರೇವಣ್ಣ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಗುರುವಾರ ಅಥವಾ ಶುಕ್ರವಾರಕ್ಕೆ ವಿಚಾರಣೆ…
ಬೆಂಗಳೂರು : ಪರಿಷತ್ತಿನ 7 ಸ್ಥಾನಗಳಿಗೆ ಪಕ್ಷದಲ್ಲಿ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಬ್ಲಾಕ್, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ. ಹಾಗಾಗಿ ಈ ಬಾರಿ ಎಲ್ಲಾ ವರ್ಗದವರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಟಿಕೆಟ್ ಹಂಚಿಕೆ ಸಂಬಂಧ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಟಿಕೆಟ್ಗೆ ಕಾಂಗ್ರೆಸ್ ಪಕ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಅವರು ತಿಳಿಸಿದರು. ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆಗಳಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇದೆ. ಕೆಲವು ಸ್ಥಾನಗಳಲ್ಲಿ ಹಾಲಿ ಸದಸ್ಯರು ಇದ್ದಾರೆ. ಹೀಗಾಗಿ ಈ ಬಾರಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ನೋಡೋಣ ಎಂದು ಅವರು ತಿಳಿಸಿದರು.
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಸ ಐ ಟಿ ಅಧಿಕಾರಿಗಳು ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್ ನನ್ನು ಬಂಧಿಸಿದ್ದಾರೆ. ಹೈಕೋರ್ಟಿಗೆ ಜಾಮೀನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಂದು ಅವರು ಹೈಕೋರ್ಟಿಗೆ ಬಂದಿದ್ದರು. ಈ ವೇಳೆ ನವೀನ ಗೌಡ ಹಾಗೂ ಚೇತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಹೈಕೋರ್ಟ್ ಗೆ ಬಂದಿದ್ದ ವೇಳೆ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನವೀನ್ ಗೌಡ ಅರೆಸ್ಟ್ ಆಗದ ಬಗ್ಗೆ ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪ್ರಶ್ನೆ ಮಾಡಿದ್ದರು. ಇದೀಗ ಕೊನೆಗೂ ಇಬ್ಬರು ಆರೋಪಿಗಳನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ಇಬ್ಬರನ್ನು ಇದೀಗ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮೂಲಸೌಕರ್ಯ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಲಿಷ್ಠರಾಗುತ್ತಾರೆಂದು ಸಿಎಂ ಹಣ ಕೊಡುತ್ತಿಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ ಕಿಡಿ ಕಾರಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದಲೇ ಸರ್ಕಾರದ ಗ್ಯಾರಂಟಿಗೆ ಹಣ ಬರುತ್ತಿದೆ ಆದರೆ ಕಾಂಗ್ರೆಸ್ ಬೆಂಗಳೂರಿಗೆ ಹಣ ಕೊಡುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ಡಾ. ಅಶ್ವತ್ ನಾರಾಯಣ ಕಿಡಿಕಾರಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯಿಂದ ರಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಯಾವ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಆದರಿಂದ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ಬಿದ್ದಿದೆ. ಬೆಂಗಳೂರಿನ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ. ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಲಿಷ್ಠರಾಗುತ್ತಾರೆ ಎಂದು ಸಿಎಂ ಹಣ ಕೊಡುತ್ತಿಲ್ಲ ಎಂದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜಗಳದಿಂದ ಬೆಂಗಳೂರಿನ ಜನರಿಗೆ ಅನ್ಯಾಯವಾಗುತ್ತಿದೆ.ಈ ಸರ್ಕಾರಕ್ಕೆ ಕಿಂಚಿತ್ತು ಸ್ವಾಭಿಮಾನ ಇಲ್ಲ. ಸಿಎಂ ಗೆ…
ಬೆಂಗಳೂರು : ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಗೆ ವಹಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ನಾಗೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಯಾವ ರೀತಿ ಗುರುಪಯೋಗ ಆಗಿದೆ. ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ನಿಗಮದ ಎಮ್ ಡಿ ಕೂಡ ದೂರು ಮಾಡಿದ್ದಾರೆ.ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ.ಎಮ್ ಡಿ ಅವರ ಸಹಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು. ಸುಮಾರು 87 ಕೋಟಿ ಬ್ಯಾಂಕ್ ನಿಂದ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದ್ದು ಇಲ್ಲಿವರೆಗೆ 28 ಕೋಟಿ ಅಧಿಕಾರಿ ಆಗಿದ್ದು ಉಳಿದ ಹಣವನ್ನು ಇಂದು ಸಂಜೆ ಒಳಗೆ ರಿಕವರಿ ಮಾಡಲಾಗುತ್ತದೆ ಎಂದು ಎಂಡಿ ಅವರು ತಿಳಿಸಿದ್ದಾರೆ ಎಂದು ಸಚಿವ ನಾಗೇಂದ್ರ ತಿಳಿಸಿದರು. ಸಂಜೆಯ ಒಳಗೆ ಸಂಬಂಧಪಟ್ಟ ಖಾತೆಗೆ ಹಣ ರಿಕವರಿ ಯಾಗುತ್ತದೆ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದೇವೆ ಎಲ್ಲಾ ಹಣ ನಿಗಮದ ಖಾತೆಗೆ ವಾಪಸ್ ಬರಬೇಕು ಗಡವ…
ಬೆಂಗಳೂರು : ಬೆಂಗಳೂರಿನಲ್ಲಿ ಮೂಲಸೌಕರ್ಯ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ ಈ ವೇಳೆ ಆರ್ ಆರ್ ನಗರ ಶಾಸಕರು ಮಾತನಾಡಿ, ಗುತ್ತಿಗೆದಾರರಿಂದ ಹೆಚ್ಚುವರಿ 25 ಪರ್ಸೆಂಟ್ ರಷ್ಟು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶಾಸಕರಾದ ಅಶ್ವಥ್ ನಾರಾಯಣ್, ಎಸ್ಆರ್ ವಿಶ್ವನಾಥ್, ಸಿ ಕೆ ರಾಮಮೂರ್ತಿ, ಭೈರತಿ ಬಸವರಾಜ್, ಎಸ್ ಮುನಿರಾಜು, ಎಂ ಕೃಷ್ಣಪ್ಪ ಕೆ ಗೋಪಾಲಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಪ್ರತಿಭಟನೆಯಲ್ಲಿ ಸರಕಾರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದಿಕ್ಕಾರ ಹೋಗಿ ಆಕ್ರೋಶ ಹೊರಹಾಕಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣ ಇಲ್ಲ.ನಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲದ ಕಾರಣ ಸಭೆ ಕರೆಯುತ್ತಿಲ್ಲ.ಗುತ್ತಿಗೆದಾರನಿಂದ ಹೆಚ್ಚುವರಿ ಶೇಕಡ 25 ರಷ್ಟು ಹಣ ಪಡೆಯುತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ಎಟಿಎಂ ಆಗಿದೆ ಎಂದು ಶಾಸಕ ಮುನಿರತ್ನ…
ಮೈಸೂರು : ಮಧು ಹೇರ್ ಕಟ್ ವಿಚಾರವಾಗಿ ವಿಜಯೇಂದ್ರ ಹೇಳಿಕೆ ವಿಚಾರ ಮೈಸೂರಿನಲ್ಲಿ ವಿಜಯೇಂದ್ರ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಮಾತನಾಡುವವರು ಬಂದು ಹೇರ್ ಕಟ್ ಮಾಡಲಿ. ಡಿಕೆ ಗಡ್ಡದ ಬಗ್ಗೆ ಮಾತನಾಡಿ 130 ಸ್ಥಾನದಿಂದ 60ಕ್ಕೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26 ರಿಂದ 6ಕ್ಕೆ ಬರುತ್ತಾರೆ ಎಂದು ಲೇವಡಿ ಮಾಡಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿಗರು ಮಾತಾಡಿದ್ರಾ? ಮೋದಿ ಕೊವಿಡ್ ಟೈಮ್ ನಲ್ಲಿ ಗಡ್ಡ ಬಿಟ್ಟಿದ್ದರು ಏಕೆ ಪ್ರಶ್ನೆಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡುವುದು ಒಂದು ವಿಷಯವಾ? ಎಂದು ಮೈಸೂರಿನಲ್ಲಿ ವಿಜಯೇಂದ್ರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಶಾಲಾ ಪಠ್ಯಪುಸ್ತಕದ ಪರಿಷ್ಕರಣೆ ಇಲ್ಲ ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಯತ್ತ ಮುಖ ಮಾಡಿದ್ದಾರೆ.ಇದೆ ವೇಳೆ ಈ ಬಾರಿ ಶಾಲಾ ಪಠ್ಯ ಪುಸ್ತಕದಲ್ಲಿ ಯಾವುದೇ ರೀತಿಯಾದ ಪರಿಷ್ಕರಣೆ ಇಲ್ಲ…
ಬಾಗಲಕೋಟೆ : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವತಿ ಶವ ಪತ್ತೆಯಾಗಿದ್ದು, ಯುವತಿಯ ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹಳೆ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನ ಹಳೆ ಟಕ್ಕಳಕಿ ಗ್ರಾಮದಲ್ಲಿ ಈ ಒಂದು ಯುವತಿಯ ಕೊಲೆ ಮಾಡಿ ದೇಹವನ್ನು ಛಿದ್ರ ಛಿದ್ರ ಮಾಡಿ ದುಷ್ಕರ್ಮಿಗಳು ಬಿಸಾಕಿದ್ದಾರೆ.ಮೃತ ಯುವತಿ ಅಂದಾಜು 20 ರಿಂದ 25 ವರ್ಷದವಳು ಎಂದು ಹೇಳಲಾಗುತ್ತಿದೆ. ಶವದ ಮೇಲೆ ಉದ್ದ ತೋಳಿನ ಪಿಂಕ್ ಟಿ-ಶರ್ಟ್ ಇದ್ದು, ಮೃತ ದೇಹದ ಮೇಲೆ ಟಿ-ಶರ್ಟ್ ಮೇಲೆ ಸ್ಮೈಲ್ ಎಂಬ ಬರಹವಿದೆ. ಯುವತಿಯ ಶವದ ಮೇಲೆ ಕಪ್ಪು ಜೀನ್ಸ್ ಪ್ಯಾಂಟ್ ಇದೆ. ಬಲಗಾಲಲ್ಲಿ ಗೆಜ್ಜೆ ಹಾಗೂ ಕಪ್ಪುದಾರ ಇದೆ ಕಳೆದ ನಾಲ್ಕು ದಿನಗಳ ಹಿಂದೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಯುವತಿಯ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.ಮಾಹಿತಿ ಕೊಟ್ಟರೆ ಪದೇ ಪದೇ ವಿಚಾರಣೆಗೆ ಕರೆಯುತ್ತಾರೆಂದು ಸ್ಥಳೀಯರು…
ಬೆಳಗಾವಿ : ಮನೆಗೆ ದಿನಾಲು ಕುಡಿದು ಬಂದು ಗಲಾಟೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಪತಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪುಲಗಡ್ಡಿಯಲ್ಲಿ ನಡೆದಿದೆ. ಮದ್ಯಪಾನ ಮಾಡಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿಯಲ್ಲಿ ನಡೆದಿದೆ. ತಡರಾತ್ರಿ ಯಲ್ಲವ್ವ ನಂದಿಯನ್ನು ಹತ್ಯೆ ಮಾಡಿದ ಅಣ್ಣಪ್ಪ ನಂದಿ ನೇಣಿಗೆ ಶರಣಾಗಿದ್ದಾನೆ. ನಿನ್ನೆ ಸಂಜೆ ಎಮ್ಮೆ ಮಾರಿ ಆ ಹಣದಿಂದ ಕಂಠಪೂರ್ತಿ ಕುಡಿದು ಬಂದಿದ್ದ ಅಣ್ಣಪ್ಪ. ಇದನ್ನ ಪ್ರಶ್ನಿಸಿದ್ದಕ್ಕೆ ಯಲ್ಲವ್ವ ಹತ್ಯೆಗೈದು ಅಣ್ಣಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು,ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದು, ಈತನ ಟಾರ್ಗೆಟ್ ಕೇವಲ ದುಬಾರಿ ಬೆಳೆಯ ಮೊಬೈಲ್ ಗಳು ಆಗಿದ್ದವು ಎನ್ನಲಾಗಿದೆ.ಆರೋಪಿಯನ್ನು ಬಂದಿಸಿದ ಪೊಲೀಸರು ಆತನ ಬಳಿ ಇದ್ದ ಬರೊಬ್ಬರೆ 19.50 ಲಕ್ಷ ಮೌಲ್ಯದ 32 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಪಂಕಜ ಸಿಂಗನನ್ನು ಸಿದ್ದಾಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಆರೋಪಿ ಬಳಿಯಿಂದ 19.50 ಲಕ್ಷ ಮೌಲ್ಯದ 32 ಮೊಬೈಲ್ ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ತಲೆಮರಿಸಿಕೊಂಡ ಮೂರು ಆರೋಪಿಗಳಿಗೆ ಇದೀಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.












