Subscribe to Updates
Get the latest creative news from FooBar about art, design and business.
Author: kannadanewsnow05
ದಕ್ಷಿಣಕನ್ನಡ : ಓವರ್ಟೇಕ್ ಮಾಡುವ ಬರದಲ್ಲಿ ಪಿಕಪ್ ವಾಹನದಡಿ ಬೈಕ್ ಬಿದ್ದ ಪರಿಣಾಮ ಬೈಕ್ ಓಡಿಸುತ್ತಿದ್ದ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳೆಕೋಟೆ ಎಂಬಲ್ಲಿ ನಡೆದಿದೆ. https://kannadanewsnow.com/kannada/21-the-leaves-of-the-ashwat-tree-are-enough-the-money-you-give-up-will-automatically-find-you/ ಈ ವೇಳೆ ಬೈಕ್ ನಲ್ಲಿದ್ದ ಓರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳೆಕೋಟೆ ಬಳಿ ಈ ಘಟನೆ ನಡೆದಿದೆ.ಮೃತ ಯುವಕನನ್ನು ಲಾಯಿಲ ನಿವಾಸಿ ಪುರುಷೋತ್ತಮ (19) ಎಂದು ಹೇಳಲಾಗುತ್ತಿದ್ದು, ಗಾಯಗೊಂಡ ತೌಫಿಕ್ (17) ಎನ್ನುವ ಯುವಕನ ಸ್ಥಿತಿ ಗಂಭೀರವಾಗಿದೆ.ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/ipl-2024-full-schedule-announced-final-to-be-held-in-chennai-on-may-26-here-are-the-details-ipl-2024-schedule/
ಬೆಳಗಾವಿ : ಬಿಜೆಪಿಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಸೋಲಿಗೆ ತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಈಗ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಸದಾನಂದಗೌಡ ಒಂದು ಕಡೆ, ಈಶ್ವರಪ್ಪ ಒಂದು ಕಡೆ, ಇನ್ನೂ ಬೇರೆ ಬೇರೆ ಆಗಿದೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಲೇವಡಿ ಮಾಡಿದರು. https://kannadanewsnow.com/kannada/those-accused-of-corruption-will-become-clean-like-washing-powder-if-they-join-bjp-lad/ ಇಂದು ಅಥಣಿಯ ಶಿವಯೋಗಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಚುನಾವಣೆ ಗೆಲುವಿಗೆ ತಂತ್ರ-ಪ್ರತಿತಂತ್ರಗಳನ್ನು ರೂಪಿಸಬೇಕು. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಮತ್ತು ಪ್ರತಿ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸಗಳನ್ನು ಜನರಿಗೆ ತಲುಪಿಸಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಹೇಗೆ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ವಿವರಿಸಿದರು. https://kannadanewsnow.com/kannada/betel-leaves-have-extraordinary-benefits-it-has-the-power-to-remove-cancer-cells/ ಎರಡು ದಿನಗಳ ಹಿಂದೆ ಸಚಿವರು ಪೂರ್ವಭಾವಿ ಸಭೆಯನ್ನು ಶಿವಯೋಗಿ ನಾಡು ಅಥಣಿಯಿಂದಲೇ ಮಾಡೋಣ ಎಂದಿದ್ರು. ಯಾವುದೇ ಪಕ್ಷದ ಮೊದಲ ಸಭೆ ಅಥಣಿಯಿಂದ ಆರಂಬಿಸಿದ್ರೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಿಗುತ್ತೆ ಅನ್ನೋ ನಂಬಿಕೆಯಿದೆ.…
ಹುಬ್ಬಳ್ಳಿ : ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವವರು ಯಾರೇ ಆಗಿರಲಿ ಅವರು ಬಿಜೆಪಿಗೆ ಹೋದರೆ ವಾಷಿಂಗ್ ಪೌಡರ್ ನಿರ್ಮಾ ರೀತಿ ಅವರು ಶುದ್ಧರಾಗುತ್ತಾರೆ ಎಂದು ಜನಾರ್ಧನ ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವೆಂಗ್ಯವಾಡಿದ್ದಾರೆ. https://kannadanewsnow.com/kannada/dk-shivakumar-fell-at-his-feet-to-make-his-brother-win-bjp-leader-cp-yogeshwar/ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ನಾ ಖಾವುಂಗಾ ನಾ ಖಾನೆ ದುಂಗ ಎಂದು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಹೇಳುತ್ತಿದ್ದರು. ಆದರೆ ಈಗ ಜನಾರ್ದನ ರೆಡ್ಡಿಯನ್ನ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/i-thank-hd-deve-gowda-for-supporting-mekedatu-project-former-mlc-ramesh-babu/ ಮೋದಿ ಅವರು ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಅಂತಾರೆ, ಈ ಹಿಂದೆ ಬಿಜೆಪಿಯವರು ರೆಡಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈಗ ಅವರೇ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಯಾರೇ ಆಗಲಿ ಬಿಜೆಪಿಗೆ ಸೇರಿದರೆ ಶುದ್ಧರಾಗುತ್ತಾರೆ ಎಂದು ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆ ಕುರಿತಂತೆ, ಸಂತೋಷ ಲಾಡ್ ವ್ಯಂಗ್ಯವಾಡಿದರು.
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿತ್ತು. ಇದೇ ವೇಳೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳನ್ನು ಬಿಜೆಪಿ ನಾಯಕರೇ ಮಾಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಸಿಪಿ ಯೋಗೇಶ್ವರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ. https://kannadanewsnow.com/kannada/i-thank-hd-deve-gowda-for-supporting-mekedatu-project-former-mlc-ramesh-babu/ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರ ಗೆಲುವಿಗೆ ಸಹಾಯ ಮಾಡಿದ್ದೆ ಎಂದು ಯೋಗೇಶ್ವರ್ ಅವರೇ ಬಾಯಿಬಿಟ್ಟಿದ್ದಾರೆ.ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳನ್ನು ಬಿಜೆಪಿ ನಾಯಕರೇ ಮಾಡಿದ್ದರು. ಇದಕ್ಕೆ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರ ಹೇಳಿಕೆ ಪುಷ್ಟಿ ಎಂಬಂತಿದೆ. https://kannadanewsnow.com/kannada/breaking-congress-releases-6th-list-of-candidates-for-lok-sabha-elections/ ರಾಮನಗರ ಜಿಲ್ಲೆ ಕನಕಪುರದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಭೆಯಲ್ಲಿ ಸಿಪಿ ಯೋಗೇಶ್ವರ್ ಅವರು ಈ ಸತ್ಯಸಂಗತಿಯನ್ನು ಬಾಯಿಬಿಟ್ಟಿದ್ದಾರೆ. ನನ್ನ ತಮ್ಮನನ್ನು ಗೆಲ್ಲಿಸಿಕೊಡಿ ಎಂದು ಡಿ.ಕೆ.ಶಿವಕುಮಾರ್ ಅವರು ಕಾಲಿಗೆ ಬಿದ್ದಿದ್ದರು. ಹೀಗಾಗಿ ಅಂದು ನಾನು ಡಿಕೆ ಸುರೇಶ್ ಗೆಲುವಿಗೆ ಸಹಾಯ…
ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಕಾಡಾನೆ ದಾಳಿಯಿಂದ ಆಗಾಗ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ತೋಟದ ಮನೆಯಲ್ಲಿ ಟಿಂಬರ್ ಕಾರ್ಮಿಕರ ಮೇಲೆ ಕಾಡಾನೆ ಒಂದು ದಾಳಿ ನಡೆದಿದ್ದು, ಕಾರ್ಮಿಕನ ಮೇಲೆ ಕಾಲಿಟ್ಟು ಕಾಡಾನೆ ತುಳಿದು ಹೊಂದಿದೆ ಎಂದು ತುಳಿದುಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ವರ್ತೆಗುಂಡಿ ಬಳಿ ಟಿಂಬರ್ ಕಾರ್ಮಿಕ ಅಕ್ಬರ್ (35) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮದಲ್ಲಿ ಆನೆ ದಾಳಿಗೆ ಕಾರ್ಮಿಕ ಬಲಿಯಾಗಿದ್ದಾನೆ. ತೋಟದಲ್ಲಿ ಆನೆ ಓಡಿಸುವಾಗ ಏಕಏಕಿ ನುಗ್ಗಿ ಬಂದಿದ್ದ ಕಾಡಾನೆ ಅಕ್ಬರ್ ಮೇಲೆ ದಾಳಿ ಮಾಡಿದೆ. ಈ ವೇಳೆ ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಆನೆ ಕಾಲಿಟ್ಟು ಕೊಂದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ : ಮಂಡ್ಯದಲ್ಲಿ ಭೀಕರ ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ತುಂಬುವ ವೇಳೆ ಕಿಡಿ ತಾಗಿ ಭೀಕರ ಸ್ಫೋಟದಿಂದ ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ತಮಿಳುನಾಡು ಮೂಲದ ರಮೇಶ್ (67) ಎಂದು ತಿಳಿದು ಬಂದಿದೆ.ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಕಾಲಭೈರವೇಶ್ವರ ಜಾತ್ರೆಗೆ ತಮಿಳುನಾಡು ಮೂಲದ ನನಾಲ್ವರು ಪಟಾಕಿ ಸಿಡಿಸಲು ಬಂದಿದ್ದರು ಎನ್ನಲಾಗುತ್ತಿದ್ದು, ನಿನ್ನೆ ರಾತ್ರಿ ಗ್ರಾಮದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿಸಿ ಗ್ರಾಮದ ಆಲೆಮನೆಯಲ್ಲಿ ತಂಗಿದ್ದರು. ಇಂದು ಬೇರೊಂದು ಗ್ರಾಮಕ್ಕೆ ಪಟಾಕಿಯನ್ನು ತುಂಬುತ್ತಿದ್ದರು. ಪಟಾಕಿ ತುಂಬುವಾಗ ಕಿಡಿತಾಗಿ ಆಲೆಮನೆ ಹೊತ್ತಿ ಉರಿದಿದೆ. ಅಲೆಮನೆಯಲ್ಲಿ ಸ್ಪೋಟಗೊಂಡಿದೆ. ಪಟಾಕಿ ಸ್ಪೋಟದ ರಭಸಕ್ಕೆ ಆಲೆಮನೆ ಹೊತ್ತಿ ಉರಿದಿದೆ.ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯವರ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಡಿಸಿ ಡಾ. ಕುಮಾರ್ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ…
ಹುಬ್ಬಳ್ಳಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಕಣಕ್ಕೆ ಇಳಿಯುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ವಿನೋದ್ ಅಸೂಟಿ ಸ್ಪರ್ಧೆ ಮಾಡಲಿದ್ದು, ನಮಗೆ ಜೋಶಿ ಟಾರ್ಗೆಟ್ ಅಲ್ಲ ಬಿಜೆಪಿ ಅಷ್ಟೇ ಟಾರ್ಗೆಟ್. ಈ ಬಾರಿ ವಿನೋದ ಅಸೂಟಿ ಗೆಲ್ಲುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು. https://kannadanewsnow.com/kannada/cm-siddaramaiah-donates-700-kg-silver-articles-to-male-mahadeshwara/ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ದೇಶ ಬಿಟ್ಟು ತೊಲಗಬೇಕು. ಪ್ರಹ್ಲಾದ ಜೋಶಿಗೆ ಏಕೆ 5 ಬಾರಿ ಧಾರವಾಡ ಟಿಕೆಟ್ ಕೊಟ್ರು? ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ. ಬಿಜೆಪಿಯವರು ಯಾಕೆ ಚುನಾವಣಾ ಬಾಂಡ್ ಬಗ್ಗೆ ಮಾತನಾಡುವುದಿಲ್ಲ? ಸಿಬಿಐ ದಾಳಿ ಮಾಡುವುದು ದುಡ್ಡು ಕೊಟ್ಟರೆ ಅವರನ್ನು ಬಿಡುವುದು ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/watch-video-russian-bar-girls-perform-obscene-dance-during-mathuras-holi-celebrations-video-goes-viral/ ಮೋದಿ ವಿಶ್ವಗುರು ಆಗಿದ್ದರೆ ಟಿವಿಯಲ್ಲಿ ಯಾಕೆ ಕಾಣಿಸಿಕೊಳ್ಳುತ್ತಾರೆ? ನಮಗೆ ಜೋಶಿ ಟಾರ್ಗೆಟ್ ಅಲ್ಲ ಬಿಜೆಪಿ ಟಾರ್ಗೆಟ್. ಹತ್ತು ವರ್ಷದಲ್ಲಿ ಏನು ಕೆಲಸವಾಗಿದೆ ಎಂದು ಬಿಜೆಪಿಯವರಿಗೆ ಗೊತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ…
ಬೆಂಗಳೂರು : ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ ಆದರೆ ಹೋಳಿ ಹಬ್ಬದ ಪ್ರಯುಕ್ತ ಇಲ್ಲಿ ಕುಣಿಯೋಕೆ ನೀರು ಪೋಲು ಮಾಡಲಾಗಿದೆ. ಹೌದು ಬೆಂಗಳೂರಿನ ವರ್ತೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಟ್ರೈನ್ ಡ್ಯಾನ್ಸ್ ಆಯೋಜನೆ ಮಾಡಲಾಗಿತ್ತು. ಇದೀಗ ಇವರ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. https://kannadanewsnow.com/kannada/no-bags-bottles-allowed-inside-chinnaswamy-stadium-for-ipl-2024-match-bengaluru-police-tell-public/ ಬೆಂಗಳೂರಿನ ಜನತೆ ನೀರಿನ ತೊಂದರೆ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ, ಜಲಮಂಡಳಿ ಯಾವುದೇ ಕಾರಣಕ್ಕೂ ರೇನ್ ಡ್ಯಾನ್ಸ್ ಆಯೋಜನೆ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಆದರೆ ಆದೇಶಕ್ಕೆ ಡೋಂಟ್ ಕೇರ್ ಎಂದು ಸಿಟಿ ಮಂದಿ ವರ್ತಿಸಿದ್ದು ಡ್ಯಾನ್ಸ್ ಮಾಡಿದ್ದಾರೆ. ಕುಡಿಯುವ ನೀರಿಗೆ ಅಭಾವವಿದ್ದು, ರೈನ್ ಡ್ಯಾನ್ಸ್ ಆಯೋಜಿಸಿದಂತೆ ಜಲಮಂಡಳಿ ಈಗಾಗಲೇ ಸೂಚಿಸಿತ್ತು. ಆದರೂ ಜಲಮಂಡಳಿ ಆದೇಶವನ್ನು ಉಲ್ಲಂಘಿಸಿ ದೊಡ್ಡ ದೊಡ್ಡ ಮಂದಿ ಇದೀಗ ಹೋಳಿ ಹಬ್ಬದ ಪ್ರಯುಕ್ತ ಡ್ಯಾನ್ಸ್ ಮಾಡಿದ್ದಾರೆ. https://kannadanewsnow.com/kannada/australian-prime-minister-anthony-albanese-israeli-ambassador-to-india-naor-gilon/ ಬೆಂಗಳೂರು ಅಷ್ಟೆ ಅಲ್ಲದೆ ಇತ್ತ ಬಾಗಲಕೋಟೆಯಲ್ಲೂ ಹೋಳಿ ಹಬ್ಬ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ನೀರನ್ನು ಪೋಲು ಮಾಡಲಾಗಿದೆ. ವಿದ್ಯಾಗಿರಿ ಸರ್ಕಲ್ ನಲ್ಲಿ…
ದಕ್ಷಿಣಕನ್ನಡ : ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಇದ್ದ ವಿವಾಹಿತೆಯೋಬ್ಬರು ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ನಾಟೆಕಲ್ ಸಮೀಪ ನಡೆದಿದೆ. https://kannadanewsnow.com/kannada/bjp-president-j-p-naddas-wifes-fortuner-car-stolen-in-delhi/ ಈ ಒಂದು ಅಪಘಾತ ನಡೆದ ನಂತರ ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ, ದೀಕ್ಷಿತ್ ಎಂಬವರ ಪತ್ನಿ ನಿಧಿ (29) ಸಾವನ್ನಪ್ಪಿದವರು. ಗಂಭೀರವಾಗಿ ಗಾಯಗೊಂಡಿರುವ ಸಹಸವಾರ ಯತೀಶ್ ದೇವಾಡಿಗ ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/moscow-terror-supect-brutally-tortured-with-privates-hooked-up-to-80v-battery/ ಇಬ್ಬರು ಮುಡಿಪುವಿನಲ್ಲಿ ಭಾನುವಾರ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುವ ಸಂದರ್ಭ ಈ ದುರ್ಘಟನೆ ನಡೆದಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ಗೆ ಡಿಕ್ಕಿ ಹೊಡೆದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು…
ಚಿಕ್ಕಬಳ್ಳಾಪುರ : ರಾಜಕಾರಣದಲ್ಲಿ ಕೊಕ್ಕೆ ಅಥವಾ ವಕ್ರ ಆಗಿರುವ ಡಾ.ಕೆ. ಸುಧಾಕರ್ ಅವರನ್ನು ಪವಿತ್ರವಾದ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗಲು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. https://kannadanewsnow.com/kannada/breaking-reels-queen-sonu-gowda-sent-to-14-day-judicial-custody-in-child-adoption-case/ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸುಧಾಕರ್ ಸಹಾಯ ಮಾಡಿದ್ದಾರೆ. ಯಾವ ಥರದ ಸಹಾಯ ಅಂದ್ರೆ, ಸೂರ್ಯ ನಮಸ್ಕಾರ, ಕಪಾಲಿ ಭಾತ್, ಶವಾಸನ, ದೀರ್ಘ ದಂಡ ನಮಸ್ಕಾರ ಮಾಡಿಸಿದ್ದಾರೆ ಅನಿಸುತ್ತದೆ. ಇದೆಲ್ಲ ನಾಯಕರಿಗೆ ಮಾಡಿಸಿದ್ದಕ್ಕೆ ಬಹುಶಃ ಸುಧಾಕರ್ ಗೆ ಟಿಕೆಟ್ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/pakistan-begins-second-phase-of-preparations-for-return-of-afghans-report/ ನಾನು ನನ್ನ ಎಲ್ಲ ಆದಾಯದ ದಾಖಲೆಗಳನ್ನು ಡಿಕ್ಲೇರ್ ಮಾಡುವುದಕ್ಕೆ ರೆಡಿ. ಸುಧಾಕರ್ ಪ್ರಾಮಾಣಿಕರಾಗಿದ್ರೆ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ದ ಇದ್ದಾರಾ?ಕೋವಿಡ್‌ನಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಮ್ಮ ಸರ್ಕಾರ ಆರೋಪ ಮಾಡಿತ್ತು.…