Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಲ್ಲಿ ಅತೀ ದೊಡ್ಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಂಧಿತ ಎಲ್ಲ 9 ಆರೋಪಿಗಳನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆದಿದ್ದಾರೆ.ಇಂದು ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾಗಿತ್ತು. ಹಾಗಾಗಿ ಪೊಲೀಸರು ಆರೋಪಿಗಳನ್ನು ಕೋರ್ಟ್ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆಗೆ ಎಂದು ಮತ್ತೆ ಕಸ್ಟಡಿಗೆ ಪಡೆದುಕ್ಕೊಂಡಿದ್ದಾರೆ. 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ತನಿಖೆ, ಮಹಜರು, ವಿಚಾರಣೆ ಹಿನ್ನೆಲೆಯಲ್ಲಿ ಮತ್ತಷ್ಟು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಫುಡ್ ಕಿಟ್ ಯೋಜನೆ ಅನುಷ್ಠಾನ ಸಂಬಂಧ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಅನ್ನ ಭಾಗ್ಯ ಯೋಜನೆ ಅಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಸಮಗ್ರ ಪೋಷಣೆ ಮತ್ತು ಆಹಾರ ಪದ್ಧತಿ ಉಪಕ್ರಮದ ಅಡಿ ಇಂದಿರಾ ಕಿಟ್ ವಿತರಿಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ ಪ್ರತಿ ತಿಂಗಳು 10 ನೇ ತಾರೀಖಿನಂದು ಇಂದಿರಾ ಫುಡ್ ಕಿಟ್ ವಿತರಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ಹೆಚ್ಚುರಿಯಾಗಿ ನೀಡುತ್ತಿರುವ 5 ಕೆಜಿ ಅಕ್ಕಿ ಬದಲು ತೊಗರಿಬೇಳೆ ಸೂರ್ಯಕಾಂತಿ ಎಣ್ಣೆ ಸಕ್ಕರೆ, ಉಪ್ಪು ವಿತರಿಸಲು ನಿರ್ಧರಿಸಲಾಯಿತು. ಪ್ರತಿ ತಿಂಗಳು 1,25,08,262 ಇಂದಿರಾ ಫುಡ್ ಕಿಟ್ ಅಗತ್ಯವಿದೆ. ಪ್ರತಿ ತಿಂಗಳು 466 ಕೋಟಿ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಪ್ರತಿ ತಿಂಗಳು 18,628 ಮೆಟ್ರಿಕ್ ಟೆನ್ ತೊಗರಿ ಬೆಳೆ,12,419 ಮೆಟ್ರಿಕ್ ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು…
ಚಾಮರಾಜನಗರ: ತಂದೆಯ ನಿಧನದ ಬೆನ್ನಲ್ಲೇ ಪುತ್ರನೂ ಕೊನೆಯುಸಿರೆಳೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಣಗಳ್ಳಿದೊಡ್ಡಿಯಲ್ಲಿ ನಡೆದಿದೆ. ಅಣಗಳ್ಳಿ ದೊಡ್ಡಿ ಗ್ರಾಮದ ನಿವಾಸಿ ಮಲ್ಲಣ್ಣ (54) ಮೃತರು. ಇವರು ಶಿಕ್ಷಕರಾಗಿದ್ದರು. ಮಲ್ಲಣ್ಣ ಅವರ ತಂದೆ ದೊಡ್ಡಲಿಂಗಯ್ಯ ವಯೋಸಹಜವಾಗಿ ಮೃತಪಟ್ಟಿದ್ದರು. ಶನಿವಾರ ಇವರ ಅಂತ್ಯಕ್ರಿಯೆ ಮುಗಿಸಿ ಬಂದು ಮಲಗಿದ್ದ ಪುತ್ರ ಕೂಡ ಇಂದು ಕೊನೆಯುಸಿರೆಳೆದಿದ್ದಾರೆ. ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಣ್ಣ ಮೃದು ಸ್ವಭಾವದವರಾಗಿದ್ದರು. ಇಂದು ಸಂಜೆ ಮಲ್ಲಣ್ಣ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು. ಮಲ್ಲಣ್ಣ ಮೇಷ್ಟ್ರು ಎಂದೇ ಜನಜನಿತವಾಗಿದ್ದ ಇವರು ಶಿಸ್ತಿಗೆ ಹೆಸರುವಾಸಿಯಾಗಿದ್ದರು. ತಂದೆ ಇಲ್ಲದ್ದನ್ನು ಅರಗಿಸಿಕೊಳ್ಳಲಾಗದೇ ಅವರಿಗೆ ಹೃದಯಾಘಾತವಾಗಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಕೇಸ್ : ಸಿಎಂ ಸಿದ್ದರಾಮಯ್ಯಗೆ ತನಿಖಾ ವರದಿ ಸಲ್ಲಿಕೆ
ಚಾಮರಾಜನಗರ : ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಇದೀಗ ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯಗೆ ತನಿಖಾ ವರದಿ ಸಲ್ಲಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾರಿಂದ ವರದಿ ಸಲ್ಲಿಸಲಾಯಿತು. ಕೋವಿಡ್ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತ ಸಂಭವಿಸಿತ್ತು.ಈ ಪ್ರಕಾರಣಕ್ಕೆ ಸಂಬಂಧಪಟ್ಟಂತೆ ಹಾಲಿ ಸಂಸದ ಡಾ.ಕೆ ಸುಧಾಕರ್ ಅವರ ವಿರುದ್ಧ ಕೂಡ ಅಕ್ರಮ ಆರೋಪ ಕೇಳಿ ಬಂದಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣದ ತನಿಖೆಗೆ ಸೂಚನೆ ನೀಡಲಾಗಿತ್ತು. ಇದೀಗ ಕುನ್ಹಾ ಅವರು ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದು, ಇದೀಗ ಶಾಸಕ ಅಜೇಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದು, ಜನೆವರಿ ಇಲ್ಲ ಫೆಬ್ರವರಿ ಅಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ತಿಳಿಸಿದರು. ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಜನೆವರಿ ಫೆಬ್ರವರಿ ಅಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಆಗಬಹುದು. ಎಲ್ಲವು ಹೈಕಮಾಂಡ್ ಅಂಗಳದಲ್ಲಿದೆ. ಅವರ ಕೈಯಲ್ಲಿದೆ.ನಿನ್ನೆ ಸೋನಿಯಾ, ರಾಹುಲ್, ಖರ್ಗೆ ಸೇರಿ ಸಭೆ ಮಾಡಿದ್ದಾರೆ. ಅವರೆಲ್ಲ ಸೇರಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಮತ್ತೆ ಒಂದು ಸಲ ಕುಳಿತು ಮಾತನಾಡುತ್ತಾರೆ ಎಂದರು. ಜನೆವರಿ, ಫೆಬ್ರವರಿ ಬದಲಾವಣೆ ಆಗಬಹುದು. ಎಲ್ಲರು ಕುಳಿತು ಮಾತನಾಡುತ್ತಾರೆ. ಆದರೆ ಈಗ ತೊಂದರೆ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕು. ಸಿಎಂ ಡಿಸಿಎಂ ಪ್ರೆಸ್ ಮೀಟ್ ಮಾಡಿದ್ದಾರೆ. ಅಂದ್ರೆ ತೊಂದರೆ ಇಲ್ಲ ಎಂದರು. ಇನ್ನು ನಾನು ಸಿಎಂ ಬ್ರದರ್ಸ್ ತರಹ ಕೆಲಸ ಮಾಡ್ತೀವಿ, ನಮ್ಮ ನಡುವೆ ಯಾವುದೇ ಗುಂಪು ಇಲ್ಲ…
ಬೆಂಗಳೂರು : ನಾನು ಸಿಎಂ ಬ್ರದರ್ಸ್ ತರಹ ಕೆಲಸ ಮಾಡ್ತೀವಿ, ನಮ್ಮ ನಡುವೆ ಯಾವುದೇ ಗುಂಪು ಇಲ್ಲ ನಮ್ಮಲ್ಲಿ ಯಾವುದೇ ಗುಂಪಿಲ್ಲ, ನಾವು ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಾಗಿ ಗುಂಪು ಯಾಕೆ ಬೇಕು? ನೀವೆಲ್ಲ ಏನೇನೋ ತೋರಿಸ್ತಿದೀರ, ಸಿದ್ದರಾಮಯ್ಯದೊಂದು ಗುಂಪು, ಡಿಕೆಶಿ ಗುಂಪು ಅಂತ ನಮ್ಮಲ್ಲಿ ಗುಂಪು ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಹಿನ್ನೆಲೆ ವಿಧಾನಸೌಧದಲ್ಲಿಂದು ಡಿಸಿಎಂ ಡಿಕೆಶಿ ಹನುನಂತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರ ನನಗೂ ಸಿಎಂಗೆ ಸಂಬಂಧಿಸಿದ ವಿಚಾರ. ನಾವಿಬ್ರೂ ಬ್ರದರ್ಸ್ ಥರ ಇದ್ದೀವಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ ಎಂದು ನುಡಿದರು. ಹನುನಂತಯ್ಯ ವಿಧಾನಸೌಧ ಕಟ್ಟಿದ್ರು, ಎಸ್.ಎಂ ಕೃಷ್ಣ ವಿಕಾಸಸೌಧ ಕಟ್ಟಿದ್ರು. ಬೆಂಗಳೂರನ್ನು ಕೆಂಪೇಗೌಡ ಕಟ್ಟಿದ್ದಾರೆ. ಅಧಿಕಾರ ಸಿಕ್ಕಿದಾಗ ಇವರೆಲ್ಲ ಸಾಕ್ಷಿಗುಡ್ಡೆ ಬಿಟ್ ಹೋಗಿದ್ದಾರೆ. ಯಾರೇ ಆಗಲೀ ಅಧಿಕಾರ ಸಿಕ್ಕಿದಾಗ ಇಂಥ ಸಾಕ್ಷಿ…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಸಾಲಭಾಧೆ ತಾಳದೆ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಲಂಪಲ್ಲಿ ಗ್ರಾಮದ ಮನೆಯಲ್ಲಿ ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೂಲಂಪಲ್ಲಿ ಗ್ರಾಮದಲ್ಲಿ ಈ ಒಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ಜಂಗಾಲ ಹಳ್ಳಿ ಮೂಲದ ಅಶ್ವತಪ್ಪ (70) ಹಾಗೂ ಹನುಮಕ್ಕ (65) ಆತ್ಮಹತ್ಯೆಗೆ ಶರಣಾಗಿದ್ದಾರೆ ಸಾಲ ಬಾಧೆಯಿಂದ ವೃದ್ಧ ದಂಪತಿ ಆತ್ಮಹತ್ಯೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು ಘಟನಾ ಸ್ಥಳಕ್ಕೆ ಗುಡಿಮಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಡಗು : ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು ಶ್ವಾನ ಒಂದು ಪತ್ತೆ ಹಚ್ಚಿರುವ ಘಟನೆ ಕೊಡಗು ನಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಕೊಂಕಣ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಕೊಡಗು ಜಿಲ್ಲೆಯ ತಾಲೂಕಿನ ಕೊಂಗಣ ಗ್ರಾಮದಲ್ಲಿ ಎರಡು ವರ್ಷದ ಸುನನ್ಯ ಕಾಫಿ ತೋಟದಲ್ಲಿ ದಾರಿ ತಪ್ಪಿ ಕಣ್ಮರೆಯಾಗಿದ್ದಳು. ಕಾಫಿ ಕೊಯ್ಲು ಹಿನ್ನೆಲೆಯಲ್ಲಿ ಮಕ್ಕಳನ್ನು ಜೊತೆಯಲ್ಲಿಯೇ ಪೋಷಕರು ಕರೆದುಕೊಂಡು ಹೋಗಿದ್ದರು. ಈ ವೇಳೆ ಸುನನ್ಯ ದಾರಿತಪ್ಪಿ ಕಳೆದು ಹೋಗಿದ್ದಳು. ಆಗ ಗ್ರಾಮಸ್ಥರ ಸಹಾಯದಿಂದ ಹಾಗೂ ಶ್ವಾನದ ಸಹಾಯದಿಂದ ಸುನನ್ಯಾಳನ್ನು ಪತ್ತೆಹಚ್ಚಲಾಗಿದೆ. ಶ್ವಾನದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತುಮಕೂರು : ತುಮಕೂರಿನಲ್ಲಿ ಭೀಕರವಾದ ಕೊಲೆಯಾಗಿದ್ದು, ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಕರ ಕೊಲೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೆಂಡಸಗೆರೆ ಗ್ರಾಮದಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಂಜುಳಾ ಕೊಲೆಯಾದ ಮಹಿಳೆ ಎಂದು ತಿಳಿದುಬಂದಿದೆ. ರಾತ್ರಿ ಮಂಜುಳಾ ಒಂಟಿಯಾಗಿ ಮಲಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಂಜುಳಾ ಕತ್ತು ಸೀಳಿ, ಭೀಕರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುಳಾ ಪತಿ ನಿಧನರಾಗಿದ್ದು ನಂತರ ತೋಟದ ಮನೆಯಲ್ಲಿ ಮಂಜುಳಾ ಮಗನ ಜೊತೆ ವಾಸ ಮಾಡುತ್ತಿದ್ದರು. ಇತ್ತೀಚಿಗೆ ಅಷ್ಟೆ ಮಗನ ಮದುವೆ ಕೂಡ ಮಾಡಿದ್ದರು. ಮಗ ಪತ್ನಿಮನೆಗೆ ತೆರಳಿದ ವೇಳೆ ಮಂಜುಳಾ ಬರ್ಬರ ಕೊಲೆಯಾಗಿದೆ. ಬೆಳಿಗ್ಗೆ ಮೈದುನ ತೋಟದ ಮನೆಯ ಬಳಿ ತೆರಳಿದಾಗ ಕೊಲೆ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮೈದುನ ಘಟನೆಯ ಬಗ್ಗೆ ಸಿಎಸ್ ಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಎಸ್ ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದ್ದು ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯ ತೋಟದ ಗುಡ್ಡದ ಹಳ್ಳಿಯಲ್ಲಿ ಈ ಒಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸೌಭಾಗ್ಯ (31) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅಷ್ಟೇ ಸೌಭಾಗ್ಯಪತಿ ಮೃತಪಟ್ಟಿದ್ದರು. ಪತಿ ಕಳೆದುಕೊಂಡು ಸೌಭಾಗ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಸೌಭಾಗ್ಯ ಇಬ್ಬರೂ ಮಕ್ಕಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದೇವಸ್ಥಾನದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟಿದ್ದರು. ದೇವಸ್ಥಾನ ಹಾಗೂ ಮನೆ ಬಿಟ್ಟರೆ ಎಲ್ಲೂ ಹೋಗುತ್ತಿರಲಿಲ್ಲ ಈ ಒಂದು ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














