Author: kannadanewsnow05

ಬೆಂಗಳೂರು : ಕೆಪಿಸಿಸಿ ಉಪಾಧ್ಯಕ್ಷ GN ನಂಜುಂಡಸ್ವಾಮಿ ಕಾರು ಅಪಘಾತವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಈ ಒಂದು ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಒಂದು ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಾರು ಪಲ್ಟಿಯಾಗಿದ್ದರಿಂದ GN ನಂಜುಂಡಸ್ವಾಮಿ ತಲೆಗೆ ಪೆಟ್ಟಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಗಂಭೀರವಾಗಿ ಗಾಯಗೊಂಡಿರುವ ಜಿಎನ್ ನಂಜುಂಡಸ್ವಾಮಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲೀಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಆಡಿಷನ್​ಗೆ ಬಾ ಎಂದು ಕಾಸ್ಟಿಂಗ್ ನಿರ್ದೇಶಕ ಸೂರ್ಯ ಅಶ್ಲೀಲವಾಗಿ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಬೆಂಗಳೂರು ನಗರದ ಆರ್.ಆರ್. ನಗರ ಠಾಣೆಯಲ್ಲಿ ನಟಿ ಅಮೂಲ್ಯ ಗೌಡ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು ಕಾಂಪ್ರಮೈಸ್ ಆಗು ಅಂದಿದ್ದಕ್ಕೆ  ಆತನಿಗೆ ಪೊಲೀಸರ ಎದುರೇ ಚಪ್ಪಲಿಂದ ಹೊಡೆದಿದ್ದೇನೆ ಎಂದು ನಟಿಯ ಅಮೌಲ್ಯ ಗೌಡ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ದೇಶಕ ಸೂರ್ಯ ನನಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು.ಹೀಗಾಗಿ ಆರ್ ಆರ್ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ನಟಿ ಅಮೂಲ್ಯ ಗೌಡ ಹೇಳಿಕೆ ನೀಡಿದರು. ಸೂರ್ಯ ಇದೀಗ ಪೋಲೀಸರ ಕೈಗೆ ಸಿಕ್ಕಿದ್ದಾನೆ ಪೊಲೀಸರಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಅಂದರು. ನಾನು ಪೊಲೀಸರ ಮುಂದೆ ಆತನಿಗೆ ಚಪ್ಪಲಿಯಲ್ಲಿ ಹೊಡೆದೆ. ಹೀಗಾಗಿ ನನ್ನ ಮೇಲೆ ಈಗ ಎಫ್ಐಆರ್ ದಾಖಲಿಸಿದ್ದಾನೆ. ನಾನು ಸುಮ್ಮನಿದ್ದರೆ ಮತ್ತಷ್ಟು ಹುಡುಗಿಯರಿಗೆ ಇದೇ ರೀತಿ ಮಾಡುತ್ತಾನೆ ಎಂದು ಕಿಡಿ ಕಾರಿದರು. ಹೀಗಾಗಿ ಅದಕ್ಕೆ ಬಂದು ದೂರು ಕೊಟ್ಟಿದ್ದೇನೆ.…

Read More

ಚಿಕ್ಕಮಗಳೂರು : ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾಗ ನಿಯಂತ್ರಣಕ್ಕೆ ಸಿಗದೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರಗುಂದ ಗ್ರಾಮದಲ್ಲಿ ನಡೆದಿದೆ. ಮೃತ ಸವಾರರನ್ನು ಹೊರನಾಡು ಗ್ರಾಮದ ಉಮೇಶ್, ಮುಂಡುಗದ ಮನೆ ಗ್ರಾಮದ ಸುನಿಲ್​ ಮೃತಪಟ್ಟ ಯುವಕರು ಎಂದು ಹೇಳಲಾಗುತ್ತಿದೆ.ಉಮೇಶ್, ಸುನೀಲನನ್ನು ಶಿವಮೊಗ್ಗಕ್ಕೆ ಬಿಡಲು ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೇ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನಾ ನಂತರ ಸ್ಥಳಕ್ಕೆ ಎನ್‌.ಆರ್ ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಎನ್‌.ಆರ್ ಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತಂತೆ ಎನ್‌.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತದಾನಕ್ಕೆ ಅವಕಾಶ ನೀಡಿ ಎಂದು ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೀಗ ವಜಾಗೊಳಿಸಿದೆ. ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಗೆ ಸೀಮಿತವಾಗಿ ಧಾರವಾಡ ಪ್ರವೇಶ ಕೋರಿದ್ದ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿತ್ತು. ದಿಗ ನಾಳೆ ಮತದಾನಕ್ಕೆ ಅವಕಾಶ ನೀಡಿ ಎಂದು ಶಾಸಕರು ಕರಣಿ ಅರ್ಜಿ ಸಲ್ಲಿಸಿದ್ದರು ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ವಜಾ ಗೊಳಿಸಿದೆ.

Read More

ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಮುಖಂಡ ದೇವರಾಜೇಗೌಡ ಇದಕ್ಕೆಲ್ಲ ರೂವಾರಿಗಳು ಹಾಗೂ ಕಥಾನಾಯಕರು ಡಿಕೆ ಶಿವಕುಮಾರ್ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ LR ಶಿವರಾಮೇಗೌಡ ತಿರುಗೇಟು ನೀಡಿದ್ದು, ಬಿಜೆಪಿ ಹಾಗೂ ಕುಮಾರಸ್ವಾಮಿ ಪೆನ್ ಡ್ರೈವ್ ಮಹಾ ನಾಯಕರು ಎಂದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಒಬ್ಬ ಬ್ಲಾಕ್ ಮೇಲರ್. ಹಣಕ್ಕಾಗಿ ನಮ್ಮ ಬಳಿ ದೇವರಾಜೇಗೌಡ ಬಂದಿದ್ದ ಅನಿಸುತ್ತದೆ. ದೇವರಾಜೇಗೌಡ ಬಳಿ ಏನಿದೆಯೋ ಅದನ್ನೆಲ್ಲ ಬಿಡುಗಡೆ ಮಾಡಲಿ. ಬಿಜೆಪಿ ಮುಖಂಡ ದೇವರಾಜ ಗೌಡಗೆ ನಾನು ಯಾವುದೇ ರೀತಿಯಾದಂತಹ ಆಮೀಷ ಒಡ್ಡಿಲ್ಲ ಎಂದರು. ಬಿಜೆಪಿ ಹಾಗೂ ಹೆಚ್‍ಡಿ ಕುಮಾರಸ್ವಾಮಿಯೇ ಪೆನ್ ಡ್ರೈವ್ ಮಹಾ ನಾಯಕರು.ಇಡೀ ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ ಡಿಸಿಎಂ ಡಿಕೆ ಪಾತ್ರವೂ ಇಲ್ಲ. ದೇವರಾಜ್ ಗೌಡನೇ ನನ್ನ ಬಳಿ ಬಂದು ಡಿಕೆ ಭೇಟಿ ಮಾಡಿಸಲು ಒತ್ತಾಯಿಸಿದ್ದ. ಹೀಗಾಗಿ ಡಿಕೆ ಶಿವಕುಮಾರ್ ಅವರ ಜೊತೆ ಒಂದು ನಿಮಿಷ ಮಾತನಾಡಿಸಿದೆ.ಪ್ರಕರಣವನ್ನು…

Read More

ಬೆಂಗಳೂರು : ವಸತಿ ಸಮೋಕ್ಷಯ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಯುವಕನೊಬ್ಬ ಮಣ್ಣಿನ ದಿಬ್ಬದ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಚಿಕ್ಕ ಹೊಸಹಳ್ಳಿ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ರಿತೇಶ್ ಎಂದು ಹೇಳಲಾಗುತ್ತಿದ್ದು,ಮಣ್ಣಿನ ದಿಬ್ಬದ ಮೇಲಿಂದ ಬಿದ್ದು ಜಾರ್ಖಂಡ್ ಯುವಕ ಸಾವನ್ನಪ್ಪಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಿಕ್ಕ ಹೊಸಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಮೃತ ರಿತೇಶ್ ವಸತಿ ಸಮುಚ್ಚಯ ನಿರ್ಮಾಣ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

Read More

ಬೆಳಗಾವಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಕೂಡ, ಆದಾಗ ಅಕ್ರಮವಾಗಿ ಹಣ ಮಧ್ಯ ಸಾಗಾಟ ನಡೆಸುತ್ತಿರುವವರ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕಣ್ಣಿಟ್ಟಿದ್ದಾರೆ. ಹಗರಿ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಹಂಚಿಕೆ ಇಲ್ಲದೆ ಮತದಾರರಿಗೆ ಹಣ ಹಂಚುತ್ತಿದ್ದ ಓರ್ವ ವ್ಯಕ್ತಿಯನ್ನು ಇದೀಗ ಪೊಲೀಸರು ಕೋಶಕ್ಕೆ ಪಡೆದಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಉಗಾರ ಬಿಕೆ ಗ್ರಾಮದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಇನ್ನು ಇಬ್ಬರು ಪರಾರಿ ಆಗಿದ್ದಾರೆ. ಮತದಾರರಿಗೆ ತಲಾ 500 ರೂಪಾಯಿ ಹಂಚುತ್ತಿದ್ದ ಗೋಕಾಕ್ ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದ್ದು 35,000 ನಗದು ಹಾಗೂ ಮತದಾರರ ಪಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು ವಶಕ್ಕೆ ಪಡೆದಿರುವ ಆರೋಪಿಯನ್ನು ಇದೀಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರಿನ ಜನತೆಗೆ ವರುಣ ಕೃಪೆ ತೋರಿದ್ದು ಇದೀಗ ನಗರದ ಹಲವೆಡೆ ಬಿರುಗಾಳಿ ಸಮೇತ ಮಳೆ ಶುರುವಾಗಿದೆ. ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೇ ಇದೀಗ ನಗರದ ಚಾಲುಕ್ಯ ಸರ್ಕಲ್, ಪ್ಯಾಲೇಸ್ ರಸ್ತೆ ಸೇರಿ ಹಲವೆಡೆ ಮಳೆರಾಯ ಆರ್ಭಟಿಸಿದ್ದಾನೆ. ಬೆಂಗಳೂರು ನಗರದ ಆನೇಕಲ್ ತಾಲೂಕಿನ, ಚಂದಾಪುರ, ವಣಕನಹಳ್ಳಿ, ಸೋಲೂರು ಗೋಮ್ಮಾಳಪುರ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ.ಅದೇ ರೀತಿಯಾಗಿ ಮುಂದಿನ 3 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ಬೆಂಗಳೂರು : ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ 108 ಆಂಬುಲೆನ್ಸ್ ಚಾಲಕರು ಮುಷ್ಕರ ನಡೆಸುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಮಾತನಾಡಿ, ಲೋಕಸಭೆ ಚುನಾವಣೆ ಇರುವುದರಿಂದ ಪುಷ್ಕರವನ್ನು ಕೈಬಿಡಿ ಎಂದು ಚಾಲಕರಲ್ಲಿ ಮನವಿ ಮಾಡಿದರು. ಬೆಂಗಳೂರಿನಲ್ಲಿ ಮುಷ್ಕರ ಕುರಿತು ಮಾತನಾಡಿದ ಅವರು, ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. 108 ಆಂಬುಲೆನ್ಸ್ ಚಾಲಕರಿಗೆ ಪೂರ್ತಿ ಹಣ ನೀಡಿದ್ದೇವೆ. ವೇತನ ನೀಡುವಲ್ಲಿ ಸಣ್ಣ ಸಮಸ್ಯೆಯಾಗಿತ್ತು. ಆದರೆ ಸಂಬಳ ಕೊರತೆ ಮಾಡಿಲ್ಲ ಎಂದು ಅವರು ತಿಳಿಸಿದರು. ಇದು ಚುನಾವಣೆ ಸಮಯ ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ. ಅಶೋಕ್ ಅವರೇ ನಿಮ್ಮ ಸರ್ಕಾರದ ಅವಧಿಯಲ್ಲಿ ಲೋಪವಾಗಿತ್ತು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಸಿಬ್ಬಂದಿ ಮುಷ್ಕರ ಕೈ ಬಿಡಿ ಎಂದು 108 ಆಂಬುಲೆನ್ಸ್ ಚಾಲಕರಿಗೆ ಮನವಿ ಮಾಡಿದರು. ಒಂದು ವೇಳೆ ಕೈ ಬಿಡದಿದ್ದರೆ ನಾವು ಪರ್ಯಾಯ ಕ್ರಮಕ್ಕೆ ಮುಂದಾಗುತ್ತೇವೆ 108 ಜನರಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು ನಮ್ಮ ಬಳಿ ಬೇರೆ ಚಾಲಕರಿದ್ದಾರೆ…

Read More

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಶೀಲ ವಿಡಿಯೋ ಪ್ರಕರಣಕ್ಕೆ ಇದೀಗ ಬಿಜೆಪಿ ಮುಖಂಡ ಹೊಸ ಸಿಡಿಸಿದ್ದು, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಕ್ಷೇಪವಿದೆ ಎಂದು ಮಾಡುವುದೇ ಕಾಂಗ್ರೆಸ್ ನವರ ಗುರಿಯಾಗಿತ್ತು ಎಂದು ಗಂಭೀರವಾದಂತಹ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂರು ದಿನದ ಹಿಂದೆ ಡಿಕೆ ಶಿವಕುಮಾರ್ ನನಗೆ ಕರೆ ಮಾಡಿದ್ದರು.ಸಂಧಾನಕ್ಕೆ ಶಿವರಾಮೇಗೌಡರನ್ನು ಕಳುಹಿಸಿದ್ದರು. ನನಗೆ ರಾತ್ರಿ 12:40ಕ್ಕೆ ಡಿಕೆ ಶಿವಕುಮಾರ್ ಕರೆ ಮಾಡಿದ್ದರು.ಮೋದಿ ಹಸ್ತಕ್ಷೇಪ ಇದೆ ಅಂತ ಪ್ರೂವ್ ಮಾಡುವುದೇ ಕಾಂಗ್ರೆಸ್ ನವರ ಗುರಿಯಾಗಿತ್ತು ಎಂದು ಆರೋಪಸಿದರು. ಈ ಪ್ರಕರಣದ ಬಗ್ಗೆ ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶವಾಗಿತ್ತು.ಅದಕ್ಕಾಗಿ ಕೈಜೋಡಿಸಬೇಕು ಎಂದು ನನ್ನನ್ನು ಕರೆದಿದ್ದರು. ಹತ್ತಕ್ಕೂ ಹೆಚ್ಚು ಬಾರಿ ಶಿವರಾಮೇಗೌಡ ನನ್ನ ಭೇಟಿಯಾಗಿದ್ದಾರೆ. ಒಂದೊಂದು ಟೈಮ್ ಅಲ್ಲಿ ಒಂದೊಂದು ರೀತಿ ನನ್ನ ಜೊತೆಗೆ ಮಾತನಾಡಿದ್ದಾರೆ.ಈ ಕೇಸ್…

Read More