Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಭರ್ಜರಿ ಜಯಗಳಿಸಿದ್ದಾರೆ. ಆ ಮೂಲಕ ರಾಜ್ಯದ ಅತ್ಯಂತ ಹಿರಿಯ ಸದಸ್ಯ ಎಂದು ಸಂಸತ್ತಿಗೆ ಪ್ರವೇಶಿಸಲಿದ್ದಾರೆ. ತಮ್ಮ ಗೆಲುವು ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಅಡ್ವಾನ್ಸ್ ಆಗಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮೋಸದಿಂದ 9 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಮೋಸದಿಂದ 9ಸ್ಥಾನ ಗೆದ್ದಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಜೇತ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿಕೆ ನೀಡಿದರು. ಕಾಂಗ್ರೆಸಿಗರು ಅಡ್ವಾನ್ಸ್ ಆಗಿ ಗ್ಯಾರಂಟಿ ಕೊಟ್ಟು ಮೋಸ ಮಾಡಿದ್ದರು ಎಂದು ಅವರು ತಿಳಿಸಿದರು. ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಇಲ್ಲಿ ಲೂಟಿ ಹೊಡೆದು ನೆರೆ ರಾಜ್ಯಗಳಿಗೆ ಹಣ ಕಳುಹಿಸಿಕೊಟ್ಟಿದ್ದಾರೆ.ಮೋಸದಿಂದ ಗೆದ್ದ ಕಾಂಗ್ರೆಸ್ ಜಯ ನಿಜವಾದ ಜಯ ಅಲ್ಲ ಜನರ ನಿರೀಕ್ಷೆಯಂತೆ ನಾವು ಕೆಲಸ ಮಾಡುತ್ತೇವೆ ಎಂದು ನೂತನ ಸಂಸತ್ ಸದಸ್ಯ ಗೋವಿಂದ ಕಾರಜೋಳ ಹೇಳಿಕೆ ನೀಡಿದರು.
ನಮ್ಮ ಬೆರಳಿನಲ್ಲಿರುವ ಉಗುರು ಬಹಳ ಶಕ್ತಿಶಾಲಿಯಾದ ನಮ್ಮ ದೇಹದ ಒಂದು ಅಂಶ ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಏಕೆಂದರೆ ಕೇವಲ ಉಗುರಿನಿಂದ ಸಾಕಷ್ಟು ರೀತಿಯ ಮಾಟ-ಮಂತ್ರ ಪ್ರಯೋಗಗಳನ್ನು ಮಾಡಬಹುದು. ಹಾಗಾದರೆ ಉಗುರಿನಲ್ಲಿ ಯಾವ ರೀತಿಯ ಶಕ್ತಿ ಇದೆ ಹಾಗೂ ಇದರಿಂದ ಯಾವ ರೀತಿ ಲಾಭವನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ…
ಬೆಂಗಳೂರು : ಉತ್ತರಾಖಂಡದ ಸಹಸ್ತ್ರತಾಲ್ಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಪತ್ತೆಯಾಗಿದ್ದಾರೆ.ಪ್ರಸ್ತುತ ಕೆಲವರು ಈಗ ಕೊಖ್ಲಿ ಶಿಬಿರದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ನಾವು ಈಗಾಗಲೇ ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಹೌದು ಉತ್ತರಾಖಂಡದ ಸಹಸ್ತ್ರತಾಲ್ಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಪತ್ತೆಯಾಗಿದ್ದಾರೆ ಅದರ ಜೊತೆಗೆ ಮಹಾರಾಷ್ಟ್ರದ ಒಬ್ಬರು ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರನ್ನು ಒಳಗೊಂಡ ಚಾರಣ ತಂಡವು ಮೇ 29 ರಂದು ಸಹಸ್ತ್ರ ತಾಲ್‌ಗೆ ಟ್ರೆಕ್ಕಿಂಗ್ ಯಾತ್ರೆಗೆ ತೆರಳಿದ್ದು, ಜೂನ್ 7 ರಂದು ಹಿಂತಿರುಗಬೇಕು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ತಂಡವು ದಾರಿ ತಪ್ಪಿದೆ ಮತ್ತು ಟ್ರೆಕ್ಕಿಂಗ್ ಏಜೆನ್ಸಿ, ಹಿಮಾಲಯನ್ ವ್ಯೂ ಟ್ರ್ಯಾಕಿಂಗ್ ಏಜೆನ್ಸಿ, ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದರು ಮತ್ತು 13 ಮಂದಿಯನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರು. ಈ ಕುರಿತಂತೆ…
ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮರ್ಸ್ ನಲ್ಲಿ ಇತ್ತೀಚಿಗೆ ರೇವ್ ಪಾರ್ಟಿ ನಡೆದಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾಳನ್ನು ಕಸ್ಟಡಿಗೆ ಪಡೆಯಲು ಇದೀಗ ಸಿಸಿಬಿ ಮುಂದಾಗಿದೆ. ಎಂದು ತಿಳಿದು ಬಂದಿದೆ. ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದು, ಹೆಚ್ಚಿನ ತನಿಖೆಯ ಸಲುವಾಗಿ ಸಿಸಿಬಿ ಅಧಿಕಾರಿಗಳು ಇದೀಗ ಹೇಮಾ ಅವರನ್ನು ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಹೇಮಾ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದಾರೆ. ಜೈಲಿನಿಂದ ಸಿಸಿಬಿ ಕೋರ್ಟಿಗೆ ಹಾಜರುಪಡಿಸಲಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಡ್ರಗ್ಸ್ ಸೇವನೆ ಪಾರ್ಟಿ ಆಯೋಜನೆ ಸೇರಿ ಎಲ್ಲಾ ಆಯಾಮದಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ ಇಂದು ಕಸ್ತಡಿಯ ಪಡೆದು ಸಿಸಿಬಿ ತನಿಖೆ ಚುರುಕುಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ತೆಲುಗು ನಟಿ ಹೇಮಾಳನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಮುಂದಾಗಿದೆ ಈಗಾಗಲೇ ಪೊಲೀಸರು ಹೇಮಾ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇದೀಗ ಎಸ ಐ ಟಿ ಅಧಿಕಾರಿಗಳು ಮೆಡಿಕಲ್ ಟೆಸ್ಟ್ಗೆ ಎಂದು ಆಸ್ಪತ್ರೆಗೆ ಕರೆದು ತಂದಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಲ್ಲಿ ವಿದೇಶದಲ್ಲಿ ಪ್ರಜ್ವಲ್ ರೇವಣ್ಣ ಅವರು ತಲೆಮರಿಸಿಕೊಂಡಿದ್ದರು. ಅದಾದ ಬಳಿಕ ಇದೊಂದು ಪ್ರಕರಣದಲ್ಲಿ ಹಲವಾರು ಬೆಳವಣಿಗೆಗಳು ನಡೆಯದವು. ಇತ್ತೀಚಿಗೆ ಅಂದರೆ ಮೇ 27ರಂದು ಮಧ್ಯರಾತ್ರಿ ಜಪಾನ್ ನಿಂದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿಗೆ ಬಂದ ತಕ್ಷಣ ಎಸ್ ಐ ಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡು ಮರುದಿನ ಕೋರ್ಟಿಗೆ ಹಾಜರುಪಡಿಸಿದ್ದರು. ಇವಳೆ ಕೋರ್ಟ್ ವಿಚಾರಣೆ ನಡೆಸಿ ಎಸ್ ಐ ಟಿ ಕಸ್ಟರ್ಡಿಗೆ ನೀಡಿ ಎಂದು ಆದೇಶ ಹೊರಡಿಸಿತ್ತು ಇದೀಗ ರೇವಣ್ಣ ಅವರನ್ನು ಮೆಡಿಕಲ್ ಟೆಸ್ಟ್ಗೆ ಎಂದು ಎಸ ಐ ಟಿ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ಅಕ್ರಮವಾಗಿ ವರ್ಗಾವಣೆ ಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ಎಸ್ಐಟಿಯನ್ನು ರಚನೆ ಮಾಡಿದೆ. ಅಲ್ಲದೆ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವುದಿಲ್ಲ ಎಂದು ಕೂಡ ಹೇಳಿತು.ಆದರೆ ಇದೀಗ ಸಿಬಿಐ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಕುರಿತಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿಬಿಐಗೆ ಬ್ಯಾಂಕ್ನವರು ಪತ್ರ ಬರೆದಿದ್ದರು. ಮೂರು ಕೋಟಿ ರೂಪಾಯಿ ಮೊತ್ತಕ್ಕಿಂತ ಹಚ್ಚಿನ ಹಗರಣ ಆಗಿದ್ದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಬಹುದು ಅಂತ ಕಾನೂನು ಇದೆ. ಅದರಂತೆ ಸಿಬಿಐ ಕೇಸ್ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ಕೋಡಲಿದೆ ಎಂದರು. ಸರ್ಕಾರದ ಇಲಾಖೆಗಳ ತನಿಖೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಸಿಬಿಐ ಪತ್ರ ಬರೆದ ಮೇಲೆ ತೀರ್ಮಾನ ಮಾಡಬೇಕು. ಸರ್ಕಾರಕ್ಕೆ ಪತ್ರ ಬರೆದ ಮೇಲೆ ಸಚಿವರ ತನಿಖೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಚಿವರನ್ನು ಕರೆದು ಸಿಬಿಐ…
ಬೆಳಗಾವಿ : ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳುವ ಮುನ್ನ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸುತ್ತಿದ್ದಂತೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿಯ ನಿಪ್ಪಾಣಿ – ಮುದೋಳ ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಮತ ಎಣಿಕೆ ಕೇಂದ್ರದ ಬಳಿ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಜಮೀರ್ ಸಿಕಂದರ್ ನಾಯಿಕವಾಡಿ (25) ಎಂದು ಹೇಳಲಾಗುತ್ತಿದೆ. ಆರೋಪಿ ಜಮೀರ್ ಮತ ಎಣಿಕೆ ನಡೆಯುತ್ತಿದ್ದ ಆರ್.ಡಿ.ಕಾಲೇಜಿನ ಎದುರಿನಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಪಾಕಿಸ್ತಾನ್ ಕಿ ಜೈ’ ಅಂತಾ ಘೋಷಣೆ ಕೂಗಿದ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಲಂ 295 (ಎ), 505(2) ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋ ಇಟ್ಟುಕೊಂಡು ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬೇಕಾ? ಡಿಎಂ ಮಾಡಿ. ಡಿಎಂ ಮಾಡುವುದರ ಜೊತೆಗೆ ಪೇಜ್ ಲೈಕ್ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಲೈಕ್ಗಳಿಗಾಗಿ ಕಿಡಿಗೇಡಿಗಳು ದಂಧೆಗಿಳಿದಿದ್ದಾರೆ. ವಿಡಿಯೋ ಬೇಕೆಂದರೆ ಇಂತಿಷ್ಟು ಹಣ ನೀಡಬೇಕು ಎಂದು ಹಣ ಮಾಡುವ ಅನಿಷ್ಟ ದಂಧೆಗೆ ಕೈ ಹಾಕಿದ್ದಾರೆ. ಹೌದು ಪ್ರಜ್ವಲ್ ಅಶ್ಲೀಲ ವಿಡಿಯೋ ಇಟ್ಟುಕೊಂಡು ಇದೀಗ ದಂಧೆಗೆ ಇಳಿದ ಕಿಡಿಗೇಡಿಗಳು. ಸೋಶಿಯಲ್ ಮೀಡಿಯಾದಲ್ಲಿ ಲೈಕ್ ಗೋಸ್ಕರ ಕಿಡಿಗೇಡಿಗಳು ಇದೀಗ ಈ ಹೊಲಸು ದಂಧೆಗೆ ಇಳೆದಿದ್ದಾರೆ. ಡೈರೆಕ್ಟ್ ಮೆಸೇಜ್ ಮಾಡುವುದರ ಜೊತೆಗೆ ನಮ್ಮ ಪೇಜ್ ಲೈಕ್ ಮಾಡಿ ಪ್ರಜ್ವಲ್ ರೇವಣ್ಣನ ಎಲ್ಲಾ ವಿಡಿಯೋಗಳಿವೆ ನಿಮಗೆ ಬೇಕಿದ್ದರೆ ಹಣ ಕಳುಹಿಸಿ ಎಂದು ಲೈಕ್ ಗೋಸ್ಕರ ಹಾಗೂ ಹಣಕ್ಕಾಗಿ ಪ್ರಜ್ವಲ್ ಆಶೀಲ ವಿಡಿಯೋಗಳಿಗೆ ಕಿಡಿಗೇಡಿಗಳು ದಂಧೆಗೆ ಇಳಿದಿದ್ದರೆ. ಸಂತ್ರಸ್ತೆಯರಲ್ಲದೆ ತೆಲುಗು ನಾಯಕ ನಟಿಯರ ಫೊಟೋ ಬಳಸಿ ವಿಡಿಯೋ ಇದೆ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿಗಳ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬಿ ನಾಗೇಂದ್ರ ಸೇರಿದಂತೆ ಐವರ ವಿರುದ್ಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷ ರಮೇಶ್ ಎನ್.ಆರ್ ED ಕಚೇರಿಯಲ್ಲಿ ನಾಳೆ ದೂರು ದಾಖಲಿಸಲಿದ್ದಾರೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿಗಳ ಬೃಹತ್ ಹಗರಣ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿರುವ ನಿಗಮದ ಖಾತೆಯಿಂದ ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ಇರುವ ರತ್ನಾಕರ ಬ್ಯಾಂಕ್ ಲಿಮಿಟೆಡ್ ಎಂಬ ಖಾಸಗಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿರುವ 10 ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಹೆಸರುಗಳಲ್ಲಿರುವ ಖಾತೆಗಳಿಗೆ 89.62 ಕೋಟಿ ರೂಪಾಯಿ ಗಳಷ್ಟು ಹಣ ಅಕ್ರಮವಾಗಿ ವರ್ಗಾವಣೆ ಆಗಿತ್ತು. ಅಂತರ ರಾಜ್ಯಗಳ ಬೃಹತ್ ಹಗರಣಕ್ಕ ಸಂಬಂಧಿಸಿದಂತೆ, ಸ್ವತಃ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ…
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ CBI ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ಯೂನಿಯನ್ ಬ್ಯಾಂಕ್ ಅಧಿಕಾರಿಗಳ ದೂರಿನ ಮೇರೆಗೆ ಇದೀಗ ಸಿಬಿಐ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದಾರೆ. ಬ್ಯಾಂಕಿನ ಮೂರು ಅಧಿಕಾರಿಗಳು ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ಪೂರ್ವ ವಲಯದ ಡಿಜಿಎ ಜೆ. ಮಹೇಶ್ ಎಂಬುವವರು ದೂರು ನೀಡಿದ್ದಾರೆ. ಜೆ.ಮಹೇಶ್ ದೂರಿನ ಮೇರೆಗೆ ಸಿಬಿಐ ಇದೀಗ ಐವರ ವಿರುದ್ಧ ಕೇಸ್ ದಾಖಲಿಸಿದೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಖಾಸಗಿ ವ್ಯಕ್ತಿಗಳು ಶಾಮಿಲಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಕೆಲವು ದಿನಗಳ ಇದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ನಿಗಮದಿಂದ 187 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.ಅಲ್ಲದೆ ಇದರಲ್ಲಿ ಸಚಿವ ನಾಗೇಂದ್ರ ಅವರು ಹೆಸರು ಕೇಳಿ ಬಂದಿದ್ದರಿಂದ ಈ ಒಂದು ಪ್ರಕರಣ ಇದೀಗ ಸಿಬಿಐ ತನಿಖೆ ಮಾಡುತ್ತಿದೆ.












