Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ಕೂಡಲೇ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ FIR ದಾಖಲಾಗಿದೆ. ಹೌದು ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ಕೂಡಲೇ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಸದ್ಯಆರೋಪಿ ಅಬ್ದುಲ್ ರೆಹಮಾನ್ ವಿರುದ್ಧ FIR ದಾಖಲಾಗಿದೆ.
ಚಿಕ್ಕಮಗಳೂರು : ಎಲ್ಲದಕ್ಕೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಆದರೆ ಇಂದಿನ ಯುವಜನತೆ ಸಣ್ಣ ಪುಟ್ಟ ವಿಷಯಕ್ಕೂ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಚಿಕ್ಕಮಗಳೂರಲ್ಲಿ ಘೋರ ಘಟನೆ ನಡೆದಿದ್ದು, 9ನೇ ತರಗತಿಯಲ್ಲಿ ಫೇಲ್ ಆಗುತ್ತೇನೆ ಎಂದು ಆತಂಕಗೊಂಡ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ವರ್ಷಿಣಿ (15) ಎಂದು ತಿಳಿದುಬಂದಿದೆ. ವರ್ಷಿಣಿ ಈ ವರ್ಷ 9ನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿಯ ಬೋವಿ ಕಾಲನಿ ಗ್ರಾಮದಲ್ಲಿ ನಡೆದಿದೆ. ಬಾಣಾವರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವರ್ಷಿಣಿ, ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ಆತಂಕದಿಂದ ಮನನೊಂದು ಶುಂಠಿಗೆ ತಂದಿದ್ದ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಘಟನೆಯ ಮಾಹಿತಿ ಪಡೆದ ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಇಬ್ಬರು ಬಾಲಕಿಯರು ಓರ್ವ ಮಹಿಳೆಗೆ ಕಚ್ಚಿದ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. 4 ವರ್ಷದ ಆರಾಧ್ಯ ರಮೇಶ್ ಕಿವಿಯನ್ನು ಹುಚ್ಚು ನಾಯಿ ತುಂಡರಿಸಿದೆ. ಅಲ್ಲದೆ 10 ವರ್ಷದ ನಿದಾ ಆಶಿಫ್ ಸಂಶೇದ್ ಮುಖಕ್ಕೆ ನಾಯಿ ಕಚ್ಚಿದೆ. 35 ವರ್ಷದ ಲಕ್ಷ್ಮಿ ಎನ್ನುವ ಮಹಿಳೆಗೆ ಕೈ, ಮತ್ತು ಕಾಲಿಗೆ ಕಚ್ಚಿ ಹುಚ್ಚುನಾಯಿ ಎಳೆದಾಡಿದೆ. ಮೂವರು ಗಾಯಾಳುಗಳನ್ನು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಚ್ಚುನಾಯಿಯನು ಸೆರೆಹಿಡಿವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಿ ಜನರು ಮನವಿ ಮಾಡಿದ್ದಾರೆ. ಆದರೆ ಎಷ್ಟು ಬಾರಿ ಜನರ ಮನವಿ ಮಾಡಿದರು ಕೂಡ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ ವಹಿಸಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಇಂದು ವಿಧಾನಸಭೆಯಲ್ಲಿ ಸಚಿವರ ವಿರುದ್ಧ ಹನಿಟ್ರ್ಯಾಪ್ ವಿಷಯ ಗಂಭೀರವಾಗಿ ಚರ್ಚೆಯಾಯಿತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ನೇರವಾಗಿ ಹೇಳಿಕೆ ನೀಡಿದರು. ಬಳಿಕ ಕೆ.ಎನ್ ರಾಜಣ್ಣ ಇದಕ್ಕೆ ಪ್ರತಿಕ್ರಿಯೆ ನೀಡಿದರು. ಅಲ್ಲದೆ ಆರ್ ಆರ್ ಕ್ಷೇತ್ರದ ಶಾಸಕ ಮುನಿರತ್ನ ಅವರು ಕೂಡ ಆಕ್ರೋಶ ಹೊರಹಾಕಿದರು. ಇದೀಗ ಸಚಿವ ಸತೀಶ್ ಜಾರಕಿಹೊಳಿ ಮತ್ತೊಂದು ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಪ್ರಭಾವಿ ಸಚಿವರನ್ನು ಸಿಡಿ ಮೂಲಕ ಬೆದರಿಕೆ ಹಾಕಿದ್ದರು ಎಂದಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ವರಿಷ್ಠರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಹೈಕಮಾಂಡ್ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ. ರಮೇಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಮೂಲಕ ಪ್ರಕರಣ ಹೊರ ಬಂದಿದೆ. ಈ ಎಪಿಸೋಡ್ ಇಲ್ಲಿಗೆ ಕೊನೆಯಾಗಬೇಕು. ಬಿಜೆಪಿಯಲ್ಲಿ ಪ್ರಭಾವಿ ಸಚಿವರನ್ನು ಸಿಡಿ ಮೂಲಕ ಬೆದರಿಕೆ ಹಾಕಿದ್ದರು. ಸಿಡಿ ಮೂಲಕ ಸರ್ಕಾರದಲ್ಲಿ ಲಾಭ ಪಡೆಯುವ ಪ್ರಯತ್ನ ಆಗಿದೆ. ತನಿಖೆ…
ಮೈಸೂರು : ಸರ್ಕಾರಿ ಆಂಬುಲೆನ್ಸ್ ಸೇವೆಗಳ ಕುರಿತು ಆಗಾಗ ಕಂಪ್ಲೇಂಟ್ ಗಳು ಬರುತ್ತಲೇ ಇರುತ್ತೆ ಇದೀಗ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 3 ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ನಡೆದಿದೆ. ಹೌದು ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಎನ್ನುವರ ಮಾರ್ಚ್ 17ರಂದು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಹೆರಿಯಾದ ಬಳಿಕ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ತೆರಳುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಮೈಸೂರು ತಲುಪುವ ಮುನ್ನವೇ ಮಗು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ. ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಸಿಬ್ಬಂದಿಗಳಿಗೆ ತಿಳಿದಿದ್ದರು ಕೂಡ ಮಗುವನ್ನು ಹಾಗೆ ಶಿಫ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮಗು ಸಾವನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ…
ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ತ್ರಿಚಕ್ರ ಬೈಕ್ ಹಾಗೂ ಕಾರಿನ ನಡುವೆ ಬೀಖರವಾದ ಅಪಘಾತ ಸಂಭವಿಸಿದ್ದು ತ್ರಿಚಕ್ರ ವಾಹನದಲ್ಲಿದ್ದ 3 ವರ್ಷದ ಮಗು, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಂಪತಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ದಾವಣಗೆರೆ ತಾಲೂಕಿನಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ತ್ರಿಚಕ್ರ ಬೈಕ್ ನಲ್ಲಿ ಪತ್ನಿ, ತಂದೆ ಹಾಗು ಪುತ್ರನ ಜೊತೆಗೆ ವಿಕಲಚೇತನ ಬರುತ್ತಿದ್ದ. ಈ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ತ್ರಿಚಕ್ರ ಬೈಕಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಚಿವರ ಹನಿಟ್ರ್ಯಾಪ್ ಭಾರಿ ಸದ್ದು ಮಾಡಿದ್ದು, ಆಡಳಿತ ಮತ್ತು ವಿಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತಿದವು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ರಾಜಣ್ಣ ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ.48ಕ್ಕೂ ಹೆಚ್ಚು ರಾಜ್ಯ & ಕೇಂದ್ರ ರಾಜಕಾರಣಿಗಳ ‘ಅಶ್ಲೀಲ ಪೆನ್ ಡ್ರೈವ್’ ಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹನಿ ಟ್ರಾಪ್ ಬಗ್ಗೆ ಸದನದಲ್ಲಿ ಯತ್ನಾಳ್ ಪ್ರಸ್ತಾಪ ಮಾಡಿದ್ದರು. ಹನಿ ಟ್ರ್ಯಾಪ್ ನಲ್ಲಿ ಎಲ್ಲಾ ಪಕ್ಷದವರು ಸಿಲುಕಿದ್ದಾರೆ. ಈ ರೀತಿ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರಲ್ಲ. ಇದು ಅಂತ್ಯವಾಗಲು ಉನ್ನತ ಮಟ್ಟದ ತನಿಖೆ ಆಗಬೇಕು. ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ. ಆದರೆ ನಾನು ಹನಿಟ್ರ್ಯಾಪ್ ಗೆ ಒಳಗಾಗಿಲ್ಲ ಎಂದು ಅವರು ತಿಳಿಸಿದರು.…
BREAKING : ರನ್ಯಾ ಬಳಿಕ ಬೆಂಗಳೂರು ಏರ್ಪೋರ್ಟ್ ನಲ್ಲಿ ಮತ್ತೊರ್ವ ಮಹಿಳೆ ಅರೆಸ್ಟ್ : 38 ಕೋಟಿ ಮೌಲ್ಯದ ಕೊಕೆನ್ ಜಪ್ತಿ!
ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಭಂಧಿಸಿದಂತೆ ಈಗಾಗಲೇ ನಟಿ ರನ್ಯಾ ರಾವ್ ಅರೆಸ್ಟ್ ಆಗಿದ್ದಾರೆ.ಇದಿಗ ಬೆಂಗಳೂರಲ್ಲಿ ಮತ್ತೋರ್ವ ಮಹಿಳೆ ಆರೆಸ್ಟ್ ಆಗಿದ್ದು, ಆದರೆ ಈಕೆ ಚಿನ್ನದ ಕೇಸ್ ನಲ್ಲಿ ಆರೆಸ್ಟ್ ಆಗದೆ ಕೊಕೆನ್ ಸಾಗಾಟ ಮಾಡುತ್ತಿದ್ದಳು ಎಂದು ಈಗ ಡಿಆರ್‌ಐ ಅಧಿಕಾರಿಗಳು ಆರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಮಾರ್ಚ್ 18 ರಂದು ಕತಾರ್ ನಿಂದ ಬಂದಿದ್ದ ಮಹಿಳೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಹಿಳೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಘಾನಾ ದೇಶದ ಪ್ರಜೆಯಾಗಿದ್ದಾಳೆ ಎನ್ನಲಾಗಿದೆ. ಅನುಮಾನಗೊಂಡು ಅದಿಕಾರಿಗಳು ಮಹಿಳೆಯ ಬ್ಯಾಗ್ ಅನ್ನು ಪರೀಶೀಲನೆ ಮಡಿದ ವೇಳೆ 38.8 ಕೋಟಿ ಮೌಲ್ಯದ 3 ಕೆಜಿ ಕೋಕೆನ್ ಮಾದಕ ದ್ರವ್ಯವನ್ನು ಮರೆಮಾಚಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಬಳಿಕ ಆಕೆಯನ್ನು ಡಿಆರ್‌ಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರ್ಗಿ : ಮಹಿಳೆ ಒಬ್ಬರು ತೀವ್ರವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಹೊಟ್ಟೆ ನೋವು ನಿವಾರಕ ಔಷಧಿ ಎಂದು ತಿಳಿದು ಮಹಿಳೆ ಕುರಿ ಹೇನಿನ ಔಷಧಿ ಕುಡಿದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಹೊರವಲಯದ ಫರತಾಬಾದ್ ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಫರಹತಾಬಾದ್ ನಿವಾಸಿ ಶಿವಮ್ಮ ಸಿದ್ದು ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಮಾ.7ರ ರಾತ್ರಿ ತೀವ್ರ ಹೊಟ್ಟೆ ನೋವಿನಿಂದ ಹೊಟ್ಟೆ ನೋವು ನಿವಾರಕ ಔಷಧಿ ಎಂದುಕೊಂಡು ಕುರಿ ಹೇನಿನ ಔಷಧಿಯನ್ನು ಕುಡಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಾರ್ಗ ಮಧ್ಯದಲ್ಲಿ ಶಿವಮ್ಮ ಅವರು ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತು ಗಂಭೀರ ಚರ್ಚೆ ನಡೆಯಿತು. ಈ ವೇಳೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಕೂಡ ರೋಷಾವೇಷ ಪ್ರದರ್ಶಿಸಿದರು. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಶಾಸಕರ ಜೀವನವನ್ನು ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ. ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು. ಈ ಹನಿಟ್ರ್ಯಾಪ್ ಟೀಂ ಡಿಸಿಎಂ ಡಿಕೆ ಶಿವಕುಮಾರ್ ಅವರದ್ದು ಎಂದು ಶಾಸಕ ಮುನಿರತ್ನ ಗಂಭೀರವಾಗಿ ಆರೋಪಿಸಿದರು. ಹನಿಟ್ರ್ಯಾಪ್ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಗಂಭೀರವಾದ ಚರ್ಚೆ ನಡೆಯಿತು. ಅತ್ಯಾಚಾರ ಮಾಡಿದ್ದೀನಿ ಅಂತ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮನೇಲಿ 15 ವರ್ಷದ ನನ್ನ ಮೊಮ್ಮಕ್ಕಳು ಇದ್ದಾರೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಮನೆ ಹಾಳು ಮಾಡಿದರು. ಶಾಸಕ ರಮೇಶ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಬೇರೆ ಶಾಸಕರ ಮನೆಯನ್ನು ಹಾಳುಮಾಡಬಾರದು ಎಂದು ಆಗ್ರಹಿಸಿದರು. ರಮೇಶ್ ಜಾರಕಿಹೊಳಿ, HD ರೇವಣ್ಣ…