Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೆ ಖ್ಯಾತಿ ಪಡೆದಿದ್ದ ನಟ ದ್ವಾರಕೀಶ್ ಅವರು ನಿನ್ನೆ ಹೃದಯಘಾತದಿಂದ ಸಾವನಪ್ಪಿದ್ದಾರೆ. ಇಂದು ಬೆಳಿಗ್ಗೆ ನಟ ಶಿವರಾಜಕುಮಾರ್ ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹುಸ್ಕೂರು ರಸ್ತೆಯಲ್ಲಿ ಇರುವ ದ್ವಾರಕೀಶ್ ನಿವಾಸದಲ್ಲಿ ಅವರ ಅಂತಿಮ ದರ್ಶನ ಪಡೆದರು. ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ಶಿವರಾಜಕುಮಾರ್ ಹುಸ್ಕುರು ರಸ್ತೆಯಲ್ಲಿರುವ. ನಿವಾಸದಲ್ಲಿ ಅಂತಿಮ ದರ್ಶನ ಪಡೆದರು. ದ್ವಾರಕೀಶ್ ಅವರ ಪಾರ್ಥಿವ ಶರೀರಕ್ಕೆ ಶಿವಣ್ಣ ನಮಿಸಿದ್ದಾರೆ. ಈ ವೇಳೆ ಮಾತಾನಾಡಿದ ಅವರು, ದ್ವಾರಕೀಶ್ ಕುಟುಂಬಸ್ಥರಿಗೆ ನಾವು ಚಿಕ್ಕವರಿದ್ದಾಗಿನಿಂದ ಒಳ್ಳೆಯ ಬಾಂಧವ್ಯ ಇತ್ತು ಎಂದರು. ದ್ವಾರಕೀಶ್ ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ದ್ವಾರಕೀಶ್ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಯಾರು ಮರೆಯುವುದಿಲ್ಲ. ದ್ವಾರಕೀಶ್ ಕುಟುಂಬದ ಜೊತೆಗೆ ನಾವೆಲ್ಲ ಇದ್ದೇವೆ.ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ದ್ವಾರಕೀಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಶಿವರಾಜ್ ಕುಮಾರ್ ಸಂತಾಪ ಸೂಚಿಸಿದರು. ಕೆಲವೇ…
ಹಾಸನ : ಈ ಬಾರಿ ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾಗಿರುವ ಎಚ್ ಡಿ ದೇವೇಗೌಡ ಅವರು ಭವಿಷ್ಯ ನುಡಿದರು. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಚುನಾವಣೆ ದೇಶದ ಚುನಾವಣೆಯಾಗಿದ್ದು ದೇಶದ ಅಳಿವು ಉಳಿವುಗಳ ಬಗ್ಗೆ ಮತ್ತು ಅಂತರಾಷ್ಟ್ರೀಯ ಬಗ್ಗೆ ಹಾಗೂ ದೇಶದ ಸುಭದ್ರತೆ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಆದರೆ, ಕಾಂಗ್ರೆಸ್ ಬರೀ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಇದರಿಂದ ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎಂದರು. ದೇಶದ ಪ್ರಧಾನಮಂತ್ರಿಯಾಗುವ ಯೋಗ್ಯತೆ ಐಎನ್ಡಿಐಎ ನಲ್ಲಿ ಯಾರಿಗೂ ಇಲ್ಲ ಎಂಬುದು ನನಗೆ ಗೊತ್ತಿರೋ ವಿಚಾರ. ಅದಕ್ಕಾಗಿ ಎಲ್ಲರ ಬಳಿಯೂ ಹೋಗಿ ಬರಿಗೈಲಿ ವಾಪಸ್ಸು ಬರುತ್ತಿದ್ದೆ. ಇಡೀ ದೇಶದಲ್ಲಿ ಸತ್ಯ ಹೇಳೋದಾದ್ರೆ ಕರ್ನಾಟಕ ಸೇರಿದಂತೆ 3 ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಉಳಿದೆಲ್ಲ ಕಡೆ ಚೆಲ್ಲಾಪಿಲ್ಲಿಯಾಗಿ…
ಬೆಂಗಳೂರು : ಹಿರಿಯ ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ದ್ವಾರಕೀಶ್ ಅವರು ನಿಧನರಾಗಿದ್ದು ಇಂದು ಮಧ್ಯಾಹ್ನದ ನಂತ್ರ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ತಿಳಿಸಿದ್ರು. ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ಸರ್ಕಾರಿ ಗೌರವದೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ ನಡೆಯಲಿದೆ. ಇಂದು ಹಿರಿಯ ನಟ ದ್ವಾರಕೀಶ್ ಅಂತ್ಯಕ್ರಿಯ ನೆರವೇರಲಿದೆ ಎಂದು ಪುತ್ರ ಯೋಗೇಶ್ ದ್ವಾರಕೀಶ್ ಹೇಳಿಕೇ ನೀಡಿದ್ದಾರೆ.ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ಬೆಳಗ್ಗೆ 7:30 ರಿಂದ ಬೆಳಗ್ಗೆ 11:30 ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಗಣ್ಯರು ಅಭಿಮಾನಿಗಳು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನದ ಬಳಿಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ದ್ವಾರಕೀಶ್ ಪುತ್ರ ಯೋಗೇಶ್ ದ್ವಾರಕೀಶ್ ತಿಳಿಸಿದರು.
ಬೆಂಗಳೂರು : ಹಿರಿಯ ನಟ ನಿರ್ಮಾಪಕ ನಿರ್ದೇಶಕ ದ್ವಾರಕೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಸ್ವಯಂ ಪ್ರೇರಿತವಾಗಿ ಕನ್ನಡ ಚಿತ್ರರಂಗ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಫಿಲಂ ಚೆಂಬರ್ ಅಧ್ಯಕ್ಷ ಎಂ. ಎನ್ ಸುರೇಶ್ ತಿಳಿಸಿದರು. ಇಂದು ದ್ವಾರಕೀಶ್ ಅವರ ನಿಧನದ ಹಿನ್ನೆಲೆ ಇವತ್ತು ಒಂದು ದಿನ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸಿ, ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸೋಣ, ಅವರನ್ನು ಗೌರವಯುತವಾಗಿ ಕಳಿಸಿಕೊಡೋಣ.ಅಲ್ಲದೇ ಅಲ್ಲದೇ ದ್ವಾರಕೀಶ್ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೂ ಮಾತಾಡುವೆ ಎಂದು ಎನ್,ಎಂ ಸುರೇಶ್ ಹೇಳಿದ್ರು. ಹಾಗಾಗಿ ಇಂದು 10:30ರ ಶೋಗಳನ್ನು ಬಂದ್ ಮಾಡಲಾಗಿದ್ದು ಇಂದು ಮಧ್ಯಾಹ್ನ 1:00 ನಂತರ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸಿಂಗಲ್ ಸ್ಕ್ರೀನ್ ಮಲ್ಟಿಪ್ಲೆಕ್ಸ್ ನಲ್ಲಿ ಒಂದು ಶೋ ಬಂದ್ ಮಾಡಲು ನಿರ್ಧರಿಸಲಾಗಿದೆ. ಶೋ ಬಂದ್ ಬಗ್ಗೆ ಪ್ರದರ್ಶಕರ ವಲಯದಿಂದ ಮಾಹಿತಿ ಪಡೆಯಲಾಗಿದೆ ಎಂದು ಸುರೇಶ್ ತಿಳಿಸಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ 11 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು…
ನವದೆಹಲಿ: ಡೀಪ್ ಫೇಕ್ ತಂತ್ರಜ್ಞಾನ ಇದೀಗ ಬಾಲಿವುಡ್ ನಟ ಅಮಿರ್ ಖಾನ್ ಗೂ ಬಿಸಿ ತಟ್ಟಿದ್ದು, ನಿರ್ದಿಷ್ಟ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುವ ರೀತಿಯಲ್ಲಿ ಸಾಮಾಜಿಕ ಜಾಲ ಜಾಲತಾಣದಲ್ಲಿ ಓಡಾಡುತ್ತಿರುವ ತಮ್ಮ ವಿಡಿಯೋ ನಕಲಿ ಎಂದು ಖ್ಯಾತ ನಟ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅಮೀರ್ ಪರ ವಕ್ತಾರರು, ತಮ್ಮ 35 ವರ್ಷಗಳ ಚಿತ್ರರಂಗದ ವೃತ್ತಿ ಜೀವನದಲ್ಲಿ ಅಮೀರ್ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ರೀತಿಯಲ್ಲಿ 6 ಡೀಪ್ಫೇಕ್ ತಂತ್ರಜ್ಞಾನ ಬಳಸಿ 27 ಸೆಕೆಂಡ್ಗಳ ವಿಡಿಯೋ ತಯಾರಿಸಲಾಗಿದೆ. ಇದು ಸಂಪೂರ್ಣ ನಕಲಿ. ಈ ಕುರಿತು ಈಗಾಗಲೇ ಸೈಬರ್ ಕ್ರೈಮ್ ವಿಭಾಗದಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಪರೋಕ್ಷವಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ 15 ಲಕ್ಷ ರು. ಕಪ್ಪುಹಣ ವಾಪಸ್ ಯೋಜನೆ ಯನ್ನು ಟೀಕಿಸುವ ಮತ್ತು ನೇರವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಅಮೀರ್ ಕೋರಿಕೆ ಸಲ್ಲಿಸಿದ ಅಂಶಗಳಿವೆ.
ಬೆಂಗಳೂರು : ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ. ಸಮಾರಸ್ವಾಮಿಯವರು ಆಧಾರ ರಹಿತ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನು ಬದ್ಧವಾಗಿ ಒಡೆದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಆದರೂ ಅವರು ಪದೇ ಪದೇ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಯಿಸಿಕೊಂಡಿದ್ದೇನೆ ಎಂದೆಲ್ಲಾ ಆಧಾರ ರಹಿತ ಟೀಕೆ ಮಾಡುತ್ತಿದ್ದಾರೆ ಎಂದರು. ಕುಮಾರಸ್ವಾಮಿ ಅವರು ಮಹಿಳೆಯರ ಕುರಿತ ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈರೀತಿ ಆರೋಪ ಮಾಡುತ್ತಿದ್ದಾರೆ. ಆದರೆ, ಅವರ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅವಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು. ಕುಮಾರಸ್ವಾಮಿ ಇಂತಹ ಹೇಳಿಕೆ ಕೊಟ್ಟರೂ ಬಿಜೆಪಿಯವರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ. ಬಿಎಸ್ವೈ ಯಾಕೆ…
ಬೆಂಗಳೂರು : ಎಂಟು ವರ್ಷಗಳ ಹಿಂದೆ ಎಂಜಿನಿಯರಿಂಗ್ ಓದುವ ಸಲುವಾಗಿ ನಗರಕ್ಕೆ ಬಂದಿದ್ದ ಯುವಕನೊಬ್ಬ, ನಾಗವಾರ ಸಮೀಪ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆದರೆ ಅಂತಿಮ ವರ್ಷದಲ್ಲಿ ಬಿಇ ಅರ್ಧಕ್ಕೆ ಮೊಟಕುಗೊಳಿಸಿದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದು ಈಗ ಜೈಲು ಸೇರಿದ್ದಾನೆ. ಹೌದು ಬೆಂಗಳೂರಿನಲ್ಲಿ ಬಿಇ ಓದನ್ನು ಬಂದಿದ್ದ ಯುವಕ ರಿಜ್ವಾನ್ ಅರ್ಧಕ್ಕೆ ನಿಲ್ಲಿಸಿದ ಬಳಿಕ ಆತ ಬೇಗೂರು ಹತ್ತಿರದ ಕ್ರೀಡಾ ಕ್ಲಬ್ನಲ್ಲಿ ಈಜು ತರಬೇತುದಾರನಾಗಿ ಸೇರಿಕೊಂಡಿದ್ದ ಎಂದು ಹೇಳಲಾಗುತ್ತಿದೆ.ಇದೀಗ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಖಾಸಗಿ ಕ್ರೀಡಾ ಕ್ಲಬ್ನ ಈಜು ತರಬೇತುದಾರ ಸೇರಿದಂತೆ ಇಬ್ಬರನ್ನು ಸಿಸಿಬಿ ಹಾಗೂ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರತ್ಯೇಕವಾಗಿ ಸೆರೆ ಹಿಡಿದಿದ್ದಾರೆ. ಆಫ್ರಿಕಾ ಮೂಲದ ಅಮದೌ ಸಿಡಿಬೆ ಬೌಬಕರ್ ಹಾಗೂ ಕೇರಳದ ರಿಜ್ವಾನ್ ರಜಾಕ್ ಬಂಧಿತರಾಗಿದ್ದು, ಆರೋಪಿಗಳಿಂದ 5.5 ಕೇಜಿ ಗಾಂಜಾ ಹಾಗೂ 24 ಗ್ರಾಂ ಕೊಕೇನ್ ಸೇರಿ 21.75 ಲಕ ಲಕ್ಷ ಮೌಲ್ಯದ ಮೌಲ್ಯದ ಡ್ರಗ್ಸ್ ಜಪ್ತಿ…
ಧಾರವಾಡ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಹಾಗೂ ಮಧ್ಯ ಸಾಗಾಟದ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಇದೀಗ ಧಾರವಾಡದಲ್ಲಿ ವಕೀಲರೊಬ್ಬರಿಗೆ ಸೇರಿದ ಫ್ಲ್ಯಾಟ್ ವೊಂದರಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿರುವ ಘಟನೆ ಮಂಗಳವಾರ ನಗರದಲ್ಲಿ ರಾತ್ರಿ ನಡೆದಿದೆ. ದಾಳಿಗೆ ಹೋದ ಅಬಕಾರಿ ಅಧಿಕಾರಿಗಳಿಗೆ ಸುಮಾರು 20 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ನಂತರ ವಶಕ್ಕೆ ಪಡೆದ ಅತಿದೊಡ್ಡ ಮೊತ್ತದ ಹಣವಾಗಿದೆ ಎಂದು ಹೇಳಲಾಗುತ್ತಿದೆ. ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಆರ್ಣಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಮೂರನೇ ಮಹಡಿಯ ಫ್ಲ್ಯಾಟ್ ವೊಂದರಲ್ಲಿ ಮದ್ಯದ ದಾಳಿಗೆ ಹೋದ ಅಬಕಾರಿ ಅಧಿಕಾರಿಗಳಿಗೆ ಈ ಹಣ ಸಿಕ್ಕಿದೆ.ಖ್ಯಾತ ಗುತ್ತಿಗೆದಾರ ರೊಬ್ಬರ ಖಾತೆ ನಿರ್ವಹಿಸುತ್ತಿದ್ದಾರೆ ನ್ನಲಾದ ವಕೀಲರೂ ಆಗಿರುವ ಬಸವರಾಜ ದತ್ತೂನವರ್ ಎಂಬುವರಿಗೆ ಸೇರಿದ ಫ್ಲ್ಯಾಟ್ ಇದಾಗಿದೆ ಎಂದು ತಿಳಿದುಬಂದಿದೆ. ಫ್ಲಾಟ್ ನಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ರಾತ್ರಿ ದಾಳಿ…
ಬೆಂಗಳೂರು : ಹಿರಿಯ ನಟ ನಿರ್ಮಾಪಕ ನಿರ್ದೇಶಕರಾಗಿರುವ ದ್ವಾರಕೀಶ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ಕನ್ನಡ ಚಿತ್ರರಂಗ ಬಂದ್ ಇರಲಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ತಿಳಿಸಿದರು. ನಾಳೆ ಚಿತ್ರರಂಗ ಬಂದ್ ಮಾಡಿ ನಟ ದ್ವಾರಕೀಶ್ ಅವರಿಗೆ ಗೌರವ ಕೊಡುಲಾಗುತ್ತದೆ. ದ್ವಾರಕೀಶ್ ಗೆ ಗೌರವ ಕೊಡುವುದು ನಮ್ಮ ಕರ್ತವ್ಯವಾಗಿದೆ. ದ್ವಾರಕೀಶ್ ನಿಧನದಿಂದ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ನಾಳೆ ಒಂದು ದಿನ ಚಿತ್ರರಂಗದ ಚಟುವಟಿಕೆ ಬೇಡ ಹೀಗಾಗಿ ಎಲ್ಲಾ ಕಲಾವಿದರಿಗೂ ನಾನು ಮನವಿ ಮಾಡುತ್ತೇನೆ ಎಂದರು. ಬೆಳಿಗ್ಗೆಯಿಂದ ಮಧ್ಯಾಹ್ನ 1:00 ವರೆಗೆ ಯಾವುದೇ ಚಲನಚಿತ್ರಗಳನ್ನು ಪ್ರದರ್ಶಿಸದೆ ಬಂದ್ ಮಾಡಲಾಗಿದೆ ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಚಲನಚಿತ್ರ ಪ್ರದರ್ಶಿಸದಿರಲು ಚಿತ್ರರಂಗ ನಿರ್ಧರಿಸಿದೆ. ನಾಳೆ ಒಂದು ದಿನ ಚಿತ್ರರಂಗದ ಚಿರೋಟಿಗೆ ಬಂದು ಎಲ್ಲಾ ಕಲಾವಿದರಿಗೂ ನಾನು ಮನವಿ ಮಾಡುತ್ತೇನೆ. ಎಂದು NM ಸುರೇಶ ಹೇಳಿಕೆಯ ನೀಡಿದ್ದು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಅಂತ್ಯಕ್ರಿಯೆ…
ಬೆಂಗಳೂರು : ಇಂದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ತುಂಬಲಾರದಂತಹ ನಷ್ಟವಾಗಿದ್ದು ಹಿರಿಯ ನಟ ನಿರ್ದೇಶಕ ನಿರ್ಮಾಪಕ ರಾಗಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಆದರೆ ಇವರ ಸಾವು ಹಾಗೂ ಇವರ ಪತ್ನಿ ಅಂಬುಜ ಅವರ ಸಾವು ಕೂಡ ಒಂದೇ ದಿನಾಂಕದಂದು ಸಾವನ್ನಪ್ಪಿದ್ದರೆ. ಈ ವಿಷಯದ ಕುರಿತಾಗಿ ಅವರ ಪತ್ರ ಯೋಗೇಶ್ ಮಾತನಾಡಿದ್ದು ತಂದೆ ಹಾಗೂ ತಾಯಿ ಇಬ್ಬರು ಒಂದೇ ದಿನಾಂಕದಂದು ಮೃತಪಟ್ಟಿದ್ದಾರೆ ತಾಯಿ ಅಮೃತ ಅವರು 2021 ಏಪ್ರಿಲ್ 16ರಂದು ಸಾವನ್ನಪ್ಪಿದ್ದರೆ, ನಟ ದ್ವಾರಕೀಶ್ ಅವರು ಎಪ್ರಿಲ್ 16 2018 ಅಂದರೆ ಇವತ್ತು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 9:30ಕ್ಕೆ ದ್ವಾರಕೀಶ್ ಉಸಿರು ಚೆಲ್ಲಿದರು ತಾಯಿ ಹಾಗೂ ತಂದೆ ಒಂದೇ ದಿನಾಂಕದಲ್ಲಿ ಸಾವನಪ್ಪಿದ್ದಾರೆ ಎಂದರು. ನಮ್ಮ ತಾಯಿ ಅಂಬುಜಾ ಅವರು 2021 ಏಪ್ರಿಲ್ 16 ಬೆಳಗ್ಗೆ 9:45 ಕ್ಕೆ ಮೃತಪಟ್ಟಿದ್ದಾರೆ.ಅದೇ ರೀತಿಯಾಗಿ ಇಂದು ನಮ್ಮ ತಂದೆಯವರು ಕೂಡ 16 2024 ರಂದು ಬೆಳಿಗ್ಗೆ 9.45 ಕ್ಕೆ ಅವರು ಸಾವನ್ನಪ್ಪಿದ್ದಾರೆ. ಆದರೆ ತಿಥಿಯ ಪ್ರಕಾರ…