Author: kannadanewsnow05

ಕೋಲಾರ : ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ದೊಡ್ಡ ಜವಾಬ್ದಾರಿ ನೀಡಿದ್ದು ಕನಿಷ್ಠ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲದೆ ಹೋದರೆ ಸಿರಿವ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿತು ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ ಬರಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ನಗರಭಿವೃದ್ಧಿ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಿದೆ. ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಭೈರತಿ ಸುರೇಶ್ ಮಾತನಾಡಿದರು. ಕುರುಬ ಸಮುದಾಯ ಸಿಎಂ ಸಿದ್ದರಾಮಯ್ಯ ಕೈ ಬಲಪಡಿಸಬೇಕು ನಿಮ್ಮ ಬೆಂಬಲ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಮೇಲಿರಲಿ ಬೇರೆ ಅಭ್ಯರ್ಥಿ ಗೆದ್ದರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಾಗಲಿದೆ ಕೋಲಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.

Read More

ಚಿಕ್ಕಬಳ್ಳಾಪುರ : ಬಿಜೆಪಿ ಅಭ್ಯರ್ಥಿ ಸುಧಾಕರ್ ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಡಾ. ಕೆ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ವೈದಕೀಯ ಸಲಕರಣೆಗಳ ಖರೀದಿಯಲ್ಲಿ ಭಾರಿ ಲಂಚ ಹೊಡೆಯಲಾಗಿದೆ.ದುಬಾರಿ ಬೆಲೆಗೆ ಕೋವಿಡ್ ವೈದ್ಯಕೀಯ ಸಲಕರಣೆ ಖರೀದಿ ಮಾಡಿದ್ದಾರೆ. ಕೋವಿಡ ಹಗರಣದ ಸಾಕ್ಷ್ಯಾಧಾರ ಸಿಕ್ಕಿವೆ ಸುಧಾಕರ್ ಜೈಲಿಗೆ ಹೋಗುತ್ತಾರೆ ಮಾಜಿ ಸಚಿವರಕ್ಕೆ ಸುಧಾಕರ್ ಹೆಸರು ಹೇಳಲು ನನಗೆ ನಾಚಿಕೆ ಆಗುತ್ತದೆ ಯಾವುದೇ ಕಾರಣಕ್ಕೂ ಡಾಕ್ಟರ್ ಕೆ ಸುಧಾಕರಿಗೆ ಮತ ನೀಡಬೇಡಿ ಎಂದರು. ಮಾಜಿ ಸಚಿವ ಡಾಕ್ಟರ್ ಸುಧಾಕರ್ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾಕ್ಟರ್ ಕೆ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟರು ಸಂಸತ್ತಿಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ, ಡಾಕ್ಟರ್ ಕೆ ಸುಧಾಕರ್ ಹಗರಣದ ತನಿಖೆಗೆ ಆಯೋಗ ರಚಿಸಿದ್ದೇವೆ ಎಂದರು. ಮಾಹಿತಿ ಪ್ರಕಾರ ದಾಖಲೆಗಳು ಡಾಕ್ಟರ್ ಸುಧಾಕರ್ ವಿರುದ್ಧವೇ ಇದೆ.ಹಾಗಾಗಿ ಸುಧಾಕರ್ ನೂರಕ್ಕೆ ನೂರರಷ್ಟು ಜೈಲಿಗೆ ಹೋಗುತ್ತಾರೆ.ಸುಧಾಕರ್…

Read More

ಬೆಂಗಳೂರು : ನಿನ್ನೆ ಡಿಕೆ ಸುರೇಶ್ ಆಪ್ತನ ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಐಟಿ ಹಾಗೂ ಇಡಿ ಬಿಜೆಪಿ ಹಾಗೂ ದೇವೇಗೌಡರ ಕೈಗೊಂಬೆಯಾಗಿವೆ ಎಂದು ಆಕ್ರೋಶ ಹೊರಹಾಕಿದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಡಿಕೆ ಸುರೇಶ್ ಹೇಳಿಕೆ ನೀಡಿದ್ದು, ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ನಮ್ಮ ಮೇಲೆ ಐಡಿ ಇಡಿ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಜಾಪುರ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ತೀವ್ರವಾಗಿ ವಾಗ್ದಾಳಿ ನಡೆಸಿದರು. ಐಟಿ ಇಡಿ ಅಧಿಕಾರಿಗಳ ಮುಖಾಂತರ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ.ನಿನ್ನೆ ಐಟಿ ಅಧಿಕಾರಿಗಳು ನಮ್ಮ ಮುಖಂಡರನ್ನು ಟಾರ್ಗೆಟ್ ಮಾಡಿದ್ದರು. ಐಟಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಬೆದರಿಕೆ ಹಾಕುವುದು ಬಿಜೆಪಿ ಪರವಾಗಿ ಕೆಲಸ ಮಾಡುವುದು ಸರಿಯಲ್ಲ. ಬಿಜೆಪಿಗವ್ರು ಮಾಡುವ ತಂತ್ರಗಾರಿಕೆ ಅಕ್ಷಮ್ಯ ಅಪರಾಧ. ಎಂದು ವಾಗ್ದಾಳಿ ನಡೆಸಿದರು. ಐಟಿ ಹಾಗೂ ಇಡಿ ಬಿಜೆಪಿ ಮತ್ತು ಎಚ್ ಡಿ ದೇವೇಗೌಡರ ಕೈಗೊಂಬೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ…

Read More

ರಾಯಚೂರು : ರಾಯಚೂರಿನ ಸಿಂಧನೂರಿನಿಂದ ಮುದಗಲ್ಲಿಗೆ ಮದುವೆಗೆ ಎಂದು ತೆರಳುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಾಪ್ಪಿದ್ದರೆ. ರಾಯಚೂರಿನ ಮಸ್ಕಿಯ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ಸಂಭವಿಸಿದೆ. ಸಿಂಧನೂರು ಮೂಲದ ಸಮೀರ್ (22) ಸಲ್ಮಾ (10) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಸಿಂಧನೂರಿನಿಂದ ಸವಾರರು ಮದುವೆಗೆ ಮುದುಗಲ್ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದ್ದು, ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಾಗಲಕೋಟೆ : ಮದುವೆಗೆ ಎಂದು ಹೊರಟಿದ್ದ ಕ್ರೂಜರ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗಸಾಪಾಟ ಬಳಿ ಈ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ರಸ್ತೆ ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ್ದು, ಭೀಕರವಾದ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ನಾಲ್ವರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಮದುವೆಗೆ ಎಂದು ಹೊರಟಿದ್ದರು ಈ ವೇಳೆ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಜತ್ತ ಬಳಿಯ ನಾಗ ಸಾಪಾಟ ಬಳಿ ಈ ಅಪಘಾತ ಸಂಭವಿಸಿದೆ.ಖಾಸಗಿ ಬಸ್ಗೆ ಕ್ರೂಜರ್ ಡಿಕ್ಕಿಯಾಗಿ ನಾಲ್ವರು ದುರ್ಮರಣ ಹೊಂದಿದ್ದಾರೆ. ವಧುವಿನ ತಂಗಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಬಾಗಲಕೋಟೆ ಜಿಲ್ಲೆಯ ಭಾಗ್ಯಶ್ರೀ ಅಂಬೇಕರ್ (18) ನಿವೇದಿತ (17) ಉಜ್ವಲ ಶಿಂದೆ (19) ಸ್ಥಳದಲ್ಲಿ ಸಾವನಪ್ಪಿದ್ದಾರೆ.ವಿಜಯಪುರ ಜಿಲ್ಲೆಯ ಅನುಸೂಯ ಮೊರೆ (56) ಎನ್ನುವ ಮಹಿಳೆ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Read More

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೆ ಖ್ಯಾತಿ ಹೊಂದಿದ್ದ ನಟ ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದ್ವಾರಕೀಶ್ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಇರೋ ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿತು. ರಾಜ್ಯ ಸರ್ಕಾರದ ಆದೇಶದಂತೆ ದ್ವಾರಕೀಶ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ದ್ವಾರಕೀಶ ಜೊತೆಗೆ ಹಿರಿಯ. ಮಗನಿಂದ ಅಗ್ನಿ ಸ್ಪರ್ಶ ನೆರವೇರಿತು.ಚಾಮರಾಜಪೇಟೆಯಲ್ಲಿ ದ್ವಾರಕೀಶ್ ಅಂತ್ಯಕ್ರಿಯೆ ನಡೆಯೋಕ್ಕೂ ಮುಂಚೆ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಮೊದಲಿಗೆ ಪ್ರೇತತ್ಮ ಸಂಸ್ಕಾರ. ಕಿವಿಯಲ್ಲಿ ನಾರಾಯಣ ಸ್ಮರಣೆ, ಚಿತ ಅಗ್ನಿ ಹೋಮದ ನಂತರ ಚಿತಾ ಶುದ್ದಿ ಕಾರ್ಯ ನಡೆಯಲಿದೆ ಬಳಿಕ ದಹನ ಮಾಡಿ ಅಗ್ನಿ ದಿಗ್ಬಂಧನ ನೆರವೇರಲಿತು. ನಂತರ ಅವರ ಹಿರಿಯ ಮಗ ಅಗ್ನಿ ಸ್ಪರ್ಶ ಮಾಡಿ ನೆರವೇರಿಸಿದರು. ನಿನ್ನೆ ದ್ವಾರಕೀಶ್ ಅವರಿಗೆ ಹೃದಯಾಘಾತ ಆಗಿತ್ತು. ಕಾಫಿ ಕುಡಿದು ಮಲಗಿದ ನಟ ಮತ್ತೆ ಏಳಲೇ ಇಲ್ಲ. ದ್ವಾರಕೀಶ್ ನಿಧನದ ಬಗ್ಗೆ ಅವರ ಮಗ ಗಿರಿ…

Read More

ಚಿಕ್ಕಮಗಳೂರು : ಡಿಕೆಶಿ ಮಹಿಳೆಯನ್ನು ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದು ನಿಜ. ಆ ಘಟನೆ ನಡೆದದ್ದು 1996-97 ರಲ್ಲಿ, ಅದರ ದಾಖಲೆಗಳಿವೆ ಎಂದು ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದೀಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕೂಡ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು,9 ವರ್ಷದ ಬಾಲಕಿ ಕಣ್ಣಿಗೆ ಬಟ್ಟೆ ಕಟ್ಟಿ, ಕೂಡಿ ಹಾಕಿ ಆಸ್ತಿ ಬರೆಸಿಕೊಂಡಿದ್ದಾರೆ.ನನ್ನ ಬಳಿ ಎಲ್ಲಾ ದಾಖಲೆಗಳಿವೆ ಎಂದು ಗಂಭಿರ ಆರೋಪ ಮಾಡಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ದೇವೇಗೌಡರು ಡಿಸೈನ್ ಡಿಕೆ ಶಿವಕುಮಾರ್ ವಿರುದ್ಧ ಈ ರೀತಿ ಗಂಭೀರ ಆರೋಪ ಮಾಡಿದರು. 9 ವರ್ಷದ ಬಾಲಕಿಯನ್ನ ಕರೆದೋಯ್ದು ಆಸ್ತಿ ಬರೆಸಿಕೊಂಡಿದ್ದಾರೆ.ನನ್ನ ಬಳಿ ಎಲ್ಲಾ ದಾಖಲೆಗಳಿವೆ.ಸುಪ್ರೀಂ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಗೆ ಮುಖಭಂಗವಾಗುತ್ತದೆ. ಅಮೇರಿಕಾದಿಂದ ಹಣ ತಂದಿದ್ದ ವ್ಯಕ್ತಿಗೆ ಆಸ್ತಿ ಬರೆಸಿದರು ಎಂದು ಗಂಭಿರ ಆರೋಪ ಮಾಡಿದರು. ಅವರು ಐಟಿ ಕಂಪನಿ ಸ್ಥಾಪನೆ…

Read More

ಬೆಂಗಳೂರು : ಗ್ಯಾರಂಟಿ ಮುಂದುವರೆಯಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿ ಹಣೆಬರಹದಲ್ಲಿ ಗ್ಯಾರಂಟಿ ತೆಗೆಯಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಕೊಪ್ಪಳದ ಬಿಜೆಪಿಯ ಮಾಜಿ ಸಂಸದ ಕರಡಿ ಸಂಗಣ್ಣ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸೋಲಿನ ಭಯದಿಂದಲೇ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕರಡಿ ಸಂಗಣ್ಣ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಕಾರ್ಯಕ್ರಮ ಬಿಜೆಪಿಯನ್ನು ತೊಳೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಗ್ಯಾರಂಟಿಯ ದೊಡ್ಡ ಅಲೆ ಇದೆ ಬಿಜೆಪಿಯಲ್ಲಿ ಸುಮಾರು ನೂರು ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ ಸರ್ವೆಯಲ್ಲಿ ಗೆಲ್ಲಲ್ಲ ಅಂತ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದಾರೆ ಎಂದರು. ಎನ್ಡಿಎ ಪರಿಸ್ಥಿತಿ ಏನು ಅಂತ ಇದರಲ್ಲೇ ಗೊತ್ತಾಗುತ್ತದೆ. ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಅಂತ ಮೋದಿ ಹೇಳುತ್ತಾರೆ ಆದರೆ ಅವರ ಪಕ್ಷಕರು ಸಂವಿಧಾನ ಬದಲಿಸುತ್ತೇವೆ…

Read More

ಮಂಡ್ಯ : ಇತ್ತೀಚಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ವಿ ಸೋಮಣ್ಣ ಅವರ ಪರವಾಗಿ ಪ್ರಚಾರದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಗೆ ಊಟ ಹೊಡೆದಿದ್ದು ನನ್ನ ಹೇಳಿಕೆಯನ್ನು ತಿರುಚಿಲಾಗಿದೆ ಎಂದು ತಿಳಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನ್ನ ವಿರುದ್ಧ ಮಹಿಳೆಯರನ್ನು ಎತ್ತಿ ಕಟ್ಟಲು ಮುಂದಾಗಿದ್ದಾರೆ. ತುಮಕೂರಿನಲ್ಲಿ ನೀಡಿದ್ದ ನನ್ನ ಹೇಳಿಕೆ ತಿರುಚಿದ್ದಾರೆ.ಕೆರೆಗೂಡು ಗ್ರಾಮದಲ್ಲಿ ತಾಯಂದಿರು ಆರತಿ ಬೆಳಗಿ ಕಳುಹಿಸಿದ್ದಾರೆ.ನನಗೆ ದೊಡ್ಡ ಶಕ್ತಿ ತುಂಬುವುದು ಮಂಡ್ಯ ಜಿಲ್ಲಾ ಜನತೆ ನಿನ್ನೆಯಿಂದ ಮಂಡ್ಯ ಕ್ಷೇತ್ರದಲ್ಲಿ ನಾನು ಪ್ರಚಾರವನ್ನು ಆರಂಭಿಸಿದ್ದೇನೆ ಎಂದರು. ನನ್ನ ಸೋಲು ಗೆಲುವು ಡಿಸಿಎಂ ಡಿಕೆ ಶಿವಕುಮಾರ್ ಕೈಯಲ್ಲಿ ಇಲ್ಲ ಎಂದು ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಅವರ ಪಕ್ಷದ ವಿಚಾರ.ಡಿಸಿಎಂ ಡಿಕೆ…

Read More

ಬೆಂಗಳೂರು : ನಿನ್ನೆ ಬೆಳಿಗ್ಗೆ ಕನ್ನಡದ ಹಿರಿಯ ನಟ ನಿರ್ಮಾಪಕ ಹಾಗೂ ನಿರ್ದೇಶಕರಾದಂತಹ ದ್ವಾರಕೀಶ್ ಅವರು ಹೃದಯಘಾತದಿಂದ ತಮ್ಮ ನಿವಾಸದಲ್ಲಿ ಸಾವನಪ್ಪಿದ್ದರು ಇಂದು ಅವರ ಪಾರ್ಥಿವ ಶರೀರವನ್ನು ಗಣ್ಯರಿಗೆ ಹಾಗೂ ಚಿತ್ರ ಕಲಾವಿದರಿಗೆ ಸಾರ್ವಜನಿಕರ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಗಮಿಸಿ ಅವರ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕನ್ನಡ ಚಿತ್ರರಂಗಕ್ಕೆ ನಟ ದ್ವಾರಕೀಶ್ ಅವರ ಸೇವೆ ಬಹಳ ಅಪಾರವಾದದ್ದು,ಕನ್ನಡ ಚಿತ್ರರಂಗದಲ್ಲಿ ನಟ ದ್ವಾರಕೀಶ್ ಅವರದ್ದೇ ಆದಂತ ಛಾಪು ಹೊಂದಿದ್ದರು. ನಟರಾಗಿ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಡಾಕ್ಟರ್ ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಜೊತೆ ಅವರು ನಟನೆ ಮಾಡಿದ್ದಾರೆ. ನಾನು ದ್ವಾರಕೀಶ್ ಹೆಲಿಕ್ಯಾಪ್ಟರ್ ನಲ್ಲಿ ಮೈಸೂರಿಗೆ ಹೋಗಿದ್ದೆವು. ದ್ವಾರಕೀಶ್ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Read More