Subscribe to Updates
Get the latest creative news from FooBar about art, design and business.
Author: kannadanewsnow05
ಹುಬ್ಬಳ್ಳಿ : ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ಗೃಹ ಶಿವಾಜಿ ಪರಮೇಶ್ವರ ಅವರು ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಿದ್ದರು ಈ ವೇಳೆ ನೇಹಾ ಪೋಷಕರು ನಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ನಿರಂಜನ್ ಹಿರೇಮಠ ಮನೆಗೆ ಇಂದು ಗೃಹ ಸಚಿವ ಜಿ ಪರಮೇಶ್ವರ್ ಭೇಟಿ ನೀಡಿದರು. ಈ ವೇಳೆ ನೇಹಾ ಪೋಷಕರು ಪರಮೇಶ್ವರ ಬಳಿ ಅಳಲು ತೋಡಿಕೊಂಡರು. ನೇಹಾ ಕುಟುಂಬದವರು ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ನೇಹಾ ತಾಯಿ ಗೀತಾ ಒತ್ತಾಯ ಮಾಡಿದ್ದಾರೆ. ಇದು ಉದ್ದೇಶಪೂರ್ವಕ ಕೊಲೆ ಎಂದು ನೇಹಾ ತಂದೆ ನಿರಂಜನ್ ಹೇಳಿದ್ದಾರೆ. ಇದು ನನಗೆ ಹಾಗೂ ಪಕ್ಷಕ್ಕೂ ತೀವ್ರ ಮುಜುಗರ ತಂದಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಮತ್ತೊಂದು ಕೊಲೆಯಾಗಿದೆ. ಆರೋಪಿಗೆಗಳು ಶಿಕ್ಷೆ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ವೈಯಕ್ತಿಕವಾಗಿ ನಾನು ನಿಮ್ಮ ಅಭಿಮಾನಿ.ನೀವು ಹೆಣ್ಣು ಮಕ್ಕಳ ಮೇಲೆ…
ಮೈಸೂರು : ಕಲುಷಿತ ನೀರು ಸೇವಿಸಿ ಇಬ್ಬರು ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಪಷ್ಟ ಗೊಂಡಿರುವ ಘಟನೆ ಮೈಸೂರು ತಾಲೂಕಿನ ಕೆ.ಸಾಲುಂಡಿ ಎಂಬ ಗ್ರಾಮದಲ್ಲಿ ನಡೆದಿದೆ. ಕೆ ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅವರು ಅಸ್ವಸ್ಥರಾಗಿದ್ದಾರೆ. ಮೈಸೂರು ತಾಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.ಅಸ್ವಸ್ಥಗೊಂಡ ಇಬ್ಬರು ಮಕ್ಕಳು ಮೂರು ಮಹಿಳೆಯರಿಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ನೀರು ಸೇವಿಸಿ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಹಾಗಾಗಿ ಅಸ್ವಸ್ಥಗೊಂಡ ಐವರಿಗೂ ವಿವಿಧ ಆಸ್ಪತ್ರೆಗಳಲ್ಲಿ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ತಕ್ಷಣ ಗ್ರಾಮಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಜಿಆರ್ ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಮಾಹಿತಿ ಆಧಾರದ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ ಪಾರ್ಟಿ ಪ್ರಕರಣ ಪ್ರಕರಣ ಸಂಬಂಧ ಇವರಿಗೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಕೆ ಎಸ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಪಾರ್ಟಿಗೆ ತಂದಿದ್ದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೆನ್ 6 ಗ್ರಾಂ ಹೈಡೋ ಗಾಂಜಾ, 5 ಮೊಬೈಲ್ ಹಾಗೂ ಎರಡು ವಾಹನಗಳನ್ನು ಮಾಡಿದ್ದಾರೆ. ಸನ್ ಸೆಟ್ ಟು ಸಣ್ಣರೈಸ್ ವಿಕ್ಟರಿ ಎಂದು ಪಾರ್ಟಿ ಆಯೋಜನೆ ಮಾಡಲಾಗಿತ್ತು.ಮಾದಕ ವಸ್ತು ಬಳಕೆ ಮಾಹಿತಿ ತಿಳಿದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಚಾಮರಾಜನಗರ : ಹೆಜ್ಜೆನು ದಾಳಿಯಿಂದ ಪತಿ ಸಾವನ್ನಪ್ಪಿದ್ದು, ಪತ್ನಿಗೆ ಗಂಭೀರವಾದ ಗಾಯವಾಗೀರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೆಳತ್ತೂರು ಗ್ರಾಮದಲ್ಲಿ ಬಾಳೆ ಬೆಳೆಗೆ ಕೀಟನಾಶಕ ಸಿಂಪಡಿಸುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿದೆ. ಘಟನೆಯಲ್ಲಿ ಪತಿ ತುಳಸಿದಾಸ (45) ಸಾವನ್ನಪ್ಪಿದ್ದು ಪತ್ನಿ ಆಶಾ ಗೆ ಗಂಭೀರವಾದ ಗಾಯಗಳಾಗಿವೆ. ಹನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇದೀಗ ಪತ್ನಿ ಆಶಾಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ : ಕೊಪ್ಪಳದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು ಬಸ್ ನಿಲ್ದಾಣದ ಬಳಿ ಇರುವ ಹಾರ್ಡ್ವೇರ್ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಸಂಭವಿಸಿದ್ದು ಅಂಗಡಿಯಲ್ಲಿದ್ದ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು, ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಹೌದು ಕೊಪ್ಪಳದ ಜನನಿಬಿಡ ಬಸ್ ನಿಲ್ದಾಣದ ಎದುರುಗಡೆ ಹಾರ್ಡ್ವೇರ್ ಶಾಪ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಈ ಒಂದು ಅಗ್ನಿ ಅವಘಡದಿಂದ ಪಕ್ಕದಲ್ಲಿರುವ ಒಂದರಿಂದ ಮತ್ತೊಂದು ಅಂಗಡಿಗೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸುಮಾರು ನಾಲ್ಕರಿಂದ ಐದು ಅಂಗಡಿಗಳು ಕೂಡ ಈ ಒಂದು ಅವಘಡದಲ್ಲಿ ಬೆಂಕಿಗೆ ಆಹುತಿಯಾಗುವೆ. ಈ ಘಟನೆಯಲ್ಲಿ ಅಂಗಡಿಯಲ್ಲಿರುವಂತಹ ಅನೇಕ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು ಸದ್ಯ ಜನರು ಭಯಭರಿತರಾಗಿದ್ದಾರೆ. ಘಟನ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಕೊಪ್ಪಳದ ಎಸ್ ಪಿ ಅವರು ಜನರು ಘಟನೆ ಸ್ಥಳಕ್ಕೆ ಜನರು ಹೋಗದಂತೆ ತಡೆದು ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು : ಸಿಡಿ ಶಿವು ಅವರ ಆಡಿಯೋ ಕ್ಲಿಪಿಂಗ್ ಬಂತಲ್ಲ. ಹಾಸನದ ಅಶೀಲ ವಿಡಿಯೋ ಪ್ರಸ್ತಾಪಿಸಿದ್ದೆ ಡಿಕೆ ಶಿವಕುಮಾರ್ ಅವರು ಎಂದು ಎಚ್ ಡಿ ಕುಮಾರಸ್ವಾಮಿ ಡಿ ಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದು, ಯಾರಿಗೂ ನಾನು ಏನು ಕೊಟ್ಟಿಲ್ಲ.ದೇವರಾಜೇಗೌಡ ಜೊತೆ ನಾನು ಅರ್ಧ ನಿಮಿಷ ಕೂಡ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಿಜೆಪಿಯವರು ಅಧಿಕಾರಿಗಳು ನನ್ನ ಪಕ್ಷದವರು ಸಾರ್ವಜನಿಕರು ಕಾರ್ಯಕರ್ತರು ಎಲ್ಲರೂ ಬರುತ್ತಾರೆ ಬಂದು ಏನೇನೋ ಮಾಹಿತಿಯನ್ನು ಕೊಡುತ್ತಾರೆ. ಭೇಟಿ ಮಾಡಬೇಕು ಅಂತಾರೆ ಟೈಮ್ ಕೊಟ್ಟಿಲ್ಲ. ದೇವರಾಜೇಗೌಡ ಜೊತೆ ಅರ್ಧ ನಿಮಿಷವು ನಾನು ಮಾತನಾಡಿಲ್ಲ ನನಗೂ ರಾಜಕೀಯ ಹಾಗೂ ವ್ಯವಹಾರದ ಪ್ರಜ್ಞೆ ಇದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ.ಎಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು ನನ್ನ ಹೆಸರು ಹೇಳಿಲ್ಲ ಅಂದ್ರೆ ನನ್ನ ಹೆಸರು ಪ್ರಸ್ತಾಪ ಮಾಡಿಲ್ಲ ಅಂದ್ರೆ…
ಬೆಂಗಳೂರು : ಸದ್ಯ ಯಾವುದೇ ರೀತಿಯಾದಂತಹ ಸಂಪುಟ ಪುನಾರಚನೆ ಮಾಡುವ ಪ್ರಸ್ತಾಪ ಇಲ್ಲ.ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ನಾವು ಲೋಕಸಭೆ ಚುನಾವಣೆಯಲ್ಲಿ 15ರಿಂದ 20 ಸೀಟ್ಗಳನ್ನು ಗೆದ್ದೇ ಗೆಲ್ಲುತ್ತೇವೆ ಯಡಿಯೂರಪ್ಪ ಅವರ ತರಹ 28ಕ್ಕೆ 28 ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ ಎಂದು ತಿಳಿಸಿದರು. ಅದೇ ರೀತಿಯಾಗಿ ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು. ಇನ್ನು ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ದೇವರಾಜೇಗೌಡ ಪ್ರಜ್ವಲ್ ವಿರುದ್ಧ ಯಾಕೆ ದೂರು ಕೊಟ್ಟ? ಅದಾದ ಮೇಲೆ ಜೆಡಿಎಸ್ ಪ್ರಜ್ವಲ್ ವಿರುದ್ಧ ಯಾಕೆ ಕ್ರಮ ಕೈಗೊಂಡರು? ಅಲ್ಲದೆ ಚುನಾವಣೆಗೂ ಮುನ್ನ ದೇವೇಗೌಡ ಬಿಜೆಪಿ ನಾಯಕರಿಗೆ ಪ್ರಜ್ವಲ್ ಗೆ ಟಿಕೆಟ್ ಕೊಡಬೇಡಿ…
ಬೆಂಗಳೂರು : ನನ್ನ ಫೋನ್ ಹಾಗೂ ನನ್ನ ಜೊತೆಗೆ ಇರುವಂತಹ 45 ಜನರ ಫೋನ್ ಗಳನ್ನು ಸರ್ಕಾರ ಟ್ಯಾಪ್ (ಫೋನ್ ಕದ್ದಾಲಿಕೆ) ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರಕಾರದ ವಿರುದ್ಧ ಗಂಭೀರವಾದಂತಹ ಆರೋಪ ಮಾಡಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಮುಗಿಸಲು ಈ ರೀತಿ ಷಡ್ಯಂತರ ಮಾಡುತ್ತಿದ್ದಾರೆ. ನಾನು ಅಕ್ರಮದ ಬಗ್ಗೆ ಮಾತನಾಡುತ್ತೇನೆ ಎಂದು ನನ್ನ ಮೇಲೆ ನಡೆಯುತ್ತಿದೆ. ಹಾಗಾಗಿ ನಾನು ಹಾಗೂ ನನ್ನ ಜೊತೆ ಇದ್ದವರ ಸುಮಾರು 45 ಜನರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು. ಈ ಒಂದು ಪ್ರಕರಣದಿಂದ ನೊಂದು ನಮ್ಮ ತಂದೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋಕೆ ಹೊರಟಿದ್ದರು. ನಾನು ನಮ್ಮ ತಂದೆಗೆಯವರಿಗೆ ಹೇಳಿದೆ ನೀವ್ಯಾಕೆ ಯಾರೋ ಮಾಡಿದ ತಪ್ಪಿಗೆ ರಾಜೀನಾಮೆ ಕೊಡುತ್ತೀರಿ? ರಾಜ್ಯದ ನೀರಾವರಿ ಸಮಸ್ಯೆಗೆ ನೀವು ರಾಜೀನಾಮೆ ಕೊಡಬಾರದು ಅಧಿಕಾರದಲ್ಲಿ ಇರಬೇಕು ಎಂದು ಹೇಳಿದ್ದೇನೆ ಎಂದು…
ಬೆಂಗಳೂರು : ಹೊಳೆನರಸೀಪುರದ ಮಹಿಳೆಯ ಮೇಲೆ ಲೈಂಗಿಕ ದೌರ್ಜಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಬೆಂಗಳೂರಿನ 42ನೇ ACMM ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹೌದು ಹೊಳೆನರಸೀಪುರ ನರಸೀಪುರದ ತಮ್ಮ ನಿವಾಸದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ 42ನೇ ACMM ನ್ಯಾಯಾಲಯದಲ್ಲಿ ನಡೆದ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಜಡ್ಜ್ ಜೆ.ಪ್ರೀತ್ ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು ನೀಡಿ ತೀರ್ಪು ಹೊರಡಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಮಾರಿ ಸಚಿವ ಹೆಚ್ಡಿ ರೇವಣ್ಣ ಅವರ ಜಾಮಿನ ಅರ್ಜಿ ವಿಚಾರಣೆಯನ್ನು ಕಳೆದೆರಡು ದಿನಗಳಿಂದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ಇದೀಗ ಬೆಂಗಳೂರಿನ 42ನೇ ಎಸಿಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿಸಿ HD ರೇವಣ್ಣಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಶಾಸಕ ಎಚ್ ಡಿ ರೇವಣ್ಣ ಪರವಾಗಿ ಹಿರಿಯ ವಕೀಲರಾದ ಸಿ ವಿ ನಾಗೇಶ್…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಒಂದು ಕೆಸ್ ನಲ್ಲಿ ನನ್ನ ಹಾಗೂ ಹೆಚ್ಡಿ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ಅಸಹ್ಯ ಪಡುವ ಪ್ರಕರಣವಾಗಿದೆ. ಇದು ಇದು ಎಲ್ಲರೂ ತಲೆತಗ್ಗಿಸುವಂತಹ ಪ್ರಕರಣ. ಈ ಕೇಸ್ ನಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರದಲ್ಲಿ ವರ್ಗಾವಣೆ ದಂಧೆ ಕುರಿತು ಕೇಳಲೇಬೇಡಿ. ಸಿ ಎಸ್ ಆರ್ ಫಂಡ್ ವರ್ಗಾವಣೆಗೆ ಸಿಂಬಲ್ ಆಗಿ ಇಟ್ಕೊಂಡ್ರು.ಈ ಸರ್ಕಾರ ಮಾಡಿದ್ದು ಬರೀ ಈ ರೀತಿಯ ಸಾಧನೆಗಳು.ಕಳೆದ ಬಾರಿಯೂ ನಗರ ಪ್ರದಕ್ಷಿಣೆ ಮಾಡಿದ್ರಿ, ಏನಾಯಿತು? ನಗರ ಪ್ರದಕ್ಷಿಣೆ ಮಾಡಿ ಏನು ಪರಿಹಾರ ನೀಡಿದೆ? ಡಿಸಿಎಂ ಡಿಕೆ ಬೆಂಗಳೂರು ಸಿಟಿ ರೌಂಡ್ಸ್ ಗೆ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು. ನಾಲ್ಕು…













