Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಿ ದೇಶದಲ್ಲಿ ಮುಂಚೂಣಿಯ ನಗರದಲ್ಲಿ ಬೆಂಗಳೂರು ವಿಶೇಷ ಸ್ಥಾನ ಹೊಂದಿದೆ., ಅದರ ಜೊತೆಗೆ ಡ್ರಗ್ಸ್ ಸಾಗಾಣಿ ಹಾಗೂ ಡ್ರಗ್ಸ್ ಸೇವನೆ ಕೂಡ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದ್ದಿದ್ದು ತೀರಾ ಕಳವಳಕಾರಿ ಅಂಶವಾಗಿದೆ. ಬೆಂಗಳೂರಲ್ಲಿ ಇದೀಗ ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದೆ. ಇದನ್ನು ಶಮನಗೊಳಿಸಲು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದಾರೆ. ಇಷ್ಟು ದಿನಗಳ ಕಾಲ ಡ್ರಗ್ ಪೆಡ್ಲರ್ಗಳು ವಿದೇಶದಿಂದ ಮಾದಕ ವಸ್ತು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಡ್ರಗ್ಸ್ ಭಾರತೀಯ ಅಂಚೆ ಮೂಲಕವೇ ನಗರಕ್ಕೆ ಬರುತ್ತಿದೆ. ಹೌದು ಹೊರ ರಾಜ್ಯಗಳಿಂದ ಅಂಚೆ ಮೂಲಕ ಮೂಲಕ ನಗರಕ್ಕೆ ಮಾದಕವಸ್ತು ಆಮದಾಗಿದ್ದು, ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಡ್ರಗ್ಸ್ ಬಂದ ಪಾರ್ಸಲ್ ಅನ್ನು ವಶಪಡಿಸಿಕೊಂಡಿದ್ದಾರೆ.ಅಂಚೆ ಮೂಲಕ ಡ್ರಗ್ಸ್ ಬಂದ ವಿಚಾರವನ್ನು ತಿಳಿದ ಸಿಸಿಬಿ ಪೊಲೀಸರು ಕೂಡಲೆ ಫಿಲ್ಡ್ಗೆ ಇಳಿದಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ…
ಬೆಂಗಳೂರು : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶಾಸಕ ಲಕ್ಷ್ಮಣ ಸವದಿ ಪಕ್ಷ ಬಿಡದಂತೆ ಕೈನಾಯಕರು ಇದೀಗ ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕ ಲಕ್ಷ್ಮಣ ಸವದಿ ಜೊತೆ ಸಿಎಂ ಹಾಗೂ ಡಿಸಿಎಂ ನಿರಂತರ ಸಂಪರ್ಕ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಪಕ್ಷ ಬಿಡಬೇಡಿ ಎಂದು ಸೌದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಎಲ್ಲಾ ಬೆಳವಣಿಗೆಗಳ ನಡುವೆ ಸವದಿಗೆ ಕರೆ ಮಾಡಿ ಸುರ್ಜೆವಲ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದ್ದು ಸೂಕ್ತ ಸ್ಥಾನಮಾನ ನೀಡುವುದಾಗಿ ಲಕ್ಷ್ಮಣ ಸವದಿಗೆ ಸುರ್ಜೆವಾಲ ಭರವಸೆ ನೀಡಿದ್ದಾರೆ. ಮುಂದಿನ ವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರಜೆವಾಲ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆ ವೇಳೆ ಕೆಲ ಬೇಡಿಕೆ ಇಡಲು ಸವದಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದಿದ್ದು ಕೈ ನಾಯಕರು ಇದೀಗ ಬಹಳ ಎಚ್ಚರಿಕೆ…
ಕಲಬುರ್ಗಿ : ಕಲಬುರ್ಗಿಯಲ್ಲಿ MBBS ಮಾಡಿಲ್ಲ ಅಂದ್ರೂ ಕ್ಲಿನಿಕ್ ಇಟ್ಕೊಂಡು ಚಿಕಿತ್ಸೆ ನೀಡಿ ಅಮಾಯಕರ ಜೀವನದ ಜೊತೆ ಆಟ ಆಡಲಾಗುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸದ್ಯ ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿದ್ದು 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಮಹಾಮಾರಿ ಕೊರೊನಾ ಬಂದು ಹೋದದ್ದೇ ತಡ ಹಣ ಮಾಡಲು ಕಳ್ಳದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಈಗ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ.ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. KPME ಅನುಮತಿ ಪಡೆಯದೆ ರಾಜಾರೋಷವಾಗಿ ಜನರಿಗೆ ಚಿಕಿತ್ಸೆ ನೀಡಿ ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಈ…
ಹಂಪಿ: ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ – ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣುತೆ ನಮಗೆ, ನಿಮಗೆ ಮಾದರಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಐತಿಹಾಸಿಕ ಹಂಪಿ ಉತ್ಸವವನ್ನು ವೈಭವದ ಕಲಾತ್ಮಕ ವೇದಿಕೆಯಲ್ಲಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಧೀಮಂತ ನಾಯಕರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು. ಬಸವಾದಿ ಶರಣರ ಆಶಯ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಎಚ್ಚರಿಸಿದರು. ನಮ್ಮ…
ತುಮಕೂರು : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರಿನಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದ ನಿವಾಸಿಗಳೆಂದು ಹೇಳಲಾಗುತ್ತಿದು, ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ತಾಯಿ ಮಕ್ಕಳು ಇದೀಗ ಪತ್ತೆಯಾಗಿದ್ದಾರೆ. ಮಾನಸಿಕ ಗೊಂದಲಗಳಿಂದ ಮಕ್ಕಳನ್ನು ತಾಯಿ ಕರೆದುಕೊಂಡು ಹೋಗಿದ್ದಳು ಎಂಬ ಮಾಹಿತಿ ಇದೆ. ಅತ್ತೆ ನೀಡಿದ ದೂರಿನ ಮೇರೆಗೆ ಕುಣಿಗಲ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಖಚಿತ ಮಾಹಿತಿಯ ಮೇರೆಗೆ ಶ್ರೀನಿವಾಸ ಪುರದಲ್ಲಿ ಪೊಲೀಸರು ಇದೀಗ ತಾಯಿ ಹಾಗೂ ಮೂರು ಮಕ್ಕಳನ್ನು ಪತ್ತೆಹಚ್ಚಿದ್ದಾರೆ.ತಾಯಿ ಮಕ್ಕಳನ್ನು ಕುಣಿಗಲ್ ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರಿನ ಮೂರು ಮಕ್ಕಳಾದ ತನುಶ್ರೀ (8) ಭೂಮಿಕ (6) ಯೋಗಿತಾ (4) ಜೊತೆ ವಸಂತ ಕುಮಾರಿ (25) ಎನ್ನುವ ತಾಯಿ ನಾಪತ್ತೆಯಾಗಿದ್ದಾಳೆ. ಜನವರಿ 16ರಂದು ತಾಯಿ ಹಾಗೂ ಮೂವರು ಮಕ್ಕಳು ನಾಪತ್ತೆಯಾಗಿದ್ದರು .ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು : ನಡು ರಸ್ತೆಯಲ್ಲಿ ವ್ಯಕ್ತಿಯನ್ನು ಭೀಕರವಾಗಿ ಕೊಂದು ಆರೋಪಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಟಿಪ್ಪು ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಜಬೀರ್ ಪಾಷಾ (26) ಎನ್ನುವ ವ್ಯಕ್ತಿಯನ್ನು ಮುಕ್ತಿಯರ್ ಪಾಷಾ ಎನ್ನುವ ವ್ಯಕ್ತಿ ಕೊಲೆ ಮಾಡಿದ್ದಾನ. ಕೊಲೆ ಮಾಡಿದ ನಂತರ ಚಿಂತಾಮಣಿ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು : ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮ್ಯಾನೇಜರ್ ಗೆ ವಂಚಕನೊಬ್ಬ 6.5 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ಇದೀಗ ತಡವಾಗಿ ಬಳಕೆಗೆ ಬಂದಿದೆ.ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುತ್ತೇನೆ ಎಂದು ಹೇಳಿ ಆರೋಪಿ 6.5 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ನಡೆದ ವಂಚನೆ ಪ್ರಕರಣ ಇದೀಗ ತಡವಾಗಿ ಬಳಕೆಗೆ ಬಂದಿದೆ.ಎಂ ಎಸ್ ಧೋನಿ ಮ್ಯಾನೇಜರ್ ಸ್ವಾಮಿನಾಥನ್ ಎಂಬುವವರಿಗೆ ಆರೂವರೆ ಲಕ್ಷ ರೂಪಾಯಿ ವಂಚನೆ ಎಸೆಗಿದ್ದಾನೆ. ಕೇಂದ್ರ ಹಣಕಾಸು ಸಚಿವ ನಿರ್ಮಲ ಸೀತಾರಾಮನ್ ಪಿಎ ಅಂತ ಹೇಳಿ ಆರೋಪಿ ವಂಚನೆ ಎಸೆಗಿದ್ದಾನೆ ಎಂದು ತಿಳಿದುಬಂದಿದೆ. ನಾನು ಐಎಎಸ್ ಅಧಿಕಾರಿ ಎಂದು ವಂಚಕ ಸ್ವಾಮಿನಾಥನಿಗೆ ನಂಬಿಸಿದ್ದ ಎನ್ನಲಾಗುತ್ತಿದ್ದು, 12 ಜನರಿಗೆ ವಿಶೇಷ ದರ್ಶನ ಹಾಗೂ ಇರುತ್ತದೆ ಎಂದು ಕೂಡ ಹೇಳಿದ್ದ ಎನ್ನಲಾಗುತ್ತಿದೆ. ನಂತರ ಅಕ್ಟೋಬರ್ 29 ರಂದು ಸಂದೀಪ್ ಹಾಗೂ ಆತನ ಸ್ನೇಹಿತ ಸಲ್ಮಾನ್ ಬೆಂಗಾಲ್ ಹೋಟೆಲ್ನಲ್ಲಿ…
ರಾಯಚೂರು : ಕಳೆದ ತಿಂಗಳು ಜನವರಿ 30ರಂದು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಕ್ಕೆ ಸಿರವಾರ ಠಾಣೆಯ ಇಬ್ಬರು ಕಾನ್ಸಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ,ಕುಡಿದ ಮತ್ತಲ್ಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿದ್ದ ಟಿಪ್ಪು ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದ ಆರೋಪಿ ಆಕಾಶ್ನನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದರು.ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಮಾಡಿದ್ದರು. ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಆದೇಶ ಹೊರಡಿಸಿದ್ದಾರೆ. ರೇವಣಸಿದ್ದಪ್ಪ, ಇಸ್ಮಾಯಿಲ್ ಅಮಾನತಾಗಿರುವ ಪೇದೆಗಳು. ಆರೋಪಿ ಆಕಾಶ್ ಬಂಧನದ ಬೆನ್ನಲ್ಲೇ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಗುತ್ತಿದೆ.
ಮಂಗಳೂರು: ಎರಡು ತಿಂಗಳಿಂದ ರಿಬ್ಬ್ಡ್ ಸ್ಮೋಕ್ಡ್ ಶೀಟ್ ದರ್ಜೆಯ ರಬ್ಬರ್ ಧಾರಣೆ ಏರುತ್ತಿದೆ.ಒಂದು ಕೆ.ಜಿಗೆ ರೂ 147ರಿಂದ ರೂ 148ರ ಆಸುಪಾಸಿನಲ್ಲಿದ್ದ ಬೆಲೆಯು ಒಂದು ವಾರದಿಂದ ರೂ 161ಕ್ಕೆ ತಲುಪಿದ್ದು ರಾಜ್ಯದ ಬೆಳೆಗಾರರಲ್ಲಿ ಖುಷಿ ಮೂಡಿಸಿದೆ. ಇದರ ನಡುವೆಯೇ ಎಷ್ಟು ದಿನಗಳವರೆಗೆ ಈ ಬೆಲೆ ಇರಲಿದೆ ಎಂಬ ಪ್ರಶ್ನೆಯೂ ಕಾಡತೊಡಗಿದೆ. ಬೆಳೆಗಾರರ ಪ್ರಕಾರ ದಶಕದ ಹಿಂದೆ ರಾಜ್ಯದಲ್ಲಿ ರಬ್ಬರ್ ಧಾರಣೆಯು ಕೆ.ಜಿಗೆ ರೂ 240 ಆಗಿತ್ತು. ನಂತರ ಬೆಲೆ ಕುಸಿಯುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ₹200ರ ಆಸುಪಾಸು ತಲುಪಿದ್ದೇ ಇಲ್ಲ. ಆದ್ದರಿಂದ ಈಗಿನ ದಾರಣೆ ಸಮಾಧಾನಕರ ಎನಿಸಿದರೂ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ ಎಂಬುದು ಅವರ ಅಭಿಪ್ರಾಯ. ಹೀಗಾಗಿ, ಕೇರಳದಂತೆ ಕರ್ನಾಟಕದಲ್ಲೂ ಬೆಂಬಲ ಬೆಲೆ ನೀಡಬೇಕೆಂಬುದು ಬೆಳೆಗಾರರ ಒತ್ತಾಯವಾಗಿದೆ.ರಬ್ಬರ್ನಲ್ಲಿ ಅತ್ಯುತ್ತಮ ಗುಣಮಟ್ಟದ್ದು ಆರ್ಎಕ್ಸ್ ದರ್ಜೆ. ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಆರ್ಎಸ್ಎಸ್–4. ರಬ್ಬರ್ ಮಂಡಳಿಯ 2016ರ ಅಂದಾಜಿನ ಪ್ರಕಾರ ಇದರ ಉತ್ಪಾದನಾ ವೆಚ್ಚ ಕೆ.ಜಿಗೆ ರೂ 178. ಆದರೆ, ಈಗ…
ರಾಮನಗರ : ನಗರದ ತಾಲೂಕು ಕಚೇರಿಯಲ್ಲಿನ ಚುನಾವಣಾ ಶಾಖೆ ಕಚೇರಿಯಲ್ಲಿ ಶುಕ್ರವಾರ ಫ್ಯಾನ್ಗೆ ನೇಣು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಧಿಕಾರಿ ಕಿರುಕುಳಕ್ಕೆ ಮನನೊಂದು ಈ ಕೃತ್ಯ ಮಾಡಿಕೊಂಡಿರುವುದಾಗಿ ಬರೆದ ಡೆತ್ನೋಟ್ ಪೊಲೀಸರಿಗೆ ದೊರೆತಿದೆ. ಚನ್ನಪಟ್ಟಣ ತಾಲೂಕಿನ ತವಕನಹಳ್ಳಿಯ ಸುರೇಶ್ (50) ಮೃತ. ಒಂದು ವಾರದಿಂದ ಶಿರಸ್ತೇದಾರ್ ಪೂರ್ಣಿಮಾ ಅವರೊಂದಿಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟದಿಂದ ಬೇಸತ್ತ ಸುರೇಶ್, ಬೆಳಗ್ಗೆ 10.30ಕ್ಕೆ ಕಚೇರಿ ಬಾಗಿಲು ಹಾಕಿಕೊಂಡು ಫ್ಯಾನ್ಗೆ ವಯರ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಸಂಜೆ 4:30 ಆದರೂ ಬಾಗಿಲು ತೆರೆಯದ ಹಿನ್ನೆಲೆ ತಹಸೀಲ್ದಾರ್ ಮತ್ತು ಇತರ ಅಧಿಕಾರಿಗಳು ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಪಕ್ಕದಲ್ಲಿಯೇ ಎರಡೂವರೆ ಪುಟದ ಡೆತ್ನೋಟ್ ಬರೆದಿಟ್ಟು ಅದರಲ್ಲಿ ಶಿರಸ್ತೇದಾರ್ ಪೂರ್ಣಿಮಾ ಅವರ ಕಿರುಕುಳ, ಮಾನಸಿಕ ಒತ್ತಡ ಹಾಗೂ ಅವಮಾನಗಳಿಂದ ಕೆಲಸ ನಿರ್ವಹಿಸಲು ಆಗುತ್ತಿಲ್ಲ ಎಂದು ಬರೆದಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳ ಭೇಟಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್…