Author: kannadanewsnow05

ಬೆಂಗಳೂರು : ಮೊಬೈಲ್ ನಿಂದ ಐದು ವರ್ಷದ ಮಗುವಿನಿಂದ ಯಡಿಯೂರು ಪ್ರತಿಯೊಬ್ಬರೂ ಹಾಳಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಇದೀಗ ಬೆಂಗಳೂರಿನಲ್ಲಿ ಬೆಚ್ಚಿಬಿಳಿಸುವ ಘಟನೆ ನಡೆದಿದ್ದು ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಅಣ್ಣ ತಂಗಿ ಪರಸ್ಪರ ಲೈಂಗಿಕ ಕ್ರಿಯೆ ನಡೆಸಿದ ಪರಿಣಾಮ ತಂಗಿ ಮೂರು ತಿಂಗಳ ಗರ್ಭಿಣಿ ಆಗಿರುವ ಘಟನೆ ಬೆಂಗಳೂರಿನ ಬಾಗಲಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, 14 ವರ್ಷದ ಅವಳಿ ಜವಳಿ ಮಕ್ಕಳಾಗಿದ್ದ ಅಣ್ಣ ಹಾಗೂ ತಂಗಿ. ಮನೆಯಲ್ಲಿ ಪೋಷಕರು ಇಲ್ಲದಿದ್ದಾಗ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಅಪ್ರಾಪ್ತ ವಯಸ್ಸಿನ ಅಣ್ಣ ತಂಗಿ ಲೈಂಗಿಕ ಸಂಪರ್ಕ ನಡೆಸಿದ್ದಾರೆ.ಬಳಿಕ ಅಪ್ರಾಪ್ತ ಬಾಲಕಿ ಹೊಟ್ಟೆ ನೋವೆಂದು ಎಂದಾಗ ತಕ್ಷಣ ಆಕೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷೆ ನಡೆಸಿದಾಗ ಮೂರು ತಿಂಗಳು ಗರ್ಭಿಣಿಯಾಗಿದ್ದು ದೃಢಪಟ್ಟಿದೆ. ತಕ್ಷಣ ಖಾಸಗಿ ಆಸ್ಪತ್ರೆಯ ವೈದರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.ನಂತರ…

Read More

ಬೆಂಗಳೂರು : ದೇಶ, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಹಜ್ ಯಾತ್ರಿಗಳು ದೇವರಲ್ಲಿ ಪ್ರಾರ್ಥಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಜ್ ಗೆ ಪ್ರಯಾಣ ಬೆಳೆಸಿದ ಯಾತ್ರಾರ್ಥಿಗಳಿಗೆ ತಿಳಿಸಿದರು. ಬೆಂಗಳೂರಿನ ಹೆಗಡೆನಗರದ ಹಜ್ ಭವನದಲ್ಲಿ ಹಜ್ ಯಾತ್ರಾರ್ಥಿಗಳಿಗೆ ಶುಭ ಕೋರಿ ಬಾವುಟ ತೋರಿಸುವ ಮೂಲಕ ಬೀಳ್ಕೊಟ್ಟರು. ಈ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಝೀರ್ ಅಹ್ಮದ್ ಭಾಗಿಯಾಗಿದ್ದರು. ಯಾತ್ರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ. ಈ ವರ್ಷ 10,608 ಜನರು ಜಾತ್ರೆ ಕೈಗೊಳ್ಳುತ್ತಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ನೆಲೆಸಲೆಂದು ಹಜ್ ಯಾತ್ರಿಗಳು ದೇವರಲ್ಲಿ ಈ ರೀತಿ ಪ್ರಾರ್ಥನೆ ಮಾಡಬೇಕು. ದೇಶ ಮತ್ತು ರಾಜ್ಯದಲ್ಲಿ ಮಳೆ ಆಗಿ ಉತ್ತಮ ಬೆಳೆ ಬಂದು ಸಮೃದ್ಧಿ ನೆಲೆಸಲಿ ಎಂದು ಯಾತ್ರಿಗಳು ದೇವರಲ್ಲಿ ಕೇಳಲಿ ಎಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದರು. ನಂತರ ಬಾವುಟ ತೋರಿಸುವುದರ…

Read More

ಹುಬ್ಬಳ್ಳಿ : ಗ್ಯಾರಂಟಿ ಜಾರಿ ಬಳಿಕ ಸಚಿವರು ಶಾಸಕರಿಗೆ ಉತ್ಪನ್ನ ಕಡಿಮೆಯಾಗಿದೆ. ಪೊಲೀಸ್ ಅಧಿಕಾರಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡುತ್ತಾರೆ. ಇದರಿಂದ ಗಾಂಜಾ ಅಫೀಮು ಅವ್ಯಾಹತವಾಗಿ ಮಾರಾಟವಾಗುತ್ತಿವೆ. ಎಂದು ಶಾಸಕ ಬಸನಗೌಡ ಪಾಟೀಲ ಗಂಭೀರವಾದ ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸರ್ಕಾರವಿದ್ದಾಗ ಎನ್ಕೌಂಟರ್ ಆಗಿದ್ರೆ ಈ ರೀತಿ ಕೃತ್ಯ ಆಗುತ್ತಿರಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೇ ಶಾಸಕ ಯತ್ನಾಳ್ ಇದೀಗ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಮಾಡಿದ ತಪ್ಪಿನಿಂದಾಗಿ ಜನರು ಬುದ್ಧಿ ಕಲಿಸಿದ್ದಾರೆ. ಬಿಜೆಪಿಗೂ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಕೆಜಿ ಹಳ್ಳಿ ಗಲಬೆ ನಡೆದಾಗ ನಿರ್ಧಾರ ಕೈಗೊಂಡಿದ್ದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತಿರಲಿಲ್ಲ ಎಂದು ಅವರು ಸ್ವಪಕ್ಷದ ವಿರುದ್ಧವೆ ಅಸಮಾಧಾನ ಹೊರ ಹಾಕಿದ್ದಾರೆ.

Read More

ಬೆಂಗಳೂರು : ಬಿಗ್​ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಬಿಗ್​ಬಾಸ್ ಮನೆಯಿಂದ ಹೊರಬಂದ ಮೇಲೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಪ್ರತಾಪ್ ತಮ್ಮ ಹುಟ್ಟುಹಬ್ಬದಂದು ಒಳ್ಳೆಯ ಕಾರ್ಯ ಮಾಡಲು ಮುಂದಾಗಿದ್ದಾರೆ. ಹೌದು ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ಡ್ರೋನ್ ಪ್ರತಾಪ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇದೀಗ ಜೂನ್ 11ರಂದು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಈ ಒಂದು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.ಡ್ರೋನ್ ಪ್ರತಾಪ್, ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದು, ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಡಾ ರಾಜ್​ಕುಮಾರ್ ಅವರು ನೇತ್ರದಾನ ಮಹಾದಾನ ಎಂದಿದ್ದಾರೆ. ಜುಲೈ 11 ಕ್ಕೆ ನನ್ನ ಹುಟ್ಟುಹಬ್ಬವಿದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳಬೇಕು ಎಂದು ನಾನು ನಿರ್ಧರಿಸಿದ್ದೇನೆ. ಯಾರಾದರೂ ಐದು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೀನಿ. ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ…

Read More

ಹುಬ್ಬಳ್ಳಿ : ರಾಜ್ಯದಲ್ಲಿ ನಡೆದಿರುವ ಅರಾಜಕತೆ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ. ನಮಗೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬಗ್ಗೆ ಯಾವುದೇ ಭಯವಿಲ್ಲ. ಸರ್ಕಾರದ ವೈಫಲ್ಯದ ಬಗ್ಗೆ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಅಂಜಲಿ ನಿವಾಸಕ್ಕೆ ಭೇಟಿ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜಾ ರೋಷವಾಗಿ ಡ್ರಗ್ಸ್ ಮಾರಾಟದಿಂದ ಕೊಲೆಗಳು ನಡೆಯುತ್ತಿವೆ.ಗೃಹ ಮಂತ್ರಿಗಳು ಗುರು-ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದರು. ತರಾತುರಿಯಲ್ಲಿ ಹುಬ್ಬಳ್ಳಿಗೆ ಬಂದು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ತಮ್ಮ ವೈಫಲ್ಯ ಮರೆ ಮಾಚುವ ಉದ್ದೇಶದಿಂದ ಅಮಾನತು ಮಾಡುತ್ತಿದ್ದಾರೆ. ಸರ್ಕಾರದ ವೈಫಲ್ಯ ಪೊಲೀಸ ಅಧಿಕಾರಿಗಳ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಒತ್ತಡದಿಂದಾಗಿ ಮುಕ್ತವಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಗಾಂಜಾ ಅಫೀಮು ಮಾರಾಟ ಮಾಡಲಾಗುತ್ತಿದೆ.ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಅನ್ನೋದು ಡೈಲಾಗ್ ಆಗಿಬಿಟ್ಟಿದೆ ಎಂದರು. ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಗೃಹ ಸಚಿವರು ರಾಜೀನಾಮೆ…

Read More

ಹಾಸನ: ಲೈಂಗಿಕ ದೌರ್ಜನ್ಯ, ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು, ಬೇಲ್ ನಲ್ಲೇ ಅಲೆದಾಡಿ, ಜಾಮೀನು ಪಡೆದ ಬಳಿಕ 20 ದಿನಗಳ ನಂತರ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಇಂದು ಹಾಸನದಕ್ಕೆ ಭೇಟಿ ನೀಡಿದರು. ಆದರೆ ಈ ವೇಳೆ ಸ್ವಕ್ಷೇತ್ರ ಹೊಳೆನರಸೀಪುರಕ್ಕೆ ಭೇಟಿ ನೀಡುವ ಬದಲು ದಿಢೀರ್ ಆಗಿ ಮೈಸೂರಿನತ್ತ ಪಯಣ ಬೆಳೆಸಿದ್ದಾರೆ. ಹೌದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಮಹಿಳೆ ಅಪಹರಣ ಕೇಸಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಬಳಿಕ ಟೆಂಪಲ್ ರನ್ ಕೂಡ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಡೆಸಿದ್ದರು. ಇಂದು 20 ದಿನಗಳ ಬಳಿಕ ಅವರು ಹಾಸನ ಜಿಲ್ಲೆಗೆ ಎಂಟ್ರಿಕೊಟ್ಟಿದ್ದಾರೆ. ಹಾಸನದ ಹೊಳೆನರಸೀಪುರಕ್ಕೆ ಬರೋ ದಾರಿಯುದ್ಧಕ್ಕೂ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಕಿರಿಸಾವೆಯಲ್ಲಿ ಕಾರ್ಯಕರ್ತರ ಸ್ವಾಗತಕ್ಕೆ ಹೆಚ್.ಡಿ ರೇವಣ್ಣ ಭಾವುಕರಾದರು. ಜೊತೆಗೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕಾರಿನಿಂದ ಕೆಳಗೆ ಇಳಿದು, ನಮಸ್ಕರಿಸಿ ತೆರಳಿದ್ದಾರೆ ತಿಳಿದು ಬಂದಿದೆ. ಈ…

Read More

ಬೆಂಗಳೂರು : ವಿಧಾನ ಪರಿಷತ್ತಿನ ಚುನಾವಣೆ ಕುರಿತಂತೆ ಬಿಜೆಪಿ ಇಂದು ಸಭೆ ನಡೆಸಿದ್ದು, ಸಭೆಯ ಬಳಿಕ ಸುದ್ದಿಕಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಟಿಕೆಟ್ ಕೊಟ್ಟರೆ ತಪ್ಪಿಲ್ಲ ಎಂದು ತಿಳಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಚುನಾವಣಾ ತಯಾರಿ ಬಗ್ಗೆ ಸಭೆ ನಡೆಸಿದ್ದೇವೆ. ಎರಡು ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಲು ಸೂಚನೆ ನೀಡಲಾಗಿದೆ. ಪರಿಷತ್ತಿನ 11 ಸ್ಥಾನಗಳಲ್ಲಿ ಸೋತವರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚಿಸಿಲ್ಲ. ಈಗಲೇ ಸೋತವರಿಗೆ ಟಿಕೆಟ್ ಕೊಡಬೇಕು ಅಂತ ಚರ್ಚೆ ಆಗಿಲ್ಲ ಎಂದರು. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಆದ್ಯತೆಯ ವಿಚಾರವಾಗಿ ಮಾತನಾಡಿದ ಅಶೋಕ್ ಟಿಕೇಟ್ ವಂಚಿತರಿಗೂ ಆದ್ಯತೆ ನೀಡಬೇಕೆಂಬ ಬಗ್ಗೆಯೂ ಚರ್ಚೆಯಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಟಿಕೆಟ್ ಕೊಟ್ಟರೆ ತಪ್ಪಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು.

Read More

ಚಿಕ್ಕಮಗಳೂರು : ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗುತ್ತಿದ್ದು, ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಆಟೋ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲನೊಬ್ಬ ಸಾವನ್ನಪ್ಪಿರುವ ಘಟನೆ ಬಣಕಲ್- ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ನಡೆದಿದೆ. ಮೃತ ಪಟ್ಟ ಚಾಲಕನನ್ನು ರವಿ ಎಂದು ಹೇಳಲಗುತ್ತಿದ್ದೂ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೈಲಿಮನೆ ನಿವಾಸಿ ಎಂದು ಹೇಳಲಾಗುತ್ತಿದೆ. ತಕ್ಷಣ ಆಟೋ ಪಲ್ಟಿಯಾಗಿದ್ದರಿಂದ ಗಂಭೀರ ಗಾಯಗೊಂಡಿದ್ದ ರವಿನನ್ನು ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಸಾವನನಪ್ಪಿದ್ದಾನೆ. ಘಟನೆ ಕುರಿತಂತೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕಳೆದ ವರ್ಷ ಬಿರು ಬೇಸಿಗೆಯಲ್ಲೂ ಕೂಡ ಕಾವೇರಿ ನದಿಯಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಟ್ಟಿತ್ತು. ಇದೀಗ ಮತ್ತೆ 2.5 ಟಿಎಂಸಿ ನೀರು ಹರಿಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಹೌದು ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಕುರಿತಂತೆ ಸೂಚನೆ ನೀಡಿದ್ದು, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ನೀರು ಹರಿಸಲು ಇದೀಗ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಹ 2.5 ಟಿಎಂಸಿ ನೀರು ಹರಿಸುವಂತೆ ಶಿಫಾರಸು ಮಾಡಿತ್ತು. ಇದೀಗ ಇಂದು ಸಭೆ ನಡೆಸಿದ CWMA ನೀರುಹರಿಸಲು ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ. ಕನ್ನಡಪರ ಸಂಘಟನೆಗಳ ಹೋರಾಟ ಕಳೆದ ಬಾರಿ ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಕೂಡ ಕಾವೇರಿ ನದಿಯಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ಹಲವಾರು ಬಾರಿ ನೀರು ಬಿಟ್ಟಿತು. ಈ ಕುರಿತಾಗಿ ಅನೇಕ…

Read More

ಚಿಕ್ಕಮಗಳೂರು : ಇಂದು ರಾಜ್ಯದಲ್ಲಿ ದುರಂತಗಳ ಸರಮಾಲೆಯ ನಡೆದಿದೆ. ಈಗ ಚಿಕ್ಕಮಂಗಳೂರಿನಲ್ಲಿ ಒಂದು ಅನಾಹುತ ನಡೆದಿದ್ದು ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಗಾಂಜಾಲಗೋಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.ನಿನ್ನೆ ಸುರಿದ ಗಾಳಿ ಮಳೆಯಿಂದ ವೈರು ಒಂದು ನೇತಾಡುತ್ತಿತ್ತು.ಈ ವಳೆ ಯುವಕ ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಯುವಕ ಜೀವಿತ್ (23) ಸಾವನ್ನಪ್ಪಿದ್ದಾನೆ. ಎಂದು ತಿಳಿದುಬಂದಿದೆ.  ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More