Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮಕ್ಕಳನ್ನು ಸಾಕುವುದಕ್ಕೆ ಕಷ್ಟ ಆಗುತ್ತಿದೆ ಎಂದು ತಂದೆ ತಾಯಿ ಎರಡು ವರ್ಷದ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಹೌದು ನಂಜನಗೂಡು ಪಟ್ಟಣದ ನೀಲಕಂಠೇಶ್ವರ ನಗರದಲ್ಲಿ ತಂದೆ ತಾಯಿಗಳಿಬ್ಬರು ಎರಡು ವರ್ಷದ ತಮ್ಮ ಹೆಣ್ಣು ಮಗುವನ್ನು 14 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.ನಂಜನಗೂಡು ಪಟ್ಟಣದ ದಂಪತಿ ತಮ್ಮ ಮೂರು ಮಕ್ಕಳಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಮಧ್ಯವರ್ತಿ ಸಹಾಯದಿಂದ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದಕ್ಕೆ ಮಾರ್ಚ್ 13 ರಂದು 14 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಅಂಗನವಾಡಿ ಶಿಕ್ಷಕಿ, ಮಗು ಮಾರಾಟದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಮಗುವನ್ನು ರಕ್ಷಿಸಿ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಂದೆ – ತಾಯಿ, ಹಾಗೂ ಮಗುವನ್ನು ಮಾರಾಟ ಮಾಡಿಸಿದ…
ಬೆಂಗಳೂರು : ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ರಾಜ್ಯ ಸರ್ಕಾರ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಿತು. ಸದನದಲ್ಲಿ ಹನಿಟ್ರ್ಯಾಪ್ ಕುರಿತು ವಿಪಕ್ಷಗಳು ಘೋಷಣೆ ಕೂಗುತಿದ್ದರು. ಇದೆಲ್ಲದರ ಗದ್ದಲದ ನಡುವೆ ಈ ಒಂದು ಮಸೂದೆ ಅಂಗೀಕಾರವಾಯಿತು. ಬಳಿಕ ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದರು. ಮಸೂದೆಯ ನಿಬಂಧನೆಗಳ ಪ್ರಕಾರ, ಮುಸ್ಲಿಂ ಗುತ್ತಿಗೆದಾರರು ಸರ್ಕಾರಿ ಟೆಂಡರ್ಗಳಲ್ಲಿ ಶೇಕಡಾ 4 ರಷ್ಟು ಕೋಟಾವನ್ನು ಪಡೆಯುತ್ತಾರೆ, ಇದು ಸಾರ್ವಜನಿಕ ಒಪ್ಪಂದಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಈ ಕ್ರಮವು ಸಮಗ್ರ ಅಭಿವೃದ್ಧಿ ಮತ್ತು ಸಕಾರಾತ್ಮಕ ಕ್ರಮಕ್ಕೆ ಸರ್ಕಾರದ ಬದ್ಧತೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿ ಹೇಳಿದರು.
ಬೆಂಗಳೂರು : ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಇಂದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯಿಂದ ಬಿಜೆಪಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಅವರು ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಅಮಾನತುಗೊಂಡ ಶಾಸಕರನ್ನು ಸದನದ ಹೊರಗಡೆ ಎತ್ತಿಕೊಂಡು ಬಂದರು. ಸದನ ಮುಂದೂಡಲ್ಪಟ್ಟ ಕೂಡಲೇ ಬಿಜೆಪಿ ಸದಸ್ಯರು ರಾಜಭವನಕ್ಕೆ ಭೇಟಿ ನೀಡಲಿದ್ದಾರೆ. ರಾಜಭವನದ ಅಂಗಳಕ್ಕೆ ಶಾಸಕರ ಅಮಾನತು ವಿಚಾರ ತಲುಪಲಿದೆ. ಈ ಹಿನ್ನೆಲೆಯಲ್ಲಿ ರಾಜ ಭವನಕ್ಕೆ ಬಿಜೆಪಿ ಶಾಸಕರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ವಿಧಾನಸಭೆ ಕಲಾಪದಿಂದ ಮೊದಲ ಬಾರಿಗೆ 18 ಶಾಸಕರನ್ನು ಅಮಾನತುಗೊಳಿಸಲಾಗಿದೆ. ಈ ಒಂದು ಅಮಾನತುಗೊಂಡ ಶಾಸಕರಿಗೆ ಸರ್ಕಾರ ನೀಡುತ್ತಿರುವ ಹಲವು ಸವಲತ್ತುಗಳನ್ನು ಕಟ್ ಮಾಡಲಾಗುತ್ತದೆ ಎನ್ನಲಾಗಿದೆ. ಹೌದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿ ಅಡ್ಡಿಪಡಿಸಿರುತ್ತಾರೆ. ಅಮಾನತುಗೊಂಡ ಶಾಸಕರಿಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಮಾನತು ಆದಂತಹ ಸದಸ್ಯರು ತಕ್ಷಣ ಸದನದಿಂದ ಹೊರ ನಡೆಯಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದರು. ವಿಧಾನಸಭೆಯಿಂದ ಈ ವೇಳೆ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಹೊರ ನಡೆದರು. ಒಬ್ಬೊಬ್ಬರನ್ನು ಎತ್ತಿಕೊಂಡು ಬಂದು ಮಾರ್ಷಲ್ ಗಳು ಹೊರಹಾಕಿದ್ದಾರೆ. ಬಿಜೆಪಿ ಶಾಸಕರಾದ ಮುನಿರತ್ನ, ಚನ್ನಬಸಪ್ಪ, ಬೈರತಿ ಬಸವರಾಜು, ಬಿ ಸುರೇಶ್ ಗೌಡ, ಡಾ. ಭರತ್ ಶೆಟ್ಟಿ, ಧೀರಜ್ ಮುನಿರಾಜು, ಸಿ ಕೆ ರಾಮಮೂರ್ತಿಯನ್ನು ಸದನದಿಂದ ಮಾರ್ಷಲ್ ಗಳು ಎತ್ತಿಕೊಂಡು ಹೊರ ಹಾಕಿದ್ದಾರೆ. ಮೊದಲ ಬಾರಿ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರು ಅಮಾನತುಗೊಂಡಿದ್ದಾರೆ. ವಿಧಾನಸಭೆ…
ಬೆಂಗಳೂರು : ರಾಜ್ಯದಲ್ಲಿ ಹನಿಟ್ರ್ಯಾಪ್ ವಿಚಾರವಾಗಿ ವಿಧಾನಸಭೆಯಲ್ಲಿ ನಿನ್ನೆಯಿಂದ ಗದ್ದಲ ಕೋಲಾಹಲ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಗದ್ದಲ ಮತ್ತು ಕೋಲಾರಕ್ಕೆ ಕಾರಣವಾಗಿ ಸದನದ ಗೌರವಕ್ಕೆ ಧಕ್ಕೆ ತಂದಿರುವಂತಹ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ. ದೊಡ್ಡನಗೌಡ ಪಾಟೀಲ್, ಅಶ್ವಥ್ ನಾರಾಯಣ್, ಭರತ್ ಶೆಟ್ಟಿ, ಶರಣು ಸಲಗರ್, ಬಿ ಸುರೇಶ್ ಗೌಡ, ಮುನಿರತ್ನ, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಬಿಪಿ ಹರೀಶ್, ಧೀರಜ್ ಮುನಿರಾಜು, ಶೈಲೆಂದ್ರ ಬೆಲ್ದಾಳೆ, ಬಸವರಾಜ್ ಮತ್ತಿಮೂಡ್, ಯಶ್ ಪಾಲ್ ಸುವರ್ಣ, ಚಂದ್ರು ಲಮಾಣಿ, ಭೈರತಿ ಬಸವರಾಜ್ ಚನ್ನಬಸಪ್ಪ, ಅಮಾನತು ಅದಂತ ಶಾಸಕರು. ಶಾಸಕರನ್ನು ಅಮಾನತು ಆದ ಮೇಲೆ ಕೆಲಕಾಲ ಕಲಾಪವನ್ನು ಮುಂದೂಡಲಾಯಿತು.
ರಾಮನಗರ : ಹಠ ಮಾಡುತ್ತೆ ಅಂತ ಮಗುವಿನ ಡೈಪರ್ ಒಳಗೆ ಖಾರ ಹಾಕಿ, ಕೈಗೆ ಬರೆ ಎಳೆದು ವಿಕೃತಿ ಮರೆದಿದ್ದ ಅಂಗನವಾಡಿ ಸಹಾಯಕಿಯನ್ನು ಇದೀಗ ಅಮಾನತು ಮಾಡಲಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟೆಯಲ್ಲಿ ಇಂದು ಈ ಒಂದು ಘಟನೆ ನಡೆದಿತ್ತು, ಘಟನೆ ಸಂಭಂದ ಮಗುವಿನ ಪೋಷಕರು ಠಾಣೆಗೆ ದೂರು ನೀಡಿದ್ದರು ದೂರಿನ ಅನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಅಂಗನವಾಡಿ ಸಹಾಯಕಿಯನ್ನು ಅಮಾನತು ಮಾಡಿದ್ದಾರೆ. ಮಹಾರಾಜಕಟ್ಟೆ ಅಂಗನವಾಡಿಯಲ್ಲಿ ಈ ಒಂದು ಘಟನೆ ನಡೆದಿದ್ದು, ರಾಮನಗರದ ಕನಕಪುರ ತಾಲೂಕಿನ ಮಹಾರಾಜಕಟ್ಟೆ ಅಂಗನವಾಡಿಯಲ್ಲಿ ರಮೇಶ್ ಮತ್ತು ಚೈತ್ರ ದಂಪತಿಯ ಮಗು ಹಠ ಮಾಡುತ್ತೆ ಅಂತ ಡೈಪರ್ ನಲ್ಲಿ ಅಂಗನವಾಡಿ ಸಹಾಯಕಿ ಚಂದ್ರಮ್ಮ ಖಾರದ ಪುಡಿ ಹಾಕಿದ್ದಾಳೆ ಅಲ್ಲದೆ ಕೈಗೆ ಬರೆ ಎಳೆದು ವಿಕೃತಿ ಮೆರೆದಿದ್ದಾಳೆ. ವಿಕೃತಿ ಮೆರೆದ ಅಂಗನವಾಡಿ ಸಹಾಯಕಿಯನ್ನು ಇದೀಗ ಅಮಾನತು ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಸಹಾಯಕಿಯನ್ನು ಸಸ್ಪೆಂಡ್ ಮಾಡಲಾಗಿದೆ. ಕನಕಪುರ ಟೌನ್…
ಹಾವೇರಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಅನೇಕರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ನಡೆದಿದ್ದವು. ಆದರೆ ಹಾವೇರಿಯಲ್ಲಿ ಸಾಲ ಕೊಟ್ಟ ವ್ಯಕ್ತಿಯೇ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ನಗರದ ನಗರದ ಇಜಾರಿ ಲಕಮಾಪುರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕನನ್ನು ವಿನಾಯಕ್ ಸುರೇಶ ಕಂಬಾಳಿಮಠ (34) ಎಂದು ತಿಳಿದುಬಂದಿದೆ. ವಿನಾಯಕ್ ಆತ್ಮಹತ್ಯೆಗು ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾರೆ.ಸ್ನೇಹಿತರು ಹಾಗೂ ಇತರರು ನನ್ನ ಬಳಿ ಸಾಲ ಪಡೆದಿದ್ದರು. ಅದನ್ನು ವಾಪಸು ಕೊಟ್ಟಿಲ್ಲ. ಅದನ್ನು ವಸೂಲಿ ಮಾಡಿ ನನ್ನ ಮನೆಯವರಿಗೆ ಕೊಡಿಸಿ ಎಂದು ವಿನಾಯಕ್ ವಿಡಿಯೊದಲ್ಲಿ ಹೇಳಿರುವುದಾಗಿ ಗೊತ್ತಾಗಿದೆ. ವಿನಾಯಕ್ ಅವರು ತಮ್ಮ ಆಸ್ತಿಯನ್ನು ಈ ಹಿಂದೆ ಮಾರಾಟ ಮಾಡಿದ್ದರು. ಅದರಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಅದೇ ಹಣವನ್ನು ಕೆಲವರಿಗೆ ನೀಡಿದ್ದರು. ಹಣ ಪಡೆದವರು ವಾಪಸು ನೀಡದೇ ವಂಚಿಸಿದ್ದರು. ಇದರಿಂದ ವಿನಾಯಕ್ ನೊಂದಿದ್ದರೆಂದು ಹೇಳಲಾಗುತ್ತಿದೆ. ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಹಾಗೂ ಮರಣ…
ಉತ್ತರಪ್ರದೇಶ : ಪ್ರಯಾಣಿಕನೊಬ್ಬ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆದ ಕೂಡಲೇ ಹಠಾತ್ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಹಠಾತ್ತನೆ ಸಾವನ್ನಪ್ಪಿದ್ದಾನೆ. ನವದೆಹಲಿಯಿಂದ ಲಖನೌಗೆ ಆಗಮಿಸಿದ್ದ ವಿಮಾನದಲ್ಲಿ ಪ್ರಯಾಣಿಕ ಆಸಿಫುಲ್ಲ ಅನ್ಸಾರಿ ಸಾವನಪ್ಪಿದ್ದಾರೆ. ವಿಮಾನ ಲ್ಯಾಂಡ್ ಆದ ಬಳಿಕ ಆಸಿಫುಲ್ಲ ಸಾವನಪ್ಪಿದ್ದಾರೆ. ಮಾರ್ಗ ಮಧ್ಯ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸೀಫುಲ್ಲಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಆಸಿಫುಲ್ಲ ಶವ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೆಂಗಳೂರು : ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿದ್ದನ್ನು ಖಂಡಿಸಿ ನಾಳೆ ಕನ್ನಡ ಪರ ಸಂಘಟನೆಗಳಿಂದ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಾರಿಗೆ ಸಂಘಟನೆಗಳು ಕೂಡ ಬಂದ್ ಗೆ ಬೆಂಬಲ ನೀಡಿದ್ದು ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕು ಎಂದು ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೌದು ಸಾರಿಗೆ ಸಂಘಟನೆಗಳಿಗೆ ಬೆಂಗಳೂರು ಕಮಿಷನರ್ ಬಿ ದಯಾನಂದ್ ನೋಟಿಸ್ ನೀಡಿದ್ದು, ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ಮಾಡಬಹುದು. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಕಡೆ ಪ್ರತಿಭಟನೆ ಮಾಡಂಗಿಲ್ಲ. ಬೇರೆ ಕಡೆ ಪ್ರತಿಭಟನೆ ಮೆರವಣಿಗೆಗಳನ್ನು ಮಾಡುವಂತಿಲ್ಲ.ಅಕಸ್ಮಾತ್ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ. ಹೈ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ನೋಟಿಸ್ ನೀಡಲಾಗಿದೆ. ಸಾರಿಗೆ ಸಂಘಟನೆಗಳಿಗೆ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.
ಕೊಪ್ಪಳ : ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಅಷ್ಟೇ ಉತ್ಸಾಹದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಆದರೆ ಕೊಪ್ಪಳದಲ್ಲೊಂದು ಹೃದಯವಿದ್ರ ಘಟನೆ ನಡೆದಿದ್ದು, ತಾಯಿಯ ನಿಧನದ ನೋವಿನಲ್ಲಿ ಕೂಡ ವಿದ್ಯಾರ್ಥಿ ಒಬ್ಬ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾನೆ. ಹೌದು ತಾಯಿಯ ಅಗಲಿಕೆಯ ನೋವಿನ ಮಧ್ಯೆಯೂ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೇಸರಹಟ್ಟಿಯಲ್ಲಿ ನಡೆದಿದೆ.ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಬಂದ ಶಿಕ್ಷಕರು ಸಾಂತ್ವಾನ ಹೇಳಿದರು. ಬಳಿಕ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು. ಪರೀಕ್ಷೆಯ ಬಳಿಕ ವಿದ್ಯಾರ್ಥಿ ತನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ. ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಡಿವೆಯ್ಯ ಸ್ವಾಮಿ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಶುಕ್ರವಾರ ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿದ್ಯಾರ್ಥಿ ತಾಯಿ ವಿಜಯಲಕ್ಷ್ಮಿ ಕಳೆದ ಕೆಲ ದಿನಗಳ…