Author: kannadanewsnow05

ಬೆಂಗಳೂರು : ಸಾರಿಗೆ ಬಸ್ಗಳಲ್ಲಿ ಟಿಕೆಟ್ ಪ್ರಯಾಣದ ದರ ಶೇಕಡ 15 ಪರ್ಸೆಂಟ್ ಹೆಚ್ಚಳ ಮಾಡಿ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ ಇಂದಲೇ ಸಾರಿಗೆ ಬಸ್ಗಳ ಟಿಕೆಟ್ ದರ ಶೇಕಡ 15ರಷ್ಟು ಏರಿಕೆ ಆಗುವ ಸಾಧ್ಯತೆಯಿದ್ದು ಪರಿಷ್ಕೃತ ದರ ಜಾರಿ ಆಗುತ್ತದೆ. ಹೌದು ಇಂದು ಮಧ್ಯರಾತ್ರಿಯಿಂದಲೇ ಟಿಕೆಟ್ ದರ ಏರಿಕೆಯಾಗಲಿದ್ದು, KSRTC, KKRTC, NWKRTC ಹಾಗೂ BMTC ಸೇರಿ ಎಲ್ಲ ನಾಲ್ಕು ಸಾರಿಗೆ ನಿಗಮಗಳು ಅಧಿಕೃತ ಆದೇಶದ ಪ್ರತಿಗಾಗಿ ಕಾಯುತ್ತಿವೆ. ಮಧ್ಯಾಹ್ನದ ಬಳಿಕ ಆದೇಶದ ಪ್ರತಿ ಸಿಗುವ ಸಾಧ್ಯತೆ ಇದ್ದು, ಬಳಿಕ ಇಟಿಎಂ ಅಪ್ಲೋಡ್ ಕೆಲಸ ಆರಂಭವಾಗುತ್ತದೆ. ಆದೇಶ ಬಂದರೆ ಮಧ್ಯರಾತ್ರಿ ಇಂದಲೇ ಪರಿಷ್ಕೃತ ದರ ಜಾರಿ ಆಗುತ್ತದೆ. ಪ್ರತಿ ಡಿಪೋಗು ಟೆಕ್ನಿಕಲ್ ಇಂಜಿನಿಯರ್ ಕಳುಹಿಸಲು ಚಿಂತನೆ ನಡೆಸಲಾಗುತ್ತಿದ್ದು, ಇಟಿಎಂ ಹೊಸ ದರಗಳ ಚಿಂತನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಚಿಲ್ಲರೆ ಸಮಸ್ಯೆ ಸೇರಿದಂತೆ ಕೆಲ ಗೊಂದಲಗಳಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೊಂದಲಗಳನ್ನು…

Read More

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತೊಂದು ಭೀಕರವಾದಂತಹ ಅಪಘಾತವಾಗಿದ್ದು, ಬಿಬಿಎಂಪಿ ಕಸದ ಲಾರಿಯನ್ನು ಓವರ್ ಟೇಕ್ ಮಾಡಲು ಯತ್ನಿಸಿ, ಇಬ್ಬರು ಮಹಿಳೆಯರು ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಬಿಬಿಎಂಪಿ ಕಸದ ಲಾರಿ ಹರಿದು ಸಾವನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ಹೌದು ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರೂ ಮಹಿಳೆಯರು ಸಾವನ್ನಪ್ಪಿರುವ ಘಟನೆ ಥಣಿಸಂದ್ರ ಮುಖ್ಯರಸ್ತೆಯ ಸರಾಯಿ ಪಾಳ್ಯದ ಬಳಿ ಒಂದು ಘಟನೆ ನಡೆದಿದೆ. ಇಂದು ಮಧ್ಯಾಹ್ನ 12.20 ರ ಸುಮಾರಿಗೆ ಈ ಒಂದು ದುರ್ಘಟನೆ ಸಂಭವಿಸಿದೆ. ಕಸದ ಲಾರಿಯನ್ನು ಓವರ್ ಟೇಕ್ ಮಾಡಲು ಮಹಿಳೆಯರು ಮುಂದಾಗಿದ್ದಾರೆ. ಲಾರಿಯನ್ನು ಎಡಗಡೆಯಿಂದ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಲಾರಿ ಗೆ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಮೃತರನ್ನು ಗೋವಿಂದಪುರ ನಿವಾಸಿಗಳಾದ ನಾಜಿಯಾ ಸುಲ್ತಾನ್ ಹಾಗೂ ನಾಜಿಯಾ ಇರ್ಫಾನ್ ಮೃತ ಮಹಿಳೆಯರು ಎಂದು ತಿಳಿದುಬಂದಿದ್ದು, ಇಬ್ಬರೂ ಕೂಡ ಸಹೋದರಿಯರು ಎಂದು ತಿಳಿದುಬಂದಿದೆ. ಸದ್ಯ…

Read More

ಬೆಂಗಳೂರು : ರಾಜ್ಯ ಸಾರಿಗೆ ಇಲಾಖೆ ಇದೀಗ ವಾಹನ ಸವಾರರಿಗೆ ಮತ್ತೊಮ್ಮೆ ಬಿಗ್ ರಿಲೀಫ್ ನೀಡಿದ್ದು, HSRP ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರಿಗೆ ಇದೀಗ ರಾಜ್ಯ ಸಾರಿಗೆ ಇಲಾಖೆಯು ಜನವರಿ 31 ರವರೆಗೆ ವಿಸ್ತರಿಸಿದೆ. ಜನವರಿ 31ರವರೆಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇದುವರೆಗೂ ಆರು ಬಾರಿ ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ನೀಡಿತ್ತು. ಇದೀಗ ಮತ್ತೊಮ್ಮೆ ಅವಕಾಶ ನೀಡಿದ್ದು, ಜನವರಿ 31 ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ರಾಜ್ಯ ಸಾರಿಗೆ ಇಲಾಖೆ ಗಡು ವಿಸ್ತರಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಮುಂದಿನ ಆದೇಶದವರೆಗೂ ವಾಹನ ಮಾಲೀಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಆದೇಶ ನೀಡಿತು. ಕಳೆದ ಒಂದುವರೆ ವರ್ಷದಿಂದ ಎರಡು ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ 56.40 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್ಪಿ ನಂಬರ್ ಅಳವಡಿಕೆ ಮಾಡಲಾಗಿದೆ ಅಲ್ಲದೆ ಇನ್ನೂ 1.40 ಕೋಟಿ…

Read More

ಬೆಂಗಳೂರು : ಕಳೆದ ಡಿಸೆಂಬರ್ ನಲ್ಲಿ ನಟ ಶಿವರಾಜ ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಬಳಿಕ ಕ್ಯಾನ್ಸರ್ ಗೆದ್ದ ನಂತರ ವಿಡಿಯೋ ಮುಖಾಂತರ ಅವರ ಪತ್ನಿ ಗೀತಾ ಅವರು ಶಿವರಾಜ್ ಕುಮಾರ್ ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ ಎಂದು ಇತ್ತೀಚಿಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇದೀಗ ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ. ನಟ ಶಿವರಾಜಕುಮಾರ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಫೋಟೋ ವೈರಲ್ ಆಗಿದ್ದು, ನಟ ಶಿವರಾಜಕುಮಾರ್ ಪತ್ನಿ ಗೀತಾ ಸೇರಿದಂತೆ ಫೋಟೋದಲ್ಲಿ ಹಲವರು ಇದ್ದಾರೆ. ಶಿವರಾಜಕುಮಾರ್ ಮೂತ್ರ ಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದೇ ಆಸ್ಪತ್ರೆಯಿಂದ ನಟ ಶಿವರಾಜಕುಮಾರ್ ಡಿಸ್ಚಾರ್ಜ್ ಆದರೂ ಕೂಡ ಅವರು ಸಧ್ಯಕ್ಕೆ ಭಾರತಕ್ಕೆ ಆಗಮಿಸುತ್ತಿಲ್ಲ. ಜನವರಿ 26ರಂದು ಅವರು ಭಾರತಕ್ಕೆ ಮರಳಲಿದ್ದು ಮಲ್ಲಿಕಾ ಫೆಬ್ರುವರಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಟ ರಾಮಚರಣ್ ಅವರ ಚಿತ್ರದಲ್ಲಿ ನಟಿಸಿ ರಾಜಕುಮಾರ್ ಅವರು…

Read More

ಕೋಲಾರ : ಅಂಗನವಾಡಿ ಮೇಲ್ಚಾವಣಿ ಕುಸಿದು ಬಿದ್ದು ಶಾಲೆಯಲ್ಲಿದ್ದಂತಹ 7 ಮಕ್ಕಳ ಪೈಕಿ 4 ಮಕ್ಕಳಿಗೆ ಗಾಯವಾಗಿದ್ದು ಅದರಲ್ಲಿ ಒರವ ಮಗುವಿಗೆ ತೀವ್ರವಾಗಿ ಗಂಭೀರವಾಗಿ ಕಾಯಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸರ ಹೊಸಹಳ್ಳಿಯಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಹೌದು ಕೋಲಾರ ಜಿಲ್ಲೆಯ ದಾಸರಹೊಸಹಳ್ಳಿ ಎಂಬಲ್ಲಿ ಅಂಗನವಾಡಿ ಶಾಲೆಯ ಮೇಲ್ಚಾವಣಿ ಕುಸಿತವಾಗಿ 7 ಮಕ್ಕಳಿಗೆ ಗಾಯವಾಗಿದೆ. ನಾಲ್ವರು ಮಕ್ಕಳ ತಲೆ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಬಂಗಾರಪೇಟೆ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅಂಗನವಾಡಿ ಕಟ್ಟಡದ ಮೇಲ್ಚಾವಣಿ ಕುಸಿತವಾಗಿ ಬಂಗಾರಪೇಟೆ ತಾಲೂಕಿನ ದಾಸರಹೊಸಹಳ್ಳಿಯಲ್ಲಿ ಗಾಯಗೊಂಡ 7 ಅಂಗನವಾಡಿ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಈ ವೇಳೆ ಘಟನೆ ಸ್ಥಳದಲ್ಲಿ ನಾರಾಯಣಸ್ವಾಮಿ ಭೇಟಿ ನೀಡಿ ಅಲ್ಲದೆ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

Read More

ಮಂಗಳೂರು : ದರೋಡೆಕೋರರು ED ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 30 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ. ನಾವು ಇಡಿ ಅಧಿಕಾರಿಗಳು ಎಂದು ಸುಲೈಮಾನ್ ಹಾಜಿ ಅವರನ್ನು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ಮನೆಯಲ್ಲ ಪರಿಶೀಲಿಸಿದ್ದಾರೆ. ಕೊನೆಗೆ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ಪರಿಶೀಲನೆ…

Read More

ಬಳ್ಳಾರಿ : ಭಗ್ನಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿ, ಬಳಿಕ ಇಂದು  ತಾನು ಕೂಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದ ಚರ್ಚ್ ಶಾಲಾ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಹೊಸಪೇಟೆ ಮೂಲದ ನವೀನ್ ಕುಮಾರ್ ಎಂದು ತಿಳಿದುಬಂದಿದೆ. ಯುವತಿ ಸೇರಿ ಕುಟುಂಬದ ಮೇಲೆ ಯುವಕ ಮಚ್ಚಿನಿಂದ ಹಲ್ಲೆ ಮಾಡಿದ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ನವೀನ್ ಕುಮಾರ್. ಗಾಯಾಳುಗಳನ್ನು ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಪ್ರೇಯಸಿ ಸೇರಿ ಮೂವರ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದ. ಪರಸ್ಪರ ನವೀನ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ನವೀನ್ ಕುಮಾರ್ ಬಾಳೆಹಣ್ಣು ವ್ಯಾಪಾರ ಮಾಡಿಕೊಂಡಿದ್ದ. ಯುವತಿ ಕಾಲೇಜು ಹೋಗುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಎಂಸಿಎ ಓದಬೇಕು ಅಂತ ಯುವತಿ ಪ್ರೀತಿಗೆ ಬ್ರೇಕ್ ಹಾಕಿದ್ದಾಳೆ, ಇದರಿಂದ ಭಗ್ನ ಪ್ರೇಮಿ ನವೀನ್ ಕುಮಾರ್…

Read More

ಬೆಂಗಳೂರು : ನಿನ್ನೆ ಬೆಂಗಳೂರಲ್ಲಿ ಆಟೋ ಚಾಲಕನ ದುರ್ನಡತೆಯಿಂದ ಮಹಿಳೆ ಒಬ್ಬರು ಚಲಿಸುತ್ತಿದ್ದ ಆಟೋದಿಂದ ಜಿಗಿದು ಸೇಫ್ ಆದಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಆಟೋ ಚಾಲಕ ಸುನಿಲ್ ಎಂಬಾತನನ್ನು ಅಮೃತ ಹಳ್ಳಿಯ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಥಣಿಸಂದ್ರದ ನಿವಾಸಿಯಾಗಿದ್ದ ಮಹಿಳೆ, ಗುರುವಾರ ರಾತ್ರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ವಾಪಸ್ ಮನೆಗೆ ತೆರಳಲು ಹೊರಮಾವಿನಿಂದ ಥಣಿಸಂದ್ರಕ್ಕೆ ಆ್ಯಪ್‌ ಮೂಲಕ ಆಟೋ ಬುಕ್ ಮಾಡಿದ್ದರು. 8.55ರ ಸುಮಾರಿಗೆ ಪಿಕಪ್ ಲೊಕೇಷನ್ ಬಳಿ ಬಂದಿದ್ದ ಆಟೋ ಚಾಲಕನು ಮಹಿಳೆಯನ್ನ ಥಣಿಸಂದ್ರಕ್ಕೆ ಡ್ರಾಪ್ ಮಾಡದೇ ಹೆಬ್ಬಾಳ ಕಡೆ ಹೋಗಲಾರಂಭಿಸಿದ್ದ.ತಪ್ಪಾದ ದಾರಿಯಲ್ಲಿ ಹೋಗುತ್ತಿರುವುದನ್ನ ಗಮನಿಸಿದ ಮಹಿಳೆ, ಚಾಲಕನಿಗೆ ಹೇಳಿದರೂ ಸಹ ಆತ ಪ್ರತಿಕ್ರಿಯಿಸಿರಲಿರಲಿಲ್ಲ. ಆಟೋ ನಿಲ್ಲಿಸುವಂತೆ ಸೂಚಿಸಿದರೂ ಚಾಲನೆ ಮುಂದುವರಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ ಚಲಿಸುತ್ತಿರುವಾಗಲೇ ಆಟೋದಿಂದ ಜಿಗಿದಿದ್ದರು. ಘಟನೆಯ ಕುರಿತು ಮಹಿಳೆಯ ಪತಿ ಅಜರ್ ಖಾನ್ ಎಕ್ಸ್ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಅಜರ್ ಅವರು ನೀಡಿದ ದೂರಿನ ಮೇರೆಗೆ ಇದೀಗ ಆಟೋ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಸೆಲ್ಫ್ ಆಕ್ಸಿಡೆಂಟ್ ಗೆ ಬೈಕ್ ಸವಾರಣೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಹೌದು ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಹೆಬ್ಬಾಳ ಫ್ಲೈ ಓವರ್ ಮೇಲೆ ಸ್ಕೂಟರ್ ಅಪಘಾತ ಸಂಭವಿಸಿದೆ. ಸೆಲ್ಫ್ ಆಕ್ಸಿಡೆಂಟ್ ಗೆ ಸ್ಕೂಟರ್ ಸವಾರ ಸಾವನಪ್ಪಿದ್ದಾನೆ. ವೇಗವಾಗಿ ಬಂದ ಸವಾರ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಕುರಿತು ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಗಿರುವಂತಹ ಬಸವರಾಜ್ ಮುತ್ತಗಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದು, ಯೋಗೇಶ್ ಗೌಡ ಕೊಲೆ ಮಾಡಿಸಿದ್ದೆ ಶಾಸಕ ವಿನಯ್ ಕುಲಕರ್ಣಿ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆಪ್ತನ ತಪ್ಪೊಪ್ಪಿಗೆಯಿಂದ ಶಾಸಕ ವಿನಯ್ ಕುಲಕರಣಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಬಸವರಾಜ್ ಮುತ್ತಗಿ ಹೇಳಿಕೆ ನೀಡಿದ್ದು, ಕೊಲೆ ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಆಪ್ತನ ತಪೋಪಿಗೆಯಿಂದ ಶಾಸಕ ವಿನಯ್ ಕುಲಕರ್ಣಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಹಲವರು ಬಂದಿದ್ದರು. ಬೆಂಗಳೂರಿನಿಂದ ಕರೆಸಿದವರಿಂದಲೇ ಯೋಗೇಶ್ ಗೌಡ ಕೊಲೆ ನಡೆದಿದೆ. ತಪ್ಪೋಪ್ಪಿಗೆಯಲ್ಲಿ ವಿನಯ ಪಾತ್ರದ ಕುರಿತು ವಿಸ್ತೃತವಾಗಿ ಬಸವರಾಜ್ ಮುತ್ತಿಗಿ ಮಾಹಿತಿ ನೀಡಿದ್ದಾನೆ. ಮುತ್ತಗಿ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಧಾರವಾಡದ ವಿಕಾಸ್ ಕಲಬುರ್ಗಿ, ಕೀರ್ತಿ…

Read More