Subscribe to Updates
Get the latest creative news from FooBar about art, design and business.
Author: kannadanewsnow05
ರಾಮನಗರ : ರಾಮನಗರದಲ್ಲಿ ಇಂದು ಘೋರವಾದಂತಹ ದುರಂತ ನಡೆದಿದ್ದು, ಬಾಯ್ಲರ್ ಸ್ಪೋಟಗೊಂಡು ಐವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಈ ಒಂದು ಅವಘಡ ಸಂಭವಿಸಿದೆ. ರಾಮನಗರದ ಆರ್ಬಿಟ್ ಪವರ್ ಕಂಪನಿಯಲ್ಲಿ ಬಾಯ್ಲರ್ ಸ್ಪೋಟವಾಗಿದೆ.ಉತ್ತರ ಭಾರತದ ಮೂಲದ ಅಮ್ಬ್ಲೇಶ್ ಹಾಗೂ ತರುಣ್, ಉಮೇಶ್, ಸಂತುನ್ ಹಾಗೂ ಲಖನ್ ಗೆ ಗಂಭೀರವಾದ ಗಾಯಗಳಾಗಿವೆ.ಐವರು ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾ ಜನಕವಾಗಿದೆ. ಗಾಯಾಳುಗಳಿಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬಿಡದಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಒಂದು ಪಲ್ಟಿಯಾಗಿದ್ದು ಪ್ರವಾಸಕ್ಕೆ ಎಂದು ತೆರಳಿದ್ದ 45 ಪ್ರಯಾಣಿಕರಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಂಬ್ರಿ ಎಂಬ ಗ್ರಾಮದಲ್ಲಿ ನಡೆದಿದೆ. ಪ್ರವಾಸಕ್ಕೆ ಎಂದು ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗರಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಂಬ್ರಿ ಗ್ರಾಮದಲ್ಲಿ ಬೆಂಗಳೂರು ಮೂಲದ ಬಸ್ ಪಲ್ಟಿಯಾಗಿದೆ. ಶೃಂಗೇರಿ ಶಾರದಾ ಮಠಕ್ಕೆಂದು ಪ್ರವಾಸಿಗರು ಬಂದಿದ್ದರು. ಶೃಂಗೇರಿಯಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿ ಯಾದ ಬಳಿಕ ಬಸ್ ನಲ್ಲಿ ಇದ್ದಂತಹ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆ ಕುರಿತಂತೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಚಲಿಸುತ್ತಿದ್ದ ಐರಾವತ ಬಸ್ಸಿನ ಇಂಜಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 45 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ಈ ಒಂದು ಘಟನೆ ನಡೆದಿದೆ. KA 57 F 0984 ಸಂಖ್ಯೆಯ ಐರಾವತ ಬಸ್ ನಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಈ ಒಂದು ಐರಾವತ ಬಸ್ ಚಿಕ್ಕಮಂಗಳೂರಿಗೆ ತೆರಳುತ್ತಿತ್ತು. ಐರಾವತ ಬಸ್ ನಲ್ಲಿ ತೆರಳುತ್ತಿದ್ದ 45 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಬಳಿಕ ಸಾರಿಗೆ ಸಂಸ್ಥೆಯಿಂದ ಮತ್ತೊಂದು ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ. ಘಟನೆ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಕಳೆದ ವರ್ಷ ಬಳ್ಳಾರಿ ಬೆಳಗಾವಿ ಹಾಗೂ ರಾಯಚೂರಿನಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಒಂದು ಬಾಣಂತಿಯರ ಮರಣ ಮೃದಂಗ ಮುಂದುವರೆದಿದ್ದು ಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವಾಗಿದೆ.ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಬಾಣಂತಿಯ ಸಾವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಕವಿತಾ ಎನ್ನುವ ಬಾಣಂತಿಯ ಸಾವಾಗಿದೆ. ಎರಡು ದಿನದ ಹಿಂದೆ ಕವಿತಾ ಹೆರಿಗೆಗಾಗಿ ಶಿವಮೊಗ್ಗದ ಮೆಗ್ನ ಆಸ್ಪತ್ರೆಗೆ ದಾಖಲಾಗಿದ್ದರು.ನಿನ್ನೆ ಬೆಳಿಗ್ಗೆ 8 ಗಂಟೆಗೆ ಹೆಣ್ಣು ಮಗುವಿಗೆ ಕವಿತಾ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ಕವಿತಾಗೆ ದಿಢೀರ್ ರಕ್ತ ಹೆಪ್ಪುಗಟ್ಟಿದೆ. ಹೆರಿಗೆ ಬಳಿಕ ಕವಿತಾ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಬಾಣಂತಿ ಕವಿತಾ ಸಾವು ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕವಿತಾ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬಾಣಂತಿ ಸಾವಿನ ಬಗ್ಗೆ ಕುಟುಂಬಸ್ಥರು ಯಾವುದೇ ದೂರು…
ತುಮಕೂರು : ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಮಹಿಳೆ ಒಬ್ಬಳು ದೂರು ನೀಡಲು ಠಾಣೆಗೆ ಬಂದಂತಹ ಸಂದರ್ಭದಲ್ಲಿ ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಿಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವೈಎಸ್ಪಿ ರಾಮಚಂದ್ರಪ್ಪನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಮಧುಗಿರಿ JMFC ಕೋರ್ಟ್ ಆದೇಶ ಹೊರಡಿಸಿದೆ. ಇಂದು ವೈದ್ಯಕೀಯ ಪರೀಕ್ಷೆ ಬಳಿಕ ಪೊಲೀಸರು ರಾಮಚಂದ್ರಪ್ಪನನ್ನು ಮಧುಗಿರಿ JMFC ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಜಡ್ಜ್ ಡಿವೈಎಸ್ಪಿ ರಾಮಚಂದ್ರಪ್ಪ ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದರು. ಸೋಮವಾರದವರೆಗೂ ಡಿವೈಎಸ್ಪಿ ರಾಮಚಂದ್ರಪ್ಪ ಮಧುಗಿರಿ ತೀರಿನಲ್ಲಿ ಇರಲಿದ್ದಾರೆ ಬಳಿಕ ಜಿಲ್ಲಾ ಕರಾಗ್ರಹಕ್ಕೆ ಶಿಫ್ಟ್ ಮಾಡುವಂತೆ ಆದೇಶ ಹೊರಡಿಸಲಾಯಿತು. ಜಮೀನು ವ್ಯಾಜ್ಯಕೆ ಸಬಂಧಿಸಿದಂತೆ ದೂರು ನೀಡಲು ಮಹಿಳೆಯೊಬ್ಬರು ಮಧುಗಿರಿ ಠಾಣೆಗೆ ಬಂದಿದ್ದಾಳೆ. ಆದರೆ ಠಾಣೆಯಲ್ಲಿದ ಡಿವೈಎಸ್ಪಿ ಅಧಿಕಾರಿ ರಾಮಚಂದ್ರಪ್ಪ ಮಹಿಳೆಯನ್ನು ಪುಸಲಾಯಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪಾವಗಡದ ಮಹಿಳೆಯೊಬ್ಬರು ಜಮೀನು…
ಹಾಸನ : ಅನುದಾನಿತ ಶಾಲೆಯ ಅನುದಾನ ಬಿಡುಗಡೆಯ ಸಲುವಾಗಿ ಡಿಡಿಪಿಐ ಕಚೇರಿಯ ಸೂಪರಿಡಿಯೆಂಟ್ ಅಧಿಕಾರಿ ಒಬ್ಬ ಲಂಚ ಲಂಚ ಸ್ವೀಕರಿಸುತ್ತಿರುವಾಗಲೇ ಅಧಿಕಾರಿಗಳಿಗೆ ಬೆಲೆ ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಡಿಡಿಪಿಐ ಕಚೇರಿಯಲ್ಲಿ ಅನುದಾನಿತ ಶಾಲೆಯ ಅನುದಾನ ಬಿಡುಗಡೆ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಸೂಪರಿಡಿಯೆಂಟ್ ವೇಣುಗೋಪಾಲ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಸದ್ಯ ವೇಣುಗೋಪಾಲನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಮನೆಯ ಕಾರ್ಯಕ್ರಮಕ್ಕೆ ಎಂದು ಬಂದಿದ್ದ ಫೋಟೋಗ್ರಾಫರ್ ಒಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯ ಜೊತೆ ಲವ್ ನಾಟಕವಾಡಿ ಬಳಿಕ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಎಸಗಿದ್ದ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಂಗಳೂರಿನ ನೆಲಮಂಗಲ ಠಾಣೆಯ ಪೊಲೀಸರು ಆರೋಪಿ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಹೌದು ನೆಲಮಂಗಲದಲ್ಲಿ ಈ ಒಂದು ಲವ್ ಸೆಕ್ಸ್ ದೋಖಾ ಪ್ರಕರಣ ನಡೆದಿತ್ತು. ಯುವತಿಗೆ ವಂಚಿಸಿದ್ದ ಆರೋಪಿ ಮಧುವನ್ನು ಈಗ ಅರೆಸ್ಟ್ ಮಾಡಿದ್ದಾರೆ. ಫೋಟೋಗ್ರಾಫರ್ ಮಧು ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಫೋಟೋ ತೆಗೆಯಲು ಹೋದಾಗ ಪರಸ್ಪರ ಯುವತಿ ಮತ್ತು ಫೋಟೋಗ್ರಾಫರ್ ನಡುವೆ ಪರಿಚಯವಾಗಿದೆ.ಮನೆಯ ಕಾರ್ಯಕ್ರಮಕ್ಕೆ ಮಧು ಫೋಟೋ ತೆಗೆಯಲು ಬಂದಿದ್ದ. ಮದುವೆಯಾಗುವುದಾಗಿ ನಂಬಿಸಿ ಆರೋಪಿ ಮಧು ಯುವತಿಗೆ ವಂಚಿಸಿದ್ದಾನೆ. ಮನೆಯ ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಹಾಗಾಗಿ ಮಧು ಕುಟುಂಬಸ್ಥರ ವಿರುದ್ಧ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಅಲ್ಲದೆ ಇತ್ತೀಚಿಗೆ ಆತ ಮೈಸೂರಿನ ಮತ್ತೊಬ್ಬ ಯುವತಿಯೊಂದಿಗೆ…
ಮೈಸೂರು : ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಶಾಲೆಯಲ್ಲಿ ಈ ಒಂದು ಹೊಸ ವರ್ಷಾಚರಣೆ ಆಚರಿಸುವ ವೇಳೆ ಕೇಕ್ ತಿಂದು ಸುಮಾರು 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೋಳನಹಳ್ಳಿಯ ಶ್ರೀ ಮಂಜುನಾಥ ಅನುದಾನಿತ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆದಿದೆ. ಹೌದು ಹೊಸವರ್ಷದ ಅಂಗವಾಗಿ ಕೇಕ್ ಕಟ್ ಮಾಡಿ ಮಕ್ಕಳಿಗೆ ವಿತರಿಸಿದ್ದಾರೆ. ಕೇಕ್ ತಿಂದಿದ್ದರಿಂದಾಗಿ ನಿನ್ನೆ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಮಕ್ಕಳನ್ನು ಬೋಳನಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಮೆಲೆ ಬಂದ ಮಕ್ಕಳನ್ನು ಪರೀಕ್ಷಿಸಿದ ವೈದ್ಯೆ ದಾಕ್ಷಾಯಣಿ ಹಾಗೂ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಭೇದಿ ಕಾಣಿಸಿಕೊಂಡಿದ್ದ 36 ಮಕ್ಕಳ ಪೈಕಿ 6 ಮಕ್ಕಳು ತಕ್ಷಣವೇ ಚೇತರಿಸಿಕೊಂಡಿದ್ದರಿಂದ ಮನೆಗೆ ಕಳುಹಿಸಲಾಗಿದೆ. ಉಳಿದ ಮಕ್ಕಳನ್ನು ದಾಖಲಿಸಿಕೊಂಡು ಸಂಜೆವರೆಗೆ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಕೇಕ್‌ನ ಸ್ಯಾಂಪಲ್ ಪಡೆದಿದ್ದು, ಲ್ಯಾಬ್‌ಗೆ ಕಳುಹಿಸಲಾಗುವುದು. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು…
ಹಾಸನ : ಹಾಸನದಲ್ಲಿ ಕುಡಿದ ನಶೆಯಲ್ಲಿ ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದ್ದು, ಕುಡಿದ ನಶೆಯಲ್ಲಿ ಪಾಪಿ ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಶಿಧರ್ (58) ಎಂದು ತಿಳಿದುಬಂದಿದೆ.ಕಂಠಪೂರ್ತಿ ಕುಡಿದು ತಂದೆ ಜೊತೆಗೆ ದಿನೇಶ್ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮಗನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಪಾಪಿ ಪುತ್ರ ದಿನೇಶ್ ಹತ್ಯೆ ಗೈದಿದ್ದಾನೆ. ಈ ವೇಳೆ ಗಾಬರಿಗೊಂಡು ದಿನೇಶ್ ತಾಯಿ ಮನೆಯಿಂದ ಸಹೋದರನ ಮನೆಗೆ ಹೋಗಿದ್ದಾರೆ. ಇತ್ತ ದಿನೇಶ್ ಕೊಲೆ ಮಾಡಿದ ತಂದೆಯನ್ನು ಹೃದಯಾಘಾತವಾಗಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಸ್ಪತ್ರೆಯಿಂದ ಬಂದು ಅಂತ್ಯಕ್ರಿಯೆಗೂ ಕೂಡ ಗಣೇಶ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪೊಲೀಸರು ಆತನ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಸದ್ಯ ಅರೆಹಳ್ಳಿ ಠಾಣೆ ಪೊಲೀಸರು ಅರೇಸ್ಟ್ ಮಾಡಿದ್ದಾರೆ.
ದಾವಣಗೆರೆ : ಬೀದರ್ ನಲ್ಲಿ ರೈಲಿಗೆ ತಲೆ ಕೊಟ್ಟು ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಕಲಬುರ್ಗಿಯಲ್ಲಿ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೆ ರಾಜೀನಾಮೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಕಾಮಗಾರಿಯಾದರೂ ಕೂಡ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಥಮ ದರ್ಜೆಯ ಗುತ್ತಿಗೆದಾರರು ಒಬ್ಬರು ಸಿಎಂ ಸಿದ್ದರಾಮಯ್ಯ ಹಾಗೂ ಗವರ್ನರ್ ಅವರಿಗೆ ದಯಾಮರಣ ಕೋರಿ ಪತ್ರ ಪಡೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು ಕಾಮಗಾರಿ ಮುಗಿದು ಒಂದು ವರ್ಷ ಪೂರೈಸಿದರೂ ಕೂಡ ಇನ್ನು ಕಾಮಗಾರಿಯ ಹಣ ಬಿಡುಗಡೆಯಾಗಿಲ್ಲ. ಅಲ್ಲದೇ ಮಗಳ ಮದುವೆಗೆ ಹಣ ಇಲ್ಲ ಎಂದು ಮನನೊಂದ ಗುತ್ತಿಗೆದಾರ ಒಬ್ಬರು ಸಿಎಂ ಸಿದ್ದರಾಮಯ್ಯ, ಗವರ್ನರ್ ಗೆ ದಯಾಮರಣ ಕೋರಿ ಪತ್ರ ಬರೆದಿರುವ ಘಟನೆ ದಾವಣಗೆರೆ ಹರಿಹರದಲ್ಲಿ ನಡೆದಿದೆ.ಹರಿಹರದ ನಿವಾಸಿ ಪ್ರಥಮ ದರ್ಜೆಯ ಗುತ್ತಿಗೆದಾರ ಮೊಹಮ್ಮದ್ ಮಝರ್ ಪತ್ರ ಬರೆದ ಗುತ್ತಿಗೆದಾರ ಎಂದು ತಿಳಿದುಬಂದಿದೆ. ಈ ಕುರಿತು…













