Author: kannadanewsnow05

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಪತಿ ಸಿಐಡಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆ ಹಾಸನ ಮೂಲದ ಸಿಐಡಿಗೆ ನೊಂದ ಮಹಿಳೆಯ ಪತಿಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಇದೀಗ ಸಿಐಡಿ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ನಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎ 1 ಆರೋಪಿ ಎಂದು ಹೇಳಲಾಗುತ್ತಿದೆ. ಈ ವೇಳೆ ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಮಗಳ ಓದಿನ ಬಗ್ಗೆ ಸಂತ್ರಸ್ತ ಮಹಿಳೆ ಸಹಾಯ ಕೇಳಿದ್ದಳು. ಹಾಸನದ ಸಂಸದರ ಮನೆಗೆ ಬರುವಂತೆ ತಿಳಿಸಿದರು. ಬೇರೆಯವರನ್ನ ಕಳಿಸಿ ನಮ್ಮನ್ನು ಮಾತ್ರ ಇರುವಂತೆ ಹೇಳಿದ್ದರು. ನಂತರ ರೂಮಿಗೆ ಕರೆದೋಯ್ದು ಅತ್ಯಾಚಾರಕ್ಕೆ ಯತ್ನಿಸಿದರು. ನಿನ್ನ ಪತಿಗೆ ಕಡಿಮೆ ಮಾತಾಡಲು ಹೇಳು ಇಲ್ಲ ಅಂದರೆ ಸರಿ ಇರಲ್ಲ. ನನ್ನ ಬಳಿ ಗನ್ ಇದೆ ನಾವು…

Read More

ಹುಬ್ಬಳ್ಳಿ : ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಒಬ್ಬನ ಶವ ಅತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದ ಸಮೀಪದಲ್ಲಿರುವ ಬಿಡಿಸಿ ಬಳಿ ಈ ಒಂದು ಅರೇಬೆಂದ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ನೇಕಾರ ನಗರದ ಚೆಕ್ ಪೋಸ್ಟ್ ಸಮೀಪದ ಬ್ರಿಡ್ಜ್ ಹತ್ತಿರ ಅರ್ಧ ಸುಟ್ಟ ಸ್ಥಿತಿಯಲ್ಲಿ ಅಂದಾಜು 35- 40 ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಂದು ಬೆಳಿಗ್ಗೆ ದಾರಿಯಲ್ಲಿ ಸಂಚರಿಸುವ ಜನರು ಮೃತದೇಹವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶವದ ಕುರಿತು ಹಾಗೂ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಆದರೆ ಮೃತ ವ್ಯಕ್ತಿಯ ಗುರುತು ಇದುವರೆಗೂ ಪತ್ತೆ ಆಗಿಲ್ಲ. ಈ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಹಾಸನ : ಕೆರೆ ಮೀನು ತಿಂದು ಇಬ್ಬರು ಸಾವನ್ನಪ್ಪಿದ್ದು ಅಲ್ಲದೆ 15ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವನಹಳ್ಳಿ ಗ್ರಾಮದಲ್ಲಿ ಕೆರೆ ಮೀನು ತಿಂದು ಇಬ್ಬರ ಸಾವನ್ನಾಪ್ಪಿದ್ದರೆ. ಗ್ರಾಮಕ್ಕೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆರೆ ಮೀನು ತಿಂದಿದ್ದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೆ ವೇಳೆ ಮೃತ ಕುಟುಂಬಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ಕೂಡ ವಿಚಾರಣೆ ನಡೆಸಿದರು.ಘಟನೆ ಬಗ್ಗೆ ಜಿಲ್ಲಾಧಿಕಾರಿಸತ್ಯಭಾಮಾ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Read More

ಯಾದಗಿರಿ : ಇತ್ತೀಚಿಗೆ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾದ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದ್ದು ಅಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಸ್ಪರ್ದಿಸಲಿದ್ದಾರೆ. ಹಾಗಾಗಿ ಹಿಂದೆ ಅವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡಿದರು. ಹಾಗಾಗಿ ಇಂದು ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡುವ ವೇಳೆ ಮಾತನಾಡಿದ ಅವರು, ನನಗೆ ತಂದೆ ತಾಯಿ ಇಲ್ಲ ಇಲ್ಲಿ ಬಂದಂತಹ ಎಲ್ಲಾ ತಾಯಂದಿರ ಹತ್ತಿರ ನನ್ನ ಕಾರ್ಯಕರ್ತರ ಹತ್ತಿರ ಎಲ್ಲಾ ಅಣ್ಣ-ತಮ್ಮಂದಿರ ಹತ್ತಿರ ಎಲ್ಲ ನನ್ನ ಬಿಜೆಪಿ ಕಾರ್ಯಕರ್ತರು ನಿಮಗೆ ಕೈ ಮುಗಿದು ನಿಮ್ಮ ಕಾಲಿಗೆ ನಮಸ್ಕಾರ ಮಾಡಿ ಕೇಳುತ್ತೇನೆ ನಮಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದರು.

Read More

ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಕಷ್ಟದಲ್ಲಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಿಡಿಯೋದಲ್ಲಿ ಇರುವ ಸಂತ್ರತೆ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ FIR ದಾಖಲಾಗಿದೆ. ಕೆ ಆರ್ ನಗರ ಠಾಣೆಯ ಪೊಲೀಸರು ಇದೀಗ ಅಂತ ಮಹಿಳೆಯ ಮಗನ ಆ ದೂರನ್ನು ದಾಖಲಿಸಿಕೊಂಡು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. ಹಾಗಾಗಿ ಇದೇ ವೇಳೆ ಸಂತ್ರಸ್ತೆ ಮಹಿಳೆಯ ಸಂಬಂಧಿಕರನ್ನು ಠಾಣೆಗೆ ಕರೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಪಹರಣಕ್ಕೆ ಒಳಗದ ಮಹಿಳೆಯು ಎಚ್ ಡಿ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಇದೀಗ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಡಿ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಎಫ್ಐಆರ್…

Read More

ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಎಸ್ಐಟಿ ವಿಚಾರಣೆ ಎರಡು ಬಾರಿ ನೋಟಿಸ್ ನೀಡಿದೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಅವರಿಗೂ ಕೂಡ ಎಸ್ಐಟಿ ನೋಟಿಸ್ ನೀಡಿದೆ. ಹೌದು ಸ್ಥಳೀಯ ಪೊಲೀಸರಿಂದ ಆ ಭವಾನಿ ರೇವಣ್ಣಗೆ ಎಸ್ಐಟಿ ನೋಟಿಸ್ ನೀಡಿದ್ದು, ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ರೇವಣ್ಣ ಮನೆಗೆ ನೋಟಿಸ್ ನೀಡಿ ಹೋಗಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದು, ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ಹಾಗಾಗಿ ಇಂದು ಸ್ಥಳೀಯ ಪೊಲೀಸರು ಎಸ್ ಡಿ ರೇವಣ್ಣ ಅವರ ಮನೆಗೆ ಭೇಟಿ ನೀಡಿದ್ದು, ಹಳೆ ನರಸೀಪುರದಲ್ಲಿರುವ ಶಾಸಕ ಎಚ್ ಡಿ ರೇವಣ್ಣ ನಿವಾಸಕ್ಕೆ ನಗರ ಠಾಣೆ ಪಿಎಸ್ಐ ಅವರು ಭೇಟಿ ನೀಡಿದ್ದು, ಇಂದು ಅಥವಾ ನಾಳೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. 3ನೇ ನೋಟಿಸ್ ನೀಡಲು SIT ಸಿದ್ಧತೆ…

Read More

ಬೆಂಗಳೂರು : ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಸಗಿದ ಕೇಸ್ ಸಂಬಂಧಿಸಿದಂತೆ ಶಾಸಕ HD ರೇವಣ್ಣ ನಿನ್ನೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ನಂತರ ಎಸ್ಐಟಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅರ್ಜಿ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.ಎಸ್ಐಡಿ ಪರ ಎಸ್‌ಪಿಬಿ ಬ್ಯಾತ ಎನ್ ಜಗದೀಶ್ ಅವರು ವಾದ ಮಂಡಿಸಿದ್ದು, ಎಚ್ ಡಿ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಸೇರಿಸಿಲ್ಲ ತಿಳಿಸಿದರು. ಅತ್ಯಾಚಾರದ ಆರೋಪ ಇಲ್ಲದಿರುವುದರಿಂದ ನಿರೀಕ್ಷಣ ಜಾಮೀನು ಅಗತ್ಯವಿಲ್ಲ ಆದರೆ ಜಾಮೀನು ನೀಡಬಹುದಾದ ಆರೋಪಗಳು ಮಾತ್ರವಿದೆ ಎಂದರು. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿ ಊರ್ಜಿತವಲ್ಲ.ಈ ದಿನದವರೆಗೆ ಜಾಮೀನು ರಹಿತ ಪ್ರಕರಣ ದಾಖಲಿಸಿಲ್ಲ. ಹೈಕೋರ್ಟಿಗೆ ಎಸ್ಪಿಪಿ ನೀಡಿದ ಮಾಹಿತಿ ದಾಖಲಿಸಿಕೊಂಡ ಕೋರ್ಟ್. ಹಾಗಾಗಿ ಎಸ್ಐಟಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ಎಚ್ ಡಿ ರೇವಣ್ಣ ಅರ್ಜಿ ವಾಪಸ್…

Read More

ಬಾಗಲಕೋಟೆ : ಲೋಕಸಭಾ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಡಿ ಬಿಡಬಹುದು ಎಂಬ ರಾಜೂಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜುಗೌಡ ಒಬ್ಬ ಮೆಂಟಲ್ ಕೇಸ್ ಎಂದು ತಿರುಗೇಟು ನೀಡಿದರು. ಬಾಗಲಕೋಟೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಯತೀಂದ್ರ ಅವರ ಯಾವುದಾದರೂ ಸಿಡಿ ಹೊರ ಬಂದರು ಬರಬಹುದು ಎಂದು ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಹೇಳಿಕೆಯನ್ನು ನೀಡಿದರು ಇದಕ್ಕೆ ತಿಳಿಸಿದರು. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯನ್ನು ನೀಡಿದ್ದು, ಪ್ರಕರಣದ ತನಿಖೆಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ.ಬಿಜೆಪಿಯವರು ಈಗ ಯಾಕೆ ಯಾರು ಮಾತನಾಡುತ್ತಿಲ್ಲ? ಸಿಟಿ ರವಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸದಾನಂದ ಗೌಡ, ಆರ್ ಅಶೋಕ್ ಎಲ್ಲಿ ಹೋದರು? ಎಂದರು. ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ ಎಂದು ಅವರೆಲ್ಲ ಹೇಳುತ್ತಾರೆ.ಈಗ ಮಹಿಳೆಯರಿಗೆ ಅನ್ಯಾಯ ಆಗಿದೆ ಈಗ ಯಾಕೆ ಮಾತನಾಡಿಲ್ಲ?…

Read More

ಬಾಗಲಕೋಟೆ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಹಿಡಿದುಕೊಂಡು ಬರುತ್ತೇವೆ ಎಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು , ಬಿಜೆಪಿಯವರು ತಪ್ಪು ಮಾಡಿದ್ದಾರೆ.ಪ್ರಜ್ವಲ್ ರೇವಣ್ಣ ವಿಡಿಯೋಗಳು ಎಂದು ಗೊತ್ತಿತ್ತು. ಆದರೂ ಯಾಕೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರು? ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ನನ್ನನ್ನು ರೇಪ್ ಮಾಡಿದ್ದಾನೆ ಎಂದು ಮಹಿಳೆಯೇ ಹೇಳಿದ್ದಾಳೆ.ಸಂತ್ರಸ್ತರು ಯಾವತ್ತೂ ಸುಳ್ಳು ಹೇಳಲ್ಲ. ಗೊತ್ತಿದ್ದರೂ ಯಾಕೆ ಬಿಜೆಪಿಯವರು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು. ಮದುವೆಯಾಗಿರುವಂತಹ ಮಹಿಳೆ ಬಹಿರಂಗವಾಗಿ ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಸುಳ್ಳು ಹೇಳಿದರೆ ಅವರ ಮಾನ ಮರ್ಯಾದೆ ಹೋಗಲ್ವಾ? ಆ ಒಂದು ಮಹಿಳೆ ಅತ್ಯಾಚಾರ ಮಾಡಿದಾರೆ ಎಂದು ಹೇಳಿದರು ಕೂಡ ಗೊತ್ತಿದ್ದರೂ ಕೂಡ…

Read More

ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು ವಿಡಿಯೋದಲ್ಲಿರುವ ಸಂತ್ರಸ್ಥೆ ಮಹಿಳೆಯ ಮಗ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ತನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು HD ರೇವಣ್ಣ ವಿರುದ್ಧ ಅಪಹರಣ ಕೇಸ್ ದಾಖಲಿಸಿದ್ದಾನೆ. ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಮಾಡಿರುವ ಆರೋಪ ಕೇಳಿಬಂದಿದ್ದು, ಐಪಿಸಿ ಸೆಕ್ಷನ್ 364/ಅ, 365, ಹಾಗೂ 34 ಅಡಿಯಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಎಚ್ ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಎಂದು ಹೇಳಲಾಗುತ್ತಿದೆ. ಹೊಳೆನರಸೀಪುರದ ಚೆನ್ನಂಬಿಕ ಥಿಯೇಟರ್ ಪಕ್ಕ ಇರುವ ಮನೆ ಎಂದು ಹೇಳಲಾಗುತ್ತಿದೆ. ದೂರಿನಲ್ಲಿ ಏನಿದೆ? ಈ ಕುರಿತಂತೆ ಸಂತ್ರಸ್ತೇ ಮಹಿಳೆಯ ಮಗ ದೂರಿನಲ್ಲಿ ವಿವರಿಸಿದ್ದು, ನನ್ನ ಸ್ನೇಹಿತರ ಬಳಿ ವಿಡಿಯೋ ಬಗ್ಗೆ ಮಾಹಿತಿ ಸಿಕ್ಕಿತ್ತು. ನಿನ್ನ ತಾಯಿಯನ್ನು ಕೈ ಕಾಲು ಕಟ್ಟಿ ಬಲಾತ್ಕಾರ ಮಾಡಿದ್ದಾರೆ.ಈ…

Read More