Author: kannadanewsnow05

ಬೆಳಗಾವಿ : ಹುಬ್ಬಳ್ಳಿಯ ಬಿ ವಿ ಕಾಲೇಜು ಆವರಣದಲ್ಲಿ ನಡೆದ ನೇಹಾ ಹಿರೇಮಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಫಯಾಜ್ ತಂದೆ ಬಾಬಾ ಸಾಹೇಬ್ ಸುಭಾನಿ ಪ್ರತಿಕ್ರಿಯೆ ನೀಡಿದ್ದು ನನ್ನ ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಆಸೆ ಇತ್ತು ಆದರೆ ಅವನು ಕ್ಷಮಿಸಲಾರದಂತ ತಪ್ಪು ಮಾಡಿದ್ದಾನೆ. ಆದ್ದರಿಂದ ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಅದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ತಿಂಗಳ ಹಿಂದೆ ನೇಹಾ ಅವರ ತಂದೆ ಕರೆ ಮಾಡಿ, ಸರ್‌ ನಿಮ್ಮ ಮಗನಿಂದ ನಮ್ಮ ಮಗಳಿಗೆ ತೊಂದರೆ ಇದೆ. ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದರು. ಈ ಕಾರಣಕ್ಕಾಗಿ ನಾನು ಅವನನ್ನು ಬೆಳಗಾವಿಗೆ ಕರೆದುಕೊಂಡು ಬಂದು ಇಲ್ಲಿ ಇಟ್ಟುಕೊಂಡಿದ್ದೆ. ಆದರೆ ಕಳೆದ 2 ವರ್ಷದಿಂದ ಆತ ನನ್ನ ಜೊತೆಗೆ ಇರಲಿಲ್ಲ. ಬದಲಾಗಿ ತಾಯಿ ಜೊತೆ ಇದ್ದ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಳ್ಳುತ್ತಾ ಇದ್ದೆ. ಈ ಘಟನೆ ನಡೆದು 6 ಗಂಟೆಗೆ ನನಗೆ ಗೊತ್ತಾಯಿತು.…

Read More

ಬೆಂಗಳೂರು : ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತೆ ನಿನ್ನೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠಳನ್ನು ಬರ್ಬರವಾಗಿ ಕೊಲೆಗೈಯಲಾಗಿದೆ. ಇದೀಗ ಇದಕ್ಕೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ನೇಹಾಳ ಹತ್ಯೆಯ ಕುರಿತು ಸಂತಾಪ ಸೂಚಿಸಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ ದಾರುಣವಾಗಿ ಹತ್ಯೆಯಾದ ನೇಹಾ ಹೀರೇಮಠ್‌ ಸಾವಿಗೆ ಕಂಬನಿ ಮಿಡಿದ್ದಾರೆ. ಕಾಲೇಜು ಕ್ಯಾಂಪನ್‌ನಲ್ಲಿ ಆಗಿರುವ ಇಂಥ ಹತ್ಯೆ ಆತಂಕ ಮೂಡಿಸಿದೆ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ. ಟ್ವೀಟ್ ನಲ್ಲಿ ನೇಹಾ ಸಾವಿಗೆ ಸಂತಾಪ ಸೂಚಿಸಿದ ಅವರು, ಸಹೋದರಿ ನೇಹಾ ಹಿರೇಮಠ್‌ರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ಧ್ರುವ ಸರ್ಜಾ ಟ್ವೀಟ್‌ ಮಾಡಿದ್ದಾರೆ. https://twitter.com/DhruvaSarja/status/1781327453060800851?t=z_tLta3Xh1eS5nz689xMVQ&s=19

Read More

ಬೆಂಗಳೂರು : ಡ್ರಗ್ ಪೆಡಲರ ಒಬ್ಬನನ್ನು ಬಂದಿಸಲು ಸಿಸಿಬಿ ಪೊಲೀಸರು ತೆರಳಿದ್ದ ವೇಳೆ ನೈಜೀರಿಯಾ ಗಳು ಸಿಸಿಬಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಪೊಲೀಸರು ಅರೆಸೇನಾತು ಕುಡಿಯುವೊಂದಿಗೆ ತೆರಳಿ 8 ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರ ಮೇಲೆ ಹಲ್ಲೆಗೈದಿದ್ದ ನೈಜೀರಿಯಾ ಪ್ರಜೆಗಳನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ರಾಜನಕುಂಟೆ ಬಳಿ 8 ನೈಜೀರಿಯಾ ಪ್ರಜೆಗಳನ್ನು ಈಗ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನೈಜೀರಿಯಾ ಪ್ರಜೆಗಳ ಬಂಧನಕ್ಕೆ ಡಿಸ್ವ್ಯಾಟ್ ಪಡೆಯನ್ನು ಪೊಲೀಸರು ಕರೆದೋಯ್ದಿದ್ದರು. ಡಿಸ್ಪ್ಯಾಟ್ (ರಾಜ್ಯದ ಅರೆಸೇನಾ ತುಕಡಿ) ಕರೆದೋಯ್ದು ಅವರ ಸಹಾಯದಿಂದ ಬಂಧಿಸಿದ್ದಾರೆ. ರಾಜನಕುಂಟೆ ಬಳಿ ನಿನ್ನೆ ರಾತ್ರಿ ಪೊಲೀಸರ ಮೇಲೆ ನೈಜೀರಿಯಾ ಪ್ರಜೆಗಳು ಹಲ್ಲೆ ಮಾಡಿದರು. ಬಂಧನಕ್ಕೆ ತೆರಳಿದ್ದಾಗ ಹಲ್ಲೆಗೈದು ಪರಾರಿಯಾಗಿದ್ದರು. ಈ ವೇಳೆ ರಾಜ್ಯ ಅರೆಸೇನಾ ಪಡೆಯ ಸಹಾಯದಿಂದ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಪೊಲೀಸರು ಕರೆತಂದಿದ್ದಾರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Read More

ಹುಬ್ಬಳ್ಳಿ: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಹುಬ್ಬಳ್ಳಿಯಲ್ಲಿ ನಿನ್ನೆ ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣ ಸುದ್ದಿ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ನೇಹಾ ಮತ್ತು ಫಯಾಜ್ ಇಬ್ಬರ ರೀಲ್ಸ್ ವೈರಲ್ ಆಗುತ್ತಿದೆ. ಹೌದು ನಿನ್ನೆ ಬಿವಿಪಿ ಕಾಲೇಜಿನ ಆವರಣದಲ್ಲಿ ಆರೋಪಿ ಫಯಾಜ್ ನೇಹಾಳನ್ನು 10 ಬಾರಿ ಇರಿದು ಬೀಗರ ವಾಗಿ ಕೊಲೆ ಮಾಡಿದ್ದಾನೆ. ಇದೀಗ ನೇಹಾ ಮತ್ತು ಫಯಾಜ್ ಒಟ್ಟಿಗೆ ಸಲುಗೆಯಿಂದ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನೇಹಾ ಹಾಗೂ ಫಯಾಜ್ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ, ಮತ್ತು ಸ್ನೇಹದ ವೇಳೆ ನೇಹಾ ಮತ್ತು ಫಯಾಜ್ ಒಟ್ಟಿಗೆ ಇರುವ ಫೋಟೋ, ವೀಡಿಯೋಗಳು ವೈರಲ್ ಆಗಿದೆ. ಆರೋಪಿ ಫಯಾಜ್ ಹೇಳಿರುವ ಪ್ರಕಾರ ಬಿಸಿಎ ಓದುವಾಗಿನಿಂದಲೂ ಸ್ನೇಹ ಹಾಗೂ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಇತ್ತೀಚಿಗೆ ನೇಹಾಜ್ನನ್ನು ದೂರ ಮಾಡಿದ್ದಳಂತೆ, ಹಾಗಾಗಿ ಫಯಾಜ್ ಇದೆ ಕರಣಕ್ಕೆ ಕುಪಿತಗೊಂಡು ನೇಹಾಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ನೇಹಾ ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಫಯಾಜ್ ಕಾಲೇಜು…

Read More

ಬೆಂಗಳೂರು : ಕಳೆದ ವರ್ಷದಿಂದಲೂ ಮಳೆ ಬಾರದೆ ರೈತರು ಸೇರಿದಂತೆ ಇಡೀ ರಾಜ್ಯದ ಜನತೆ ತೀವ್ರವಾದ ಸಂಕಷ್ಟವನ್ನು ಎದುರಿಸಿದ್ದರು. ಇದೀಗ ರಾಜ್ಯದ ಹಲವಡೆ ಭಾರಿ ಮಳೆ ಆಗುತ್ತಿದ್ದು ಬಿಸಿಲಿನಿಂದ ಬಸವಾಳದಿದ್ದ ಜನತೆಗೆ ಇದೀಗ ವರುಣ ಕೃಪೆ ತೋರಿ, ತಂಪೆರಿದಿದ್ದಾನೆ. ಅದೇ ರೀತಿಯಾಗಿ ಇಂದು ಬೆಂಗರಲ್ಲೂ ಕೂಡ ವರ್ಷದ ಮೊದಲ ಮಳೆಯಾಗಿದ್ದು, ಬೆಂಗಳೂರು ಮಹಾನಗರದಲ್ಲಿ ಹಲವಡೆ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ಇದೀಗ ವರುಣ ತಂಪೆರಡಿದ್ದಾನೆ. ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ವರ್ಷಧಾರೆಯಾಗಿದ್ದು, ಯಲಹಂಕ ಸುತ್ತಮುತ್ತ ಕೂಡ ಭಾರಿ ಮಳೆ ಆಗಿರುವುದರಿಂದ ಜನರ ಮುಖದಲ್ಲಿ ಸಂತಸ ಮೂಡಿಸಿದೆ.

Read More

ಕೋಲಾರ : ಈ ದೇಶವನ್ನು ಆಳುವ ಸಾಮರ್ಥ್ಯ ಇರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತ್ರ. ಅವರನ್ನು ಬಿಟ್ಟರೆ ಈ ದೇಶವನ್ನು ಆಳುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಹೇಳಿ ಎಂದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದರು. ದೇಶದಲ್ಲಿ ಎರಡು ರಾಜಕೀಯ ಬಣಗಳಿವೆ. ಒಂದು ಎನ್ಡಿಎ ಒಕ್ಕೂಟ ಇನ್ನೊಂದು ಇಂಡಿಯಾ ಒಕ್ಕೂಟ ಇದೆ.ಎರಡು ಬಣಗಳ ಮುಖ್ಯಸ್ಥರು ಯಾರು? ಒಂದು ಬಣಕ್ಕೆ ಯಾರು ಇಲ್ಲ. ಇನ್ನೊಂದು ಬಣಕ್ಕೆ ಸುಭದ್ರ ಸರ್ಕಾರ ಕೊಟ್ಟಿರುವ ನರೇಂದ್ರ ಮೋದಿ ಮುಖ್ಯಸ್ಥರಿದ್ದಾರೆ. ಇಂಡಿಯಾ ಒಕ್ಕೂಟದ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವ್ಯಂಗ್ಯವಾಡಿದರು. ಲೋಕಸಭಾ ಕ್ಷೇತ್ರವನ್ನು ಮುನಿಸ್ವಾಮಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾರೆ 91ನೇ ವಯಸ್ಸಿನಲ್ಲಿ ಯಾವುದೇ ಆಕಾಂಕ್ಷೆ ಇಲ್ಲದೆ ಒಕ್ಕೂಟ ಸೇರಿದ್ದೇನೆ.ಈ ದೇಶ ಆಳುವ ಸಾಮರ್ಥ್ಯ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರುವುದು. ಮೋದಿ ಬಿಟ್ಟು ಯಾರಿಗಾದರೂ ಆಳುವ ಶಕ್ತಿ ಇದ್ದರೆ ಹೇಳಲಿ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವು ಎನ್.ಡಿ.ಎ ಒಕ್ಕೂಟ…

Read More

ಬಾಗಲಕೋಟೆ : ಚಿನ್ನಾಭರಣ ಅಂಗಡಿ ಇಟ್ಟು ಕೊಂಡಿದ್ದ ಸಹೋದರರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಎಂದು ಹೇಳಿದ್ದಕ್ಕೆ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ. ಚಿನ್ನಾಭರಣ ಅಂಗಡಿ ನಡೆಸುತ್ತಿದ್ದ ಸಹೋದರರ ಮೇಲೆ ಇದೀಗ ಹಲ್ಲೆ ನಡೆದಿದೆ. ಆನಂದ್ ರೇವಣಕಲ್, ಪ್ರಶಾಂತ್ ರೇವಣಕಲ್ ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ.ಸಹೋದರರ ತಲೆ ತುಟಿಯಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನಿಜಾಂ ಹಾಗೂ ಅಶ್ಫಾಕ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಸಹೋದರರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಘಟನೆ ಕುರಿತಂತೆ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಇತ್ತೀಚಿಗೆ ಕೊಲೆ ಪ್ರಕರಣಗಳ ಸಂಖ್ಯೆ ದಿನದಿಂದ ಗೆದ್ದನಕ್ಕೆ ಹೆಚ್ಚುತ್ತಿದ್ದು, ಇಂದು ತಲೆಯ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿಹಾಕಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮಲೂರು ಸಮೀಪದ ಬಿಡಿಎ ಪಾರ್ಕ್ ಬಳಿ ಶುಕ್ರವಾರ ವರದಿಯಾಗಿದೆ. ಶಿವಾಜಿನಗರದ ನಿವಾಸಿ ಸತೀಶ್‌ ಕುಮಾರ್(32) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊರಿಯರ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಸತೀಶ್‌ಕುಮಾರ್ ನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆ ಮಾಡಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹಲಸೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

Read More

ರಾಯಚೂರು : ಬೊಲೆರೋ ವಾಹನ ಒಂದು ಬೈಕ್ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಗಳಿಬ್ಬರರು ದಾರ್ಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ಮುದುಗಲ್ ಪಟ್ಟಣದಲ್ಲಿ ಬೋಲೆರೋ ವಾಹನ ಡಿಕ್ಕಿಯಾಗಿ ದಂಪತಿಗಳಿಬ್ಬರು ಸಾವನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ನಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಶಿವಬಸವ (37) ಹಾಗೂ ಪತ್ನಿ ಹೊನ್ನಮ್ಮ (33) ಮೃತ ದಂಪತಿಗಳಾಗಿದ್ದಾರೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾಸನ : ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು ಕನಸಿನಲ್ಲಿಯೂ ಕೂಡ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು. ಹಾಸನ ಜಿಲ್ಲೆಯ ಅರಕಲಗೂರು ತಾಲೂಕಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದ್ದು, ಗ್ಯಾರಂಟಿಗಳು ಶಾಶ್ವತವಲ್ಲ ತಾತ್ಕಾಲಿಕ ಎಂದು ಹೇಳಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಆರ್ ಅಶೋಕ್ ಗೆ ಹೇಳುತ್ತಿದ್ದೇನೆ ಕನಸಿನಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ ಎಂದು ತಿಳಿಸಿದರು. ಲೋಕಸಭಾ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷ ಉಳಿಯುವುದಿಲ್ಲ. ರಾಜ್ಯದಲ್ಲಿ ಮುಂದೆ ಹಸ್ತ ಕಮಲ ಪಕ್ಷಗಳು ಎರಡೇ ಉಳಿಯುವುದು. ಲೋಕಸಭಾ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷ ಇರುವುದಿಲ್ಲ. ಗ್ಯಾರೆಂಟಿಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆಂದು ಎಚ್ ಡಿ ಕುಮಾರಸ್ವಾಮಿ…

Read More