Author: kannadanewsnow05

ಬೆಂಗಳೂರು : ರೌಡಿ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬೈರತಿ ಬಸವರಾಜುಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಕಾರಣೆ ಮಾಡಿದೆ. ನ್ಯಾಯಾಧೀಶರಾದ ಸುನೀಲ್‌ ದತ್ತು ಅವರಿದ್ದ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ. ಇದರೊಂದಿಗೆ ಮತ್ತೆ . ಬಿಕ್ಲು ಶಿವು ಕೊಲೆಯಲ್ಲಿ ಅವರಿಗೆ ಬಂಧನದ ಭೀತಿ ಎದರು ಆಗಿದೆ. ಪ್ರಕರಣ ಹಿನ್ನೆಲೆ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ರೌಡಿಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆ ಆರೋಪದ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್‌ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. . ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು…

Read More

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಮೇಲೆ ಚಿರತೆ ಒಂದು ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಆರೋಪ ಕೇಳಿ ಬಂದಿದೆ. ಚನ್ನಪಟ್ಟಣ ತಾಲೂಕಿನ ಬುವವಳ್ಳಿಯ ಶ್ರೇಯಸ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿದೆ. ಪೊನ್ನಾಚಿ ಕ್ರಾಸ್ ಬಳಿ ಏಕಾಏಕಿ ಬಾಲಕ ಶ್ರೇಯಸ್ ಮೇಲೆ ಚಿರತೆ ದಾಳಿ ಮಾಡಿದೆ. ಬಾಲಕ ಶ್ರೇಯಸ್ ಕಿವಿಗೆ ತರಚಿತ ಗಾಯದ ಗುರುತು ಪತ್ತೆಯಾಗಿದೆ ಡ್ರೋನ್ ಬಳಸಿ ಅರಣ್ಯ ಸಿಬ್ಬಂದಿಗಳು ಸುತ್ತಮುತ್ತಲು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಚರಿತೆ ಪತ್ತೆ ಆಗಿಲ್ಲ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.

Read More

ಮಧ್ಯಾಪ್ರದೇಶ : ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕಳಶಯಾತ್ರೆಯಲ್ಲಿ ಭೀಕರ ಕಾಲ್ತುಳಿತ ನಡೆದಿದೆ ಈ ಒಂದು ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿದು ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಗ್ವಾಲಿಯರ್‌ನ ದಾಬ್ರಾದಲ್ಲಿ ಮಂಗಳವಾರ ನಡೆದ ನವಗ್ರಹ ಪೀಠ ಕಲಾಶ್ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಆಯೋಜಿಸಿದ್ದ ಈ ಕಾರ್ಯಕ್ರಮವು ಭಾರಿ ಜನಸಮೂಹವನ್ನು ಸೇರಿದ್ದು ಘಟನೆ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಗೊಂದಲ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಇದೀಗ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಡಿಕೆಶಿ ಅವರು ತೆರಳಬೇಕಿದ್ದ ಬೆಳಗಿನ ಎರಡು ವಿಮಾನಗಳ ಟಿಕೆಟ್ ಅನ್ನು ರದ್ದುಗೊಳಿಸಿದ್ದಾರಂತೆ. ಇದೀಗ 3ನೇ ಬಾರಿ ಟಿಕೆಟ್ ಬುಕ್ ಮಾಡಿ ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಳಗ್ಗೆಯಿಂದ ಎರಡು ವಿಮಾನಗಳ ಟಿಕೆಟ್ ಕ್ಯಾನ್ಸಲ್ ಮಾಡಲಾಗಿದ್ದು, ನಿಗದಿಯಂತೆ ಡಿಸಿಎಂ ಡಿಕೆಶಿ ಬೆಳಗ್ಗೆಯೇ ಪ್ರಯಾಣ ಬೆಳಸಬೇಕಿತ್ತು. ಆದರೆ ಈಗ ಮಧ್ಯಾಹ್ನ 12.30ರ ವಿಮಾನದಲ್ಲಿ ತೆರಳಲು ಟಿಕೆಟ್ ಬುಕ್ಕಿಂಗ್‌ ಮಾಡಲಾಗಿದೆ. ಎರಡು ಬಾರಿ ಟಿಕೆಟ್ ಯಾಕೆ ರದ್ದುಗೊಳಿಸಿದರು ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಬಳಿಕ 12:30 ವಿಮಾನದಲ್ಲಿ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ರಾಜ್ಯದಲ್ಲಿ ಅಧಿಕಾರದ ಹಸ್ತಾಂತರದ ಗೊಂದಲಕ್ಕೂ ಮಾತನಾಡಿರುವ ಡಿಕೆಶಿ, ನಾಯಕತ್ವದ ಗೊಂದಲದ ಬಗ್ಗೆ ಪರ, ವಿರೋಧ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಲಿದೆ. ಎಲ್ಲರೂ ಮೌನ ವಹಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ…

Read More

ವಿಜಯಪುರ : ವಿಜಯಪುರದಲ್ಲಿ ಮತ್ತೆ ಭೂಕಂಪ ಆಗಿರುವ ಅನುಭವ ಆಗಿದ್ದು ಬೆಳಗ್ಗೆ 11: 43 ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ದುರಾದ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವ ಆಗಿದೆ ವಿಜಯಪುರ ಹಾಗೂ ಸುತ್ತಮುತ್ತಲೂ ಕೂಡ ಭೂಮಿಕಂಪಿಸಿದ ಅನುಭವ ಆಗಿದ್ದು, ಆದರ್ಶ ನಗರ ಭೂತನಾಳ ಪಾನಿ ನಗರ ಮತ್ತು ಇತರೆ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು ಜನರು ಬೆಚ್ಚಿಬಿದ್ದಿದ್ದಾರೆ.

Read More

ಉತ್ತರಪ್ರದೇಶ : ಕಳೆದ ಕೆಲವು ದಿನಗಳ. ಹಿಂದೆ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವನ್ನು ಸ್ಫೋಟ ಮಾಡುವ ಕುರಿತು ಪ್ಲಾನ್ ರೂಪಿಸಿದ್ದ ಕೈದಿಯನ್ನು ಜೈಲಿನಲ್ಲಿಯೇ ಸಹಕೈದಿ ಒಬ್ಬ ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಹೌದು ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಗೊಂಡಿದ್ದ ಆರೋಪಿಯನ್ನು ಫರಿದಾಬಾದ್ ಜೈಲಿನಲ್ಲೇ ಸಹ ಕೈದಿಯೊಬ್ಬ ಕೊಲೆ ಮಾಡಿದ್ದಾನೆ ಅಬ್ದುಲ್ ರೆಹಮಾನ್(20) ಕೊಲೆಯಾದ ಆರೋಪಿಯಾಗಿದ್ದು, ಜೈಲಿನಲ್ಲಿದ್ದ ಕಾಶ್ಮೀರಿ ಯುವಕ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆ ಎಸಗಿದ್ದಾನೆ. ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್‌ ಚೌಧರಿ ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ರೆಹಮಾನ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈಗ ಈ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

Read More

ಮಂಗಳೂರು : ಮಂಗಳೂರು ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮ ಬಯಲಾಗಿದೆ. ಮಂಗಳೂರಿನ ಕಾಲೇಜಿಗೆ ಸೇರಲು ವಿದ್ಯಾರ್ಥಿನಿ ಈ ಒಂದು ಅಪಹರಣದ ನಾಟಕ ಮಾಡಿದ್ದು ಬಯಲಾಗಿದೆ. ಹೌದು ನಿನ್ನ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಅಪಹರಣದ ನಾಟಕವಾಡಿದ್ದು ಮಂಗಳೂರಿನ ಕಾಲೇಜಿಗೆ ಸೇರಲು ಯುವತಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಕಿಡ್ನಾಪ್ ಡ್ರಾಮ ಮಾಡಿದ್ದು, ಮಂಗಳೂರು ಕಾಲೇಜು ಸೇರಿಸುತ್ತಾರೆ ಎಂದು ಯುವತಿ ಪ್ಲಾನ್ ಮಾಡಿದ್ದಾಳೆ. ನಿನ್ನೆ ಬೆಳ್ತಂಗಡಿ ಠಾಣೆಯಲ್ಲಿ ಕಿಡ್ನ್ಯಾಪ್ ಯತ್ನ ಕೇಸ್ ದಾಖಲಾಗಿತ್ತು. ಖತರ್ನಾಕ್ ಐಡಿಯಾ! ಕಾಲೇಜಿಗೆ ಹೋಗೋಕು ಮುನ್ನ ವಿದ್ಯಾರ್ಥಿನಿ ಪುಸ್ತಕಗಳನ್ನು ಮನೆಯಲ್ಲಿ ಸುಟ್ಟು ಹಾಕಿದ್ದಾಳೆ. ಬಳಿಕ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಾಳೆ. ರಸ್ತೆ ಬದಿಯಲ್ಲಿ ಸ್ಕೂಟಿಯನ್ನು ನಿಲ್ಲಿಸಿದ್ದಾಳೆ. ಬಳಿಕ ಕಿಡ್ನ್ಯಾಪ್ ನಾಟಕ ಮಾಡಿದ್ದಾಳೆ. ಘಟನೆ ನಡೆದ ಬಳಿಕ ಶಾಸಕ ಹರೀಶ್ ಪೂಂಜಾ ಬಾಲಕಿಯನ್ನ ಭೇಟಿಯಾಗಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಸಿದ್ದರು. ತನಿಖೆ ಮೇಲೆ ತನಿಖೆ ನಡೆಸಿದ್ದು, ಕೊನೆಗೆ ಪೊಲೀಸರ ಮುಂದೆ ವಿದ್ಯಾರ್ಥಿನಿ …

Read More

ಉತ್ತರಕನ್ನಡ : ಅಕ್ರಮ ಸಂಬಂಧ ಬಯಲಾಗಿದಕ್ಕೆ ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಸುಚಿತ್ರಾ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿದ್ದಾಳೆ ಎಂದು ಸುಚಿತ್ರಾ ಪತಿ ಮಹೇಶ್ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ. ಹೌದು ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಈ ವಿಚಾರವನ್ನು ನನ್ನ ಮಗಳು ಈಗ ತಿಳಿಸಿದ್ದಾಳೆ. ಮೊದಲು ಭಯದಿಂದ ಮಗಳು ಈ ವಿಚಾರವನ್ನು ತಿಳಿಸಿರಲಿಲ್ಲ. ಆದರೆ ಈಗ ಸುಚಿತ್ರಾ ಬ್ಲ್ಯಾಕ್‌ಮೇಲ್‌ ಮಾಡಿರುವ ಬಗ್ಗೆ ತನ್ನ ಜೊತೆ ಹೇಳಿದ್ದಾಳೆ ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ. ಕಮಲಾಕರ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ ಖಾಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಟ್ಟುಕೊಂಡಿದ್ದಳು. ಮಕ್ಕಳ ಜತೆ ನಾನು ನಿನ್ನ ಜತೆ ಬರುತ್ತೇನೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸುತ್ತಿದ್ದಳು. ಹೀಗಾಗಿ ಮರ್ಯಾದೆಗೆ ಅಂಜಿ ಕಮಲಾಕರ್ ಭಟ್‌ ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಎಂದು ತಿಳಿಸಿದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಚಿರತೆ ಮತ್ತೆ ಭೇಟಿ ಹುಟ್ಟಿಸಿದ್ದು ಬೆಂಗಳೂರಿನ ಅಂಜನಾಪುರದಲ್ಲಿ ಮೂರನೇ ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಅಂಜನಾಪುರದ ಫೈವ್ ಜಿ ಬ್ಲಾಕ್ ನಲ್ಲಿ ಚಿರತೆ ಕಾಣಿಸಿಕೊಂಡಿದೆ.ಈ ಹಿಂದೆ ಫೆಬ್ರವರಿ 3 ಮತ್ತು 6ನೇ ತಾರೀಕಿನಂದು ಚಿರತೆ ಕಾಣಿಸಿಕೊಂಡಿತ್ತು. ಸಂದೀಪ್ ಎಂಬುವವರ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ತಡರಾತ್ರಿ ಚಿರತೆ ಕಂಡು ನಿವಾಸಿಗಳು ಭಯಭೀತರಾಗಿದ್ದಾರೆ. ಮನೆಯಿಂದ ಹೊರಗಡೆ ಬರುವುದಕ್ಕೂ ನಿವಾಸಿಗಳು ಇದೀಗ ಭಯಪಡುತ್ತಿದ್ದಾರೆ. ಈ ಹಿಂದೆಯೂ ಕೂಡ ಇದೇ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇದೀಗ ಮೂರನೇ ಬಾರಿ ಚಿರತೆ ಕಾಣಿಸಿಕೊಂಡಿದ್ದು ಅದರ ಒಡಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡಿಯೋ ನಿವಾಸಿಗಳು ಆದಷ್ಟು ಬೇಗ ಚಿರತೆಯನ್ನು ಹೆಸರೆಹಿಡಿರಿ ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಘೋರ ಕೃತ್ಯ ಒಂದು ನಡೆದಿದ್ದು ಒಂದು ದಿನದ ನವಜಾತ ಶಿಶುವನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯಲ್ಲಿ ನಡೆದಿದೆ. ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಕಸದ ತೊಟ್ಟಿಯಲ್ಲಿ ಒಂದು ದಿನದ ಗಂಡು ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಮೃತದೇಹವನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More