Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಕನ್ನಡ : ಮತಗಟ್ಟೆ ಕೇಂದ್ರದಲ್ಲಿ ‘ನಮ್ಮ ಮತ ನಮ್ಮ ಹಕ್ಕು’ ಬದಲು ‘ನಮ್ಮ ಹಕ್ಕು ನಮ್ಮ ಶಕ್ತಿ’ ಬರೆದಿದ್ದಕ್ಕೆ ಚುನಾವಣಾಧಿಕಾರಿಗೆ ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಅಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ. ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಹಿನ್ನೆಲೆ ಇಂದು ಕುಮಟಾ ಪಟ್ಟಣ ಗಿಬ್ ಅಂಗ್ಲಮಾಧ್ಯಮ ಶಾಲೆ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಶಾಸಕ. ಈ ವೇಳೆ ಗೋಡೆಯ ಮೇಲೆ “ನಮ್ಮ ಮತ ನಮ್ಮ ಶಕ್ತಿ’ ಬರೆಹ ಕಂಡು ಸಿಡಿಮಿಡಿಗೊಂಡಿದ್ದಾರೆ. ತಕ್ಷಣ ಚುನಾವಣಾ ಸಿಬ್ಬಂದಿಗಳಿಗೆ ಕರೆದು ಬರಹದ ಮೇಲೆ ಪೋಸ್ಟರ್ ಅಂಟಿಸಿ ಮರೆಮಾಚಿಸಿದ್ದಾರೆ. ಮತಗಟ್ಟೆಯ ಗೋಡೆಯ ಮೇಲೆ ಈ ರೀತಿ ಬರೆಯುವಂತೆ ಹೇಳಿದವರು ಯಾರು? ಶಕ್ತಿ ಎಂಬ ಪದ ಯಾಕೆ ಬಳಕೆ ಮಾಡಿದ್ದೀರಿ? ಶಕ್ತಿ ಎನ್ನುವುದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿಲ್ಲವೇ? ಮತಗಟ್ಟೆಯಲ್ಲಿ ಈ ರೀತಿ ಬಹಳ ದೊಡ್ಡದಾಗಿ ಬರೆದಿರುವುದು ನನಗೆ ಅಸಮಾಧಾನ ತಂದಿದೆ ಎಂದು…
ಬೆಂಗಳೂರು : ಇತ್ತೀಚಿಗೆ ಯುವ ಸಮೂಹವು ಎಷ್ಟು ಸೂಕ್ಷ್ಮವಾಗಿದೆ ಎಂದರೆ ಒಂದು ಮಾತು ಹೆಚ್ಚು ಬೈದರು ಏನಾದರು ಒಂದು ಅನಾಹುತ ಮಾಡಿಕೊಳ್ಳುವಷ್ಟು ಬದಲಾಗಿ ಬಿಟ್ಟಿದ್ದಾರೆ.ಇದಕ್ಕೆಲ್ಲ ಮೂಲ ಕಾರಣ ಮೊಬೈಲ್. ಇದೀಗ ಇಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಪೋಷಕರು ಜಾಸ್ತಿ ಮೊಬೈಲ್ ಬಳಸದಂತೆ ಮಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ಇದರಿಂದ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಒಂದು ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಿಖಿತಾ(18) ನೇಣಿಗೆ ಶರಣಾದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.ಸುಧಾ ಮತ್ತು ನಾರಾಯಣ ದಂಪತಿಯ ಪುತ್ರಿಯಾದ ಮೃತ ಲಿಖಿತಾ, ಪ್ಯಾರಾಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಓದಿನಲ್ಲಿಯೂ ಮುಂದೆ ಇದ್ದ ಲಿಖಿತಾ, ಇತ್ತೀಚಿಗೆ ಫೋನಿನ ಗೀಳು ಹತ್ತಿಸಿಕೊಂಡಿದ್ದಳಂತೆ. ಯಾವಾಗಲೂ ಫೋನಿನಲ್ಲಿ ಮಾತನಾಡಿತ್ತಿದ್ದ ಆಕೆ, ಚಾಟಿಂಗ್, ಸ್ನ್ಯಾಪ್, ಇನ್ಸ್ಟಾ, ಫೇಸ್ಬುಕ್ ಎಂದು ಫೋನ್ನಲ್ಲಿ ಬ್ಯುಸಿ ಇರುತ್ತಿದ್ದಳು. ಇದನ್ನ ಗಮನಿಸಿದ್ದ ಲಿಖಿತಾ ತಂದೆ ನಾರಯಣ್ ಬೆಳಿಗ್ಗೆ ಬೈದು ಬುದ್ದಿ ಹೇಳಿದ್ದಾರೆ.ಈ ಹಿನ್ನಲೆ ಯುವತಿ ರೂಂ ಸೇರಿದ್ದರು.…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, , ಈ ಸಂಬಂಧ ನೀಡಿದ್ದು 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ಇಂಟರ್ ಪೋಲ್ ಎಸ್ಐಟಿಗೆ ಮಾಹಿತಿ ನೀಡಿದೆ. ಸಂಸದ ಪ್ರಜ್ವಲ್ ರೇವಣ್ಣ ಕಾರ್ನರ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗ್ಲೇ 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಲಾಗಿದೆ.ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ಸಿಕ್ಕರೆ ಹಂಚಿಕೊಳ್ಳುತ್ತೇವೆ ಎಂದು ಇಂಟರ್ ಪೋಲ್ ಮಾಹಿತಿ ರವಾನೆ ಬಗ್ಗೆ SIT ಗೆ ಮಾಹಿತಿ ನೀಡಿದೆ. ಪ್ರಜ್ವಲ್ ರೇವಣ್ಣ ಯಾವುದೇ ಏರ್ಪೋರ್ಟ್, ಬಂದರೂ, ಗಡಿಯಲ್ಲಿ ಕಾಣಿಸಿದರೆ ಮಾಹಿತಿ ನೀಡಲಾಗುತ್ತದೆ ಎಂದು ಇಂಟರ್ ಪೋಲ್ ಎಸ್ಐಟಿಗೆ ಮಾಹಿತಿ ನೀಡಿದೆ.ನೆನ್ನೆ ಸಂಜೆ ಎಸ್ಐಟಿಗೆ ಸಿಕ್ಕಿದೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಬ್ಲೂ ಕಾರ್ನರ್ ಎ ನೋಟೀಸ್ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ ಅವರ ಚಲನ ವಲನಗಳು ಏನು ಅವರು ಏನು ಮಾಡುತ್ತಿದ್ದಾರೆ.…
ಧಾರವಾಡ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಧಾರವಾಡದಲ್ಲಿ ಮತದಾರರನ್ನು ಕ್ಯೂ ನಿಲ್ಲಿಸಿ ಚುನಾವಣಾ ಸಿಬ್ಬಂದಿಗಳು ಊಟಕ್ಕೆ ತೆರಳಿರುವ ಘಟನೆ ನಡೆದಿದೆ.ಇದರಿಂದ ಸರತಿ ಸಾರಿನಲ್ಲಿ ನಿಂತಿದ್ದ ಮತದಾರರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೌದು ಈ ಒಂದು ಉಘಡನೆ ಧಾರವಾಡ ನಗರದ ಕುಮಾರಸ್ವಾಮಿ ಮೂಕಾಂಬಿಕೆ ನಗರದ ಮತಗಟ್ಟೆ ಸಂಖ್ಯೆ 180 ರಲ್ಲಿ ಈ ಒಂದು ಘಟನೆ ನಡೆದಿದ್ದು ಚುನಾವಣಾ ಸಿಬ್ಬಂದಿಗಳು ಮತದಾರರನ್ನು ಹೊರಗಡೆ ಕಿವಿನಲ್ಲಿ ನಿಲ್ಲಿಸಿ ಒಳಗಡೆ ಊಟ ಮಾಡುತ್ತಿರುವ ಘಟನೆ ನಡೆದಿದೆ. ಧಾರವಾಡದ ಕುಮಾರಸ್ವಾಮಿ ಅವರ ಮೂಕಾಂಬಿಕೆ ನಗರದಲ್ಲಿ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಮತದಾರರನ್ನು ಕ್ಯು ನಿಲ್ಲಿಸಿ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದಾರೆ. ಮತಗಟ್ಟೆ 180 ರಲ್ಲಿ ಬಾಗಿಲು ಹಾಕಿ ಸಿಬ್ಬಂದಿ ಊಟಕ್ಕೆ ತೆರಳಿರುವ ಘಟನೆ ನಡೆದಿದೆ. ಇದರಿಂದ ಕ್ಯೂನಲ್ಲಿ ನಿಂತಿದ್ದ ಮತದಾರರು ಚುನಾವಣಾ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.
ಬೆಂಗಳೂರು : ಒಂದೆಡೆ ಸುಡು ಬಿಸಿಲು ಮತ್ತೊಂದೆಡೆ ಮತದಾರನ ಉತ್ಸಾಹ ರಾಜ್ಯದಲ್ಲಿ ಎರಡನೇ ಸುತ್ತಿನ ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದೂ, ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಹೌದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದ ಮತದಾನ ನಡೆದಿದ್ದು, ಮತದಾರರಿಂದ ಭರ್ಜರಿ ರೆಸ್ಪೋನ್ಸ್ ಸಿಕ್ಕಿದ್ದು, ಇಂದು ಮಧ್ಯಾಹ್ನ 3 ಗಂಟೆಯವರೆಗೆ ಶೇ 54.20 ರಷ್ಟು ಮತದಾನ ಆಗಿದೆ ಎಂದು ತಿಳಿದುಬಂದಿದೆ. ರಾಯಚೂರು 49.4, ಬೀದರ್ 47.89, ಕಲ್ಬುರ್ಗಿ 47.67, ಚಿಕ್ಕೋಡಿ 59.65, ಕೊಪ್ಪಳ 55.67, ವಿಜಯಪುರ 49.89, ಬಾಗಲಕೋಟೆ 54.95, ಬೆಳಗಾವಿ 53.85, ಬಳ್ಳಾರಿ 56.56, ಹಾವೇರಿ 58.45, ಶಿವಮೊಗ್ಗ 57.96, ಉತ್ತರ ಕನ್ನಡ 55.98, ದಾವಣಗೆರೆ 57.31 ಹಾಗೂ ಧಾರವಾಡ ಕ್ಷೇತ್ರದಲ್ಲಿ 55 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತದಾನಕ್ಕೆ ಅವಕಾಶ ನೀಡಿ ಎಂದು ಶಾಸಕನೆ ಕುಲಕರಣಿ ಸಲ್ಲಿಸಿದ ಅರ್ಜಿಯನ್ನು ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಗೊಳಿಸಿತ್ತು. ಆದರೆ ಇದೀಗ ಕರ್ನಾಟಕ ಹೈಕೋರ್ಟ್ ವಿನಯ್ ಕುಲಕರ್ಣಿ ಅವರಿಗೆ ಮತದಾನಕ್ಕೆ ಅವಕಾಶ ನೀಡಿದೆ. ಹೌದು ಶಾಸಕ ವಿನಯ್ ಕುಲಕರ್ಣಿಗೆ ಮತದಾನದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಈ ಕುರಿತಂತೆ ಹೈಕೋರ್ಟ್ ಏಕ ಸದಸ್ಯ ಪೀಠ ಅನುಮತಿ ನೀಡಿ ಆದೇಶ ಹೊರಡಿಸಿದೆ.ಮತದಾನ ಮಾಡಿ ತಕ್ಷಣ ಧಾರವಾಡ ತೊರೆಯುವಂತೆ ಶಾಸಕ ವಿನಯ್ ಕುಲಕರಣಿಗೆ ಹೈಕೋರ್ಟ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮಂಡ್ಯ : ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ವಿರುದ್ಧ ಕಾಂಗ್ರೆಸ್ ಶಾಸಕ ರವಿ ಗಣಿಗ ಆಕ್ರೋಶ ಹೊರ ಹಾಕಿದ್ದು, ಈ ಒಂದು ಪ್ರಕರಣದಲ್ಲಿ ಹಾಸನದ ಮಾಜಿ ಶಾಸಕನ ಕೈವಾಡವಿದೆ ಎಂದು ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎನ್ನುವುದಕ್ಕೆ ಸಾಕ್ಷಿ ತೋರಿಸಲಿ. ಡಿಕೆ ಶಿವಕುಮಾರ್ ಅವರ ಬಳಿ ನಿತ್ಯ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ. ದೇವರಾಜೇಗೌಡ, ಮಾಜಿ ಶಾಸಕ ಏಕೆ ಷಡ್ಯಂತ್ರ ಮಾಡಿರಬಾರದು? ಎಂದು ಪ್ರಶ್ನಿಸಿದರು. ದೇವರಾಜೇಗೌಡ ಶಿವರಾಮೇಗೌಡ ಇಬ್ಬರು ಇರಬಹುದು ಅಲ್ಲವೇ? ಶಿವರಾಮೇಗೌಡರನ್ನು ಕಳುಹಿಸಿ ಯಾಕೆ ಷಡ್ಯಂತ್ರ ಮಾಡಿರಬಾರದು? ಪ್ರಜ್ವಲ್ ಸ್ಟೇ ತಂದಾಗ ದೇವರಾಜೇಗೌಡ ಹಾಸನದಲ್ಲಿ ಏನು ಹೇಳಿದರು ಎಲ್ಲವನ್ನು ರಿಲೀಸ್ ಮಾಡುತ್ತೇನೆ ಅಂತ ಹೇಳಿದ್ದರು ಅಲ್ವಾ. ಪೆನ್ ಡ್ರೈವ್ ಕೇಸ್ನಲ್ಲಿ ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಆರೋಪಿಸದರು. ಒಂದು ತಿಂಗಳ ದೇವರಾಜೇಗೌಡ…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ಅವರ ವಿರುದ್ಧ ಈಗಾಗಲೇ ಎಸ್ಐಟಿ ತನಿಖೆ ಕೈಗೊಂಡಿದ್ದು ಈ ಕುಡಿದಂತೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ ಸಿಬಿಐ ತನಿಖೆಯು ಬೇಡ SIT ತನಿಖೆಯು ಬೇಡ ನ್ಯಾಯಾಂಗ ತನಿಖೆಯಾಗಲಿ ಎಂದು ಅಗ್ರಹಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವ ಸಿಬಿಐ ತನಿಖೆಯು ಬೇಡ SIT ತನಿಖೆಯು ಬೇಡ ಹೈಕೋರ್ಟ್ ಮೂಲಕ ನ್ಯಾಯಾಂಗ ತನಿಖೆಯಾಗಲಿ ಎಂದು HD ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಇದುವರೆಗೂ ಭಾರತಕ್ಕೆ ಬಂದಿಲ್ಲ. ಅಲ್ಲದೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ರೇವಣ್ಣ ಅವರು ಕೂಡ ನ್ಯಾಯಾಂಗದ ಮೂಲಕ ಸತತವಾಗಿ ಹೋರಾಟ ಮಾಡುತ್ತಲೇ ಇದ್ದಾರೆ.
ಮಂಗಳೂರು : ಅತ್ಯಂತ ವೇಗವಾಗಿ ಬಂದಂತಹ ಆಂಬುಲೆನ್ಸ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೇರಳ ಮೂಲದ ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಅಂಬುಲೆನ್ಸ್ ಡಿಕ್ಕಿಯಾಗಿ ಕಾರಿನಲ್ಲಿ ತೆರಳುತ್ತಿದ್ದವರು ಮೂವರು ಇದೀಗ ಸಾವನಪ್ಪಿದ್ದಾರೆ.ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದರೆ ಒಬ್ಬ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಕಾಸರಗೋಡು ಜಿಲ್ಲೆಯ ಮಂಜೆಶ್ವರ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು ಕೇರಳದ ತ್ರಿಶೂರು ಜಿಲ್ಲೆಯ ಗುರುವಾಯುರು ಗ್ರಾಮದವರು ಎಂದು ಹೇಳಲಾಗುತ್ತಿದೆ. ಶ್ರೀನಾಥ್, ಶರತ್ ಮೆನನ್ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ ಅಪಘಾತದ ವೇಳೆ ಆಂಬುಲೆನ್ಸ್ನಲ್ಲಿದ್ದ ರೋಗಿಗೂ ಗಾಯವಾಗಿದೆ. ಘಟನೆ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಮಾಡಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಶಿಕಾರಿಪುರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಇಂದು ಮತದಾನ ಹಿನ್ನೆಲೆಯಲ್ಲಿ ಬೈಕ್ ಸವಾರ ಮತದಾನ ಮಾಡಲು ತೇರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಮಂಜುನಾಥ್ (32) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ಚುರ್ಚಿಗೊಂಡಯಿಂದ ಭದ್ರಾವತಿಗೆ ತೆರಳುವಾಗ ಈ ಒಂದು ಅಪಘಾತ ಸಂಭವಿಸಿದೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.