Subscribe to Updates
Get the latest creative news from FooBar about art, design and business.
Author: kannadanewsnow05
ಶಿವಮೊಗ್ಗ : ಶಿವಮೊಗ್ಗದಲ್ಲಿ ಈ ಬಾರಿ ಗೀತಾ ಶಿವರಾಜ್ ಕುಮಾರ ಗೆಲುವು ಗ್ಯಾರಂಟಿ. ಆದರೆ ರಾಜ್ಯದಲ್ಲಿ ಯಾವ ಮೋದಿ ಆಟವೂ ನಡೆಯೊಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಯಾವತ್ತೂ ಇಷ್ಟೊಂದು ಒಗ್ಗಟ್ಟು ಕಂಡಿರಲಿಲ್ಲ. ಈ ಬಾರಿ ಕಾರ್ಯಕರ್ತರು ಕಮಿಟ್ಮೆಂಟ್ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಆದ ಮೇಲೆ ಕೆಲಸಗಳು ಚೆನ್ನಾಗಿ ನಡೆಯುತ್ತಿವೆ. ಮತದಾರರು ಕೂಡ ಈ ಬಾರಿ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಂಘಟನೆ ಕೊರತೆ ಇತ್ತು. ಈಗ ಬಹಳ ಚೆನ್ನಾಗಿ ಸಂಘಟನೆ ಆಗಿದೆ ಎಂದರು.ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರನ್ನ ಮತದಾರರು ಗೆದ್ದೇ ಗೆಲ್ಲಿಸುತ್ತಾರೆ. ಯಾವ ಮೋದಿಯೂ ಏನೂ ಮಾಡಲು ಆಗಲ್ಲ. ಈ ಬಾರಿ ಗೀತಾ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಇತ್ತೀಚೆಗೆ ಹುಬ್ಬಳ್ಳಿಯ ಬಿವಿ ಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಪ್ರಕರಣವನ್ನು ಸಿಬಿಐ ವಹಿಸಿ ಎಂದು ಅಗ್ರಹ ಪಡಿಸಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬಿಜೆಪಿ ಸಮಾವೇಶ ನಡೆಯುತ್ತಿದ್ದು ಈ ಒಂದು ಸಮಾವೇಶದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರು ಮಾತನಾಡಿ, ವೈಯಕ್ತಿಕ ವಿಚಾರಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ನಡೆದಿಲ್ಲ ಮತಾಂತರ ಆಗಲು ನೇಹಾ ಹಿರೇಮಠ ಒಪ್ಪದಿದ್ದಕ್ಕೆ ಹತ್ಯೆಯಾಗಿದೆ ಎಂದು ಅವರು ತಿಳಿಸಿದರು. ನೇಹಾ ಕೊಲೆಗೆ ನ್ಯಾಯ ಸಿಗಬೇಕು ಅಂದರೆ ಪ್ರಕರಣವನ್ನು ಸಿಬಿಐಗೆ ವಹಿಸಲಿ.ಅನ್ಯಾಯ ಮಾಡಿದವರಿಗೆ ತಲೆಕೆಳಗೆ ಮಾಡಿ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದರು.
ಹಾವೇರಿ : ಇತ್ತೀಚಿಗೆ ಪ್ರಧಾನಿ ಮೋದಿ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ತಾಳಿ ಕಿತ್ತುಕೊಳ್ಳುವ ಪಕ್ಷವಲ್ಲ ತಾಳಿಭಾಗ್ಯ ಕೊಡುವ ಪಕ್ಷ ಎಂದು ಹಾವೇರಿ ನಗರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ನರೇಂದ್ರ ಮೋದಿ ಅವರು ಹೇಳಿಕೆಗೆ ತಿರುಗೇಟು ನೀಡಿದರು. ಹಾವೇರಿ ನಗರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ? ಮೋದಿಯಾಗಲಿ ಅಮಿತ್ ಶಾ ಆಗಲಿ ಏಕೆ ಮಾತನಾಡುತ್ತಿಲ್ಲ? ಎಂದು ಹಾವೇರಿ ನಗರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಪ್ರಶ್ನಿಸಿದರು. ದೇಶದಲ್ಲಿ ಮೋದಿ ಮಾಡುತ್ತಿರುವ ಭಾಷಣ ಗಂಡಾಂತರಕಾರಿಯಾಗಿದೆ. ಕಾಂಗ್ರೆಸ್ ಬಂದರೆ ಹೆಣ್ಣು ಮಕ್ಕಳ ತಾಳಿ ಸಹ ಬಿಡಲ್ಲ ಅಂತಾರೆ ಕಾಂಗ್ರೆಸ್ ತಾಳಿ ಕಿತ್ತುಕೊಳ್ಳುವ ಪಕ್ಷವಲ್ಲ ತಾಳಿ ಭಾಗ್ಯ ಕೊಡುವ ಪಕ್ಷ. ಗ್ಯಾರಂಟಿಗಳ ಬಗ್ಗೆ ಯಾಕೆ ನೀವು ಇಷ್ಟು ಟೀಕೆ ಮಾಡುತ್ತೀರಿ? ಬಡವರಿಗೆ ಒಳ್ಳೆಯದಾಗುವುದು ನಿಮಗೆ ಬೇಡವಾ? ಎಂದು ಪ್ರಶ್ನಿಸಿದರು.
ಬೆಂಗಳೂರು : ಲೈಂಗಿಕ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಬಹಿರಂಗ ಮಾಡಿದ ವಿಚಾರ 1 ವಾರದಲ್ಲಿ ಹೊರಬರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ತಿಳಿಸಿದರು. ಬೆಂಗಳೂರಿನಲ್ಲಿ ಇಂದು SIT ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ಬಹಿರಂಗ ಮಾಡಿದ ವ್ಯಕ್ತಿಯ ಹೆಸರು 1 ವಾರದಲ್ಲಿ ಬಹಿರಂಗವಾಗಲಿದೆ. ಒಂದು ವಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಈ ವಿಚಾರ ತಿಳಿಸಲಿದ್ದಾರೆ ಯಾರು ವಿಡಿಯೋ ಬಿಡುಗಡೆ ಮಾಡಿದ್ದರು ಅನ್ನುವುದು ಹೊರಗಡೆ ಬರುತ್ತದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ವಕೀಲ ದೇವರಾಜ ಗೌಡ ತಿಳಿಸಿದರು. ನಿನ್ನೆ ಎಸ್ಐಟಿ ವಿಚಾರಣೆಗೆ ಕರೆದಿದ್ದರು.ಇಂದು ಕೂಡ ವಿತರಣೆಗೆ ಬಂದಿದ್ದೆ ವಿಡಿಯೋ ವೈರಲ್ ಮಾಡಿದವರ ಬಗ್ಗೆ ಇದ್ದ ಮಾಹಿತಿಯನ್ನು ನೀಡಿದ್ದೇನೆ. ಯಾರು ಎಂದು ಈಗ ಇಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಹಾಸನದಲ್ಲಿ ಒಕ್ಕಲಿಗ ನಾಯಕತ್ವಕ್ಕಾಗಿ ಇಷ್ಟೆಲ್ಲ ನಡೆಯುತ್ತಿದೆ ಎಂದು ವಕೀಲಾದೇವರಾಜೇಗೌಡ ಹೇಳಿಕೆ ನೀಡಿದರು.
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಸಂತ್ರಸ್ತ ಮಹಿಳೆಯ ಪತಿ ಸಿಐಡಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ನಿನ್ನೆ ಹಾಸನ ಮೂಲದ ಸಿಐಡಿಗೆ ನೊಂದ ಮಹಿಳೆಯ ಪತಿಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಇದೀಗ ಸಿಐಡಿ ಅಧಿಕಾರಿಗಳು FIR ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ನಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎ 1 ಆರೋಪಿ ಎಂದು ಹೇಳಲಾಗುತ್ತಿದೆ. ಈ ವೇಳೆ ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದು, ಮಗಳ ಓದಿನ ಬಗ್ಗೆ ಸಂತ್ರಸ್ತ ಮಹಿಳೆ ಸಹಾಯ ಕೇಳಿದ್ದಳು. ಹಾಸನದ ಸಂಸದರ ಮನೆಗೆ ಬರುವಂತೆ ತಿಳಿಸಿದರು. ಬೇರೆಯವರನ್ನ ಕಳಿಸಿ ನಮ್ಮನ್ನು ಮಾತ್ರ ಇರುವಂತೆ ಹೇಳಿದ್ದರು. ನಂತರ ರೂಮಿಗೆ ಕರೆದೋಯ್ದು ಅತ್ಯಾಚಾರಕ್ಕೆ ಯತ್ನಿಸಿದರು. ನಿನ್ನ ಪತಿಗೆ ಕಡಿಮೆ ಮಾತಾಡಲು ಹೇಳು ಇಲ್ಲ ಅಂದರೆ ಸರಿ ಇರಲ್ಲ. ನನ್ನ ಬಳಿ ಗನ್ ಇದೆ ನಾವು…
ಹುಬ್ಬಳ್ಳಿ : ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಒಬ್ಬನ ಶವ ಅತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದ ಸಮೀಪದಲ್ಲಿರುವ ಬಿಡಿಸಿ ಬಳಿ ಈ ಒಂದು ಅರೇಬೆಂದ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ನೇಕಾರ ನಗರದ ಚೆಕ್ ಪೋಸ್ಟ್ ಸಮೀಪದ ಬ್ರಿಡ್ಜ್ ಹತ್ತಿರ ಅರ್ಧ ಸುಟ್ಟ ಸ್ಥಿತಿಯಲ್ಲಿ ಅಂದಾಜು 35- 40 ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಂದು ಬೆಳಿಗ್ಗೆ ದಾರಿಯಲ್ಲಿ ಸಂಚರಿಸುವ ಜನರು ಮೃತದೇಹವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶವದ ಕುರಿತು ಹಾಗೂ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಆದರೆ ಮೃತ ವ್ಯಕ್ತಿಯ ಗುರುತು ಇದುವರೆಗೂ ಪತ್ತೆ ಆಗಿಲ್ಲ. ಈ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನ : ಕೆರೆ ಮೀನು ತಿಂದು ಇಬ್ಬರು ಸಾವನ್ನಪ್ಪಿದ್ದು ಅಲ್ಲದೆ 15ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವನಹಳ್ಳಿ ಗ್ರಾಮದಲ್ಲಿ ಕೆರೆ ಮೀನು ತಿಂದು ಇಬ್ಬರ ಸಾವನ್ನಾಪ್ಪಿದ್ದರೆ. ಗ್ರಾಮಕ್ಕೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆರೆ ಮೀನು ತಿಂದಿದ್ದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೆ ವೇಳೆ ಮೃತ ಕುಟುಂಬಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ಕೂಡ ವಿಚಾರಣೆ ನಡೆಸಿದರು.ಘಟನೆ ಬಗ್ಗೆ ಜಿಲ್ಲಾಧಿಕಾರಿಸತ್ಯಭಾಮಾ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯಾದಗಿರಿ : ಇತ್ತೀಚಿಗೆ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾದ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದ್ದು ಅಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಸ್ಪರ್ದಿಸಲಿದ್ದಾರೆ. ಹಾಗಾಗಿ ಹಿಂದೆ ಅವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡಿದರು. ಹಾಗಾಗಿ ಇಂದು ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡುವ ವೇಳೆ ಮಾತನಾಡಿದ ಅವರು, ನನಗೆ ತಂದೆ ತಾಯಿ ಇಲ್ಲ ಇಲ್ಲಿ ಬಂದಂತಹ ಎಲ್ಲಾ ತಾಯಂದಿರ ಹತ್ತಿರ ನನ್ನ ಕಾರ್ಯಕರ್ತರ ಹತ್ತಿರ ಎಲ್ಲಾ ಅಣ್ಣ-ತಮ್ಮಂದಿರ ಹತ್ತಿರ ಎಲ್ಲ ನನ್ನ ಬಿಜೆಪಿ ಕಾರ್ಯಕರ್ತರು ನಿಮಗೆ ಕೈ ಮುಗಿದು ನಿಮ್ಮ ಕಾಲಿಗೆ ನಮಸ್ಕಾರ ಮಾಡಿ ಕೇಳುತ್ತೇನೆ ನಮಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದರು.
ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಕಷ್ಟದಲ್ಲಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಿಡಿಯೋದಲ್ಲಿ ಇರುವ ಸಂತ್ರತೆ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ FIR ದಾಖಲಾಗಿದೆ. ಕೆ ಆರ್ ನಗರ ಠಾಣೆಯ ಪೊಲೀಸರು ಇದೀಗ ಅಂತ ಮಹಿಳೆಯ ಮಗನ ಆ ದೂರನ್ನು ದಾಖಲಿಸಿಕೊಂಡು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. ಹಾಗಾಗಿ ಇದೇ ವೇಳೆ ಸಂತ್ರಸ್ತೆ ಮಹಿಳೆಯ ಸಂಬಂಧಿಕರನ್ನು ಠಾಣೆಗೆ ಕರೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಪಹರಣಕ್ಕೆ ಒಳಗದ ಮಹಿಳೆಯು ಎಚ್ ಡಿ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಇದೀಗ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಡಿ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಎಫ್ಐಆರ್…
ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಎಸ್ಐಟಿ ವಿಚಾರಣೆ ಎರಡು ಬಾರಿ ನೋಟಿಸ್ ನೀಡಿದೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಅವರಿಗೂ ಕೂಡ ಎಸ್ಐಟಿ ನೋಟಿಸ್ ನೀಡಿದೆ. ಹೌದು ಸ್ಥಳೀಯ ಪೊಲೀಸರಿಂದ ಆ ಭವಾನಿ ರೇವಣ್ಣಗೆ ಎಸ್ಐಟಿ ನೋಟಿಸ್ ನೀಡಿದ್ದು, ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ರೇವಣ್ಣ ಮನೆಗೆ ನೋಟಿಸ್ ನೀಡಿ ಹೋಗಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದು, ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ಹಾಗಾಗಿ ಇಂದು ಸ್ಥಳೀಯ ಪೊಲೀಸರು ಎಸ್ ಡಿ ರೇವಣ್ಣ ಅವರ ಮನೆಗೆ ಭೇಟಿ ನೀಡಿದ್ದು, ಹಳೆ ನರಸೀಪುರದಲ್ಲಿರುವ ಶಾಸಕ ಎಚ್ ಡಿ ರೇವಣ್ಣ ನಿವಾಸಕ್ಕೆ ನಗರ ಠಾಣೆ ಪಿಎಸ್ಐ ಅವರು ಭೇಟಿ ನೀಡಿದ್ದು, ಇಂದು ಅಥವಾ ನಾಳೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. 3ನೇ ನೋಟಿಸ್ ನೀಡಲು SIT ಸಿದ್ಧತೆ…