Author: kannadanewsnow05

ಉತ್ತರಕನ್ನಡ : ತನ್ನ ಮದುವೆಯಾಗಿಲ್ಲ ಎಂದು ಮಾನಸಿಕವಾಗಿ ಮನನೊಂದಿದ್ದ ಯುವಕನೊಬ್ಬ ತಾನು ಮಲಗುವ ಕೋಣೆಯಲ್ಲಿ ನೇಣು ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಸ್ತೂರಬಾ ನಗರದಲ್ಲಿ ನಡೆದಿದೆ. ಕಸ್ತೂರಬಾನಗರದ ಇಬ್ರಾಹಿಂ ಬಾಷಾಸಾಬ ಮಲ್ಲಕ್ಕನವರ(25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಹೇಳಲಾಗುತ್ತಿದ್ದು, ಈತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ ಆದರೆ ಆಕೆಗೆ ತನ್ನ ಗಂಡನಿಂದ ವಿಚ್ಛೇದನ ದೊರೆಯಲು ವಿಳಂಬವಾಗಿದ್ದರಿಂದ, ಮಹಿಳೆ ಜೊತೆ ತನ್ನ ವಿವಾಹ ಆಗುವುದಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡು ತನ್ನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ತಕ್ಷಣ ಕುಟುಂಬಸ್ಥರು ಆತನನ್ನು ಚಿಕಿತ್ಸೆಗೆ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತಂತೆ ತಾಯಿ ಸಾಹೀರಬಾನು ಬಾಷಾಸಾಬ ಮಲ್ಲಕ್ಕನವರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Read More

ಬೆಂಗಳೂರು : ಪ್ರತಿ ತಿಂಗಳ ಅಂತ್ಯದೊಳಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿಯ ಹಣ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಸಂದಾಯವಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಆಹಾರ ನಿಗಮದಲ್ಲಿ ಸಚಿವ ಕೆಹೆಚ್. ಮುನಿಯಪ್ಪ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು. ಸಭೆಯಲ್ಲಿ ಇಲಾಖೆಯಲ್ಲಿ ಪಡಿತರದಾರರಿಗೆ ಸರಬರಾಜು ಆಗುತ್ತಿರುವ ಅಕ್ಕಿ,ರಾಗಿ, ಜೋಳ, ಇವು ಗುಣಮಟ್ಟದಿಂರಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಇಲಾಖೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಹೊಸ ಪಡಿತರ ಚೀಟಿ ಕೋರಿ ಕಳೆದ ಐದು ವರ್ಷಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಎಪಿಎಲ್‌, ಬಿಪಿಎಲ್‌ ಕಾರ್ಡ್‌ಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಇಲಾಖೆಯಲ್ಲಿ ಪಡಿತರ ದಾರರಿಗೆ ಸರಬರಾಜು ಆಗುತ್ತಿರುವ ಅಕ್ಕಿ, ರಾಗಿ, ಜೋಳ ಇತ್ಯಾದಿ ಧಾನ್ಯಗಳ ಗುಣಮಟ್ಟ ಇರುವಂತೆ ಎಚ್ಚರವಿರಬೇಕು.ಗೌಡನ್ ಗಳಲ್ಲಿ ಸುಚಿತ್ವವನ್ನು ಕಾಪಾಡಬೇಕು ಮತ್ತು ವಿಲೇವಾರಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯ ಗಳನ್ನು ಸರಬರಾಜು ಮಾಡಬೇಕು ಈ ಸಂದರ್ಭದಲ್ಲಿ ಸರ್ಕಾರದ…

Read More

ಕಲಬುರ್ಗಿ : ಮನ್ ರೇಗ ಕೆಲಸ ಆಕ್ಷನ್ ಪ್ಲಾನ್ ನೀಡಲು 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ಇಒ ಒಬ್ಬ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕ ಪಂಚಾಯತ್ ನಲ್ಲಿ ನಡೆದಿದೆ. ಹೌದು ತಾಲೂಕು ಪಂಚಾಯತಿ ಇಒ ಮಹಾಂತೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, 20 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಗಿಬಿದ್ದಿದ್ದಾನೆ. 20 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಒ, ಮನ್ ರೇಗ ಕೆಲಸ ಆಕ್ಷನ್ ಪ್ಲಾನ್ ನೀಡಲು ತಾಲೂಕಿನ ಬಳ್ಳಿ ಗ್ರಾಮದ ನಬಿ ಲಾಲನಿಂದ ಲಂಚ ಸ್ವೀಕರಿಸುತ್ತಿದ್ದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ. ಲೋಕಾಯುಕ್ತ ಎಸ್ ಪಿ ಜಾನ್ ಆಂಟನಿ ನೇತ್ರತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ.

Read More

ಬೆಂಗಳೂರು : ನಿಗಮ-ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿಯವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ತಿಂಗಳೊಳಗೆ ಪಟ್ಟಿ ಸಿದ್ದಪಡಿಸಿ ಸಲ್ಲಿಸುತ್ತೇನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟೂವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಅನುಭವವಿದೆ. ಆದ್ದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡ ಬೇಕು ಎಂಬ ಒತ್ತಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಪುಟ ಪುನಾರಚನೆ ಬಗ್ಗೆ ನಾನು ಏನೂ ಹೇಳಲು ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಎಲ್ಲವು ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.

Read More

ಬೆಂಗಳೂರು: ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವದ ಅಂಗವಾಗಿ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಸಾಧನೆಯನ್ನು ಕುರಿತ ಅಂಶಗಳನ್ನು ಒಳಗೊಂಡ ಭಾಷಣ, ಪ್ರಬಂಧ ಸ್ಪರ್ಧೆ ಸೇರಿ ದಂತೆ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಈ ಹಿಂದೆ ನಡೆಸಲು ಉದ್ದೇಶಿಸಿದ್ದ ಚರ್ಚಾ ಸ್ಪರ್ಧೆಯ ಬದಲಾಗಿ ಭಾಷಣ ಮತ್ತು ಪ್ರಬಂಧಸ್ಪರ್ಧೆ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾಡಳಿತ ತೀರ್ಮಾನಿಸುವ ಇನ್ನಿತರ ಚಟುವಟಿಕೆ ನಡೆಸುವಂತೆ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ. ಈ ಕಾರ್ಯಕ್ರಮಗಳಿಗಾಗಿ ಈಗಾಗಲೇ ಪ್ರತಿ ತಾಲ್ಲೂಕು ಬಿಇಒಗಳಿಗೆ ತಲಾ ಒಂದು ಲಕ್ಷ ರು. ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ. ಆದ್ದ ರಿಂದ ಬಿಇಒಗಳು ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿನ ದೈನಂದಿನ ಪಾಠ – ಪ್ರವಚನಗಳಿಗೆ ತೊಂದರೆ ಆಗದಂತೆ ಕೆಂಪೇಗೌಡರ ಕುರಿತು ಭಾಷಣ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲು ಇಲಾಖೆ ಆಯುಕ್ತ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ (KAT) ಸದಸ್ಯರನ್ನು ನೇಮಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತಂತೆ ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಜರಾಗಿ, ಸರ್ಕಾರಿ ನೌಕರರ ಸೇವಾ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಕೆಎಟಿ ವಿಚಾರಣೆ ನಡೆಸಲಿದೆ. ಬೆಂಗಳೂರಿನಲ್ಲಿ ಕೆಎಟಿಯ ಪ್ರಧಾನ ಪೀಠವಿದ್ದರೆ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಾದೇಶಿಕ ಪೀಠಗಳಿವೆ. ಕೆಎಟಿಯಲ್ಲಿ ಅಧ್ಯಕ್ಷರಲ್ಲದೇ ಒಟ್ಟು 9 ಮಂದಿ ಸದಸ್ಯರ ಹುದ್ದೆಗಳಿವೆ. ಅದರಲ್ಲಿ ಅಧ್ಯಕ್ಷ,ಇತರೆ 4ನ್ಯಾಯಾಂಗ ಸದಸ್ಯರ ಹುದ್ದೆಗಳಿ ವೆ. ಪ್ರಧಾನ ಪೀಠದಲ್ಲಿ ಅಧ್ಯಕ್ಷರು ಸೇರಿ ಇಬ್ಬರು ನ್ಯಾಯಾಂಗ ಸದಸ್ಯರಿದ್ದಾರೆ. 3 ಕೋರ್ಟ್ ಹಾಲ್‌ಗಳಿವೆ. ಪ್ರಾದೇಶಿಕ ಪೀಠದಲ್ಲಿ ತಲಾ1 ಕೋರ್ಟ್ ಹಾಲ್‌ಗಳಿವೆ ಎಂದು ಅವರು ನ್ಯಾಯಾಧಿಶರಿಗೆ ವಿವರಿಸಿದರು. ಈ ಕುರಿತಂತೆ ವಕೀಲ ನರಸಿಂಹರಾಜು ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಾದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ…

Read More

ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಂಎಲ್ಸಿ ಸೂರಜ್ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು FiR ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಮತ್ತೊಂದು FIR ದಾಖಲಾಗಿದೆ. ಹೊಳೆನರಸೀಪುರ ಮೂಲದ ಯುವಕನಿಂದ ಈ ಒಂದು ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. 3 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯುವಕ ದೂರನ್ನು ಸಲ್ಲಿಸಿದ್ದಾನೆ. ಸಂತ್ರಸ್ತನ ದೂರನ್ನು ಆಧರಿಸಿ ಇದೀಗ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 377, 342, 506 ಅಡಿ ಪ್ರಕರಣ ದಾಖಲಾಗಿದೆ. ಹೌದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಸಂತ್ರಸ್ತನಿಂದ ದೂರು ಸಲ್ಲಿಕೆಯಾಗಿದೆ. 4 ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾನೆ. ನಾಲ್ಕು ದಿನಗಳ ಹಿಂದೆ ಸೂರಜ್ ಪರವಾಗಿ ದೂರು ಕೊಟ್ಟಿದ್ದ ಯುವಕ ಇಂದು ಅದೇ ಯುವಕನಿಂದ ಸೂರಜ್ ರೇವಣ್ಣ ವಿರುದ್ಧವೇ ದೂರು ದಾಖಲಿಸಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ…

Read More

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮನೆ ಊಟ ತಂದು ಕೊಡಿ ಎಂದು ಮನವಿ ಮಾಡಿದ್ದರು. ಈ ಒಂದು ಮನವಿಗೆ ಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ಇಂದು ತಂದೆ ಹೆಚ್ ಡಿ ರೇವಣ್ಣ ಅವರು ಬಟ್ಟೆ ಊಟ ತಂದುಕೊಟ್ಟಿದ್ದಾರೆ. ಹೌದು ಪುತ್ರ ಪ್ರಜ್ವಲ್ ಗೆ ಊಟ ಬಟ್ಟೆ ತಂದುಕೊಟ್ಟ ಶಾಸಕ ಹೆಚ್ ಡಿ ರೇವಣ್ಣ ಅವರು ಸಿಐಡಿ ಕಚೇರಿಗೆ ಕಾರಿನಲ್ಲಿ ಊಟ ಬಟ್ಟೆ ತಂದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಎಚ್ ಡಿ ರೇವಣ್ಣ ಅವರ ಪುತ್ರರು ಇದ್ದು, ಅತ್ಯಾಚಾರ ಕೆಸ್‌ ನಲ್ಲಿ ಮಾಜಿ ಸಂಸದ ಪ್ರಜ್ವಲ್ ಬಂಧನ ವಾಗಿದ್ದು, ಅಲ್ಲದೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ಬಂಧನವಾಗಿದೆ. ಹಾಗಾಗಿ ಪುತ್ರ ಪ್ರಜ್ವಲ್ ಗೆ ಎಚ್ ಡಿ ರೇವಣ್ಣ ಅವರು ಊಟ ಬಟ್ಟೆ ತಂದುಕೊಟ್ಟಿದ್ದಾರೆ. ನಂತರ ಸಿಐಡಿ ಕಚೇರಿ ಹೊರಬಾಗದಿಂದಲೇ ಶಾಸಕ ಎಚ್ಡಿ ರೇವಣ್ಣ ಹೊರಟು ಹೋಗಿದ್ದಾರೆ.…

Read More

ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಎಲ್ಸಿ ಸೂರಜ್ ರೇವಣ್ಣ ಜೈಲಿನಲ್ಲಿದ್ದು ಬೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಅವರ ಆಪ್ತನೊಬ್ಬ ಅಸಹಜ ಲೈಂಗಿಕ ದೌರ್ಜನ್ಯ ಎಂದು ಆರೋಪಿಸಿ ಠಾಣೆಗೆ ದೂರು ಸಲ್ಲಿಸಿದ್ದಾನೆ. ಹೌದು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಸಂತ್ರಸ್ತನಿಂದ ದೂರು ಸಲ್ಲಿಕೆಯಾಗಿದೆ. 4 ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾನೆ. ನಾಲ್ಕು ದಿನಗಳ ಹಿಂದೆ ಸೂರಜ್ ಪರವಾಗಿ ದೂರು ಕೊಟ್ಟಿದ್ದ ಯುವಕ ಇಂದು ಅದೇ ಯುವಕನಿಂದ ಸೂರಜ್ ರೇವಣ್ಣ ವಿರುದ್ಧವೇ ದೂರು ದಾಖಲಿಸಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಯುವಕನಿಂದ ದೂರು ದಾಖಲಾಗಿದೆ. 10 ಪುಟಗಳ ಸುದೀರ್ಘ ದೂರ ಬರೆದು ಠಾಣೆಗೆ ತಂದಿರುವ ಸಂತ್ರಸ್ತ ಸಂತ್ರಸ್ತನ ದೂರನ್ನು ಆಧರಿಸಿ ಪೊಲೀಸರು ಇದೀಗ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಜೂನ್ 22ರಂದು ಅರಕಲಗೂಡು ಮೂಲದ ಯುವಕ ದೂರು ನೀಡಿದ್ದ. ಜೆಡಿಎಸ್ MLC ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದ. ಇಂದು…

Read More

ಕಲಬುರಗಿ : 18ನೇ ಲೋಕಸಭೆಯ ಸಂಸದರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದ್ದು, ತೆಲಂಗಾಣದ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಪ್ರಮಾಣ ವಚನ ಸ್ವೀಕಾರದ ವೇಳೆ ಜೈ ಪ್ಯಾಲೆಸ್ತೀನ್’ ಎಂದು ಹೇಳಿ ಘೋಷಣೆ ಕೂಗಿದ್ದಾರೆ. ಈ ವಿಚಾರವಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಆಕ್ರೋಶ ಅವರ ಹಾಕಿದ್ದು ಇಂತಹವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಕಿಡಿಕಾರಿದರು. ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ಅಂಥವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು. ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ವಿಚಾರಗಳಿಗೆ ಅವಮಾನ ಮಾಡಿದ್ದಾರೆ. ಭಾರತವನ್ನು ಬಲಗೊಳಿಸಲು ಅಂಬೇಡ್ಕರ್ ಅವರು ಸಂವಿಧಾನ ತಂದಿದ್ದಾರೆ. ಪ್ಯಾಲೇಸ್ತೇನ್ ಪರ ನಿಂತುಕೊಳ್ಳಲು ಸಂವಿಧಾನ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ. ಅಸಾಧುದಿನ್ ಓವೈಸಿ ಪೂರ್ವಿಕರು ರಜಾಕಾರರ ಚಳುವಳಿಯಲ್ಲಿದ್ದರೂ. ರಜಾಕಾರರ ಕಾಲದಲ್ಲಿ ಇವರೆಲ್ಲ ಜೈ ಪಾಕಿಸ್ತಾನ ಅಂತ ಕೂಗಿದವರು. ಇಸ್ಲಾಂ ರಾಷ್ಟ್ರ ನಿರ್ಮಾಣ ಆಗಬೇಕೆಂದು ಇಲ್ಲಿ ಹೋರಾಟ ಮಾಡಿದ್ದರು. ಅದೇ ಬ್ಲಡ್ ಈಗ ಪ್ಯಾಲೇಸ್ಥಿನ್ ಅಂತ ಘೋಷಣೆ ಕೂಗಿದೆ.ಹೊರಗೆ ಹೀಗಿರುವಾಗ…

Read More