Author: kannadanewsnow05

ಹುಬ್ಬಳ್ಳಿ : ಅಪರಿಚಿತ ವ್ಯಕ್ತಿ ಒಬ್ಬನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕರಿಗೆ ಜೀವ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ವಿಮಾನ ನಿಲ್ದಾಣ ನಿರ್ದೇಶಕ ರೂಪೇಶ್ ಕುಮಾರ್ ಗೆ ಬೆದರಿಕೆ ಮೆಲ್ ಸಂದೇಶ ಬಂದಿದೆ ಎಂದು ತಿಳಿದುಬಂದಿದೆ. ವ್ಯಕ್ತಿ ಒಬ್ಬನಿಂದ ಇ-ಮೇಲ್ ಮೂಲಕ ಜೀವ ಬೆದರಿಕೆಯ ಸಂದೇಶ ಬಂದಿದೆ. ನಿರ್ದೇಶಕರ ಕಚೇರಿಯ ಮೆಲ್ ಐಡಿಗೆ ಈ ಒಂದು ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಲಾಗುತ್ತಿದೆ. ಲಾಂಗ್ ಲೀವ್ ಪ್ಯಾಲೆಸ್ತೀನ್ ಎಂಬ ಹೆಸರಿನ ಮೇಲ್ ನಿಂದ ಬೆದರಿಕೆ ಸಂದೇಶ ಬಂದಿದೆ. ನಾವು ನಿಮ್ಮನ್ನು ನಾಶ ಮಾಡುತ್ತೇವೆ. ನೀವು ಮಾಡಿದ ಎಲ್ಲಾ ಕೆಟ್ಟ ಕೆಲಸಗಳಿಗೆ ಉತ್ತರವಿಲ್ಲ ಎಂದು ಭಾವಿಸಿದ್ದೀರಾ ಬೆಂಕಿಯಲ್ಲಿ ಎಸುತ್ತೇವೆ ಉಸಿರುಗಟ್ಟಿ ಸಾಯುತ್ತೀರಾ ಎಂದು ಸಂದೇಶ ಬಂದಿದ್ದು, ಈ ವಿಚಾರವನ್ನು ರೂಪೇಶ್ ಕುಮಾರ್ ಅವರು ಟರ್ಮಿನಲ್ ಉಸ್ತುವಾರಿ ಗಮನಕ್ಕೆ ತಂದಿದ್ದಾರೆ.

Read More

ನವದೆಹಲಿ : ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಕಳೆದ ಸೋಮವಾರ ತಿಹಾರ್ ಜೈಲಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಇದೀಗ ಕೇಜ್ರಿವಾಲ್ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟಿಗೆ ಸಿಎಂ ಕೇಜ್ರಿವಾಲ್ ಇದೀಗ ಆಗಮಿಸಿದ್ದಾರೆ.ಕೋರ್ಟ್ ಪ್ರಕ್ರಿಯೆ ಮುಗಿದ ಬಳಿಕ ಕೇಜ್ರಿವಾಲ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇನ್ನೂ ನಿನ್ನೆ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಿಬಿಐ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಇಂದು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿಯನ್ನು ಪಡೆದುಕೊಂಡಿದೆ. ಹಾಗಾಗಿ ಇಂದು ಅರವಿಂದ್ ಕೇಜ್ರಿವಾಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಮಂಗಳವಾರ ದೆಹಲಿ ಹೈಕೋರ್ಟ್‌ ರದ್ದು ಮಾಡಿತ್ತು.

Read More

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ರಾಮನಗರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಈ ಕುರಿತು ಬೆಸ್ಕಾಂ ಮಾಧ್ಯಮ ಪ್ರಕಟನೆಯಲ್ಲಿ ಬೆಂಗಳೂರು ನಗರದ ಆಲೋ ಪ್ರದೇಶಗಳಲ್ಲಿ ಬೆಳಿಗ್ಗೆ 10:30 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದ್ದು, ಅದೇ ರೀತಿ ರಾಮನಗರದಲ್ಲಿ 10.30 ರಿಂದ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನಲ್ಲಿ ಯಾವ್ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ? ಬೆಂಗಳೂರಿನ, ಆರ್​ಟಿ ನಗರ, ಗಂಗಾ ನಗರ, ಚೋಳನಗರ, ಹೊರ ವರ್ತುವಲ್​ ರಸ್ತೆ, ಕರಿಯಪ್ಪ ಲೇಔಟ್​, ಆಶ್ರಮ ರಸ್ತೆ, ಆನಂದನಗರ ಮೊದಲನೇ ಬ್ಲಾಕ್​​, ಗುಡ್ಡಪ್ಪರೆಡ್ಡಿ ಲೇಔಟ್​, ಹೆಬ್ಬಾಳ, ಜಯಮಹಲ್ ಮೊದಲನೇ ಬ್ಲಾಕ್​​, ನಂದಿದುರ್ಗ ರಸ್ತೆ, ಮರಪ್ಪ ಗಾರ್ಡನ್​​, ಜೆಸಿನಗರ, ಮಿಲ್ಲರ್ಸ್​ ರಸ್ತೆ, ಗಂಗಾನಗರ, ಚಾಮುಂಡಿನಗರ, ದಿನ್ನುರ, ಪಿ&ಟಿ ಕಾಲೋನಿ,…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಗೌಡ ಮತ್ತು ಗ್ಯಾಂಗ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ವರು ಆರೋಪಿಗಳನ್ನು ತುಮಕೂರು ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹೌದು ಇಂದು 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್ ಸಾಧ್ಯತೆ ಇದೆ. ರವಿಶಂಕರ್, ಕಾರ್ತಿಕ್, ಕೇಶವ, ನಿಖಿಲ ನಾಯಕ್ ಆರೋಪಿಗಳನ್ನು ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಆರೋಪಿಗಳ ಸ್ಥಳಾಂತರಕ್ಕೆ ಅನುಮೋದನೆ ನೀಡಿದ ಬಂಧಿಖಾನೆಯ ಎಡಿಜಿಪಿ. ಕೋರ್ಟ್ ಆದೇಶದಂತೆ ವಿಚಾರಣಾದಿನ ಕೈದಿಗಳನ್ನು ಶಿಫ್ಟ್ ಮಾಡಲು ಅನುಮೋದನೆ ದೊರಕಿದೆ. ಆರೋಪಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಜೈಲಧಿಕಾರಿಗಳು ಈಗಾಗಲೇ ಮುಗಿಸಿದ್ದಾರೆ. ಮಧ್ಯಾಹ್ನ ಪರಪ್ಪನ ಅಗ್ರಹಾರ ಜಯಲಿಂದ ತುಮಕೂರು ಜಿಲ್ಲೆಗೆ ಶಿಫ್ಟ್ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ನಾವೇ ಕೊಂದಿದ್ದೇವೆಂದು ಹೇಳಿಕೊಂಡು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಶರಣಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೂವರು ಬಾಯ್ಬಿಟ್ಟಿದ್ದರಿಂದ…

Read More

ಬೆಂಗಳೂರು : ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಕೆಎಂಎಫ್ ಹಾಲಿನ ದರ ಏರಿಕೆ ಮಾಡಿದ್ದು, ಇಂದು ಮಧ್ಯಾಹ್ನದಿಂದಲೇ ಪ್ರತಿ ಪ್ಯಾಕೆಟ್ನ ಬೆಲೆ ರೂ.2 ಏರಿಕೆಯಾಗಲಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ. ಹೌದು ಹೊಸ ಹಾಲಿನ ಪ್ಯಾಕೆಟ್ ನಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಗುಲಿದೆ. ಆದರೆ ರಾತ್ರಿ ಬಂದಿರುವಂತಹ ಸ್ಟಾಕ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಸದ್ಯ ಹಳೆಯ ದರದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಮಧ್ಯಾಹ್ನದ ನಂತರ ಹೊಸ ದರದಲ್ಲಿ ಹಾಲು ಮಾರಾಟ ಮಾಡಲಾಗುತ್ತದೆ. ಮಧ್ಯಾಹ್ನದಿಂದ ನಂದಿನಿ ಹಾಲಿನ ದರ ಹೆಚ್ಚಾಗಲಿದೆ ಹಾಗಾಗಿ ಸದ್ಯ ಸಾಮಾನ್ಯ ದರದಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಇವಾಗ ಇರುವುದು ರಾತ್ರಿ ಬಂದಿರುವ ಸ್ಟಾಕ್ ಒಂದು ಲೀಟರ್ ಒಂದು ಪ್ಯಾಕೆಟ್ ತಗೊಂಡ್ರೆ 2 ರೂಪಾಯಿ ಜಾಸ್ತಿ ಆಗುತ್ತದೆ ಅರ್ಧ ಲೀಟರ್ 2 ಪ್ಯಾಕೆಟ್ ತಗೊಂಡ್ರೆ 4 ರೂಪಾಯಿ ಜಾಸ್ತಿ ಆಗುತ್ತದೆ. ಪ್ಯಾಕೆಟ್ ಮೇಲೆ 2 ರೂಪಾಯಿ ಜಾಸ್ತಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ…

Read More

ಮೈಸೂರು : ಸಿಎಂ ಬೆಂಗಾವಲು ವಾಹನಕ್ಕೆ ಬೈಕ್ ಸವಾರನಿಂದ ಅಡಚಣೆ ಆರೋಪದ ಹಿನ್ನೆಲೆಯಲ್ಲಿ ಇದೀಗ ಮೈಸೂರಿನ ಕೆಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಬರಳ್ಳಿ ನಿವಾಸಿ ಶಿವು ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೂನ್. 23 ರಂದು ಏರ್ಪೋರ್ಟ್ನಿಂದ ನಜರಾಬಾದ್ಗೆ ಸಿಎಂ ಸಿದ್ದರಾಮಯ್ಯನವರು ಹೊರಟಿದ್ದರು. ಮೈಸೂರು ನಂಜನಗೂಡು ಹೆದ್ದಾರಿಯಲ್ಲಿ ಈ ವೇಳೆ ಬ್ಯಾರಿಕೆಡ್ ಅಳವಡಿಕೆ ಮಾಡಲಾಗಿತ್ತು. ಪೊಲೀಸರು ಸೂಚಿಸಿದ್ದರು ಕೂಡ ಬೈಕ್ ಸವಾರ ತೆರಳಿರುವ ಆರೋಪ ಕೇಳಿ ಬಂದಿದೆ. ಸಿಎಂ ಬರುತ್ತಿದ್ದ ಮಾರ್ಗದಲ್ಲಿ ಬೈಕ್ ಸವಾರ ತೆರಳಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಬೈಕ್ ಸವಾರ ಶಿವುನನ್ನು ತಡೆಯಲು ಮುಂದಾದ ಪೊಲೀಸರಿಗೆ ಆರೋಪಿ ಶಿವು ಡಿಕ್ಕಿ ಹೊಡೆದಿದ್ದಾನೆ. ನಂತರ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ಶಿವುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಇದೀಗ ಶಿವು ವಿರುದ್ಧ FIR ದಾಖಲಾಗಿದೆ.

Read More

ಬೆಂಗಳೂರು : ಪೆಟ್ರೋಲ್ ಡೀಸೆಲ್ ಹಾಗೂ ಹಾಲಿನ ದರ ಏರಿಕೆಯಾದ ಬಳಿಕ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಾಳವಾಗಿದ್ದರಿಂದ ಆಟೋ ಪ್ರಯಾಣ ದರ ಪರಿಷ್ಕರಣೆಗೆ ಆಟೋ ಚಾಲಕರ ಮತ್ತು ಮಾಲೀಕರ ಸಂಘಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದು, ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿವೆ. ಹೌದು ಈ ಕುರಿತು ಪ್ರತಿಕ್ರಿಯಿಸಿರುವ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜು ನಾಥ್, 2021ರ ಡಿಸೆಂಬರ್20ರಿಂದ ಆಟೋ ಪ್ರಯಾಣ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಈ ಕೂಡಲೇ ಆಟೋ ಪ್ರಯಾಣ ದರ ಹೆಚ್ಚಿಸು ವಂತೆ ಒತ್ತಾಯಿಸಿವೆ. ಸದ್ಯ ಕನಿಷ್ಠ ಆರಂಭದ 2 ಕಿ.ಮೀ. ಪ್ರಯಾಣ ರೂ.30 ಇದ್ದು, ಅದನ್ನು ರೂ.40ಕ್ಕೆ ಹೆಚ್ಚಿಸಬೇಕು. ಪ್ರತಿ 2 ಕಿ. ಮೀ. ನಂತರದ ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆಸಾರಿಗೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ. ಬಿಡಿ ಭಾಗಗಳು,…

Read More

ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲುವಾಸ ಅನುಭವಿಸುತ್ತಿರುವ ಎಂಎಲ್ಸಿ ಸೂರಜ್ ರೆಮಣೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ ದೌರ್ಜನ್ಯಕ್ಕೆ ಸಂಬಂಧಿಸಿ ದಂತೆ ಈಗ 2ನೇ ದೂರು ದಾಖಲಾಗಿದೆ. ಅವರ ಆಪ್ತನೇ ತನ್ನ ಮೇಲೆ ಮೂರು ವರ್ಷದಿಂದ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಸಲಿಂಗಕಾಮ ಪ್ರಕರಣದಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪರವಾಗಿ ಜೂ.21 ರಂದು ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾ‌ರ್ ಈಗ ಉಲ್ಟಾ ಹೊಡೆದಿದ್ದಾರೆ. ಸೂರಜ್‌ರಿಂದ ತನ್ನ ಮೇಲೂ 3 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ದೂರುದಾರನ ವಿರುದ್ಧ ದೂರು ನೀಡಲು ನನಗೆ ಒತ್ತಡ ವಿತ್ತು. ಸೂರಜ್ ಒತ್ತಡಕ್ಕೆ ಮಣಿದು ಅಂದು ದೂರು ನೀಡಿದ್ದೆ. ನನಗೆ ಬೆದರಿಕೆ ಹಾಕಿ ದೂರು ಕೊಡಿಸಿದ್ದರು. 3 ವರ್ಷಗಳ ಹಿಂದೆ ಗನ್ನಿಕಡ ತೋಟದ ಮನೆಯಲ್ಲಿ…

Read More

ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ರಾಹುಲ್ ಗಾಂಧಿಯವರಿಗೆ ಅಭಿನಂದಿಸಿದ್ದಾರೆ. ಟ್ವೀಟ್ ನಲ್ಲಿ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಸೇಡಿನ ರಾಜಕಾರಣ ಮತ್ತು ನಿರಂತರವಾದ ವೈಯಕ್ತಿಕ ಚಾರಿತ್ರ್ಯಹನನವನ್ನು ಎದುರಿಸುತ್ತಲೇ ತನ್ನ ದಣಿವರಿಯದ ಹೋರಾಟದ ಮೂಲಕ ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ರಕ್ಷಿಸಿದರಾಹುಲ್ ಗಾಂಧಿಯವರು ಸಾಧನೆಯ ಮೂಲಕ ಈ ಪದವಿಯನ್ನು ಗಳಿಸಿದ್ದಾರೆ. ಸೈದ್ಧಾಂತಿಕ ಬದ್ಧತೆ, ದೂರದರ್ಶಿತ್ವ ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷಕ್ಕೆ ಸಿಂಹ ಸ್ವಪ್ನರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. https://twitter.com/siddaramaiah/status/1805651630773485714?t=VWc9puT90BE5SGmX4QXrNg&s=19

Read More

ಬೆಂಗಳೂರು : ಜ್ಯುವೆಲರಿ ಶಾಪ್ ಗೆ ನುಗ್ಗಿದ ಕಳ್ಳರು ಮಾಲೀಕರಿಗೆ ಗನ್ ತೋರಿಸಿ ಕೇವಲ 30 ಸೆಕೆಂಡುಗಳಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ನಡೆದಿದೆ. ಹೌದು ಕೇವಲ 30 ಸೆಕೆಂಡಿನಲ್ಲಿ 60 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಸಿನಿಮಾ ಸ್ಟೈಲ್ ನಲ್ಲಿ ಜುವೆಲ್ಲರಿ ಶಾಪ್ ನಲ್ಲಿ ದರೋಡೆ ಮಾಡಲಾಗಿದೆ. ಮಾದನಾಯಕನಹಳ್ಳಿಯ ಲಕ್ಷ್ಮಿಪುರದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗನ್ ತೋರಿಸಿ ಚಿನ್ನಾಭರಣ ದೋಚಿದ್ದಾರೆ. ಒಬ್ಬ ಕಳ್ಳ ಗನ್ ಹಿಡಿದು ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದ, ಮತ್ತೊಬ್ಬ ಚಿನ್ನಭಾರಣವನ್ನು ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ಇನ್ನೊಬ್ಬ ಕಳ್ಳ ಹೊರಗೆ ಬೈಕ್ ನಲ್ಲಿ ಕಾಯುತ್ತಿದ್ದ. ಹಾಗಾಗಿ ಇದು ಮೊದಲೇ ಪ್ಲಾನ್ ಮಾಡಿ ದರೋಡೆ ಮಾಡಿದಂತಿದೆ. ಕೆಲವೇ ಸೆಕೆಂಡಿನಲ್ಲಿ ಚಿನ್ನಾಭರಣಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ. 750 ಗ್ರಾಂ ಗಿಂತ ಹೆಚ್ಚು ಚಿನ್ನ ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಒಂದು ಕಳ್ಳರ ಕೃತ್ಯ ಸಿಸಿ…

Read More