Author: kannadanewsnow05

ಗದಗ : ಇತ್ತೀಚಿಗೆ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನೇಹಾಳನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಕೊಡಗಿನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ರುಂಡ ಕಡಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಇದೀಗ ಗದಗ್ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಹೌದು ಗದಗದ ಬೆಡಗೇರಿ ಪೊಲೀಸ್ ಠಾಣೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸಕ್ಕೆ ಕುಟುಂಬ ಒಂದು ಇದೀಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದೆ. ಮಹಿಳೆಯನ್ನು ಸೈನಾಜ್ ಎಂದು ಹೇಳಲಾಗುತ್ತಿದ್ದು, ಆಕೆ ಸೇರಿದಂತೆ ಆಕೆಯ ಅಪ್ರಾಪ್ತ ಇಬ್ಬರು ಹೆಣ್ಣು ಮಕ್ಕಳಿಗೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ವೇಳೆ ಕಿಡಿಗೇಡಿಗಳು ಕುಟುಂಬದ ಮೇಲೆ ಹಲ್ಲೆ ಮಾಡುತ್ತಿರುವಾಗ ನನ್ನ ಕುಟುಂಬವನ್ನು ಕಾಪಾಡಿ ಎಂದು ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿಗಳಾದ ಲಿಯಾಕತ್, ಅಲ್ತಾಫ್ ಸೈಯದ್, ಸಮೀರ್, ರಿಯಾಜ್, ಜಾವೀದ್ ಎಂಬುವವರು ತಾಯಿ, ಪುತ್ರ ಸದ್ಧಾಂ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು…

Read More

ಹಾಸನ : ಹಾಸನ ಸಂಸದ ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿಯ ಮಾಜಿ ಶಾಸಕ ಪ್ರೀತಮ್ ಗೌಡ ಆಪ್ತರನ್ನು ಎಸ್ಐಟಿ ಬಂಧಿಸಿದ್ದು, ಇದೀಗ ಎಸ್ಐಟಿ ಪ್ರೀತಮ್ ಗೌಡ ಆಪ್ತರ ಹೋಟೆಲ್ ಹಾಗೂ ಬಾರ್ ಗಳ ಮೇಲೆ ಎಸ್ಐಟಿ ದಾಳಿ ಮಾಡಿದೆ. ಹೌದು ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಎರಡು ಕಡೆಗಳಲ್ಲಿ ಸಾಕ್ಷಿ ಸಿಗಬಹುದಾ ಎನ್ನುವ ಉದ್ದೇಶದಿಂದ ಎಸ್ಐಟಿ ಅಧಿಕಾರಿಗಳು ಇದೀಗ ಪ್ರೀತಮ್ ಗೌಡ ಆಪ್ತರ ಹೋಟೆಲ್ ಹಾಗೂ ಬಾರ್ ಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಪ್ರೀತಮ್ ಗೌಡ ಆಪ್ತರ ಹೋಟೆಲ್ ಹಾಗೂ ಬಾರ್ ಗಳ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಹಾಸನದ ಎರಡು ಕಡೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಹೋಟೆಲ್ ಹಾಗೂ ಬಾರ್ ಮೇಲೆ ಎಸ್ಐಟಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ

Read More

ನವದೆಹಲಿ : ನಿನ್ನೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಇದೀಗ ಈ ಒಂದು ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಲಕ್ಷ್ಮಿ ನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಅರ್ಜುನ್ ಸಕ್ಸೇನಾ ಎಂದು ಹೇಳಲಾಗುತ್ತಿದ್ದು, ಮೂಲತಃ ಈತ ಉತ್ತರ ಪ್ರದೇಶದ ಇಟಾವಾದಿಂದ 12 ನೇ ತರಗತಿ ಪರೀಕ್ಷೆಯೊಂದಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ದೇಹವು ಪೇಯಿಂಗ್-ಗೆಸ್ಟ್(PG) ವಸತಿಗೃಹದಲ್ಲಿ ಕೋಣೆಯೊಂದರಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಬಿಎಸ್‌ಇ ಪಿಯು ಪರೀಕ್ಷೆಗಳಲ್ಲಿ ಅವರು ಎರಡು ವಿಷಯಗಳಲ್ಲಿ ಫೇಲ್​ ಆಗಿದ್ದು, ಖಿನ್ನತೆಗೆ ಒಳಗಾಗಿದ್ದ ಎಂದು ವಸತಿಗೃಹದಲ್ಲಿ ಉಳಿದುಕೊಂಡಿರುವ ಇತರರ ಹೇಳಿಕೆಗಳನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದ್ದಾರೆ. ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಬಗ್ಗೆ ಸಕ್ಸೇನಾ ಅವರ ಕುಟುಂಬ ಸದಸ್ಯರಿಗೆ…

Read More

ವಿಜಯಪುರ : ಕಳೆದ 2 ದಿನಗಳ ಹಿಂದೆ ವಿಜಯಪುರ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಒಂಟೆಯ ಬೆನ್ನು ಹತ್ತಿ ತೆರಳಿದ್ದ ಮೂವರು ಮಕ್ಕಳು, ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಅಧಿಕಾರಿಯಾಗಿ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಮೇ 12 ರಂದು ಮನೆಯಿಂದ ಒಂಟೆ ಸವಾರಿ ನೋಡಲು ಹೋಗಿದ್ದ ಮೂವರು ಮಕ್ಕಳು, ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂದು ಮಕ್ಕಳ ಪೋಷಕರು ಆರೋಪಿಸಿದ್ದರು. ಈ ಹಿನ್ನಲೆ ಇದೀಗ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಆದರ್ಶ ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಕಾಲ ಜೈಲುವಾಸ ಅನುಭವಿಸಿ ಎಂದು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ಒಂದು ಹಿನ್ನೆಲೆಯಲ್ಲಿ ಎಚ್ ಡಿ ರೇವಣ್ಣ ಅವರ ಅಭಿಮಾನಿಗಳು ಬೆಂಬಲಿಗರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದು, ರೇವಣ್ಣ ಅವರ ಕ್ಷೇತ್ರದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಹಾಸನದಲ್ಲಿ ಎಚ್ ಡಿ ರೇವಣ್ಣ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ರೇವಣ್ಣ ನಾಳೆ ಹೊಳೆನರಸೀಪುರಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಹಾಸನಕ್ಕೆ ಬರುವ ವೇಳೆ ಗಡಿಯಲ್ಲಿಯೇ HD ರೇವಣ್ಣ ಸ್ವಾಗತಕ್ಕೆ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ.ರೇವಣ್ಣ ಬಂಧನದಿಂದ ಕಾರ್ಯಕರ್ತರು ಮಂಕಾಗಿದ್ದರು.ಇದೀಗ ರೇವಣ್ಣ ಅವರ ಬಿಡುಗಡೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ.

Read More

ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಬಿಡುಗಡೆಯಾದ ನಂತರ ನೇರವಾಗಿ ಅವರು ತಂದೆ ಎಚ್ ಡಿ ದೇವೇಗೌಡರ ಮನೆಗೆ ತೆರಳಿದರು. ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಎಚ್ ಡಿ ದೇವೇಗೌಡರ ನಿವಾಸಕ್ಕೆ ಹೆಚ್ ಡಿ ರೇವಣ್ಣ ತೆರಳಿದರು ಈ ವೇಳೆ ಅವರಿಗೆ ಸಾರಾ ಮಹೇಶ್ ಸೇರಿದಂತೆ ಹಲವು ನಾಯಕರು ಜೊತೆಗಿದ್ದರು. ಈ ಬೆಳೆ ಸುದ್ದಿಗಾರರನ್ನಾಗಿ ಮಾತನಾಡಿದ ಸಾರಾ ಮಹೇಶ್ ಜೈಲಿನಿಂದ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬಿಡುಗಡೆ ವಿಚಾರವಾಗಿ ರಾಜಕೀಯ ಪ್ರೇರಿತ ಸಂಚು ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಎಂದು ಎಚ್ ಡಿ ದೇವೇಗೌಡರ ನಿವಾಸದ ಬಳಿ ಸಾರಾ ಮಹೇಶ್ ಹೇಳಿಕೆ ನೀಡಿದರು. ಸಂಚಿನ ಬಗ್ಗೆ ಆದಷ್ಟು ಬೇಗ ರಾಜ್ಯದ ಜನರಿಗೆ ಗೊತ್ತಾಗುತ್ತದೆ ರಾಜಕೀಯ ಪಿತೂರಿಯನ್ನು ನಡೆಸಿ ಎಚ್ಡಿ ರೇವಣ್ಣ ರನ್ನು ಬಂಧಿಸಲಾಗಿತ್ತು ಎಸಿಡಿ ರೇವಣ್ಣ ಬಗ್ಗೆ ಮಾತ್ರ ನಾನು ಕೇಳಿ…

Read More

ಕೋಲಾರ : ತಾನು ಮಾಡಿದ್ದ ಸಾಲವನ್ನು ತೀರಿಸಲು ಆಗಲೇ ಮೂರು ತಿಂಗಳ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ಎನ್ನುವ ದಂಪತಿಗಳ ಮೂರು ತಿಂಗಳ ಮಗು ವನ್ನು ತಂದೆ ಮುನಿರಾಜು ಹಣಕ್ಕಾಗಿ ಮಾರಾಟ ಮಾಡಿದ್ದಾನೆ ಎಂದು ಪತ್ನಿ ಪವಿತ್ರ ಗಂಡನ ವಿರುದ್ಧ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ತಂದೆಯದಂತ ಮುನಿರಾಜು ತನ್ನ ಮೂರು ತಿಂಗಳ ಹೆತ್ತ ಕಂದಮ್ಮನನ್ನು ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.ತನಗೆ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಮಗು ಅಪಹರಣ ಮಾಡಿದ್ದಾರೆಂದು ಪತಿ ಮುನಿರಾಜು ಹಾಗೂ ವಲ್ಲಿ ವಿರುದ್ದ ದೂರು ನೀಡಿರುವ ಪವಿತ್ರಾ, ಮಗುವನ್ನ ವಾಪಾಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು : ಮಹಿಳೆ ಕಿಡ್ನ್ಯಾಪ್ ಕೆಎಸ್ ಅಲ್ಲಿ ಬಂಧನವಾಗಿದ್ದ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ನೇರವಾಗಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಎಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿದರು. ಕಳೆದ ಹತ್ತು ದಿನಗಳಿಂದ ಅವರು ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸಿದ್ದರು ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಚ್ ಡಿ ರೇವಣ್ಣ ಅವರಿಗೆ ಶರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿತು. ಅದರಂತೆ ಇದೀಗ ಇಂದು ಮಧ್ಯಾಹ್ನ ಶಾಸಕ ಎಚ್ ಡಿ ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾದರು. ಜೈಲಿಂದ ಹೊರಗಡೆ ಬರುತ್ತಿದ್ದಂತೆ ಅವರ ಬೆಂಬಲಿಗರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಘೋಷಣೆ ಕೂಗಿದರು ಈ ವೇಳೆ ರೇವಣ್ಣ ಅವರ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು ನಂತರ ರೇವಣ್ಣ ಅವರು ಕಾಲಿನಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ತಮ್ಮ ತಂದೆ ಎಚ್ ಡಿ ದೇವೇಗೌಡ…

Read More

ಬಾಗಲಕೋಟೆ : ಇತ್ತೀಚಿನ ದಿನಮಾನಗಳು ಬಹಳ ಸೂಕ್ಷ್ಮವಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಚಿಕ್ಕ ಚಿಕ್ಕ ವಿಷಯಗಳಿಗೂ ಕೊಲೆ ನಡೆಯುತ್ತಿವೆ. ಅದಕ್ಕೆ ಉದಾಹರಣೆ ಇದೀಗ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳದಲ್ಲಿ ತಂದೆಯೇ ಮಗನನ್ನು ಶುಲ್ಲಕ ಕಾರಣಕ್ಕೆ ಕೊಡಲಿಯಿಂದ ಹಲ್ಲೆ ಮಾಡಿ ಕೊಂದಿರುವ ಘಟನೆ ನಡೆದಿದೆ. ಕರಿಯಪ್ಪ ಬೀಳಗಿ (21) ಎಂಬ ಯುವಕ ತನ್ನ ತಂದೆ ಡೊಂಗರೆಪ್ಪ ಬೀಳಗಿ ಎಂಬಾತನಿಂದ ಕೊಲೆಯಾದವ ಎಂದು ಹೇಳಲಾಗುತ್ತಿದೆ. ಹೌದು ಬಾಗಲಕೋಟೆ ಜಿಲ್ಲೆಯ ಬೆಳಗಿ ತಾಲೂಕಿನ ಬಸನಾಳ ಎಂಬ ಗ್ರಾಮದಲ್ಲಿ ಊಟದಲ್ಲಿ ಹಾಲು ಹಾಕಿಕೊಂಡು ತಿನ್ನಬೇಡ ಎಂದು ತಂದೆ ಮಗನಿಗೆ ಹೇಳಿದ್ದಾನೆ. ಇದೇ ವಿಚಾರವಾಗಿ ತಂದೆ ಹಾಗೂ ಮಗನ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ಕುಪಿತ ಗೊಂಡ ತಂದೆ ಮಗನಿಗೆ ಬುದ್ಧಿ ಕಲಿಸಲು ಪ್ಲಾನ್ ಮಾಡಿದ್ದಾನೆ. ಮಗನ ಜೊತೆ ಗಲಾಟೆ ಆಗಿದ್ದಕ್ಕೆ ಕೋಪಗೊಂಡಿದ್ದ ಡೊಂಗರೆಪ್ಪ, ರಾತ್ರಿ ಮಗ ಮಲಗಿದ್ದಾಗ ಕಂಠಪೂರ್ತಿ ಕುಡಿದು ಬಂದ ತಂದೆ, ಕೊಡಲಿಯಿಂದ ಮುಖ ಹಾಗೂ ಕತ್ತಿಗೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ…

Read More

ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಜೆಡಿಎಸ್‌ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಸೇರಿದಂತೆ ಮತ್ತಿತರರ ಹೆಸರು ಕೇಳಿ ಬಂದಿದ್ದು, ಸರಿಯಾದ ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಹೇಳಿದರು. ಬೆಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎ. ಮಂಜು ಅವರಿಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಎಂದು ಯಾರೋ ಒಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆನ್ನು ತಟ್ಟಿಕೊಂಡಿದ್ದಾರೆ. ಸರಿಯಾದ ತನಿಖೆ ನಡೆಸುವ ಬಗ್ಗೆ ನಮಗೂ ವಿಶ್ವಾಸವಿದೆ. ನಂತರ ಎಲ್ಲ ತಿಳಿಯಲಿದೆ’ ಎಂದರು. ಅಪಹರಣ ಪ್ರಕರಣದ ಸಂತ್ರಸ್ತೆ ಹುಣಸೂರಿನ ಮನೆಯಲ್ಲೇ ಇದ್ದರು. ಅಲ್ಲಿಂದಲೇ ಪೊಲೀಸರು ಕರೆದುಕೊಂಡು ಹೋದರು ಎಂದು ಅವರ ಮಗಳು-ಅಳಿಯ ಹೇಳಿದ್ದಾರೆ. ಸಂತ್ರಸ್ತೆಯ ಹೇಳಿಕೆಯೂ ಹರಿದಾಡುತ್ತಿದೆ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದರು.

Read More