Author: kannadanewsnow05

ನವದೆಹಲಿ : ಖೋ ಖೋ ವಿಶ್ವಕಪ್ 2025 ರಲ್ಲಿ, ಭಾರತೀಯ ಮಹಿಳಾ ತಂಡವು ನೇಪಾಳವನ್ನು 78-40 ಅಂಕಗಳಿಂದ ಸೋಲಿಸಿ ಮೊದಲ ಬಾರಿಗೆ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರಂಭದಿಂದಲೇ ಭಾರತದ ವನಿತೆಯಾರು ದಿಟ್ಟ ಪ್ರದರ್ಶನ ನೀಡಿ ಯಾವುದೇ ತಂಡಕ್ಕೆ ಪುನರಾಗಮನಕ್ಕೆ ಅವಕಾಶ ನೀಡಲಿಲ್ಲ. ಫೈನಲ್ ಪಂದ್ಯದಲ್ಲೂ ನೇಪಾಳ ಸಂಪೂರ್ಣವಾಗಿ ಭಾರತಕ್ಕೆ ತಲೆಬಾಗಿ ಭಾರತ ಗೆದ್ದಿತ್ತು. ಈ ಪಂದ್ಯದಲ್ಲಿ ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಖೋ-ಖೋ ವಿಶ್ವಕಪ್ ಮೊದಲ ಬಾರಿಗೆ ನಡೆದಿದ್ದು, ಭಾರತ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದೆ. ಅಂತಿಮ ಸುತ್ತಿನಲ್ಲಿ ಭಾರತದ ವನಿತೆಯರು ಅದ್ಭುತ ಆಟ ಪ್ರದರ್ಶಿಸಿ ನೇಪಾಳವನ್ನು ಸೋಲಿಸಿದರು. ಮೊದಲ ಸುತ್ತಿನಲ್ಲಿಯೇ ಭಾರತದ ವನಿತೆಯರು ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು. ಭಾರತ ವನಿತೆಯರ ತಂಡ ಮೊದಲ ಸುತ್ತಿನಲ್ಲಿ ದಾಳಿ ನಡೆಸಿತು.  ಮತ್ತು ನೇಪಾಳದ ಡಿಫೆಂಡರ್‌ಗಳು ಪ್ರತಿರೋಧ ತೋರಲಿಲ್ಲ, ನಂತರ ಭಾರತ 34-0 ಅಂತರದಲ್ಲಿ ಮುನ್ನಡೆ ಸಾಧಿಸಿ ಇಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ…

Read More

ಉತ್ತರಕನ್ನಡ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುವಿನ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಬಳಿಕ ಮೈಸೂರಲ್ಲಿ ದೇವರಿಗೆ ಬಿಟ್ಟ ಕರುವಿನ ಬಾಲ ಕೊಯ್ದ ಎರಡನೇ ಘಟನೆ ನಡೆಯಿತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಎಂಬಲ್ಲಿ ರಾಕ್ಷಸರು ಗರ್ಭ ಧರಿಸಿದ್ದ ಹಸುವಿನ ಕುತ್ತಿಗೆ ಬೇರ್ಪಡಿಸಿ ದೇಹ ಮಾತ್ರ ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಇಂತಹ ಕೃತ್ಯಗಳಿಗೆ ಹೇಡಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರೇ ಕಾರಣ ಎಂದು ಕಿಡಿ ಕಾರಿದ್ದಾರೆ. ಇಂದು ಘಟನಾ ಸ್ಥಳಕ್ಕೆ ದಿನಕರ ಶೆಟ್ಟಿ ಭೇಟಿ ನೀಡಿದ್ದು, ಸರ್ಕಾರದವರು ಶೆಟ್ಟಿ ಕೆಂಡಾಮಂಡಲವಾಗಿದ್ದಾರೆ. ಮೊನ್ನೆ ಹಸುವಿನ ಕೆಚ್ಚಲು ಕತ್ತರಿಸಿದಾಗ ಆರೋಪಿ ಮಾನಸಿಕ ಅಸ್ವಸ್ಥ ಹೇಳಿಕೆ ನೀಡಿದರು. ಮಾನಸಿಕ ಅಸ್ವಸ್ಥ ಆತ ಅಲ್ಲ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು. ಸಿಎಂ ಗೃಹ ಸಚಿವರು…

Read More

ಗೋವಾ : ಭಾರತದಲ್ಲಿ ಮೋಜು ಮಸ್ತಿ ಮಾಡಲು ಇರುವ ಏಕೈಕ ಪ್ರದೇಶವೆಂದರೆ ಅದು ಗೋವಾ. ದೇಶದ ಅನೇಕ ರಾಜ್ಯ, ಹಾಗೂ ವಿದೇಶಿಗರಿಂದ ಗೋವಾ ರಾಜ್ಯ ಯಾವಾಗಲೂ ತುಂಬಿ ತುಳುಕುತ್ತಿರುತ್ತದೆ. ಇದೀಗ ಗೋವಾದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಪ್ರವಾಸಕ್ಕೆಂದು ಆಗಮಿಸಿದ ಮಹಿಳೆ ಹಾಗೂ ತರಬೇತುದಾರ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಪ್ಯಾರಾಗ್ಲೆಡಿಂಗ್ ಮಾಡುತ್ತಿದ್ದ ವೇಳೆ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿ ಮಹಿಳೆ ಮತ್ತು ಆಕೆಯ ತರಬೇತುದಾರ ಸಾವನಪ್ಪಿದ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.ನಿನ್ನೆ ಸಂಜೆ ಕೇರಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ತರಬೇತುದಾರ ನೇಪಾಳ ಪ್ರಜೆ ಸುಮಲ್ ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯಲ್ಲಿ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರೆ. ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯಲ್ಲಿ ಶಿವಾನಿ ಪ್ಯಾರಾಗ್ಲೆಡ್ ಮಾಡಿದ್ದಾರೆ. ಪ್ಯಾರಾಗ್ಲೆಡರ್ ಬಂಡೆಯಿಂದ ಟೇಕಾಫ್ ಆದ ಕೂಡಲೇ ಕಮರಿಗೆ ಬಿದ್ದಿದ್ದು,…

Read More

ಮಂಗಳೂರು : ಕಳೆದ 12 ವರ್ಷಗಳ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಕಾಡಂಚಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಕೊಲೆಯಾಗಿದ್ದ ಸೌಜನ್ಯಳ ತಂದೆ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಚಂದಪ್ಪ ಗೌಡ (58) ಎನ್ನುವರು ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಇವರು ಕಳೆದ ಎರಡು ದಿನಗಳ ಹಿಂದೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾಗಿ ಉಂಟಾಗಿ ಚಿಕಿತ್ಸೆ ಪಡಿಸಿದೆ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ಬಳ್ಳ ಮೂಲಗಳಿಂದ ತಿಳಿದು ಬಂದಿದೆ. ಪತ್ನಿ ನಾಲ್ವರು ಮಕ್ಕಳನ್ನು ಅಗಲಿದ ಚಂದಪ್ಪಗೌಡರ ಅಂತ್ಯಕ್ರಿಯೆಯೂ ಇಂದು ರಾತ್ರಿ 7.30ಕ್ಕೆ ಪಾಂಗಾಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿದುಬಂದಿದೆ.

Read More

ನವದೆಹಲಿ : ನಿನ್ನೆ ಮಂಡ್ಯದಲ್ಲಿ ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಒಬ್ಬಳು ಅಪಘಾತದಲ್ಲಿ ಸಾವನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಂದು ಘಟನೆಯಲ್ಲಿ ತನ್ನ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮದುವೆಯ ವರ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಘೋರ ಘಟನೆ ನವದೆಹಲಿಯ ಘಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ನಡೆದಿದೆ. ಹೌದು ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ ಎಂದು ತಿಳಿದುಬಂದಿದೆ. ನಿನ್ನೆ ಅನೀಲ್ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಂಜೆಯಾದರೂ ವಾಪಸ್ ಬಾರದ್ದನ್ನು ಕಂಡು ಕರೆ ಮಾಡಿದೆವು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ರಾತ್ರಿ 11:30ರ ಸುಮಾರಿಗೆ ಅನಿಲ್‌ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎಂದು ಅನಿಲ್ ಅಣ್ಣ ಸುಮಿತ್ ತಿಳಿಸಿದ್ದಾರೆ. ಈ ಒಂದು ಅಪಘಾತದಲ್ಲಿ ಕಾರಿಗೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎನ್ನುವುದು ಮಾತ್ರ ತಿಳಿದಿಲ್ಲ. ಘಟನೆ ಕುರಿತು ಪ್ರಕರಣ…

Read More

ಕಲಬುರ್ಗಿ : ಶಾರ್ಟ್ ಸರ್ಕ್ಯೂಟ್ ನಿಂದ ಕನ್ನಡಕದ ಅಂಗಡಿಯೊಂದು ಹೊತ್ತಿ ಉರಿದಿದೆ. ಈ ವೇಳೆ ಅಂಗಡಿಯಲ್ಲಿದ್ದಂತಹ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಕಲಬುರ್ಗಿ ನಗರದ ಬಿಗ್ ಬಜಾರ್ ಎದುರುಗಡೆ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಹೌದು ನಗರದ ಕೇಂದ್ರ ಭಾಗದಲ್ಲಿರುವಂತಹ ಬಿಗ್ ಬಜಾರ್ ಎದುರುಗಡೆ ಇರುವ AEIS ಆಪ್ಟಿಕಲ್ ಅಂಗಡಿಯಲ್ಲಿ ಈ ಒಂದು ಅಗ್ನಿ ದುರಂತ ಸಂಭವಿಸಿದೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದ್ದು ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು : ಪೊಲೀಸ್ ಕ್ವಾರ್ಟರ್ಸ್ ನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲ್ಲೆ ಮಾಡಿದ್ದು ಅಲ್ಲದೆ, ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯಲ್ಲಿ ಪಿಎಸ್ಐ ನಿತ್ಯಾನಂದ ಪತ್ನಿ ದೂರು ನೀಡಿದ್ದರು. ಇದೀಗ ಈ ಒಂದು ದೂರಿನ ಅನ್ವಯದ ಮೇಲೆ PSI ನಿತ್ಯಾನಂದನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ಅಮಾನತು ಅಮಾನತುಗೊಳಿಸಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಪಿಎಸ್ಐ ನಿತ್ಯಾನಂದನ ವಿರುದ್ಧ ರಾತ್ರೋರಾತ್ರಿ ಪತ್ನಿ ಠಾಣೆಗೆ ಬಂದು ದೂರು ನೀಡಿದ್ದರು.ಕಳಸ ಪೋಲಿಸ್ ವಸತಿಗೃಹದಲ್ಲಿ ನನ್ನ ಮೇಲೆ ನಿತ್ಯಾನಂದ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಅಮಿತಾ ದೂರು ನೀಡಿದ್ದರು. ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದು ಅಲ್ಲದೆ, ವರದಕ್ಷಿಣೆ ಕಿರುಕುಳ ನೀಡಿದ್ದ. ಮಹಿಳೆಯರ ಜೊತೆಗೆ ಪತಿ ನಿತ್ಯಾನಂದ ಅನೈತಿಕ ಸಂಬಂಧ ಹೊಂದಿದ್ದ ಅಲ್ಲದೆ ವರದಕ್ಷಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ನಿ ಅಮಿತಾ ಕಳಸ ಠಾಣೆಗೆ…

Read More

ಬೆಳಗಾವಿ : ಸಿಎಂ ಸಿದ್ದರಾಮಯ್ಯ ಕುರಿತು ನಾಜಿಯಾ ಖಾನ್ ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಿಳೆಯರ ಜೊತೆ ಸಿಎಂ ಸಿದ್ದರಾಮಯ್ಯ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಈ ಒಂದು ಹೇಳಿಕೆ ನೀಡಿದ್ದಾರೆ. ಸಿಎಂ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಮುತ್ತು ನೀಡುತ್ತಾರೆ. ಸಿದ್ದರಾಮಯ್ಯ ನಡೆಯ ಬಗ್ಗೆ ನಾನು ವಿರೋಧಿಸಿದ್ದೇನೆ. ಪಕ್ಷದ ಮಹಿಳಾ ವಕ್ತಾರೆಯರಿಗೆ ಸಿದ್ದರಾಮಯ್ಯನವರು ಮತ್ತು ನೀಡುತ್ತಾರೆ.ಚಲನಚಿತ್ರ ನಟಿಯರನ್ನು ಕೂಡ ಬಿಡದೆ ಸಿಎಂ ಸಿದ್ದರಾಮಯ್ಯ ಅಪ್ಪಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂದುವರೆದು ಮಹಿಳಾ ಪತ್ರಕರ್ತೆಯರ ಜೊತೆಗೂ ಸಿಎಂ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ನನ್ನ ಬಳಿ ನೊಂದ ಮಹಿಳಾ ಪತ್ರಕರ್ತೆಯರಲ್ಲಿ ಲಿಸ್ಟ್ ಕೂಡ ಇದೆ ಎಂದು ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಕುರಿತು ನಾಜಿಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Read More

ಬೆಳಗಾವಿ : ತನ್ನ ಪತಿ ಪರಸ್ತ್ರೀ ಜೊತೆಗೆ ಓಡಿ ಹೋಗಿದ್ದಾನೆ. ಹಾಗಾಗಿ ಆತನನ್ನು ಹುಡುಕಿ ಕೊಡುವಂತೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿರುವ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಪರಸ್ತ್ರಿ ಜೊತೆಗೆ ಪತಿ ಪರಾರಿಯಾಗಿದ್ದಾನೆ. ಕೂಡಲೇ ನನ್ನ ಪತಿಯನ್ನು ಹುಡುಕಿ ಕೊಡಿ ಎಂದು ಠಾಣೆಯ ಮುಂದೆ ಗ್ರಾ.ಪಂ ಸದಸ್ಯೆ ವಾಣಿಶ್ರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಠಾಣೆ ಎದರು ವಾಣಿಶ್ರೀ ಧರಣಿ ನಡೆಸುತ್ತಿದ್ದಾರೆ. 25 ದಿನಗಳ ಹಿಂದೆ ಪತಿ ಪರಸ್ತ್ರೀ ಜೊತೆಗೆ ಒಡಿ ಹೋಗಿದ್ದಾನೆ, ಮಾಸಾಬಿ ಎಂಬ ವಿವಾಹಿತ ಜೊತೆಗೆ ಬಸವರಾಜ್ ಓಡಿ ಹೋಗಿದ್ದಾನೆ ಎಂದು ಆರೋಪಿಸುತ್ತಿದ್ದು ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೂ ಸಹ ಪೊಲೀಸರು ಸ್ಪಂದಿಸುತ್ತಿಲ್ಲ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಣಿಶ್ರೀ ಆರೋಪಿಸಿದ್ದಾರೆ. ನನ್ನ ಮಕ್ಕಳು ಕೂಡ ಕರೆದುಕೊಂಡು ಹೋಗಿದ್ದಾನೆ. ಆಕೆ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಕರೆ ಮಾಡಿ ಹೇಳುತ್ತಾಳೆ. ಹಾಗಾಗಿ ಅವಳು ಆಕೆ…

Read More

ಉತ್ತರಕನ್ನಡ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಮಾನವೀಯ ಘಟನೆ ನಡೆದಿದ್ದು, ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕತ್ತರಿಸಿರುವ ದುರುಳರು ದೇಹವನ್ನು ಕೊಂಡೊಯ್ದಿರುವ ಘಟನೆ ನಡೆದಿದೆ. ಹೌದು ಇಂತಹ ಒಂದು ಕೃತ್ಯ ಎಸಗಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿನ್ನೆ ಮೇವಿಗಾಗಿ ಬಿಟ್ಟಿದ್ದ ಹಸು ರಾತ್ರಿಯಾದರೂ ಬಂದಿರಲಿಲ್ಲ. ಬೆಳಿಗ್ಗೆ ಹಸುವಿಗಾಗಿ ಮಾಲೀಕ ಕೃಷ್ಣ ಆಚಾರ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು, ರುಂಡ ಪತ್ತೆಯಾಗಿದೆ. ದುಷ್ಕರ್ಮಿಗಳು ಕೇವಲ ಹಸುವಿನ ರುಂಡವನ್ನು ಮಾತ್ರ ಅಲ್ಲಿ ಬಿಟ್ಟು ದೇಹವನ್ನು ಸೇವನಿಗೆ ಎಂದು ತೆಗೆದುಕೊಂಡು ಹೋಗಿದ್ದಾರೆ ಎಂದು ಹಸುವಿನ ಮಾಲೀಕರಾದಂತಹ ಕೃಷ್ಣ ಆಚಾರಿ ಅನುಮಾನ…

Read More