Author: kannadanewsnow05

ತುಮಕೂರು : ಶಾಲೆಯಲ್ಲಿ ಶೇಂಗಾ ಚಿಕ್ಕಿ ತಿಂದು ಸುಮಾರು 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥ ಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಣನಕುರಿಕೆ ಎಂಬಲ್ಲಿ ನಡೆದಿದೆ. ಇಂದು ಕೋಣನಕುರಿಕೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟದ ವೇಳೆ ನೀಡಿದ ಚಿಕ್ಕಿ ತಿಂದು 46 ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದಂತಹ ಮಕ್ಕಳಿಗೆ ಪಾವಗಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ವರದರಾಜು,.ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Read More

ಬೆಂಗಳೂರು : ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ, ಇದೀಗ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದಾರೆ. ಹೌದು ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಪೊಲೀಸರು ಡಿಸೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.ಇಂದು ಬೆಳಿಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 299 ರ ಅಡಿ ಸ್ವಾಮೀಜಿ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸ್ವಾಮೀಜಿ ಹೇಳಿದ್ದೇನು? ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಂದ್ರಶೇಖರ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ನಿಷೇಧಿಸುವಂತೆ ಒತ್ತಾಯಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಬಗ್ಗೆ ಸೈಯದ್ ಎಂಬುವವರು ದೂರು ನೀಡಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಮುಖ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದೆ. ಈ ಒಂದು ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ಬಳಸಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಇದೀಗ ಅಂಗವಿಕಲರ ಅನುದಾನದ ಹಣ ಕೂಡ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಅಂಧ ಚೇತನ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಆರೋಪಿಸಿದ್ದಾರೆ ಹೌದು ಅಂಧ ಚೇತನ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಗೌತಮ್ ಅಗರ್ವಾಲ್ ಈ ಒಂದು ಆರೋಪ ಮಾಡಿದ್ದಾರೆ. ಸರ್ಕಾರದಿಂದ ವಿಕಲಚೇತನರಿಗೆ ಶೇಕಡ 80ರಷ್ಟು ಹಣ ಕಡಿತ ಮಾಡಿದ್ದಾರೆ. ಕಳೆದ ವರ್ಷ 54 ಕೋಟಿ ಹಣ ಮೀಸಲಿಟ್ಟಿದ್ದ ಸರ್ಕಾರ, ಈ ವರ್ಷ ಕೇವಲ 10 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ. ಫೆಡರೇಷನ್ ಗೆ ಮೀಸಲಿಟ್ಟ ಬಾಕಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗೌತಮ್ ಅಗರ್ವಾವಾಲ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಹಗರಣಗಳನ್ನ ಇಟ್ಟುಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದು, ಇದೀಗ…

Read More

ಚಾಮರಾಜನಗರ : ಶಾಲಾ ವಿದ್ಯಾರ್ಥಿಗಳಿದ್ದ ಆಟೋ ಹಾಗೂ ಬೈಕ್ ನಡುವೆ ಭೀಕರವಾದಂತಹ ಅಪಘಾತ ನಡೆದಿದ್ದು, ಈ ಒಂದು ಅಪಘಾತದಲ್ಲಿ ಓರ್ವ ಶಾಲಾ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಎಂಬ ಗ್ರಾಮದಲ್ಲಿ ನಡೆದಿದೆ. ಇಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾಮಗೆರೆ ಎಂಬಲ್ಲಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಮಂಗಲ ಗ್ರಾಮದ ಬಾಲಕ ವಿಮಲ್ ರಾಜ್ ಮೃತ ದುರ್ದೈವಿ. ಈ ಬಾಲಕ ಕಾಮಗೆರೆ ಗ್ರಾಮದ ಸೆಂಟ್​ ಕ್ಲೇವಿಯರ್ ಶಾಲೆಯಲ್ಲಿ 5ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಬೈಕ್ ಹಾಗೂ ಆಟೋ ಅಪಘಾತ ನಡೆದು ಆಟೋ ಪಲ್ಟಿಯಾದ ಪರಿಣಾಮ ವಿಮಲ್ ರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಬಾಲಕರಿಗೆ ಗಂಭೀರ ಗಾಯವಾಗಿ‌ದ್ದರಿಂದ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ಓರ್ವ ಯೋಧ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿದ್ದಾರೆ. ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಸದ್ಯ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ. ಹೌದು ನ್ಯಾಯಕ್ಕಾಗಿ ಯೋಧನ ಮನೆಯ ಮುಂದೆ ಪ್ರಮೋದ ಹಜಾರೆ ಪ್ರತಿಭಟನೆ ಮಾಡುತ್ತಿದ್ದಾರೆ. ಮದುವೆಯಾಗುವುದಾಗಿ ಯೋಧ ಅಕ್ಷಯ್ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬೀಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ವಿರುದ್ಧ ಇದೀಗ ವಂಚನೆ ಆರೋಪ ಕೇಳಿ ಬಂದಿದೆ. 6 ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪ್ರಮೋದಾ ಅವರಿಗೆ ಅಕ್ಷಯ್ ಪರಿಚಯವಾಗಿದ್ದಾನೆ. ತನಗಿಂತ 14 ವರ್ಷದ ಹಿರಿಯಳಾದ ಪ್ರಮೋದಾ ಅವರೊಂದಿಗೆ ಅಕ್ಷಯ್ ಪ್ರೀತಿಯ ನಾಟಕ ಮಾಡಿದ್ದಾನೆ. ಮದುವೆಯಾಗುವುದಾಗಿ ಅಕ್ಷಯ್ ಹೋರಾಟಗಾರ್ತಿಗೆ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. 6 ವರ್ಷದ ಹಿಂದೆ ತಮ್ಮ ಮನೆಯ ದೇವರ ಕೋಣೆಯಲ್ಲಿ ಮದುವೆಯಾಗಿದ್ದ.…

Read More

ಕೋಲಾರ : ಶಾಸಕ ಯತ್ನಾಳ್ ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರಬಹುದು. ಕಾಂಗ್ರೆಸ್ ಬೆಂಬಲದಿಂದ ಯತ್ನಾಳ್ ಗೆದ್ದಿದ್ದು, ಹಾಗಾಗಿ ಅದೊಂದು ಗೆಲುವಲ್ಲ. ಯತ್ನಾಳ್ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಕಿಡಿ ಕಾರಿದರು. ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕುರುಡುಮಲೆ ದೇಗುಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಇದ್ದು ಒಳಗೆ ಚೂರಿ ಹಾಕುವವರಿದ್ದಾರೆ. ಬಿಜೆಪಿ ಶಾಲು ಹಾಕೊಂಡು ಪಕ್ಷದ ಅಧ್ಯಕ್ಷರ ವಿರುದ್ಧ ಮಾತನಾಡುತ್ತಾರೆ. ಯಾರೇ ಮಾತನಾಡಿದರು ಅವರದ್ದು ಹೊರಗೆ ತೆಗೆಯುತ್ತೇನೆ ಅಂತಾರೆ. ತಾಕತ್ತಿದ್ದರೆ ಅದೇನು ಗೊತ್ತು ತೆಗೆಯಿರಿ. ಹುಚ್ಚರಂತೆ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಹೈಕಮಾಂಡ್ ಸುಮ್ಮನೆ ಇರಲ್ಲ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬೈ ಎಲೆಕ್ಷನ್ ಸೋಲಿಗೆ ವಿಜಯೇಂದ್ರ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ಬೈ ಎಲೆಕ್ಷನ್ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಗ್ಯಾರಂಟಿ ಕಾರಣ. ಗಣಲಕ್ಷ್ಮಿ ಯೋಜನೆಯ ಹಣ ಹಾಕಿ ಉಪಚುನಾವಣೆಯಲ್ಲಿ ಗೆದ್ದರು ಎಂದು ಕುರುಡುಮಲೆ ದೇಗುಲದಲ್ಲಿ ಮಾಜಿ ಶಾಸಕ…

Read More

ನವದೆಹಲಿ : ಸಚಿವ ಸಂಪುಟ ಪುನಾರಚನೆ ಕುರಿತಂತೆ ಇತ್ತೀಚಿಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದರು. ಈ ವಿಚಾರವಾಗಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸದ್ಯಕ್ಕೆ ಯಾವುದೇ ಸಚಿವ ಸಂಪುಟ ಪುನಾರಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಕುರಿತಂತೆ ಮಧ್ಯಮಗಳಲ್ಲಿ ನೀವೇ ಆ ಕುರಿತು ಬರೆದಿದ್ದು, ಹಾಗಾಗಿ ನೀವೇ ಉತ್ತರ ಕಂಡುಕೊಳ್ಳಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಇಲ್ಲ. ಇನ್ನು ಮಾಜಿ ಸಚಿವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ ಆದರೆ ತಕ್ಷಣಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಹಾಸನದಲ್ಲಿ ಸ್ವಾಭಿಮಾನ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡುತ್ತೇವೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾಗು ಹೇಳಿದ್ದೇನೆ. ಸಮಾವೇಶದ…

Read More

ಮುಂಬೈ : ಆತನೊಬ್ಬ ಸದೃಢ ಕ್ರಿಕೆಟ್ ಆಟಗಾರ ಆದರೆ, ಕ್ರೀಡಾಂಗಣದಲ್ಲಿ ಮ್ಯಾಚ್ ಆಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತವಾಗಿ ಮೈದಾನದಲ್ಲೇ ಕುಸಿದು ಸಾವನ್ನಪ್ಪಿರುವ ಘಟನೆ ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿದ ಕ್ರಿಕೆಟರ್ ಅನ್ನು ಇಮ್ರಾನ್ ಪಟೇಲ್ (35) ಎಂದು ತಿಳಿದುಬಂದಿದೆ. ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ವೇಳೆ ಆರಂಭಿಕ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಪಿಚ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಹೇಳಿಕೊಂಡರು. ಅಂಪೈರ್‌ಗಳು ಮೈದಾನದಿಂದ ಹೊರಹೋಗಲು ಅನುಮತಿ ನೀಡಿದರು. ಆದರೆ, ಪೆವಿಲಿಯನ್‌ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದರು. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಒಂದು ಕ್ರಿಕೆಟ್ ಆಟದ ನೇರಪ್ರಸಾರವಾಗುತ್ತಿದ್ದ ಪಂದ್ಯಾವಳಿಯ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read More

ಬೆಂಗಳೂರು : ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಂದು ತಂಡ ವಕ್ಫ್ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದರೆ, ಇನ್ನೊಂದು ಬಣ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಪರವಾಗಿ ನಿಂತಿದೆ. ಹಾಗಾಗಿ ಈ ಒಂದು ಬಣ ಬಡಿದಾಟ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಹೌದು ಹೈಕಮಾಂಡ್ ಅಂಗಳಕ್ಕೆ ಇದೀಗ ಬಿಜೆಪಿ ಬಣ ಬಡಿದಾಟ ತಲುಪಿದೆ. ಹಾಗಾಗಿ ಮತ್ತೆ ಹೈಕಮಾಂಡ್ ಭೇಟಿಯಾಗಲು ಬಿವೈ ವಿಜಯೆಂದ್ರ ನಿರ್ಧಾರ ಮಾಡಿದ್ದಾರೆ. ಒಂದು ವಾರದಲ್ಲಿ ವಿಜಯೇಂದ್ರ ಇದು ಎರಡನೇ ಬಾರಿಗೆ ಹೈಕಮಾಂಡ್ ಅವರನ್ನು ಭೇಟಿ ಮಾಡುತ್ತಿದ್ದಾರೆ. ಇಂದು ದೆಹಲಿಗೆ ತೆರಳಲಿದ್ದಾರೆ. ನಾಳೆ ಹೈಕಮಾಂಡ್ ಅವರನ್ನು ಬಿವೈ ವಿಜಯೇಂದ್ರ ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮೊನ್ನೆ ಅಷ್ಟೇ ಬಿವೈ ವಿಜಯೇಂದ್ರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಬಣ ಬಡಿದಾಟ ಜೋರಾದ ಹಿನ್ನೆಲೆ ವಿಜಯೇಂದ್ರ ಅವರ ಹೈಕಮಾಂಡ್…

Read More

ಬಳ್ಳಾರಿ : ಇತ್ತೀಚಿಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ತನಿಖೆಯ ವೇಳೆ ಸ್ಪೋಟಕವಾದಂತ ಅಂಶ ಬಯಲಾಗಿದ್ದು, ಸಿಸೇರಿಯನ್ ವೇಳೆ ನೀಡಿದ್ದ ‘IV ಗ್ಲೂಕೋಸ್’ ನಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. IV ಗ್ಲುಕೋಸ್ ಕಳಪೆ ಗುಣಮಟ್ಟದಿಂದ ಕೂಡಿದೆ. ಆದರೂ, ಕೂಡ ವೈದ್ಯರು ಸಿಸೇರಿಯನ್​ ವೇಳೆ‌ IV ಗ್ಲುಕೋಸ್ ನೀಡಿದ್ದರಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತನಿಖಾ ತಂಡ ಪತ್ತೆ ಹಚ್ಚಿದೆ. ಹೀಗಾಗಿ, ಇಂಟ್ರಾವೆನಸ್ ದ್ರಾವಣ (IV ಗ್ಲುಕೋಸ್) ಬಳಕೆ ಮಾಡದಂತೆ ಆರೋಗ್ಯ ಇಲಾಖೆ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಕಳೆದ ನವೆಂಬರ್ 9 ರಂದು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು ಏಳು ಜನರು ಬಾಣಂತಿಯರು ದಾಖಲಾಗಿದ್ದಾರೆ ಈ ಸಂದರ್ಭದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬಳಿಕ ಕಳೆದ 15 ದಿನಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ.ಬಾಣಂತಿಯರ ಸಾವಿಗೆ ಕಾರಣವೇನು ಎಂಬುವುದನ್ನು ತಿಳಿಯಲು ಸರ್ಕಾರ ತಜ್ಞರ…

Read More