Author: kannadanewsnow05

ಮಾಂಡ್ಯ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಚಾರವಾಗಿ ಮಂಡ್ಯದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ವಿಡಿಯೋ ಮಾಡಿದವರದು ತಪ್ಪಲ್ಲ ಆದರೆ ಪೆನ್ ಡ್ರೈವ್ ಹಂಚಿಕೆ ಮಾಡಿದವರದು ತಪ್ಪಿದೆ ಎಂದು ಬಿಜೆಪಿ ಜೆಡಿಎಸ್ ಒಂದಾಗಿ ಪ್ರಜ್ವಲ್ ಅನ್ನು ಸಮರ್ಥನೆ ಮಾಡಿಕೊಳ್ಳುತ್ತೇವೆ ಎಂದು ಕಿಡಿಕಾರಿದರು. ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಗೆ ಜೆಡಿಎಸ್ ಅವರಿಷ್ಟ ಎಚ್ಡಿ ದೇವೇಗೌಡ ಬರೆದಿರುವ ಪತ್ರದ ವಿಚಾರವಾಗಿ ಜೆಡಿಎಸ್ ನವರು ಪ್ರಜ್ವಲ್ ಅನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಆ ಬಗ್ಗೆ ಮಾತನಾಡುವುದು ಸರಿಯಲ್ಲ ಪ್ರಜ್ವಲ್ ಕರೆಸುತ್ತಾರೆ ಬಿಡುತ್ತಾರೋ ಅವರಿಗೆ ಬಿಟ್ಟ ವಿಚಾರ. ಕುಮಾರಸ್ವಾಮಿ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದರು. ವಿಡಿಯೋ ಮಾಡಿದವರು, ಮಹಿಳೆಯರನ್ನು ಬೀದಿಗೆ ತಂದವನ ತಪ್ಪಲ್ಲ.ಆದರೆ ಸಿಕ್ಕ ಪೆನ್ ಡ್ರೈವ್ ಹಂಚಿದವರದ್ದು ತಪ್ಪೆಂದು ಹೇಳುತ್ತಿದ್ದಾರೆ. ಹಾಗಾಗಿ ಪ್ರಜ್ವಲ್ ಅನ್ನು ಸಮರ್ಥನೆ ಮಾಡಿಕೊಳ್ಳಲು ಜೆಡಿಎಸ್ ಬಿಜೆಪಿ ಮುಂದಾಗಿದೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ಲ ಅಂದುಕೊಂಡಿದ್ದಾರೆ. ಜನರು…

Read More

ಚಿಕ್ಕಮಗಳೂರು : ಲಾರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಣಕಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು. ಲಾರಿಗೆ ಓಮಿನಿ ಕಾರ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳದಿಂದ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ ಮಂಜುನಾಥನ ದರ್ಶನ ಪಡೆದು ವಾಪಸ್ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ.  ಚಿತ್ರದುರ್ಗದ ನಾಲ್ವರು ಸಾವನಪ್ಪಿದ್ದು ಮೂವರು ಗಾಯಗೊಂಡಿದ್ದು ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತಪಟ್ಟವರೆಲ್ಲರೂ ಚಿತ್ರದುರ್ಗದ ಮೂಲದವರು ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅವರ ಪತ್ನಿ ಶಶಿರೇಖಾ ಪ್ರತಿಕ್ರಿಯೆ ನೀಡಿದ್ದು, ಪತಿಯ ಸಾವಿನಿಂದ ನಾವು ಇನ್ನೂ ಹೊರಗಡೆ ಬಂದಿಲ್ಲ. ನನಗೆ ಹಾಗೂ ನನ್ನ ಮಗನಿಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸೌಂದರ್ಯ ಜಗದೀಶ್ ಪತ್ನಿ ಶಶಿರೇಕ ಹೇಳಿಕೆ ನೀಡಿದ್ದು, ನನ್ನ ಪತಿಯ ಸಾವಿನ ನಾವು ಇನ್ನು ಹೊರಗೆ ಬಂದಿಲ್ಲ. ಮನೆಯಲ್ಲಿ ಬಟ್ಟೆ ತೆಗೆದಾಗ ಡೆತ್ ನೋಟ್ ಸಿಕ್ತು ಎಡತನಾಟ್ ನಲ್ಲಿ ಪಾಲುದಾರರ ಬಗ್ಗೆ ಉಲ್ಲೇಖ ಮಾಡಿದ್ದರು ನನಗೆ ಹಾಗೂ ನನ್ನ ಮಗನಿಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದರು. ನನ್ನ ಗಂಡನಿಂದ ಖಾಲಿ ಪೇಪರಿಗೆ ಸಹಿ ಮಾಡಿಸಿಕೊಂಡಿದ್ದಾರೆ.ನನ್ನ ಪತಿ ನಟರ ಬಳಿ ಹೇಳಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.ಪಾಲುದಾರರಿಗೆ ಕೋಟ್ಯಾಂತರ ಮೌಲ್ಯದ ಭೂಮಿ ಬಿಟ್ಟು ಕೊಟ್ಟಿದ್ದರು.ಎಲ್ಲರೂ ನನ್ನ ಪ್ರತಿಗೆ ಮೋಸ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಸೌಂದರ್ಯ ಜಗದೀಶ್ ಪತ್ನಿಶಿರೇಖಾ ಹೇಳಿದರು.

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರು ನಿನ್ನೆ ಪ್ರಜ್ವಲ್ ರೇವಣ್ಣ ಅವರ ಜೊತೆ ಅಶೋಕ್ ಮಾತನಾಡಿರಬಹುದು ಎಂದು ಹೇಳಿಕೆ ನೀಡಿದರು ಇವರ ಹೇಳಿಕೆಗೆ ಆರ್ ಅಶೋಕ್ ವಿದೇಶಕ್ಕೆ ಪ್ರಜ್ವಲ್ಲರನ್ನು ಓಡಿ ಹೋಗಲು ಬಿಟ್ಟಿದೆ ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡಿ ಬಂದಾಗ ಬಂಧಿಸದೆ ಕತ್ತೆ ಕಾಯುತ್ತಿದ್ದರಾ? ಡೋರ್ ಕ್ಲೋಸ್ ಸಭೆ ಮಾಡಿ ನಿಯೋಜಿತ ಪ್ಲಾನ್ ಮಾಡಿದ್ರು ಪ್ರಜ್ವಲ್ ಹಿಡಿಯದಿದ್ದರೆ ಮೋದಿ ದೋಷಣೆ ಮಾಡಬಹುದದು ಎಂಬ ಪ್ಲಾನ್ ಮಾಡಲಾಗಿತ್ತು. ಅದರಂತೆ ಸರ್ಕಾರ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಕಳುಹಿಸಿದೆ ಎಂದು ಆರೋಪಿಸಿದರು. ವಿದೇಶಕ್ಕೆ ಹೋಗುವ ಮುನ್ನ ನನ್ನ ಜೊತೆ ಮಾತನಾಡಿದರೆ ತನಿಖೆ ಮಾಡಲಿ. ನನ್ನ ಫೋನ್ ಹಾಗೂ ಸಿದ್ದರಾಮಯ್ಯ ಫೋನ್ ಕೂಡ ತನಿಖೆ ಮಾಡಲಿ. ಆಗ ಯಾರು ಯಾರ ಜೊತೆ ಮಾತನಾಡಿದರು ಎಂದು ಗೊತ್ತಾಗುತ್ತದೆ. ನಾವು ಅದಕ್ಕಾಗಿಯೇ ಪ್ರಕರಣವನ್ನು CBI ಗೆ ಕೊಡಿ…

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ ರೇವಣ್ಣ ಅವರ ರಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಎಸ್ಐಟಿ ಕೇಂದ್ರಕ್ಕೆ ಪತ್ರ ಬರೆದಿರುವ ಬೆನ್ನಲ್ಲೇ ಅಲರ್ಟ್ ಆಗಿರುವ ವಿದೇಶಾಂಗ ಸಚಿವಾಲಯ ಇದೀಗ ಉತ್ತರ ಕೊಡುವಂತೆ ಪ್ರಜ್ವಲ್ ರೇವಣಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. ಹೌದು ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ವಿದೇಶಾಂಗ ಸಚಿವಾಲಯ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ಪಾಸ್ಪೋರ್ಟ್ ರದ್ದು ಮಾಡುವಂತೆ ಎಸ್ಐಟಿ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ SIT ಪತ್ರ ಬರೆದ ಬೆನ್ನಲ್ಲೆ ವಿದೇಶಾಂಗ ಸಚಿವಾಲಯ ಅಲರ್ಟ್ ಆಗಿದ್ದು ಪ್ರಜ್ವಲ್ ಗೆ ಇದೀಗ ಶೋಕಸ್ ನೋಟಿಸ್ ಜಾರಿ ಮಾಡಿ ಈ ಮೂಲಕ ವಿದೇಶಾಂಗ ಸಚಿವಾಲಯ ಉತ್ತರ ಕೇಳಿದೆ ಎಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ವಿದೇಶಕ್ಕೆ ಹೋಗಿದ್ದೇನೆ. ಯಾವ ಕಾರಣಕ್ಕೆ ವಿದೇಶದಲ್ಲಿದ್ದೇನೆ. ನನ್ನ ಕೆಲಸ ಏನು ಯಾವಾಗ ಬಂದು ಹಾಜರಾಗುತ್ತೇನೆ ಎಂಬುದರ ಕುರಿತು ಶೋಕಾಸ್ ನೋಟಿಸ್ ಗೆ ಪ್ರಜ್ವಲ್ ರೇವಣ್ಣ ಅವರು…

Read More

ಬೆಂಗಳೂರು : ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹಬ್ಬಾರ್ ಅವರು ದಾರಿ ತಪ್ಪಿದ ಮಕ್ಕಳು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ಇಬ್ಬರೂ ಶಾಸಕರಿಗೂ ಪಕ್ಷ ನೋಟಿಸ್ ನೀಡಿದೆ. ಎಂಪಿ ಚುನಾವಣೆ ಫಲಿತಾಂಶದ ಬಳಿಕ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು. ಈ ವರ್ಷ ಬಿಬಿಎಂಪಿ ಚುನಾವಣೆ ನಡೆಸುವುದರ ಕುರಿತು ಮಾತನಾಡಿದ ಅವರು, ನಮಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ mp ಚುನಾವಣೆ ಫಲಿತಾಂಶ ನೋಡಿ ಸರ್ಕಾರ ನಿರ್ಧರಿಸಬಹುದು ಮುದಿ ಪ್ರಧಾನಿ ಆಗುತ್ತಾರಾ ಇಲ್ಲವಾ ಅಂತ ನೋಡಿ ನಿರ್ಧರಿಸಬಹುದು ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಬಹುದು…

Read More

ಬೆಳಗಾವಿ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾದ್ರಿ ಹನುಮ ಮಂದಿರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ನೂರು ಕೋಟಿ ನೀಡಿದ್ದಾರೆ. ಆದರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಸಿಎಂ ವಿರುದ್ಧ ನಟ ಚೇತನ್ ಅಹಿಂಸಾ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ನಟ ಚೇತನ್, ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ನೂರು ಕೋಟಿ ಹಣ ನೀಡಿರುವ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಆ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಸುವಂತೆ ಒತ್ತಾಯಿಸಿದರು. ತಾನು ಅಹಿಂದ ಪರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನಿಜವಾಗಲೂ ಅಹಿಂದಪರ ಕೆಲಸ ಮಾಡುತ್ತಿಲ್ಲ.ಅಹಿಂದ ಪರ ಕೆಲಸ ಮಾಡದೇ ಸೋಮಾರಿಯಾಗಿದ್ದಾರೆ.ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿ ಶ್ರೀಮಂತರ ಆಸ್ತಿಯನ್ನ ಬಡವರಿಗೆ ಮರುಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಸೋಮಾರಿ ಸಿದ್ದರಾಮಯ್ಯ ಅಲೆಮಾರಿ ಜನಾಂಗಕ್ಕೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ನೀಡಿಲ್ಲ. ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಮುಂದಾಗದೇ ಹನುಮಾನ ಜನ್ಮಭೂಮಿ ಅಭಿವೃದ್ಧಿಗೆ 100 ಕೋಟಿ ಕೊಟ್ಟಿದ್ದೇ ಎಂದು ಹೇಳುವ…

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿದೇಶಕ್ಕೆ ಹೋಗಲು ಆತನಿಗೆ ಪಾಸ್ಪೋರ್ಟ್ ನೀಡಿದ್ದು ಕೇಂದ್ರ ಸರ್ಕಾರ ತಾನೇ ಹಾಗಾದರೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಯಾಕೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸ್ ನಲ್ಲಿ ಎರಡು ಬಾರಿ ಪತ್ರ ಬರೆದಿದ್ದಾರೆ. ಎರಡು ಬಾರಿ ಪತ್ರ ಬರೆದರು ಪಾಸ್ಪೋರ್ಟ್ ರದ್ದಾಗಿಲ್ಲ. ಪಾಸ್ ಪೋರ್ಟ್ ರದ್ದು ಮಾಡದಿರುವುದು ಯಾರ ತಪ್ಪು? ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್ಆರ್ ಪಾಟೀಲ್ ಪ್ರಶ್ನಿಸಿದ್ದಾರೆ. ಬಾಯಿಗೆ ಬಂದಂತೆ ಮಾತಾಡಿ ಗೂಬೆ ಕೂರಿಸುವುದು ಒಳ್ಳೆಯದಲ್ಲ. ಕಾನೂನಿನ ಮುಂದೆ ಎಲ್ಲರೂ ಕೂಡ ಒಂದೇ.ಪ್ರಜ್ವಲ್ ಗೆ ಪಾಸ್ಪೋರ್ಟ್ ನೀಡಿದ್ಯಾರು? ಕೇಂದ್ರ ಸರ್ಕಾರ ತಾನೇ? ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು FIR ಆದಮೇಲೆ ಅಲ್ಲ. ಎಫ್ ಐ ಆರ್ ಗಿಂತ ಮೊದಲೇ ಆತ ವಿದೇಶಕ್ಕೆ ಹೋಗಿದ್ದಾನೆ. ದೇವೇಗೌಡರಿಗೆ ಕಳಂಕ ತರವ ಕೆಲಸ ನಮ್ಮ ಪಕ್ಷ ಮಾಡಿಲ್ಲ ಪ್ರಜ್ವಲ್ ಗೆ…

Read More

ತುಮಕೂರು : ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಪುಂಡರು ಗಲಾಟೆ ನಡೆಸಿದ್ದು, ಕೇವಲ ದಾರಿ ಬಿಡಿ ಎಂದಿದಕ್ಕೆ ಯೋಧನ ಮೇಲೆ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್​ಬಳಿ ನಡೆದಿದೆ. ಹೌದು, ಕೇವಲ ದಾರಿ ಬಿಡಿ ಎಂದಿದಕ್ಕೆ ಯೋಧನ ಮೇಲೆ ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾಗಿರುವ ಯೋಧನನ್ನು ಗೋವಿಂದರಾಜು (30) ಎಂದು ಹೇಳಲಾಗಿತ್ತಿದೆ. ಭರತ್, ಪುನೀತ್​, ಗೌರಿಶಂಕರ, ಶಿವಾ, ದಿಲೀಪ್ ಯೋಧನ ಮೇಲೆ ಹಲ್ಲೆ ಮಾಡಿರುವ ಪುಂಡರು ಎಂದು ತಿಳಿದುಬಂದಿದೆ. ಹಲ್ಲೆಗೆ ಒಳಗಾಗಿರುವ ಯೋಧ ಗೋವಿಂದರಾಜು ಅವರು ಜಮ್ಮುಕಾಶ್ಮಿರದ ರಜೌರಿನಲ್ಲಿ ಭಾರತೀಯ ಭೂಸೇನೆ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಜೆಯ ಮೇಲೆ ಊರಿಗೆ ಬಂದಿದ್ದು, ಬೈರೇನಹಳ್ಳಿ ಕ್ರಾಸ್​ಗೆ ಬರುತ್ತಿದ್ದರು. ಈ ವೇಳೆ ದಾರಿ ಮಧ್ಯೆ ನಿಂತಿದ್ದವರಿಗೆ ಯೋಧ ಗೋವಿಂದರಾಜು ಅವರು ದಾರಿ ಬಿಡಿ ಎಂದಿದ್ದಾರೆ. ಈ ವೇಳೆ ಕುಡಿದ ಮತ್ತಲ್ಲಿ ಐವರು ಮದ್ಯದ ಬಾಟಲಿಯಿಂದ ಯೋಧ ಗೋವಿಂದರಾಜು ಅವರ ಮೇಲೆ ಹಲ್ಲೆ…

Read More

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾನು ಪಾರ್ಟಿಯಲ್ಲಿ ಇಲ್ಲ ಹೈದರಾಬಾದ್ ನಲ್ಲಿ ಇದ್ದೇನೆ ಎಂದಿದ್ದ ನಟಿ ಹೇಮಾ ಇದೀಗ ಬೆಂಗಳೂರಿಗೆ ಹೇಮಾ ಬಂದಿರುವ ವಿಮಾನದ ಟಿಕೆಟ್ ಮಾಹಿತಿ ಲಭ್ಯವಾಗಿದೆ. ನಟಿ ಹೇಮಾ ಜೊತೆಗೆ ಮೂವರು ಬೆಂಗಳೂರಿಗೆ ಬಂದಿದ್ದ ಮಾಹಿತಿ ಲಭ್ಯವಾಗಿದೆ. ಇಂಡಿಗೋ 6E-6305 ವಿಮಾನದಲ್ಲಿ ನಟಿ ಹೇಮಾ ಬೆಂಗಳೂರಿಗೆ ಬಂದಿದ್ದರು.ಮಧ್ಯಾಹ್ನ 1:55ಕ್ಕೆ ಶಾಂಶಾಬಾದ್ ನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಮಧ್ಯಾಹ್ನ 3 15ಕ್ಕೆ ಬೆಂಗಳೂರು ಏರ್ಪೋರ್ಟ್ಗೆ ವಿಮಾನ ಆಗಮಿಸಿದ್ದು, ನಟಿ ಹೇಮಾ ಜೊತೆ ಮತ್ತಿಬರು ಬಂದಿರುವ ಬಗ್ಗೆ ಟಿಕೆಟ್ ದಾಖಲೆ ಲಭ್ಯವಾಗಿದೆ. ನಾನು ಎಲ್ಲೂ ಹೋಗಿಲ್ಲವೆಂದು ನಂಬಿಸಲು ನಟಿ ಹೇಮ ಡ್ರಾಮಾ ಮಾಡಿದ್ದರು ಒಂದು ದಿನ ರೆಸಾರ್ಟ್ ನಲ್ಲಿದ್ದೇನೆ ಎಂದು ನಟಿ ಹೇಮ ವಿಡಿಯೋ ಬಿಡುಗಡೆ ಮಾಡಿದ್ದರು ಅಲ್ಲದೆ ಮನೆಯಲ್ಲಿ ಬಿರಿಯಾನಿ ಮಾಡುತ್ತಿರುವ ಇನ್ನೊಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ…

Read More