Subscribe to Updates
Get the latest creative news from FooBar about art, design and business.
Author: kannadanewsnow05
ರಾಯಚೂರು : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವೇಳೆ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಠಾಣೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಅನ್ನು ಬಂಧಿಸಿದ್ದಾರೆ. ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬುರು ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಆರೋಪ ವಿಚಾರವಾಗಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಫಾರೂಕ್ ಎಂಬಾತನ ಬಳಿ ಪಿಎಸ್ಐ ಮಂಜುನಾಥ್ 3 ಲಕ್ಷ್ಮ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಿಎಸ್ಐ ಮಂಜುನಾಥ ವಿರುದ್ಧ ಲೋಕಾಯುಕ್ತಕ್ಕೆ ಫಾರೂಖ್ ದೂರು ಸಲ್ಲಿಸಿದ್ದ. ಫಾರೂಕ್ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕಾನ್ಸ್ಟೇಬಲ್ ರಮೇಶ್ ಐವತ್ತು ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾನೆ. ವಿಚಾರಣೆ ವೇಳೆ ಪಿಎಸ್ಐ ಮಂಜುನಾಥ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧಪಟ್ಟ ಪೊಲೀಸರು…
ಬೆಂಗಳೂರು : ಕೇವಲ ಮೋರಿ ಕಾಮಗಾರಿಗಳಿಗೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ನೆಲಮಂಗಲದ ರಾಘವೇಂದ್ರ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರಾಘವೇಂದ್ರ ನಗರದಲ್ಲಿ ನೆಲಮಂಗಲ ನಗರಸಭೆ ಸದಸ್ಯ ಅಂಜನಮೂರ್ತಿ ಬೆಂಬಲಿಗರು ಹಾಗೂ ಮುನಿರಾಜು ಬೆಂಬಲಿಗರ ನಡುವೆ ಮೋರಿ ಕಾಮಗಾರಿ ಕುರಿತಂತೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ತಕ್ಷಣ ಅವರಿಗೆ ನೆಲಮಂಗಲ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಸಭೆ ಸದಸ್ಯ ಅಂಜನಾಮೂರ್ತಿ, ಅತಿಕ್, ಗೌಸ್, ಸುರೇಂದ್ರ, ಶೇಖರ್, ಮುನಿರಾಜು, ಕುಶಾಲ್, ಕುಮಾರಯ್ಯ ಹಾಗೂ ರಾಧಾಮಣಿ ವಿರುದ್ಧ ಇದೀಗ ನೆಲಮಂಗಲ ಟೌನ್ ಠಾಣೆಯಲ್ಲಿ ಎರಡು ಕಡೆ ಅವರಿಂದ ಕೇಸ್ ದಾಖಲಾಗಿದೆ.
ರಾಯಚೂರು : ಜಿಲ್ಲೆಯ ಗಂಜಳ್ಳಿ ಗ್ರಾಮದಲ್ಲಿ ಕೃಷ್ಣ ನದಿಯಲ್ಲಿ ಕುರಿಗೆ ನೀರು ಕುಡಿಸಲು ಹೋದ ಬಾಲಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಮೊಸಳೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ (11) ಎಂಬ ಬಾಲಕನ ಶೋಧ ಕಾರ್ಯ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣ ನದಿಯಲ್ಲಿ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ತುಮಕೂರು : ಕೆಸರಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದವನನ್ನು ಇದೀಗ ಪೊಲೀಸರು ರಕ್ಷಣೆ ಮಾಡಿರುವ ಘಟನೆ ತುಮಕೂರಿನ ಹೊರವಲಯ ದೇವರಾಯಪಟ್ಟಣದ ಕೆರೆಕೋಡಿಯಲ್ಲಿ ನಡೆದಿದೆ. ಕೆರೆಕೋಡಿಹಳ್ಳದ ಕೆಸರಿನಲ್ಲಿ ಅಪರಿಚಿತ ವ್ಯಕ್ತಿ ಸಿಲುಕಿ ಒದ್ದಾಡುತ್ತಿದ್ದ. ಈ ಕುರಿತು ಕ್ಯಾತ್ಸಂದ್ರ ಠಾಣೆ ಪೊಲೀಸರಿಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ಖುದ್ದು ಪೊಲೀಸರೇ ಕೆಸರಿಗಿಳಿದು ಶೋಧಕಾರ್ಯ ನಡೆಸಿದ್ದರು. ಹುಡುಕಾಟದ ವೇಳೆ ಕೆಸರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಕೈ ಮಾತ್ರ ಕಾಣಿಸಿದೆ. ಕೂಡಲೇ ಕೆಸರಿನಿಂದ ಆತನನ್ನ ಮೇಲಕ್ಕೆತ್ತಿ ಸಾವಿನ ದವಡೆಯಿಂದ ಸಿಬ್ಬಂದಿ ಪಾರು ಮಾಡಿದ್ದಾರೆ. ಮೇಲಕ್ಕೆತ್ತಿ ಸಾವಿನದ ದವಡೆಯಿಂದ ಪಾರು ಮಾಡಿದ ಸಿಬ್ಬಂದಿ ಕ್ಯಾತ್ಸಂದ್ರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಹಾಗೂ ಹೊಯ್ಸಳ ಕಾರು ಚಾಲಕ ಬಸವರಾಜರಿಂದ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ತಕ್ಷಣ ಅಪರಿಚಿತ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರ ಸಮಯ ಪ್ರಜ್ಞೆಗೆ ತುಮಕೂರು ಎಸ್ಪಿ ಅಶೋಕ್ ಶ್ಲಾಘಿಸಿದ್ದಾರೆ. ಕ್ಯಾಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ…
ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ NIA ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಇದೀಗ ಐದನೇ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿಯ ಶೋಯೆಬ್ ಅಹಮದ್ ಮಿರ್ಜಾ ಅಲಿಯಾಸ್ ಚೋಟು (35) ಎನ್ನುವವನನ್ನು NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಎಲ್ಇಟಿ ಪಿತೂರಿ ಕೇಸ್ ನಲ್ಲೂ ಶೋಯಬ್ ಅಹಮದ್ ಶಿಕ್ಷೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ.
ಹಾಸನ : ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜ ಗೌಡ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್ 7 ರವರೆಗೆ ವಿಸ್ತರಿಸಿ ಹಾಸನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಬಿಜೆಪಿ ಮುಖಂಡ ದೇವರಾಜೆಗೌಡ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ನ್ಯಾಯಾಂಗ ಬಂಧನ ವಿಸ್ತರಿಸಿ ಇದೀಗ ಕೋಟ್ ಆದೇಶ ಹೊರಡಿಸಿದೆ. ಆರೋಪಿ ದೇವರಾಜಗೌಡಗೆ ಜೂನ್ 7 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಹಾಸನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದೆ. 14 ದಿನ ನ್ಯಾಯಾಂಗ ಬಂಧನ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿದುಬಂದಿದೆ.ಮೇ 28ರಂದು ದೇವರಾಜೇಗೌಡ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಬೆಂಗಳೂರು : ಕಲುಷಿತ ನೀರು ಕುಡಿದು ಅಸ್ವಸ್ಥರಾಗುತ್ತಿರುವ ಪ್ರಕರಣ ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು, ಜಲಮಂಡಳಿ ಅಧ್ಯಕ್ಷರು ಹಾಗೂ ನಗರ ಜಿ.ಪಂ ಸಿಇಒಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಹೌದು ಕಲುಷಿತ ನೀರು ಕುಡಿದು ಅಸ್ವಸ್ಥರಾಗಿರುವ ಪ್ರಕರಣ ಹಿನ್ನೆಲೆ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಲ ಮಂಡಳಿ ಅಧ್ಯಕ್ಷರು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ಗೆ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಕಲುಷಿತ ನೀರು ಕುಡಿದಿದ್ದರಿಂದ ವಿವಿಧ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಬಗ್ಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಿದ್ದಾರೆ.ಹಾಗಾಗಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಬೇಕು. ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು,…
ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾರೆ. ಈ ಕುರಿತಂತೆ ನಿನ್ನೆ ಎಚ್ ಡಿ ದೇವೇಗೌಡರು ಪ್ರಜ್ವಲ್ ಗೆ ಪತ್ರ ಬರೆದಿದ್ದು ಎಲ್ಲೇ ಇದ್ದರೂ ಬಂದು ಶರಣಾಗು ಎಂದು ತಿಳಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯೆ ಸಿದ್ದು ಪ್ರಜ್ವಲ್ ಅನ್ನು ಕುಟುಂಬದಿಂದ ಹೊರ ಹಾಕುತ್ತೇವೆ ಎಂದು ದೇವೇಗೌಡರಿಗೆ ವಿದೇಶಕ್ಕೆ ಹೋಗುವುದು ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಟ್ವೀಟ್ ನಲ್ಲಿ ವಾಗ್ದಾಳಿ ನಡೆಸಿರುವ ಅವರು, ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವೀಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ. ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ ಆರೋಪಿ ಅಷ್ಟೇ ಎಂದಿದ್ದಾರೆ, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ. ಪ್ರಜ್ವಲ್ ರೇವಣ್ಣ ಅವರ…
ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ ಆರ್ ಫಾರ್ಮ್ ಹೌಸ್ ನಲ್ಲಿ ಇತ್ತೀಚಿಗೆ ರೇವ್ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ರಸ್ಟ್ ಸಿಕ್ಕಿದ್ದು ಕಾಂಗ್ರೆಸ್ ಸಚಿವರೊಬ್ಬರಿಗೆ ಆಪ್ತ ರಾಗಿರುವ ಪ್ರಕರಣದ ಆರನೇ ಆರೋಪಿಗೆ ಇದೀಗ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪ್ರಕರಣದ ಆರನೇ ಆರೋಪಿ ಯಾಗಿರುವ ಬಿಲ್ಡರ್ ಗೋಪಾಲ್ ರೆಡ್ಡಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.ಇಂದು ಗೋಪಾಲ್ ರೆಡ್ಡಿ ಬಂಧಿಸಲು ಸಿಸಿಬಿ ಪೊಲೀಸರು ತೆರಳಿದ್ದರು ಪ್ರಕರಣದ ಸಂಬಂಧ ದಾಖಲೆ ಸಹಿತ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ ತನಕಾಧಿಕಾರಿ, ಲಕ್ಷ್ಮಿನಾರಾಯಣ ಎದುರು ವಿಚಾರಣೆಗೆ ಬರಲು ನೋಟಿಸ್ ನೀಡಿದ್ದರು ತೆಲುಗು ನಟಿ ಹೇಮಾ ಅವರಿಗೂ ಕೂಡ ಗೋಪಾಲ್ ರೆಡ್ಡಿ ಹಾಗೂ ಅವರ ಪುತ್ರ ಪರಿಚಯವಿದ್ದರು ಎನ್ನಲಾಗಿದೆ. ಇದೀಗ ಬಿಲ್ಡರ್ ಗೋಪಾಲ್ ರೆಡ್ಡಿ ತಲೆ ಮರೆಸಿಕೊಂಡಿದ್ದು, ಗೋಪಾಲ್ ರೆಡ್ಡಿ ಕಾಂಗ್ರೆಸ್ ಸಚಿವರೊಬ್ಬರ ಆಪ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಲ್ಡರ್ ಗೋಪಾಲ ರೆಡ್ಡಿ ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಎಂದು…
ಬೆಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಎಲ್ಲೋ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಹೌದು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿಯಾಗಿ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯು ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಇದರ ಜೊತೆ ಭಾರೀ ಮಳೆ ಆಗುವ ಸಾಧ್ಯತೆ ಕೂಡ ಹೆಚ್ಚಿದೆ.