Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಒಂದು ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದರ ಮಧ್ಯ ಮುಡಾದ ಮಾಜಿ ಆಯುಕ್ತರು ಹಾಗೂ ಅಧಿಕಾರಗಳನ್ನ ತನಿಖೆಗೆ ಒಳಪಡಿಸಬೇಕೆಂದು ಮೈಸೂರು ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಹೌದು ಮುಡಾ ಆಯುಕ್ತರಾಗಿ ಈ ಹಿಂದೆ ಕೆಲಸ ಮಾಡಿದ ದಿನೇಶ್ ಕುಮಾರ್, ನಟೇಶ್ ಹಾಗೂ ಭೂಸ್ವಾಧೀನಾಧಿಕಾರಿ, ನಗರ ಯೋಜನಾ ಅಧಿಕಾರಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಯ ವಿರುದ್ಧ ತನಿಖೆ ನಡೆಸಬೇಕೆಂದು ಮೈಸೂರು ನಗರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಮುಡಾದಲ್ಲಿ ಸುಮಾರು 5000 ಕೋಟಿ ಅಕ್ರಮ ನಡೆದಿದ್ದು, ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಹಾಗಾಗಿ ಈ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ…
ದಾವಣಗೆರೆ : ಬಿಜೆಪಿ ಜೆಡಿಎಸ್ ಸೇರಿಕೊಂಡು ಕಾಂಗ್ರೆಸ್ ಸರ್ಕಾರ ಬೀಳಿಸಲು ಹುನ್ನಾರ ನಡೆಸುತ್ತಿವೆ ಎಂಬ ಆರೋಪಕ್ಕೆ, ಬಿಜೆಪಿಯ ಮಾಜಿ ಶಾಸಕ ಬಿಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಮಗೆ ಸರ್ಕಾರ ಬಿಳಿಸುವ ಅವಶ್ಯಕತೆ ಇಲ್ಲ ನಾವು ಇನ್ನೂ ಮೂರು ವರ್ಷ ಬೇಕಾದರೂ ಕಾಯುತ್ತೇವೆ ಎಂದು ಅವರು ತಿಳಿಸಿದರು. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅದನ್ನು ಕೂಡ ಕೊಡುತ್ತಿಲ್ಲ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಏನು ಅಭಿವೃದ್ಧಿ ಮಾಡಿಲ್ಲ. ತಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ನಾಳೆ ಹೈಕೋರ್ಟ್ ನಲ್ಲಿ ಮುಡಾ ಹಗರಣದ ತೀರ್ಪು ಬರುತ್ತದೆ. 136 ಸ್ಥಾನಗಳಿರುವ ಸರ್ಕಾರವನ್ನು ಕೆಡವಲು ಸಾಧ್ಯ ಇದೆಯಾ? ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರು. ಸರ್ಕಾರ ಬೀಳಿಸುವ ಅವಶ್ಯಕತೆ ಇಲ್ಲ. ಇನ್ನೂ ಮೂರು ವರ್ಷ ಕಾಯುತ್ತೇವೆ. ಇವರೇ ಸರ್ಕಾರ ಬಿಳಿಸಿಕೊಂಡಾಗ ಜನರ ಮುಂದೆ ಹೋಗುತ್ತೇವೆ.ಅದನ್ನು ಬಿಟ್ಟು ಈ ಕಿಚಡಿ ಸರ್ಕಾರವನ್ನು ಕೆಡವಲು ಹೋಗುವುದಿಲ್ಲ.…
ಹುಬ್ಬಳ್ಳಿ : ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನೇ ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ. ನನಗೂ ಸಿಎಂ ಆಗಬೇಕೆಂಬ ಆಸೆ ಇರಲ್ವಾ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗಬೇಕು ಅನ್ನುವ ಆಸೆ ಯಾರಿಗೆ ಇರಲ್ಲ ಹೇಳಿ? ನನಗೂ ಸೇಮ್ ಆಗಬೇಕು ಅಂತ ಆಸೆ ಇರಲ್ವಾ? ಎಲ್ಲರಿಗೂ ಆಸೆ ಇರುತ್ತೆ ಅದು ತಪ್ಪಲ್ಲ. ಸದ್ಯ ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಎಂದು ಹುಬ್ಬಳ್ಳಿಯಲ್ಲಿ ಸತಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದರು. ಇದಕ್ಕೂ ಮೊದಲು ಆರ್ ವಿ ದೇಶಪಾಂಡೆ ಸಿದ್ದರಾಮಯ್ಯ ಅನುಮತಿ ನೀಡಿದರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಆದರೆ ಸದ್ಯ ಅಂತ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ನಾನು ಸಿಎಂ ಆಗುವುದಕ್ಕೆ ಹೊರಿಸ್ಥರು ಅನುಮತಿ ನೀಡಿದರು ಸಿದ್ದರಾಮಯ್ಯ ಅನುಮತಿ ನೀಡಬೇಕು. ಸಿದ್ದರಾಮಯ್ಯಗಿಂತ ನಾನು…
ಕೊಪ್ಪಳ : ಕೊಪ್ಪಳದಲ್ಲಿ ಭೀಕರ ಅಪಘಾತ ಒಂದು ನಡೆದಿದ್ದು, ಲಾರಿಗೆ ವೇಗವಾಗಿ ಬಂದಂತಹ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ಈ ಒಂದು ಅಪಘಾತ ನಡೆದಿದೆ. ಹೌದು ಲಾರಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಪರಶುರಾಮ (40) ಹನುಮಂತ (35) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಮೃತರನ್ನು ಕೊಪ್ಪಳ ತಾಲೂಕಿನ ವಣಗೇರಿ ಗ್ರಾಮದಲ್ಲಿ ವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
ರಾಮನಗರ : ಜಿಲ್ಲೆಯ ಚನ್ನಪಟ್ಟಣದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದಿಂದ ನಾನೇ ಅಭ್ಯರ್ಥಿ ನಾನೇ ಬಿ ಫಾರ್ಮ್ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಡಿಕೆ ಸುರೇಶ್ ಗೆ ಒತ್ತಡ ಹಾಕುತ್ತಿದ್ದಾರೆ. ಆ ಕುರಿತು ನೋಡೋಣ. ನಾನು ಯಾರದೋ ಮಾತು ಕೇಳಿ ತೀರ್ಮಾನ ಮಾಡುವುದಿಲ್ಲ. ನಮ್ಮ ಪಕ್ಷದ ವೇದಿಕೆಯಲ್ಲಿ ಅಭ್ಯರ್ಥಿಯ ಆಯ್ಕೆ ಆಗುತ್ತದೆ ಎಂದರು. ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಸಂಘಟನೆಯ ಬಗ್ಗೆ ಗಮನಹರಿಸಬೇಕು.ಒಂದೊಂದು ಹೋಬಳಿ ಹಂಚಿಕೊಂಡು ಜನರ ಸೇವೆ ಮಾಡುತ್ತೇವೆ. ಯಾರೇ ಅಭ್ಯರ್ಥಿಯಾಗಲಿ ನನ್ನ ಮುಖ ನೋಡಿ ಮತ ಹಾಕಬೇಕು.ನನ್ನ ಮುಖ ನೋಡಿ ಜನರು ವೋಟ್ ಹಾಕಬೇಕು. ಉದ್ಯೋಗ ಮೇಳ, ನಿವೇಶನ, ಮನೆ ಹಂಚಿಕೆ, ಮಾಡುತ್ತಿದ್ದೇವೆ. ಮುಂದಿನ ವಾರ ಸಾಕಷ್ಟು ಯೋಜನೆಗಳಿಗೆ ಚಾಲನೆ ಕೊಡುತ್ತೇವೆ.ಕ್ಷೇತ್ರದಲ್ಲಿ ಹಿಂದೆ ಇದ್ದವರು ಯಾರು ಈ ಕೆಲಸ ಮಾಡಿಲ್ಲ ಎಂದು ಕನಕಪುರದಲ್ಲಿ…
ಕಲಬುರ್ಗಿ : ಕಳೆದ ಎರಡು ದಿನಗಳಿಂದ ಕಲ್ಬುರ್ಗಿ ಯಾದಗಿರಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ ಇದರಿಂದ ಜನಜೀವನ ಸಂಪೂರ್ಣವಾಗಿಅಸ್ತವೆಸ್ತಗೊಂಡಿದ್ದು, ಭಾರಿ ಮಳೆಯಿಂದಾಗಿ ಮಳಖೇಡದಲ್ಲಿನ ಉತ್ತರಾದಿಮಠ ಇದೀಗ ಜಲಾವೃತವಾಗಿದೆ. ಹೌದು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಮಳಖೇಡ ಗ್ರಾಮದಲ್ಲಿರುವ ಉತ್ತರಾದಿಮಠದ ಜಯತೀರ್ಥರ ಮೂಲ ಬೃಂದಾವನ ಭಾರಿ ಮಳೆ ಸುರಿದ ಪರಿಣಾಮ ಮಠ ಇದೀಗ ಜಲಾವೃತವಾಗಿದೆ. ಕಳೆದ ಎರಡು ದಿನಗಳಿಂದ ಕಲಬುರ್ಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದೆ. ಭಾರಿ ಮಳೆಯಿಂದಾಗಿ ಕಾಗಿಣ ನದಿ ಉಕ್ಕಿ ಹರಿಯುತ್ತಿದ್ದು, ಕಾಗಿಣ ನದಿ ಬಳಿಯ ಉತ್ತರಾದಿಮಠಕ್ಕೂ ನದಿಯ ನೀರು ನುಗ್ಗಿದೆ. ಉತ್ತರಾದಿ ಮಠದ ಜಯತೀರ್ಥರ ಮೂಲ ಬೃಂದಾವನ ಜಲಾವೃತವಾಗಿದೆ.
ಬೆಂಗಳೂರು : ರಿವರ್ಸ್ ಬರುತ್ತಿದ್ದ ಲಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಗ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಆತನ ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಹೌದು ಲಾರಿಯ ಚಾಲಕ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಲಾರಿಗೆ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮಗ ಸಾವನ್ನಪ್ಪಿದ್ದು, ತಾಯಿಗೆ ಗಂಭೀರವಾದ ಗಾಯಗಳಾಗಿವೆ. ಚಿತ್ರದುರ್ಗದ ನಿವಾಸಿ ಕುಶಾಲ್ (20) ಸ್ಥಳದಲ್ಲಿ ಸಾವನ್ನಪ್ಪಿದ್ದು ತಾಯಿ ಮಮತಾ (45) ಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗ ಬೈಕ್ ಮೇಲೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೊರಟಿದ್ದ ವೇಳೆ ಈ ಒಂದು ಅಪಘಾತ ನಡೆದಿದೆ. ನಿರ್ಲಕ್ಷ ಆರೋಪದ ಅಡಿ ಲಾರಿ ಚಾಲಕ ದಿವಾಕರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ : ಕಳೆದ ಕೆಲವು ವರ್ಷಗಳ ಹಿಂದೆ ಪಿಎಸ್ಐ ಹುದ್ದೆಗೆ ನಡೆದ ನೇಮಕಾತಿಯಲ್ಲಿ ನಡೆದ ಅಕ್ರಮ ಇಡಿ ದೇಶದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಿಎಂಟಿಸಿ ನಿರ್ವಾಹಕರ ಹುದ್ದೆಗೆ ಇಂದು ನಡೆದ ನೇಮಕಾತಿ ಪರೀಕ್ಷೆಯ ವೇಳೆ ಕೂಡ ನಕಲು ಮಾಡಿರುವ ಆರೋಪ ಕೇಳಿ ಬಂದಿದೆ. ಹೌದು ಧಾರವಾಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ವೇಳೆ ನಕಲು ಮಾಡಿರುವ ಆರೋಪ ಕೇಳಿಬಂದಿದ್ದು, ಬಾಸೆಲ್ ಮಿಷನ್ ಪಿಯು ಕಾಲೇಜಿನ ಕಟ್ಟಡದ ಬಳಿ ಕಾಪಿ ಚೀಟಿ ಪತ್ತೆಯಾಗಿದೆ. ಸಾಮಾನ್ಯ ಜ್ಞಾನ ಪರೀಕ್ಷೆ ವೇಳೆ ಕಾಪಿ ಚೀಟಿ ನಡೆದ ಆರೋಪ ಕೇಳಿ ಬಂದಿದೆ. ಚೀಟಿಯಲ್ಲಿ ಪ್ರಶ್ನೋತ್ತರ ಬರೆದು ಕಟ್ಟಡದಿಂದ ಕೆಳಗಡೆ ಎಸೆಯಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಪರೀಕ್ಷೆ ನಡೆದ ಕಟ್ಟಡದ ಬಳಿ ಅಭ್ಯರ್ಥಿ ಮಹಾಂತೇಶ್ ಗೆ ಚೀಟಿ ಸಿಕ್ಕಿದೆ. ಕೂಡಲೇ ಅಭ್ಯರ್ಥಿ ಮಹಾಂತೇಶ್ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಪ್ರಶ್ನೋತ್ತರ ಚೀಟಿ ಒಪ್ಪಿಸಿದ್ದಾನೆ. ಚೀಟಿಯಲ್ಲಿ ಐದು ಪ್ರಶ್ನೆಗಳಿಗೆ ಉತ್ತರ ಬರೆದಿರುವ ಆರೋಪ ಕೇಳಿ ಬಂದಿದೆ. ತಹಶೀಲ್ದಾರ್ ದೊಡ್ಡಪ್ಪ, ಶಹರ ಪೊಲೀಸ್ ಠಾಣೆಯ…
ರಾಯಚೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಶ್ರೀ ಸಿದ್ದರಾಮಯ್ಯ ಅವರು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಿದ್ದಾರೆ. ಇದರ ಮಧ್ಯ, ಮುಡಾ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಾಯಚೂರಿನ ಹಾಲಿ ಸಂಸದ ಜಿ ಕುಮಾರ್ ನಾಯಕ್ ಅವರ ಹೆಸರು ಕೂಡ ಇದರಲ್ಲಿ ಕೇಳಿಬಂದಿದೆ. ಹೌದು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವ ಪ್ರಕರಣ ವಿಚಾರಣೆ ಹೈಕೋರ್ಟ್ ಮುಂದೂಡಿರುವುದರಿಂದ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಆದರೆ, ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವೇಳೆ ಹಗರಣದಲ್ಲಿ ರಾಯಚೂರಿನ ಹಾಲಿ ಸಂಸದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಹೆಸರು ಕೇಳಿಬಂದಿದೆ. ಇದರಿಂದ ಜಿ.ಕುಮಾರ್ ನಾಯಕ್ಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಇವೆ ಎನ್ನಲಾಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿದ ಜಿ ಕುಮಾರ ನಾಯಕ್, 3 ವರ್ಷ ಮೈಸೂರಿನಲ್ಲಿ ಡಿಸಿ ಯಾಗಿದ್ದೆ. ರೂಲ್ಸ್ ಪ್ರಕಾರ ಇದ್ದಿದ್ದರೆ ಮಾಡಿಕೊಡುತ್ತಿದ್ದೆ. ಇವರೊಬ್ಬರದ್ದೆ ಅಲ್ಲಾ ತುಂಬಾ ಜನರದ್ದು ಎನ್ಎ ಮಾಡಿದ್ದೇನೆ. ಭೂಪರಿವರ್ತನೆ ಎಲ್ಲಾ ಜಿಲ್ಲೆಗಳಲ್ಲೂ…
ಮಂಡ್ಯ : ಬಾಲಕಿಗೆ ಅದೇ ಗ್ರಾಮದ ಬಾಲಕರು ಹಿಂದೆ ಬಿದ್ದು ನನ್ನನ್ನು ಪ್ರೀತಿಸು ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರವಾಗಿ ಬಾಲಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಇದರಿಂದ ಮನನೊಂದ ಬಾಲಕಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಹೌದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಾಲಕರಿಂದ ಕಿರುಕುಳ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಇಂಪನಾ (15) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ ಎಂದು ತಿಳಿದುಬಂದಿದೆ. ಪ್ರೀತಿಸುವ ವಿಚಾರವಾಗಿ ಬಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹನಕೆರೆ ಗ್ರಾಮದ ಬಾಲಕರು ಪ್ರೀತಿಸುವಂತೆ ಬಾಲಕಿಗೆ ಒತ್ತಾಯ ಮಾಡಿದ್ದಾರೆ.ಬಾಲಕರ ಮಾತಿನ ಚಕಮಕಿಯ ಆಡಿಯೋ ಕೂಡ ವೈರಲ್ ಆಗಿತ್ತು. ಬಾಲಕಿ ತಾಯಿಯ ವಾಟ್ಸಪ್ ಗೆ ಬಾಲಕರು ಅವರು ಮಾತನಾಡಿರುವ ಆಡಿಯೋ ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ಇಂಪನಾ ನೇಣಿಗೆ ಶರಣಾಗಿದ್ದಾಳೆ. ಘಟನೆಯ ಬಳಿಕ ಬಾಲಕರು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ…













