Author: kannadanewsnow05

ಕಲಬುರ್ಗಿ : ಮಹಾರಾಷ್ಟ್ರದಿಂದ ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ರೈಲೋಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ 3 ಭೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ಭೋಗಿಯಲ್ಲಿ  ಡೀಸೆಲ್ ಇಲ್ಲದ ಕಾರಣ ಭಾರಿ ಅನಾಹುತ ಒಂದು ತಪ್ಪಿದೆ. ಹೌದು ವಾಡಿ ಜಂಕ್ಷನ್ ನಲ್ಲಿ ಡೀಸೆಲ್ ಟ್ಯಾಂಕರ್ ರೈಲೋಂದು ಹಳಿ ತಪ್ಪಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ ಈ ಒಂದು ಘಟನೆ ನಡೆದಿದೆ. ಮಹಾರಾಷ್ಟ್ರದ ಪೆನವಲನಿಂದ ಈ ಒಂದು ಡೀಸೆಲ್ ಟ್ಯಾಂಕರ್ ರೈಲು ಹೊರಟಿತ್ತು. ಆಂಧ್ರಪ್ರದೇಶದ ಗುಂತಕಲ್ ಗೆ ತೆರಳುತ್ತಿದ್ದ ವೇಳೆ ಡೀಸೆಲ್ ಟ್ಯಾಂಕರ್ ರೈಲು ವಾಡಿ ರೈಲ್ವೆ ಜಂಕ್ಷನ್ ನಲ್ಲಿ ನಿಲ್ಲಿಸುವಾಗ ಹಳಿ ತಪ್ಪಿದೆ. ಅದೃಷ್ಟವಶಾತ್ ಹಳಿ ತಪ್ಪಿದ ಟ್ಯಾಂಕರ್ ನಲ್ಲಿ ಡೀಸೆಲ್ ಇರಲಿಲ್ಲ. ಹಳಿ ತಪ್ಪಿದ ಮೂರು ಭೋಗಿಗಳನ್ನು ಇದೀಗ ರೈಲ್ವೆ ಅಧಿಕಾರಿಗಳು ಸರಿಪಡಿಸಿದ್ದಾರೆ. ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಘಟನೆ ಕುರಿತಂತೆ ವಾಡಿ ರೈಲ್ವೆ…

Read More

ರಾಮನಗರ : ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಪಟ್ಟಂತೆ ಇದೀಗ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ಈ ನಡುವೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಯಾವುದೇ ಸಂದರ್ಭದಲ್ಲಿ ಚನ್ನಪಟ್ಟಣದ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು ಎಂದು ತಿಳಿಸಿದರು. ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ ನಾನು ದೇವರಿಗೆ ಮಾತ್ರ ಹೆದರುತ್ತೇನೆ. ಶಿವನ ಆಶೀರ್ವಾದ ನಮಗೆ ಇರುವವರೆಗೂ ಯಾರೂ ಮುಗಿಸಲು ಆಗಲ್ಲ. ನನಗೆ 3 ಬಾರಿ ಆಪರೇಷನ್ ಆಗಿದೆ. ಒಳ್ಳೆಯ ಕೆಲಸ ಮಾಡಬೇಕು ಬಡವರಿಗೆ ಒಳ್ಳೆಯ ಕೆಲಸ ಮಾಡಲು ದೇವರು 3ನೆ ಜನ್ಮ ನೀಡಿದ್ದಾನೆ. ನಾನು ಯಾವನಿಗೂ ದಮ್ಮಯ್ಯ ಅಂತ ಹೇಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಬಹುದು ಎಂದರು. ಚನ್ನಪಟ್ಟಣಕ್ಕೆ ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸಬೇಕು. ನಾನು ಯಾರನ್ನೇ ಅಭ್ಯರ್ಥಿ ಮಾಡಿದರು ಗೆಲ್ಲಿಸುವ ಹೊಣೆ ನಿಮ್ಮ ಮೇಲಿದೆ. ಮೋದಿ ಸಂಪುಟದಲ್ಲಿ ಸೀನಿಯರ್ ಮಂತ್ರಿಯಾಗಿ 9ನೇ ಸ್ಥಾನದಲ್ಲಿ ಇದ್ದೇನೆ. ದೇಶವನ್ನು ದರೋಡೆ ಮಾಡುವವರ ನಡುವೆ…

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮೂಲದ ಇಬ್ಬರು ಕಾರ್ಮಿಕರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದರು. ಅದಾದ ಬಳಿಕ ಇಂದು ಕನ್ನಡ ಮಾತಾಡಿ ಅಂದಿದ್ದಕ್ಕೆ ವ್ಯಕ್ತಿ ಓರ್ವನ ಮೇಲೆ ಹಿಂದಿ ಭಾಷಿಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಹೌದು ದಾಬಸ್ ಪೇಟೆ ನಿವಾಸಿ ಸೈಯದ್ ರಫೀಕ್ (52) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಇಂದು ಅವರು, ಚಿಕ್ಕಪೇಟೆಯ ಮಮತಾ ಆರ್ಟ್ಸ್ ಸ್ಟೋರ್ ಗೆ ಭೇಟಿ ನೀಡಿದ್ದರು.ಈ ವೇಳೆ ಅಂಗಡಿಯ ಕೆಲಸದವನ ಬಳಿ ಮನೆಗೆ ಕಂಚಿನ ದೀಪದ ಕಂಬಬೇಕಾಗಿದೆ ಎಂದು ಕನ್ನಡದಲ್ಲಿ ಹೇಳಿದ್ದಾರೆ.ಆದರೆ ಕೆಲಸದಾತನಿಗೆ ಕನ್ನಡ ಅರ್ಥವಾಗಿಲ್ಲ. ಈ ವೇಳೆ ಅಂಗಡಿಯ ಮಾಲೀಕ ಮದ್ಯ ಪ್ರವೇಶಿಸಿ, ವ್ಯವಹರಿಸಿದ್ದಾರೆ. ಆದರೆ ಕೆಲಸದವನು ರಫೀಕ್ ಅವರ ಪತ್ನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಕೆಲಸಗಾರ ಸಿಬ್ಬಂದಿ ನೀನು ಬೇಕಾದರೆ ಶಾಲೆಗೆ ಹೋಗಿ ಕನ್ನಡ ಕಲಿ, ನಮ್ಮೊಂದಿಗೆ ಮಾತನಾಡಬೇಕಾದರೆ ನಮ್ಮ ಭಾಷೆಯಲ್ಲಿ ಮಾತನಾಡು ಎಂದು ಹೇಳಿದ್ದಾರೆ ಇದರಿಂದ ಸಿಟ್ಟಾದ ರಫೀಕ್…

Read More

ಉತ್ತರಕನ್ನಡ : ಪ್ರವಾಸಕ್ಕೆ ಎಂದು ತೆರಳಿದ್ದ ವಿದ್ಯಾರ್ಥಿ ಒಬ್ಬ ಸಮುದ್ರದಲ್ಲಿ ಈಜುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ. ಹೌದು ಬೆಂಗಳೂರಿನ ವಿದ್ಯಾಸೌಧ ಕಾಲೇಜಿನಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಎಂದು ತೆರಳಿದ್ದರು. ಇಂದು ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ, ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿಯಾಗಿದ್ದು, ಇನ್ನು ಬೆಂಗಳೂರಿನ ಧನುಶ್.ಡಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂದು ಮುರುಡೇಶ್ವರ ಕಡಲ ತೀರದಲ್ಲಿ ಧನುಷ್ ಮತ್ತು ಗೌತಮ್ ಇಬ್ಬರು ಸಮುದ್ರಕ್ಕೆ ಈಜಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಧನುಷ್ ಗೌತಮ್ ಇಬ್ಬರು ಮುಳುಗುತ್ತಿದ್ದರು. ಕೂಡಲೇ ಲೈಫ್ ಗಾರ್ಡ್ಸ್ ಧನುಷ್ನನ್ನು ರಕ್ಷಣೆ ಮಾಡಿದರು. ಆದರೆ ಧನುಷ್ ಗೌತಮ್ ಕೂಡ ಜೊತೆಯಲ್ಲಿ ನೀರಿಗೆ ಇಳಿದಿದ್ದನ್ನು ಅವರಿಗೆ ಹೇಳಲಿಲ್ಲ. ಹಾಗಾಗಿ ಧನುಷ್ ಮೃತಪಟ್ಟಿದ್ದಾನೆ.ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಶ್ಚಿಮಬಂಗಾಳ : ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ಟ್ರೈನಿ ವೈದ್ಯೇ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ದೇಶದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಇಂದು ಪಶ್ಚಿಮಬಂಗಾಳದ ದಕ್ಷಿಣ 24-ಪರಗಣ ಜಿಲ್ಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಿಳಿಬಂದಿದೆ. ಹೌದು ಟ್ಯೂಶನ್‌ನಿಂದ ಮರಳುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.ಶುಕ್ರವಾರ ಸಂಜೆಯಿಂದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಶನಿವಾರ ಮುಂಜಾನೆ ಜಯನಗರ ಪ್ರದೇಶದ ಜವುಗು ಭೂಮಿಯಿಂದ ಬಾಲಕಿಯ ಶವ ಪತ್ತೆಗಾಗಿದೆ.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿದ್ದಾರೆ. ಬಾಲಕಿ ಶವ ಪತ್ತೆ ಬಳಿಕ ಗುಂಪೊಂದು ಮಹಿಸ್ಮರಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಹೊರಠಾಣೆ…

Read More

ಬೆಂಗಳೂರು : ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಅವಧಿ ಮುಗಿಯೋದರ ಒಳಗಾಗಿ ಜಾತಿ ಗಣತಿ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಅವರು ಇಂದು ಸರ್ಕಾರ ಬಿದ್ರೆ ಬೀಳಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದರು. ಇಂದು ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿದ್ದರೆ ಬೀಳಲಿ ಬಿಡಿ ಯಾಕೆ ಹೆದರುತ್ತೀರ? ಜಾತಿಗಣತಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇದೆ. ಆದರೆ ಸರ್ಕಾರ ಯಾಕೆ ಯೋಚನೆ ಮಾಡುತ್ತೀದೆ ಅರ್ಥ ಆಗ್ತಿಲ್ಲ.ಮೀನಾ ಮೇಷ ಎಣಿಸದೆ ಮೊದಲು ಜಾತಿಗಣತಿ ಜಾರಿಗೆ ಮಾಡಲಿ ಜಾತಿಗಣತಿ ಜಾರಿಯಿಂದ ಎಲ್ಲಾ ಸಮುದಾಯಕ್ಕೆ ಅನುಕೂಲ ಆಗಲಿದೆ ಜಾತಿಗಣತಿ ಜಾರಿಯಿಂದಲೇ ಸರ್ಕಾರ ಹೋಗುತ್ತದೆ ಅಂದರೆ ಹೋಗಲಿ. ಎಂದು ಅವರು ತಿಳಿಸಿದರು. ಜಾತಿ ಗಣತಿ ಎನ್ನುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವಾಗಿದೆ. ಜಾತಿಗಣತಿ ಜಾರಿಗೆ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ…

Read More

ಮಂಗಳೂರು : ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ (52) ದಿಢೀರ್ ನಾಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೂಳೂರಿನ ಫಲ್ಗುಣಿ ನದಿ ಸೇತುವೆಯ ಮೇಲೆ ಅಪಘಾತವಾದ ಸ್ಥಿತಿಯಲ್ಲಿ ಅವರ ಕಾರು ಪತ್ತೆಯಾಗಿದೆ. ಆದರೆ ಈ ಒಂದು ಪ್ರಕರಣಕ್ಕೆ ಇದೀಗ ಸ್ಪೋಟಕವಾದ ಟ್ವಿಸ್ಟ್ ಸಿಕ್ಕಿದ್ದು ಆತ್ಮಹತ್ಯೆಗೆ ಮಹಿಳೆಯ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಹೌದು ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಮಹಿಳೆಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯಿಂದ ಮುಮ್ತಾಜ್ ಅಲಿಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು. ಮದುವೆ ಆಗುವಂತೆ ಮುಮ್ತಾಜಿಗೆ ಮಹಿಳೆ ಪಿಡಿಸುತ್ತಿದ್ದಳು ಎಂಬ ಗುಮಾನಿ ಕೇಳಿಬಂದಿದೆ. ಅಲ್ಲದೆ ಮಹಿಳೆಯ ಬ್ಲಾಕ್ ಮೆಲ್ ಗೆ ನಾಲ್ವರು ಸಹಕಾರ ಕೊಟ್ಟಿದ್ದಾರೆ. ಸೂರತ್ಕಲ್ ಮೂಲದ ನಾಲ್ವರ ಬ್ಲಾಕ್ ಮೆಲ್ ಗೆ ಸಹಕಾರ ನೀಡಿರುವ ಗುಮಾನಿ ಎದ್ದಿದೆ. ಮಸೀದಿ ಕಮಿಟಿ ವಿಚಾರದಲ್ಲಿ ಮುಮ್ತಾಜ್ ನಾಲ್ವರ ಜೊತೆ ಗಲಾಟೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೆ…

Read More

ಬೆಂಗಳೂರು : ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಪೊಲೀಸರು ಹಲವಾರು ಕಠಿಣ ಕ್ರಮ ಕೈಗೊಂಡರು ಸಹ ಚಾಲಾಕಿ ಖದೀಮರು ಯಾವುದೊ ಒಂದು ಮಾರ್ಗ ಬಳಸಿ ಇದನ್ನ ಮಾರಾಟ ಮಾಡಿತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ವಿದೇಶಿ ಪೋಸ್ಟ್ ಆಫೀಸ್ ಗಳಿಗೆ ವಿದೇಶದಿಂದಲೇ ಮಾದಕ ವಸ್ತುಗಳ ಪಾರ್ಸೆಲ್ ಬರುತ್ತೀವೆ. ಹೌದು ಅಪರಿಚಿತ ವ್ಯಕ್ತಿಗಳ ವಿಳಾಸಕ್ಕೆ ವಿದೇಶಗಳಿಂದ ಮಾದಕ ವಸ್ತುಗಳು ಬರುತ್ತಿದೆ. ಕಳೆದ ಅಕ್ಟೋಬರ್ 1 ರಂದು ಸಿಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಫಾರಿನ್ ಪೋಸ್ಟ್ ಆಫೀಸ್ ನಿಂದ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಶ್ವಾನ ದಳದ ಸಮೇತ ಸಿಸಿಬಿ ನಾರ್ಕೋಟಿಕ್ ವಿಂಗ್ ದಾಳಿ ನಡೆಸಿದ್ದು ಈ ವೇಳೆ ಪಾರ್ಸೆಲ್ ಗಳನ್ನ ಕಂಡು ಶ್ವಾನದಳ ಅನುಮಾನಾಸ್ಪದವಾಗಿ ವರ್ತಿಸಿದೆ. ಕೂಡಲೇ ಆ ಪಾರ್ಸೆಲ್ ವಶಕ್ಕೆ ಪಡೆದು ಟೆಸ್ಟ್​ಗೆ ಕಳುಹಿಸಿದಾಗ ಅದರಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ. ಎಂಡಿಎಂಎ, ಕೊಕೇನ್ ಹಾಗೂ ಬ್ರೌನ್ ಶುಗರ್ ಬೆಂಗಳೂರಿಗೆ ಬರುತ್ತಿದೆ. ವಿದೇಶಗಳಿಂದ ನಗರದ ವಿದೇಶಿ ಪೋಸ್ಟ್ ಆಫೀಸ್​ಗೆ ಮಾದಕ ವಸ್ತುಗಳು ಬರ್ತಿವೆ ಎಂಬ ಸ್ಪೋಟಕ ವಿಚಾರ…

Read More

ದಕ್ಷಿಣಕನ್ನಡ : ಭಾಷಣದಲ್ಲಿ ಅನ್ಯ ಧರ್ಮಕ್ಕೆ ನೋವುಂಟು ಮಾಡಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪಡೆದಂತಹ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಇದೀಗ FIR ದಾಖಲಾಗಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೌದು ಮಂಗಳೂರಿನ ಉಳ್ಳಾಲ ತಾಲೂಕಿನ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಭಾಷಣ ಮಾಡಿದ್ದ ಡಾ.ಅರುಣ್ ಉಳ್ಳಾಲ್, ಬೇರೆ ಧರ್ಮಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿದ ಆರೋಪದ ಹಿನ್ನಲೆಯಲ್ಲಿ ಮಂಗಳೂರು ಸೆನ್ ಪೊಲೀಸರು ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಪ್ರಾಧ್ಯಪಕ ಹೇಳಿದ್ದೇನು? ನವದಂಪತಿ ಸಮಾವೇಶದಲ್ಲಿ ಬಾಷಣ ಮಾಡುತ್ತಾ ಹಿಂದುಗಳು ಹಿಂದು ಮಾಲಿಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು. ಹಿಂದು ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು. ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ ಎಂದು ಅರುಣ್ ಉಳ್ಳಾಲ್ ಅವರು ಹೇಳಿದ್ದರು. ಇವರ…

Read More

ಚಿತ್ರದುರ್ಗ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನೊಂದೆಡೆ ವಿಪಕ್ಷ ನಾಯಕರು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಕುರಿತಾಗಿ ಬಿ ವೈ ವಿಜಯೇಂದ್ರ ಅವರು ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಹಿಂದಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಹಿಂದಕ್ಕೆ ಮೋಸ ಮಾಡಿದ್ದಾರೆ. ವಾಲ್ಮೀಕಿ ಮುಡಾ ಹಗರಣದಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಅನ್ಯಾಯ ಮಾಡಿದೆ. ಜನತೆ ಸಿಎಂ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುತಿದ್ದಾರೆ ಬಿಜೆಪಿ ರಾಜ್ಯಪಾಲರು ಏನು ಹೇಳಿದ್ದಾರೆ ಎಂಬುದು ಬದಿಗಿಡಿ, ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿ ಎಂದು ಅವರು ಒತ್ತಾಯಿಸಿದರು.

Read More