Author: kannadanewsnow05

ಬೆಂಗಳೂರು : ಕನ್ನಡ ಪ್ರಾಚೀನ ಭಾಷೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆ. ಇದು ಶಾಸ್ತ್ರೀಯ ಭಾಷೆ. ನಾವು ಮಾಡಬೇಕಿರೋದು, ಕನ್ನಡ ಕಲಿಸುವ ಮತ್ತು ಕನ್ನಡದಲ್ಲಿ ವ್ಯವಹರಿಸುವ ಕಾರ್ಯವನ್ನು ಮಾಡಬೇಕು. ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡವೇ ವ್ಯಾವಹಾರಿಕ ಭಾಷೆ ಆಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ನಡೆದ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಭಾಷೆ ಬಗ್ಗೆ ಹಾಗೂ ಸಂಸ್ಕೃತಿ ಬಗ್ಗೆ ಉದಾರತೆ ಇರಬಾರದು. ಅಭಿಮಾನ ಇರಬೇಕು. ಕನ್ನಡ ಶಾಸ್ತ್ರೀಯ ಭಾಷೆ. ಆದರೆ ಕೇಂದ್ರ ಸರ್ಕಾರ ಕನ್ನಡ ಭಾಷೆ ಅಭಿವೃದ್ಧಿಗೆ ಅನುದಾನ ನೀಡ್ತಾ ಇಲ್ಲ. ಅದನ್ನು ನಾನು ಈಗ ಮಾತಾಡಲ್ಲ. ಇಂತ ಸ್ಥಾನಮಾನ‌ ಇರುವ ಭಾಷೆ ಕನ್ನಡ ಎಂದರು. ಮನುಷ್ಯತ್ವ ಪ್ರೀತಿಸಲು ಉದಾರತೆ ಇರಬೇಕು. ಆದರೆ ಭಾಷೆಗೆ ಇರಬಾರದು. ತಮಿಳುನಾಡಿನವರು ಇಲ್ಲಿ ಬಂದು ತಮಿಳು ಮಾತನಾಡಿದರೆ ನಾವು ಅವರದೇ ಭಾಷೆಯಲ್ಲಿ ಮಾತನಾಡುತ್ತೇವೆ. ತೆಲಗು ಮಾತಾಡಿದರೆ ನಾವೂ ಕೂಡ ತೆಲಗು…

Read More

ರಾಯಚೂರು : ಮನೆ ಮುಂದೆ ಪಟಾಕಿ ಹೊಡೆಯುತ್ತಿರುವ ವಿಚಾರಕ್ಕೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯಗೊಂಡ ಘಟನೆ ರಾಯಚೂರು ಜಿಲ್ಲೆಯ ನಗರದ ರಾಗಿಮಾನಗಡ್ಡದಲ್ಲಿ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಮಾಡಿರುವ ಹಂತಕರುಕೊಲೆಯಾದ ನರಸಿಂಹಲು (32) ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು, ಇದಕ್ಕೆ ವಿರೋಧಿಸಿದ್ದ ನರಸಿಂಹಲು ಮನೆಯಲ್ಲಿ ಮಕ್ಕಳಿದ್ದಾರೆ ಮನೆಮುಂದೆ ಪಟಾಕಿ ಸಿಡಿಸಬೇಡಿ ಎಂದು ಹೇಳಿದ್ದನು.ಇದರಿಂದಾಗಿ ಕೆರಳಿದ್ದ ಹಂತಕರು ನರಸಿಂಹಲು ಮೇಲೆ ಹಲ್ಲೆಗೆ ಮುಂದಾಗಿದ್ದರು. ಎರಡು ಗುಂಪುಗಳ ಮಧ್ಯೆ ಪರಸ್ಪರ ಬಡಿದಾಟವಾಗಿದ್ದು. ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು‌ ಪಟಾಕಿ ಹೊಡೆಯುತ್ತಿದ್ದರು. ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ. ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ…

Read More

ವಿಜಯಪುರ : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.ಇದೀಗ ಅವರ ವಿರುದ್ಧ ಮತ್ತೊಂದು ಆರೋಪ ಮಾಡಿದ್ದು, ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂಪಾಯಿ ದುಡ್ಡು ತಿಂದಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಸಿಎಂ ಇದ್ದಾಗ ಮಂತ್ರಿಯಾಗು ಎಂದಿದ್ದರು ಆದರೆ ನಾನು ಆಗಿರಲಿಲ್ಲ. ಅವರು ಸಿಎಂ ಇದ್ದಾಗ ಸಾವಿರಾರು ಕೋಟಿ ರೂ. ಹಣ ತಿಂದಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮಂಡಲದಲ್ಲಿ ನಾನು ಇರಲ್ಲ ಎಂದು ತಿರಸ್ಕರಿಸಿದ್ದೇನೆ. ಪ್ರತಿ ನಿತ್ಯ ಅಪ್ಪ, ಮಗ ನಡ್ಡಾ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ತೆಗೆಯಿರಿ. ವಿಜಯೇಂದ್ರನನ್ನು ಸಿಎಂ ಮಾಡಿ ಎಂದು ಗೋಳಾಡುತ್ತಾರೆ ಎಂದು ವ್ಯಂಗ್ಯವಾಡಿದರು. ವಿಜಯೇಂದ್ರ ನನ್ನನ್ನು ಸ್ಟಾರ್ ಮಾಡುವ ಅವಶ್ಯಕತೆಯಿಲ್ಲ. ಈ ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ನೀವು ಹೀರೋ ಆಗಬೇಕು ಅಂದರೆ ಖರ್ಚು ಮಾಡಿ.ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದ್ರೆ ರಾಜ್ಯಾಧ್ಯಕ್ಷ ಸ್ಥಾನದಿಂದ…

Read More

ಕಲಬುರ್ಗಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೀಕರವಾಗಿ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಇಟಗಾ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಜ್ಯೋತಿ (29) ಎಂದು ಹೇಳಲಾಗುತ್ತಿದೆ. ಕಳೆದ ಹತ್ತು ವರ್ಷದ ಹಿಂದೆ ಹೀಗೆ ಮದುವೆಯಾಗಿತ್ತು. ಕಲ್ಬುರ್ಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಗಂಡನ ಜೊತೆಗೆ ವಾಸಿಸುತ್ತಿದ್ದಳು. ಆದರೆ ಕಳೆದ ಐದು ವರ್ಷದ ಹಿಂದೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದಳು. ಇನ್ನು ನಿನ್ನೆ ಮನೆಯಿಂದ ಹೊರಗಡೆ ಹೋದ ಜ್ಯೋತಿ ಮಧ್ಯಾಹ್ನದ ಹೊತ್ತಿಗೆ ಸುಟ್ಟ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಸಂಬಂಧಿಕರೇ ಯಾರೋ ಈ ಒಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

Read More

ಬೆಂಗಳೂರು : ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಟ ದರ್ಶನ್ ಬಳ್ಳಾರಿ ಜೈಲಿನ್ನಿಂದ ರಿಲೀಸ್ ಆಗಿದ್ದರು. ಇದೀಗ ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನವರು ಭೇಟಿ ನೀಡಿದ್ದಾರೆ. ಹೌದು ಬೆನ್ನು ನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ಇದೀಗ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಬೆಂಗಳೂರು ಹೊರಭಾಗದಲ್ಲಿ ಇರುವಂತಹ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ನಟ ದರ್ಶನ್ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.ಆಸ್ಪತ್ರೆಯ ಬಳಿ ಒಂದು ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಆದರೆ ನಟ ದರ್ಶನವರಿಗೆ ಇದೇ ಮೊದಲನೇ ಬಾರಿ ಚಿಕಿತ್ಸೆಗೆ ಒಳಗಾಗುತ್ತಿಲ್ಲ. ಈ ಮೊದಲು ಕೂಡ ಅವರು ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಚಿಕಿತ್ಸೆ ಪಡೆದಿದ್ದರು. ಹೌದು 2013ರಲ್ಲಿ ಬೃಂದಾವನ ಚಿತ್ರದ ಚಿತ್ರೀಕರಣ ಸಮಯದಲ್ಲಿ ಕುದುರೆಯ ಮೇಲೆ…

Read More

ಬೆಂಗಳೂರು : ದೀಪಾವಳಿ ಹಬ್ಬದ ಅಂಗವಾಗಿ ನಾಡಿನದ್ಯಂತ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ ಇದರ ಮಧ್ಯ ಬೆಂಗಳೂರಿನಲ್ಲಿ ಅತಿ ಹೆಚ್ಚು ಪಟಾಕಿ ಸಿಡಿಸಿದ ಪರಿಣಾಮವಾಗಿ ಸದ್ಯ ಒಂದೇ ದಿನಕ್ಕೆ ಗಾಳಿಯ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ ಎಂದು ತಿಳಿದುಬಂದಿದೆ. ದೀಪಾವಳಿಗೆ ಪಟಾಕಿ ಸಿಡಿಸುವ ಕುರಿತು ಹಲವು ನಿಯಮಗಳು ಇದ್ದರೂ ಸಹ ಜನರು ನಿಯಮಗಳನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಕುಸಿತಕಂಡಿದೆ. ಹೌದು ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 100ರ ಗಡಿದಾಟಿದೆ. ದೀಪಾವಳಿ ಹಬ್ಬಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿ ಮಾರುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಇನ್ನು ಸರ್ಕಾರವೂ ಸಹ ಹಸಿರು ಪಟಾಕಿ ಮಾಡಬೇಕು. ಅಲ್ಲದೇ ಇದೇ ಸಮಯದಲ್ಲಿ ಪಟಾಕಿ ಸಿಡಿಸಬೇಕೆಂದು ಸಮಯ ನಿಗದಿ ಮಾಡಿತ್ತು. ಆದ್ರೆ, ಜನ ಕೇಳಬೇಕಲ್ಲ. ವರ್ಷಕ್ಕೆ ಒಂದೇ ದಿನ ಬರುವ ದೊಡ್ಡ ಹಬ್ಬ ದೀಪಾವಳಿ. ಅಂಗಡಿ ಮುಂಗಟ್ಟು ಪೂಜೆ ಮಾಡಿ ಭರ್ಜರಿ ಪಟಾಕಿ ಸಿಡಿಸಿ…

Read More

ಬೆಂಗಳೂರು : ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಟ ದರ್ಶನ್ ಬಳ್ಳಾರಿ ಜೈಲಿನ್ನಿಂದ ರಿಲೀಸ್ ಆಗಿದ್ದರು. ಇದೀಗ ಎಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನವರು ಭೇಟಿ ನೀಡಿದ್ದಾರೆ. ಹೌದು ಬೆನ್ನು ನೋವಿನ ಚಿಕಿತ್ಸೆಗಾಗಿ ನಟ ದರ್ಶನ್ ಇದೀಗ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ಬೆಂಗಳೂರು ಹೊರಭಾಗದಲ್ಲಿ ಇರುವಂತಹ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ನಟ ದರ್ಶನ್ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.ಆಸ್ಪತ್ರೆಯ ಬಳಿ ಒಂದು ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದೇ ಒಂದು ಬೆನ್ನುನೋವಿನ ಸಮಸ್ಯೆ ಕಾರಣವನ್ನು ನೀಡಿ ಹೈಕೋರ್ಟ್ ನಲ್ಲಿ ನಡೆದ ದರ್ಶನ್ ಹಿರಿಯ ವಕೀಲ ಸಿವಿ ನಾಗೇಶ್ ಅವರು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು ಒಂದು ವೇಳೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳದೆ ಹೋದಲ್ಲಿ ಅವರಿಗೆ ಪಾರ್ಶ್ವ…

Read More

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಬೆಳಕಿನ ಹಬ್ಬ ದೀಪಾವಳಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು, ಭಾರತ ಬ್ರಾಂಡ್ ನ ಅಕ್ಕಿಯನ್ನು ಕೆಜಿಗೆ 34 ರೂಪಾಯಿಯಂತೆ ಬೆಂಗಳೂರಿನಲ್ಲಿ ಮತ್ತೆ ಮಾರಾಟ ಆರಂಭಿಸಲಾಗಿದೆ. ಹೌದು ದಿನೇ ದಿನೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ದೀಪಾವಳಿ ಹಬ್ಬದ ಅಂಗವಾಗಿ ಎರಡನೇ ಹಂತದ ಭಾರತ್ ಬ್ರಾಂಡ್ ಯೋಜನೆಯನ್ನು ಇಂದಿನಿಂದ ರಿಂದ ಪ್ರಾರಂಭಿಸಿದೆ. ಈಗ ಬೆಂಗಳೂರಿನಲ್ಲಿ ಈ ಯೋಜನೆಯ ಉತ್ಪನ್ನಗಳು ಲಭ್ಯ ಇವೆ. ಎಂಆರ್‌ಪಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಉತ್ಪನ್ನಗಳಾದ ಅಕ್ಕಿ, ಬೇಳೆ ಕಾಳುಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಇದೀಗ ಬೆಂಗಳೂರಿನಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತೆ ಶುರುವಾಗಿದೆ. ಈ ಮೂಲಕ ದೀಪಾವಳಿಗೆ ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಭಾರತ್ ಉತ್ಪನ್ನಗಳ ಹಂತ 2ರಲ್ಲಿ ಬೆಂಗಳೂರಿನಲ್ಲಿ ಈ…

Read More

ಕೊಪ್ಪಳ : ಇಂದಿನ ಯುವಜನತೆಗೆ ಬೀದಿ ಬದಿಯ ತಿಂಡಿ ತಿನಿಸುಗಳೆಂದರೆ ಬಲು ಇಷ್ಟ. ಅದರಲ್ಲೂ ಎಗ್ ರೈಸ್ ಆಮ್ಲೆಟ್ ಅಂದರೆ ಪಂಚಪ್ರಾಣ.ಆದರೆ ಇದೀಗ ಬೆಚ್ಚಿ ಬೆಳಿಸುವಂತಹ ವಿಷಯ ಬಹಿರಂಗವಾಗಿದ್ದು, ಕೊಪ್ಪಳದ ಬೀದಿ ಬದಿಯಲ್ಲಿ ಎಗ್ ರೈಸ್ ಆಮ್ಲೆಟ್ ಗಳನ್ನು ಕೊಳೆತ ಮೊಟ್ಟೆಯಲ್ಲಿ ತಯಾರಿಸುತ್ತಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಕೊಪ್ಪಳದಲ್ಲಿ ಎಗ್ ರೈಸ್ ಆಮ್ಲೆಟ್ ಶಾಪ್ ಗೆ ಪ್ರತಿಯೊಬ್ಬ ಮೊಟ್ಟೆಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆತನ ಮೇಲೆ ಅನುಮಾನ ಕೊಂಡು ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಆತ ಸಾಗಿಸುತ್ತಿದ್ದ ಮೊಟ್ಟೆಗಳನ್ನು ಪರಿಶೀಲಿಸಿದ್ದಾರೆ.ಈ ವೇಳೆ ಅವು ಕೊಳದ ಮೊಟ್ಟೆಗಳಿವೆ ಎಂದು ಅಧಿಕಾರಿಗಳಿಗೆ ತಿಳಿದು ಬಂದಿದೆ. ಈ ವೇಳೆ ಆತನಿಗೆ ಅಧಿಕಾರಿಗಳು ಈ ಮೊಟ್ಟೆಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಆತ ಇದನ್ನು ಎಗ್ ರೈಸ್ ಮತ್ತು ಆಮ್ಲೆಟ್ ಮಾಡುವ ಶಾಪ್ ಗೆ ಮಾರಾಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಮಾರಾಟಗಾರನ ಹೆಸರು ಜಿಲಾನಿ ಎಂದು…

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್​ಗೆ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಲಾಗಿದೆ. ಜಾಮೀನು ಆರುವಾರಗಳ ಮಾತ್ರವೇ ಇರಲಿದ್ದು, ಈ ಆರು ವಾರಗಳಲ್ಲಿ ಚಿಕಿತ್ಸೆ ಮುಗಿಸಿ ಮರಳಿ ಜೈಲು ಸೇರಬೇಕಿದೆ. ಅಲ್ಲದೆ ನ್ಯಾಯಾಲಯ ವಿಧಿಸಿರುವ ಷರತ್ತಿನಂತೆ ಒಂದು ವಾರದ ಒಳಗಾಗಿ ಚಿಕಿತ್ಸೆಯ ಕುರಿತು ಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಹಾಗಾಗಿ ನಿನ್ನೆ ಬಳ್ಳಾರಿಯಲ್ಲಿ ನಿಂದ ಬಿಡುಗಡೆಯಾದ ದರ್ಶನ್ ನೇರವಾಗಿ ಬೆಂಗಳೂರುಗೆ ಆಗಮಿಸಿ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಮಗ ವಿನೇಶ್ ಹುಟ್ಟುಹಬ್ಬದದಲ್ಲಿ ಭಾಗಿಯಾಗಿದ್ದಾರೆ. ಇಂದು ನಟ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಬೇಕಿತ್ತು, ಆದರೆ ಎರಡು ದಿನಗಳ ಕಾಲ ಮುಂದೂಡಿದ್ದಾರೆ. ಇದಕೆ ಕಾರಣವೂ ಇದೆ ಇಂದು ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ. ಆದ ಕಾರಣ ಇಂದು ಮಗನ ಜೊತೆ, ಪತ್ನಿಯ ಜೊತೆಗೆ ಸಮಯ ಕಳೆಯಲಿದ್ದಾರೆ. ನಾಳೆ ದೀಪಾವಳಿ ಇದ್ದು, ಮನೆಯವರೊಟ್ಟಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ. ಇಂದು…

Read More