Author: kannadanewsnow05

ಬೆಂಗಳೂರು : ಕನಕಪುರ ರಾಮನಗರ ಹಾಗೂ ಚನ್ನಪಟ್ಟಣವನ್ನು ಬೆಂಗಳೂರು ನಗರಕ್ಕೆ ಸೇರಿಸುವ ವಿಚಾರವಾಗಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ ಯಾರು ಯಾವುದನ್ನು ಎಲ್ಲೂ ಸೇರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದನ್ನು ಎಲ್ಲಿಗೂ ಸೇರಿಸುವುದಿಲ್ಲ. ಕನಕಪುರ ಕನಕಪುರದಲ್ಲೇ ಇರುತ್ತೆ. ರಾಮನಗರ ರಾಮನಗರದಲ್ಲಿ ಇರುತ್ತದೆ. ಮಾಗಡಿ ಮಾಗಡಿಯಲ್ಲೇ ಇರುತ್ತದೆ. ಚನ್ನಪಟ್ಟಣ ಚನ್ನಪಟ್ಟಣದಲ್ಲಿ ಇರುತ್ತದೆ.ಯಾರು ಯಾವುದನ್ನು ಎಲ್ಲಿಗೂ ಸೇರಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Read More

ಉಡುಪಿ : ರಾಜ್ಯದಲ್ಲಿ ವರುಣನ ಅಬ್ಬರದಿಂದ ಅನೇಕ ಕಡೆಗೆ ಅವಾಂತರ ಸೃಷ್ಟಿಯಾಗಿದ್ದು, ಉತ್ತರ ಕನ್ನಡದಲ್ಲಿ ಮಳೆಗೆ ಗುಡ್ಡ ಕುಸಿದು ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್​​​ ಆಗಿತ್ತು. ಇತ್ತ ಉಡುಪಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ 45 ವರ್ಷದ ಮಹಿಳೆಯೊಬ್ಬರು ಉಸುರುಗಟ್ಟಿ ಸಾವನ್ನಪ್ಪಿದ್ದರು. ಹೀಗಾಗಿ ಎರಡು ಜಿಲ್ಲೆಗಳ ಜಿಲ್ಲಾ ಆಡಳಿತವು ಹಲವು ಆಯ್ದ ತಾಲೂಕುಗಳಿಗೆ ರಜೆ ಘೋಷಿಸಿದೆ. ಉಡುಪಿಯ 3 ತಾಲೂಕಿಗಳಲ್ಲಿ ರಜೆ ಘೋಷಣೆ ಉಡುಪಿ ಜಿಲ್ಲೆಯ ಮೂರು ತಾಲೂಕುಗಳಾದ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಆದೇಶಿಸಿದ್ದಾರೆ. ಆದರೆ, ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಇಂಜಿನಿಯರಿಂಗ್ ಮುಂತಾದ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾಳೆ ಕುಮಟಾ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆ ಆರ್ಭಟ ಮುಂದುವರಿದ ಹಿನ್ನೆಲೆ ಕುಮಟಾ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಉತ್ತರ ಕನ್ನಡ…

Read More

ಶಿವಮೊಗ್ಗ : ಇಂದು ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಕಾಲು ಜಾರಿ ಬಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ. ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಮಹಿಳೆ ಒಬ್ಬರು ಸಾವನ್ನಪ್ಪಿದ್ದರೆ. ಕಾಲು ಜಾರಿ ಹಳ್ಳಕ್ಕೆ ಬಿದ್ದು 43 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾಲು ಸಂಕದ ಮೇಲೆ ಹೋಗುವಾಗ ಮಹಿಳೆ ಜಾರಿಬಿದ್ದು ಕಾಲೇಜ್ ಹೇಳಕ್ಕೆ ಬಿದ್ದು 43 ವರ್ಷದ ಶಶಿಕಲಾ ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ ಉಡುಪಿಯಲ್ಲಿ ಮಣ್ಣು ಕೋಶದಿಂದ 55 ವರ್ಷದ ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

Read More

ಕೋಲಾರ : ಕೊಲೆ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನ ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಆಂಡ್ರಸನ್ ಪೇಟೆಯಲ್ಲಿ ನಡೆದಿದೆ. ಹೌದು ಬಂಧಿತ ಆರೋಪಿಯನ್ನ ಸ್ಟಾಲಿನ್ ಎಂದು ಹೇಳಲಾಗುತ್ತಿದ್ದು, ಈತನ ಮೇಲೆ ಕೊಲೆ, ಸುಲಿಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹಾಗಾಗಿ ಈತನನ್ನು ಇಂದು ಪೊಲೀಸರು ಬಂದಾಗ ಪೊಲೀಸ್ ಪೇದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ಪೊಲೀಸ್ ಪೇದೆ ಸುನಿಲ್ ಗಾಯಗೊಂಡಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಕೂಡಲೇ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಬಲಗಾಲಿಗೆ ಗುಂಡಿನೇಟು ತಗುಲಿ ಕುಸಿದು ಬಿದ್ದ ರೌಡಿಶೀಟರ್ ಸ್ಟಾಲಿನ್. ಸದ್ಯ ಆರೋಪಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆಂಡ್ರಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಇಂದು 286 ಡೆಂಘಿ ಪ್ರಕರಣಗಳು ಪತ್ತೆಯಾಗಿದ್ದು, ಹಾಗಾಗಿ ರಾಜ್ಯದಲ್ಲಿ ಡೆಂಘಿ ಸಕ್ರಿಯ ಪ್ರಕರಣಗಳ ಸಂಖ್ಯೆ 695 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ನಡೆಸಿದಂತ ಪರೀಕ್ಷೆಯಲ್ಲಿ ತಿಳಿದುಬಂದಿದೆ. ರಾಜ್ಯದಲ್ಲಿ ಡೇಂಗಿಗೆ ಇದುವರೆಗೆ 6 ಜನರು ಬಲಿಯಾಗಿದ್ದಾರೆ. ಇನ್ನೂ ಬೆಂಗಳೂರಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ನಿನ್ನೆ ಆರೋಗ್ಯ ಇಲಾಖೆಯಿಂದ 300 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 18 ಜನರಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಬರೋಬ್ಬರಿ 31 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,564ಕ್ಕೆ ಏರಿಕೆಯಾದಂತೆ ಆಗಿದೆ.

Read More

ಹಾವೇರಿ : ಜಿಲ್ಲೆಯಲ್ಲಿ ಬೇಕಾಬಿಟ್ಟಿಯಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಖಚಿತವಾದಂತಹ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದು ಸುಮಾರು,35,496 ರೂ. ಮೌಲ್ಯದ 80.24 ಲೀಟರ್ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾರ್ಗದರ್ಶನದಲ್ಲಿ ವಿಶೇಷ ದಾಳಿ ನಡೆಸಿತ್ತು. ದಾಳಿಯ ವೇಳೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು 19 ಜನ ಆರೋಪಿಗಳ ವಿರುದ್ಧ 19 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇನ್ನು ಮುಂದೆ ಜಿಲ್ಲೆಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಡುಪಿ : ಸೈಬರ್ 1 ಜಾಗರೂ ಪಿಎಚ್ಡಿ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ವಾಟ್ಸಪ್ ಸಂದೇಶವನ್ನು ಕಳಿಸಿದ್ದಾರೆ ಈ ಒಂದು ವಾಟ್ಸಾಪ್ ಸಂದೇಶದಿಂದ ಹಂತ ಹಂತವಾಗಿ ಪಿಎಸಡಿ ವಿದ್ಯಾರ್ಥಿನಿಯೊಬ್ಬರು 2 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಗಿಟಿಕಾ ಬಸಿನ್ ಎಂಬಾಕೆ ಹಣ ಕಳೆದುಕೊಂಡವರು. ಮಣಿಪಾಲದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡಿಕೊಂಡಿರುವ ಇವರು ಜೂನ್ 23ರಂದು ತನ್ನ ಕೊಠಡಿಯಲ್ಲಿರುವಾಗ Review Job & Pre Paid Tasks ಎಂಬ ಸಂದೇಶವನ್ನು ವಾಟ್ಸ್ಆ್ಯಪ್​ನಲ್ಲಿ ಸ್ವೀಕರಿಸಿದ್ದರು. ಇವನ ಸಂದೇಶದ ಪ್ರಕಾರ ವಂಚಕರು ನೀಡಿರುವಂತಹ ಟಾಸ್ಕ್ ಗಳನ್ನು ಹಂತಹಂತವಾಗಿ ಪೂರ್ಣಗೊಳಿಸಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಯುವತಿಯ ಟೆಲಿಗ್ರಾಂ ಆ್ಯಪ್​ಗೆ Linkdin idea 2024 Jrlul 827pd ಎಂಬ ಲಿಂಕ್ ಕಳುಹಿಸಿ ಸೇರುವಂತೆ​ ತಿಳಿಸಿದ್ದಾನೆ.ಈ ಗ್ರೂಪ್‌ಗೆ ಸೇರ್ಪಡೆಯಾದ ಬಳಿಕ Pre Paid Tasksನಲ್ಲಿ ಹೂಡಿಕೆ ಮಾಡುವಂತೆ ತಿಳಿಸಲಾಗಿದೆ. ನಂತರ ಆಕೆ 4,600 ರೂ. ಹೂಡಿಕೆ ಮಾಡಿದ್ದು, ಖಾತೆಗೆ 5,850 ರೂ. ಜಮೆ ಮಾಡುವ ಮೂಲಕ ವಂಚಕರು…

Read More

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು ಅವರು ನಮ್ಮ ಮನವಿಯನ್ನು ಆಲಿಸಬೇಕು ಎಂದು ಬಹಳ ದಿನಗಳಿಂದ ಶಾಸಕರ ಬೇಡಿಕೆಯಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭೇಟಿಗೆ ಸಮಯ ನಿಗದಿ ಮಾಡಿದ್ದು, ಪ್ರತಿ ಗುರುವಾರ ಶಾಸಕರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಹೌದು ಬಹಳ ದಿನಗಳಿಂದ ಸಿಎಂ ಸಿಗಬೇಕು, ನಮ್ಮ ಮನವಿ ಆಲಿಸಲು ಟೈ ಕೊಡಿ ಎಂದು ಹಲವು ಶಾಸಕರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಅಸ್ತು ಎಂದಿದ್ದು, ಹೀಗಾಗಿ ಪ್ರತಿ ಗುರುವಾರ ‌ಶಾಸಕರುಗಳ ಭೇಟಿಗೆ ಸಮಯ ನಿಗದಿ ಮಾಡಿದ್ದಾರೆ. ಜೊತೆಗೆ ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹ ಸಿಎಂ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗುರುವಾರ ಸಂಜೆ 4:30 ರಿಂದ 6 ಗಂಟೆಯವರೆಗೆ ಶಾಸಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಮನವಿ ಸಲ್ಲಿಸಿ, ಅನುದಾನ, ಕ್ಷೇತ್ರಗಳ ಸಮಸ್ಯೆಗಳ ಕುರಿತು ಚರ್ಚಿಸಬಹುದಾಗಿದೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲದೆ ಬಿಜೆಪಿ ಮತ್ತು…

Read More

ಉಡುಪಿ : ಸದ್ಯ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗುತ್ತಿದ್ದು, ಇದೀಗ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಗುಡ್ಡ ಕುಸಿತದಿಂದ ವ್ಯಕ್ತಿ ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಉಡುಪಿ ಜಿಲ್ಲೆಯಲ್ಲಿ ಬಾರಿ ಮಳೆಗೆ ಮೊದಲ ಬಲಿಯಾಗಿದ್ದು, ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ದುರಂತ ಸಂಭವಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಗುಡ್ಡ ಕುಸಿದು ಹಳ್ಳಿ ಬೇರು ನಿವಾಸಿ ಅಂಬ (45) ಸಾವನಪ್ಪಿದ್ದಾರೆ.ಗುಡ್ಡ ಕುಸಿದು ಮಣ್ಣಿನ ಅಡಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ : ಲೋಕಸಭಾ ಚುನಾವಣೆಯಲ್ಲಿ ಆಸೆ ಆಮಿಷಕ್ಕೆ ಒಳಗಾಗಿ ಪ್ರತಿಪಕ್ಷ ಗೆಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆಗೆ ಹೊಡೆತ ಅಂತ ಭಾವಿಸುವ ಹಾಗಿಲ್ಲ. ನಮ್ಮನ್ನು ಗೆಲ್ಲಿಸಿ ಅಂತ ಹೇಳಿದ್ರು. ರಾಮಮಂದಿರ ಇರುವ ಕ್ಷೇತ್ರದಲ್ಲಿ ಪ್ರತಿಪಕ್ಷ ಮೋಸದಿಂದ ಗೆದ್ದಿದೆ. ಇದು ಮೋಸ ಅಲ್ವೆ, ಈಗ ಏನು ಕೊಟ್ಟಿದ್ದಾರೆ ಎಂದು ಉಡುಪಿ ಪೇಜಾವರದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು. ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಯಾರೋ ಮಾಡಿದ್ರೆ ಮೋಸ ರಾಜಕೀಯ ಪಕ್ಷ ಮಾಡಿದ್ರೆ ಮೋಸ ಅಲ್ವೆ. ಸರ್ಕಾರ ಬಂದರೆ ಕೊಡ್ತೀವಿ ಅಂದಿದ್ರೋ, ಗೆಲ್ಲಿಸಿದ್ರೆ ಕೊಡ್ತೀವಿ ಅಂದಿದ್ರೋ ನೀವೇ ಗಮನಿಸಿ ಎಂದರು. ಇನ್ನು ಸಿಎಂ ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ, ನಿಯಮದ ವಿರುದ್ಧ ನಾವು ಹೋಗಲ್ಲ. ಡಿಸಿಎಂ ಹುದ್ದೆ ಬ್ರಾಹ್ಮಣರಿಗೆ ಕೊಡಿ ಎಂದು ನಾವು ಕೇಳಲ್ಲ. ಸಂವಿಧಾನಬದ್ಧವಾಗಿ ಪ್ರಸ್ತಾಪ ಇರಬೇಕು. ಜಾತಿವಾರು ಡಿಸಿಎಂ ಹುದ್ದೆ ಸ್ವಾಮೀಜಿಗಳ ಬೇಡಿಕೆಗೆ ಪರೋಕ್ಷವಾಗಿ ಪೇಜಾವರ ಶ್ರೀ ವಿರೋಧಿಸಿದರು. ಹಿಂದು ಧರ್ಮದ ಬಗ್ಗೆ ರಾಹುಲ್ ಗಾಂಧಿ ಅವಹೇಳನ ವಿಚಾರವಾಗಿ ಸಹಿಷ್ಣುರಾಗಿರುವವರನ್ನು ಕೆಣಕುವುದು…

Read More