Author: kannadanewsnow05

ಬೆಂಗಳೂರು :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾದರು. ಈ ವೇಳೆ ನ್ಯಾಯಾಧೀಶರು ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ, ಆದೇಶ ಹೊರಡಿಸಿದರು. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಆಗಿರುವಂತಹ ಪವಿತ್ರ ಗೌಡ, ದೇವಸ್ಥಾನಕ್ಕೆ ಎಂದು ತೆರಳಲು ಪಕ್ಕದ ರಾಜ್ಯಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಿ ಎಂದು ಪವಿತ್ರ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಡಿಸೆಂಬರ್ ನಲ್ಲಿ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಕೊಲೆ ಆರೋಪಿಗಳಾದಂತಹ ಎಲ್ಲರಿಗೂ ಕೂಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.  ಈ ವೇಳೆ ಬೆಂಗಳೂರು ಬಿಟ್ಟು ಎಲ್ಲಿಯೂ ತೆರಳದಂತೆ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆದರೆ ಇದೀಗ ಪವಿತ್ರಗೌಡ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾದರು. ಈ ವೇಳೆ ನ್ಯಾಯಾಧೀಶರು ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ, ಆದೇಶ ಹೊರಡಿಸಿದರು. ಹೌದು ಸೇಷನ್ಸ್ ಕೋರ್ಟ್ ನಲ್ಲಿ ಇಂದು ದೋಷಾರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲ 17 ಆರೋಪಿಗಳು ಕೂಡ ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿ ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾಗಿದ್ದಾರೆ. ಹೌದು ಸೇಷನ್ಸ್ ಕೋರ್ಟ್ ನಲ್ಲಿ ಇಂದು ದೋಷಾರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲ 17 ಆರೋಪಿಗಳು ಕೂಡ ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಹಲವು ಆರೋಪಿಗಳು ಹಾಜರಾಗಿದ್ದಾರೆ. ಹೌದು ಸೇಶನ್ ಕೋರ್ಟ್ ನಲ್ಲಿ ಇಂದು ದೋಷರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲಾ 17 ಆರೋಪಿಗಳು ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.

Read More

ಬಾಗಲಕೋಟೆ : ವ್ಯಕ್ತಿತ್ವ ವಿಕಸನ ಹೆಸರಿನಲ್ಲಿ ಸಾಹಸ ಹಾಗೂ ಗನ್ ತರಬೇತಿ ನೀಡಲಾಗಿದೆ ಎಂದು ಆರೋಪಿಸಿ ತರಬೇತಿಯಲ್ಲಿ ಭಾಗಿಯಾಗಿದ್ದ 27 ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಹೌದು ಶ್ರೀರಾಮ ಸೇನೆಯ 27 ಕಾರ್ಯಕರ್ತರ ವಿರುದ್ಧ ಇದೀಗ FIR ದಾಖಲು ಮಾಡಲಾಗಿದೆ. ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಗನ್ ಹಾಗೂ ಸಾಹಸ ತರಬೇತಿ ನೀಡಲಾಗುತ್ತಿತ್ತು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಕಾರ್ಯಕರ್ತರಿಗೆ ಈ ಒಂದು ತರಬೇತಿ ನೀಡಲಾಗುತ್ತಿತ್ತು. ನಿಂಗಪ್ಪ ಹೂಗಾರ್ ಎಂಬುವವರ ದೂರಿನ ಮೇರೆಗೆ ಇದೀಗ FIR ದಾಖಲಾಗಿದೆ. ಜಮಖಂಡಿ ತಾಲೂಕಿನ ಸಾವಳಗಿ ಠಾಣೆಯಲ್ಲಿ FIR ದಾಖಲಾಗಿದೆ. 2024 ಡಿಸೆಂಬರ್ 24 ರಿಂದ ಡಿಸೆಂಬರ್ 29 ರವರೆಗೆ ಗನ್ ತರಬೇತಿ ನಡೆದಿತ್ತು. ಶ್ರೀರಾಮ ಸೇನೆಯ ಕಾರ್ಯಕರ್ತರಾದ ಪ್ರಕಾಶ್ ಪತ್ತಾರ್, ಯಮನಪ್ಪ ಕೋರಿ, ಮಹೇಶ್ ಬಿರಾದಾರ್, ಆನಂದ್ ಜಂಬಗಿ ಮಠ ಹಾಗೂ ಗಂಗಾಧರ ಕುಲಕರ್ಣಿ ಸೇರಿದಂತೆ ಒಟ್ಟು 27 ಜನರ…

Read More

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೋಸ್ಟ್ ವಾಂಟೆಡ್ 6 ಜನ ನಕ್ಸಲರು ಶರಣಾಗಿದ್ದಾರೆ. ಇದೀಗ ಎನ್ಕೌಂಟರ್ ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂಗೌಡನ ಆಡಿಯೋ ಒಂದು ವೈರಲ್ ಆಗಿದ್ದು, ಈತ ಸಂಧಾನ ಹಾಗೂ ಶರಣಾಗತಿಗೆ ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾದ ಆಡಿಯೋ ಇದೀಗ ಲಭ್ಯವಾಗಿದೆ. 6 ಜನ ನಕ್ಸಲರು ಶರಣಾದ ಬಳಿಕ, ವಿಕ್ರಂ ಗೌಡನ ಸಹೋದರಿ ನನ್ನ ಅಣ್ಣನಿಗೂ ಕೂಡ ಶರಣಾಗತಿಗೆ ಅವಕಾಶ ನೀಡಬೇಕಾಗಿತ್ತು ಎಂದು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇದೀಗ ವಿಕ್ರಂ ಗೌಡನ ಜೊತೆಗೆ ಕೆಲ ಸಂಘಟನೆಗಳು ಸಂಧಾನಕ್ಕೆ ಮುಂದಾಗಿದ್ದಾಗ ಆತ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಎನ್ಕೌಂಟರ್ ಆದಂತಹ ವಿಕ್ರಂ ಗೌಡ ಸಂಧಾನಕಾರರ ಜೊತೆಗೆ ವಾದ ಮಾಡಿದ್ದ ಎನ್ನಲಾಗಿದೆ. ಆಡಿಯೋದಲ್ಲಿ ಏನಿದೆ? ಸಂಧಾನ ಹಾಗೂ ಶರಣಾಗತಿಗೆ ವಿಕ್ರಂ ಗೌಡ ಒಪ್ಪಿರಲಿಲ್ಲ. ವಿಕ್ರಂ ಗೌಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ವಿಕ್ರಂಗೌಡನ ವಿರೋಧದಿಂದಲೇ ಶರಣಾಗತಿಗೆ ಹಿನ್ನಡೆಯಾಯಿತಾ ಎನ್ನುವ ಅನುಮಾನ…

Read More

ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಒಬ್ಬಳು ಮನೆಯಲ್ಲಿ ಯಾರು ಇಲ್ಲದ ವೇಳೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ, ನರಿಮೊಗರು ಬಳಿಯ ನಿವಾಸಿ, ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ (17) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾವ ಕರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Read More

ತುಮಕೂರು : ತುಮಕೂರಿನಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಂತಹ ತಾಯಿ ಹಾಗೂ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ನಡೆದಿದೆ. ತಾಯಿ ಹಾಗೂ ಮಗಳು ಕೆರೆಗೆ ಹರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಂತ ತಾಯಿ, ಮಗಳನ್ನು ವಿರುಪಾಕ್ಷಿಪುರದ ಪ್ರೇಮಕುಮಾರಿ (50) ಮತ್ತು ಪೂರ್ಣಿಮಾ (30) ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದ್ದು, ಘಟನೆ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು : ಫ್ಯುಯಲ್ ಬಂಕ್ ನಲ್ಲಿ ಸೂಪರ್ ವೈಸರ್ಆಗಿ ಕೆಲಸ ಮಾಡುವ ಸಿಬ್ಬಂದಿ ಒಬ್ಬ, ಫ್ಯುಯಲ್ ಬಂಕ್ ಕ್ಯೂ ಆರ್ ಕೋಡ್ ಬದಲು ಮಾಡಿ, ತನ್ನ ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಇರಿಸಿ ಸುಮಾರು 58 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಹೌದು ಎರಡು ವರ್ಷದಲ್ಲಿ ಆರೋಪಿ ಮೋಹನ್ ದಾಸ್ ಎನ್ನುವವನು 58 ಲಕ್ಷ ದೋಚಿದ್ದಾನೆ. ಫ್ಯುಯಲ್ ಬಂಕ್ ನ ಸೂಪರ್ವೈಸರ್ ಆಗಿದ್ದ ಮೋಹನ್ದಾಸ್ ಈ ಕೃತ್ಯ ಎಸಗಿದ್ದಾನೆ. ಎರಡು ವರ್ಷದ ಬಳಿಕ ಆರೋಪಿಯ ಕೃತ್ಯ ಇದೀಗ ಬಯಲಾಗಿದೆ. ಮಂಗಳೂರಿನ ಬಜ್ಪೆ ನಿವಾಸಿ ಮೋಹನ್ ದಾಸ್ ಲಕ್ಷಾಂತರ ರು ವಂಚನೆ ಎಸೆಗಿದ್ದಾನೆ. ರಿಲಯನ್ಸ್ ಔಟ್ಲೆಟ್ ಫ್ಯುಯಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಗ್ರಾಹಕರಿಂದ ಮೋಹನ್ ದಾಸ್ ಖಾತೆಗೆ ಹಣ ವರ್ಗಾವಣೆ ಆಗುತ್ತಿತ್ತು. ಕಳೆದ 15 ವರ್ಷದಿಂದ ಮೋಹನ್ ದಾಸ್ ಸೂಪರ್ವೈಸರ್ ಆಗಿ ಫ್ಯುಯಲ್ ಬಂಕ್…

Read More

ಬೆಂಗಳೂರು : ಬೆಂಗಳೂರಿನಲ್ಲಿ ರಾಟ್ ವಿಲ್ಲರ್ ನಾಯಿಯೊಂದು 4 ವರ್ಷದ ಮಗುವಿನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ. ಪುಟ್ಟ ಕಂದಮ್ಮನ ಮೇಲೆ ನಾಯಿಂದ ಭೀಕರವಾದ ದಾಳಿ ನಡೆದಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ . ಹೌದು 4 ವರ್ಷದ ಮಗುವಿನ ತಲೆಯ ಭಾಗಕ್ಕೆ ನಾಯಿ ಕಚ್ಚಿದೆ. ಇಂದ್ರಾ ನಗರದ ಗಣೇಶ ಟೆಂಪಲ್ ಬಳಿ ಈ ಒಂದು ಘಟನೆ ನಡೆದಿದೆ. ಮಗು ರಕ್ಷಣೆ ಮಾಡಿದವರ ಮೇಲು ಕೂಡ ನಾಯಿ ಭೀಕರ ದಾಳಿ ನಡೆಸಿದೆ. ನಾಯಿ ದಾಳಿ ಮಾಡಿದ ವೇಳೆ, ಮಗು ಜೋರಾಗಿ ಕಿರುಚಿಕೊಂಡಿದೆ ಈ ವೇಳೆ ಮಗುವಿನ ತಂದೆ ಮಗುವಿನ ರಕ್ಷಣೆಗೆ ಧಾವಿಸಿದಾಗ ಆತನ ಮೇಲೂ ಕೂಡ ನಾಯಿ ದಾಳಿ ಮಾಡಿದೆ ಘಟನೆ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Read More