Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ಕೇರಳ ಮೂಲದ ಯುವಕನೊಬ್ಬ ಬೆಂಗಳೂರಿನ ಮಹದೇವಪುರದಲ್ಲಿ ಪಿಜಿ ಒಂದರಲ್ಲಿ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಹೌದು ಕೇರಳ ಮೂಲದ ಜಿತಿನ್ ಎನ್ನುವ ಯುವಕನೊಬ್ಬ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದಿದ್ದ. ಈ ವೇಳೆ ಮನೆಯಲ್ಲಿ ಅವರ ತಂದೆಗೆ ಕ್ಯಾನ್ಸರ್ ಇತ್ತು.ಅಲ್ಲದೆ ಮನೆಯ ಇನ್ನು ಕೆಲವು ಸಮಸ್ಯೆಗಳಿಂದ ಯುವಕ ಬೇಸತ್ತು ಹೋಗಿದ್ದ. ಇದರ ನಡುವೆ ತನ್ನ ಪ್ರಿಯತಮೆ ಜೊತೆಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಪ್ರಿಯತಮೆ ಜೊತೆಗೆ ಜಗಳ ಮಾಡಿಕೊಂಡು ರಾತ್ರಿ ಜಿತಿನ್ ಮದ್ಯ ಸೇವಿಸಿದ್ದಾನೆ. ಬಳಿಕ ನಶೆಯಲ್ಲಿ ಪ್ರಿಯತಮೆ ಜಜೊತೆ ಜಗಳವಡುತ್ತಲೇ, ಕೈ ಕುಯ್ದು ಕೊಂಡಿದ್ದಾನೆ. ಈ ವಿಚಾರ ಪ್ರಿಯತಮೆಗೆ ತಿಳಿದು ತಕ್ಷಣ ಹಾಗೆ ಮಹದೇವಪುರ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾಳೆ. ಬಿಟ್ ನಲ್ಲಿ ಇರುವಂತಹ ಮಹದೇವಪುರ ಠಾಣೆಯ ಪಿಎಸ್ಐ ಪರಶುರಾಮ್ ಹಾಗೂ ಮಲ್ಲೇಶ್ ತಕ್ಷಣ ಪೀಜಿಗೆ ಧಾವಿಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದ್ದು, ಅಕ್ರಮವಾಗಿ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಯ ಮೇಲೆ ಫೈರಿಂಗ್ ನಡೆಸಲಾಗಿದೆ. ಕಲ್ಬುರ್ಗಿ ಹೊರವಲಯದ ತಾವರಗೇರಾ ಬಳಿ ಗುಂಡಿನ ದಾಳಿ ನಡೆಸಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ ಸುಪ್ರೀತ್ ನವಲೆ ಎಡಗಾಲಿಗೆ ಗುಂಡೇಟು ತಗುಲಿದೆ. ಈತ ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಕಾರಿನ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಸುಪ್ರೀತ್ ನವಲೆ ದಾಳಿ ಮಾಡಿದ್ದಾನೆ. ಚಾಕುನಿಂದ ಇರಿದು ಸುಪ್ರೀತ್ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ.ಈ ವೇಳೆ ಚೌಕ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಅವರಿಂದ ಫೈರಿಂಗ್ ಆಗಿದೆ. ಸದ್ಯ ಆರೋಪಿ ಸುಪ್ರೀತ್ ಗೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ಕಲಬುರ್ಗಿ : ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೆ ಇಬ್ಬರನ್ನು ಅಪಹರಣ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕೂಡಲ ಹಂಗರಗ ಗ್ರಾಮದಲ್ಲಿ ನಡೆದಿದೆ ಈ ಕುರಿತು ಂದ್ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣದ ದಾಖಲಾಗಿದೆ. ಅಪಹರಣಕ್ಕೆ ಒಳಗಾದಂತಹ ಗ್ರಾಮ ಪಂಚಾಯಿತಿ ಸದಸ್ಯರನ್ನು, ರಾಜಶೇಖರ ಕಾಂದೆ ಮತ್ತು ಅನಂತ ರೆಡ್ಡಿ ಎಂದು ತಿಳಿದುಬಂದಿದೆ.ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಲು ನಿರ್ಣಯಿಸಿದ್ದರು.ಹಾಗಾಗಿ ಎಲ್ಲ ಸದಸ್ಯರು ಶಹಾಬಾದ್ ಸಮೀಪದ ತರಿ ತಾಂಡಾಕ್ಕೆ ತೆರಳಿದ್ದರು ಎಂದರು. ತಾಂಡಾದ ಅನಿಲ್ ರಾಠೋಡ ಮನೆಯಲ್ಲಿ ಇದ್ದಾಗ ವಿಜಯ ಹಳ್ಳಿ, ರಾಜಕುಮಾರ ಸೇರಿ ಸುಮಾರು 40 ಜನರ ಗುಂಪಿನೊಂದಿಗೆ ಬಂದರು. ಹಲ್ಲೆ ಮಾಡಿ, ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಇಬ್ಬರನ್ನು ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.

Read More

ನವದೆಹಲಿ: ದೆಹಲಿಯ ಶಾಲೆಗಳಿಗೆ ಇತ್ತೀಚೆಗೆ ನಡೆದ ಸರಣಿ ಹುಸಿ ಇ ಮೆಲ್ ಮೂಲಕ ಕನಿಷ್ಠ 23 ಬಾಂಬ್ ಬೆದರಿಕೆಗಳನ್ನು ವಿದ್ಯಾರ್ಥಿಯೊಬ್ಬ ಕಳುಹಿಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ದೆಹಲಿಯ ವಿವಿಧ ಶಾಲೆಗಳಿಗೆ 12 ನೇ ತರಗತಿಯ ವಿದ್ಯಾರ್ಥಿ ಇಮೇಲ್ಗಳನ್ನು ಕಳುಹಿಸಿದ್ದಾನೆ. ವಿಚಾರಣೆಯ ಸಮಯದಲ್ಲಿ, ನಾನು ಪರೀಕ್ಷೆಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಬೆದರಿಕೆ ಹಾಕಿದ್ದೇನೆ. ಈ ಹಿಂದೆಯೂ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದ್ದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಪೊಲೀಸ್ ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಇತ್ತೀಚೆಗೆ ಕಳೆದ ಕೆಲವು ತಿಂಗಳಿನಿಂದ ದೆಹಲಿಯ ಹಲವು ಶಾಲೆಗಳಿಗೆ ಸಾಲು ಸಾಲು ಬಾಂಬ್ ಬೆದರಿಕೆ ಸಂದೇಶ ಬರುತ್ತಿತ್ತು. ಘಟನೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಿದ ಪೊಲೀಸರಿಗೆ ಇದೀಗ ಶಾಕ್ ಎದುರಾಗಿದ್ದು, ತಾನೇ ಬಾಂಬ್ ಬೆದರಿಕೆ ಹಾಕಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ.

Read More

ಹುಬ್ಬಳ್ಳಿ : ಇನ್ನೇನು ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಸಮೀಪಸಿದ್ದು, ಹೀಗಾಗಿ ಬೇರೆ ಊರುಗಳಿಗೆ ತೆರಳಲು NWKSRTC ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಎರಡನೇ ಶನಿವಾರ, ಭಾನುವಾರ ಸೇರಿದಂತೆ ಸರಣಿ ರಜೆಗಳಿರುವ ಕಾರಣ ಸಂಕ್ರಾಂತಿ ಹಬ್ಬಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ವಾಯವ್ಯ ಸಾರಿಗೆ ವಿಶೇಷ ಬಸ್​ ಸೌಲಭ್ಯ ಕಲ್ಪಿಸಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮೂರುಗಳಿಗೆ ತೆರಳುವುದರಿಂದ, ವಾ.ಕ.ರ.ಸಾ.ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 114 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಾಯುವ್ಯ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಿಂದ ರಾಜ್ಯ/ಅಂತರ್‌ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಶುಕ್ರವಾರ, 11 ಹಾಗೂ 13 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹಬ್ಬ ಮುಗಿದ ಮೇಲೆ 14 ಹಾಗೂ 15 ರಂದು ಮತ್ತು ನಂತರದ ದಿನಗಳಂದು ಪ್ರಮುಖ ಸ್ಥಳಗಳಿಂದ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆ…

Read More

ವಿಜಯಪುರ : ವಿಜಯಪುರ ಜಿಲ್ಲೆಯ ಕೊರ್ತಿ ಕೋಲಾರ ಎಂಬಲ್ಲಿ ಎದುರುಗಡೆ ಮನೆಯಲ್ಲಿದ್ದ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಮೇಲೆ ಸುಮಾರು 12 ಜನರು ಭೀಕರವಾಗಿ ಹಲ್ಲೆ ನಡೆಸಿದ್ದರು. ಬಳಿಕ ಯುವಕನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸಿದೆ ಯುವಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿತ ಯುವಕ ಮೃತಾಪಟ್ಟಿದ್ದಾನೆ. ಜನವರಿ 7ರಿಂದ ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿತ್ತು. ಎದುರು ಮನೆಯ ಯುವತಿಯನ್ನು ರಾಘವೇಂದ್ರ ಕಂಬಾರ ಎನ್ನುವತ ಪ್ರೀತಿಸುತ್ತಿದ್ದ. ರಾಘವೇಂದ್ರ ಪ್ರೀತಿಸುವ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿತ್ತು ಇದೇ ವಿಚಾರಕ್ಕೆ ಯುವಕ ಯುವತಿ ತಾಯಿಯ ನಡುವೆ ಜಗಳವಾಗಿತ್ತು. ರಾಘವೇಂದ್ರನನ್ನು ಮನೆ ಬಳಿಯ ದೇವಸ್ಥಾನಕ್ಕೆ ಕರೆಸಿ ಕೊಂಡು ಹಲ್ಲೆ ನಡೆಸಲಾಗಿದೆ.ರಾಘವೇಂದ್ರ ಕಂಬಾರ ಮೇಲೆ ಸುಮಾರು 12 ಜನರು ಭೀಕರವಾಗಿ ಹಲ್ಲೆ ಮಾಡಿದ್ದರು.ರಾಘವೇಂದ್ರನನ್ನು ಬಾಗಲಕೋಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ…

Read More

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೇಕರಿ ಸಿಬ್ಬಂದಿಯ ಮೇಲೆ ಪುಂಡರು ಭೀಕರವಾಗಿ ಹಲ್ಲೆ ನಡೆಸಿ, ಬೇಕರಿಯಲ್ಲಿನ ಹಲವು ವಸ್ತುಗಳನ್ನು ದೌರ್ಜನ್ಯ ಬರೆದಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಸಂಜಯ್ ನಗರ ಠಾಣೆ ಪೋಲೀಸರು ಇಬ್ಬರು ಪುಂಡರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಇಬ್ಬರು ಆರೋಪಿಗಳನ್ನು ಬಂಧಿಸಿದ ಸಂಜಯ್ ನಗರ ಠಾಣೆಯ ಪೊಲೀಸರು ಸಿಗರೇಟ್ ಕೊಡಲು ವಿಳಂಬ ಮಾಡಿದ್ದಕ್ಕೆ ಬೇಕರಿ ಸಿಬ್ಬಂದಿಯ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ವಿಶ್ವಾಸ ಹಾಗೂ ಗುರುರಾಜ್ ಎಂದು ಗುರುತಿಸಲಾಗಿದ್ದು, ಇದೀಗ ಸಂಜಯ್ ನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಜನವರಿ 8 ರಾತ್ರಿ ಸಂಜಯ್ ನಗರದ ಭೂಪಸಂದ್ರದಲ್ಲಿ ಈ ಒಂದು ಘಟನೆ ನಡೆದಿತ್ತು. ಸುಮ್ಮನೆ ಕಿರಿಕ್ ಮಾಡಿ ಬೇಕರಿ ಒಳಗೆ ನುಗ್ಗಿ ಯುವಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ. ಜ್ಯೂಸ್ ಬಾಟಲ್ ನಿಂದ ಬೇಕರಿಯವರ ಮೇಲೆ ಹಲ್ಲೆ ಗೈದಿದ್ದ ಪುಂಡರು, ಈ ಕುರಿತು ಸಂಜಯನಗರ…

Read More

ಬೆಂಗಳೂರು : ಚಿಕ್ಕಮಂಗಳೂರು ಭಾಗದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 6 ಜನ ನಕ್ಸಲರು ಈಗಾಗಲೇ ಸರ್ಕಾರದ ಮುಂದೆ ಶರಣಾಗಿದ್ದು ಅವರನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನಿನ್ನೆ ಕೋರ್ಟ್ ಆದೇಶ ಹೊರಡಿಸಿತ್ತು.ಆದರೆ ಇನ್ನೋರ್ವ ನಕ್ಸಲ್ ತಲೆಮರಿಸಿಕೊಂಡಿದ್ದು, ಆತನನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ್ತೋರ್ವ ನಕ್ಸಲ್ ತಲೆಮೆರೆಸಿಕೊಂಡಿರುವ ವಿಚಾರವಾಗಿ ಶರಣಾಗತಿಯಾದವರು ಆತನನ್ನು ಹೊರ ಹಾಕಿದ್ದರು ಎಂಬ ಮಾಹಿತಿ ಇದೆ.ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ ಆದಷ್ಟು ಬೇಗ ಅವನನ್ನು ಹುಡುಕುತ್ತೇವೆ.ಚಿಕ್ಕಮಗಳೂರು ಭಾಗದಲ್ಲಿಯೇ ಇದ್ದಾನೆ ಎನ್ನುವ ಮಾಹಿತಿ ಇದೆ ಎಂದರು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ 6 ಜನ ಇದ್ದಾರೆ ಅನ್ನೋದು ಇತ್ತು. ಬೇರೆ ರಾಜ್ಯದಿಂದಲೂ ಬಂದರೆ ಅದರ ಮೇಲೆ ನಿಗಾ ಇಡಲಾಗುತ್ತದೆ. ಓಡಿಸ್ಸಾ ಕೇರಳದಿಂದ ಬರುವ ಸಾಧ್ಯತೆ ಇದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕುಟುಂಬ ಪರಿಹಾರ ನೀಡುವ ವಿಚಾರವಾಗಿ ಈ ಕುರಿತು ಪರಿಶೀಲನೆ ನಡೆಸುತ್ತೇವೆ. ಆ…

Read More

ಚಾಮರಾಜನಗರ : ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.

Read More

“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಇನ್ನು “ಏಕಾದಶಿ” ಎಂದರೆ ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ.ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.ಅಂದರೆ ಶುಚಿಯಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ…

Read More