Author: kannadanewsnow05

ವಿಜಯಪುರ : ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಆಲಮಟ್ಟಿಯ ಎಡದಂಡೆ ಕಾಲುವೆಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದು ಕೊಂದ ಬಳಿಕ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಹೌದು ವಿಜಯಪುರ ಜಿಲ್ಲೆಯ ನಡುಗುಂದಿ ತಾಲೂಕಿನ ಬೆನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯ ಬಳಿ ತಾಯಿಯೋಬ್ಬಳು ತನ್ನ ನಾಲ್ವರು ಮಕ್ಕಳನ್ನು ಮೊದಲು ಕಾಲುವಿಗೆ ಎಸೆದಿದ್ದಾಳೆ ಬಳಿಕ ತಾನು ಕೂಡ ಮಕ್ಕಳು ಸಾವನ್ನಪ್ಪಿದ ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ತನು ನಿಂಗರಾಜ್ ಬಜಂತ್ರಿ (5) ರಕ್ಷಾ ನಿಂಗರಾಜ್ ಬಜಂತ್ರಿ (3) ಹುಸೇನ್ ನಿಂಗರಾಜ್ ಭಜಂತ್ರಿ ಸೇರಿದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು ಕೋಲ್ಹಾರ ತಾಲೂಕಿನ ತಲೆಗಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ವೇಳೆ ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಗಳನ್ನು ಕೂಡಲೇ ಸ್ಥಳಿಯರು ರಕ್ಷಣೆ ಮಾಡಿದ್ದಾರೆ ಸದ್ಯ ಘಟನಾ ಸ್ಥಳಕ್ಕೆ ನಡೆಗುಂದಿ ಠಾಣೆ ಪೊಲೀಸರು ಭೇಟಿ ನೀಡಿದ್ದು…

Read More

ಹಾವೇರಿ : ಇಂದು ರಾಜ್ಯದಲ್ಲಿ ಪ್ರತ್ಯೇಕ ಮೂರು ಅಗ್ನಿ ಅವಘಡಗಳು ಸಂಭವಿಸಿವೆ. ಮೊದಲನೆಯದಾಗಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿದ್ದಾರೆ. ಬಳಿಕ ಬೆಂಗಳೂರಿನ ನೆಲಮಂಗಲದಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ ತಗುಲಿ 40 ಲಕ್ಷಕ್ಕೂ ಅಧಿಕ ಬಟ್ಟೆಗಳು ಸುಟ್ಟು ಕರಕಲಾಗಿವೆ. ಇದೀಗ ಹಾವೇರಿಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಎರಡು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿದೆ. ಹೌದು ಹಾವೇರಿಯ ಮಂಜುನಾಥ ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ನಗರದ ಚನ್ನಬಸಪ್ಪ ಗೂಳಪ್ಪನವರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಅಗ್ನಿ ಅವಘಡದ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾವ ಕಾರಣಕ್ಕಾಗಿ ಫ್ರಿಡ್ಜ್ ಸ್ಪೋಟಗೊಂಡಿದೆ ಎಂದು ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.

Read More

ಬೆಂಗಳೂರು : ಈಗಾಗಲೇ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಇದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಯಾವುದೇ ರೀತಿಯಾಗಿ ಭಿನ್ನಾಭಿಪ್ರಾಯ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀರ್ ಸಿಂಗ್ ಸುರ್ಜೆವಾಲಾ ಅವರು ತಿಳಿಸಿದರು. ಇಂದು ಬೆಂಗಳೂರಿಗೆ ಆಗಮಿಸಿದ ಅವರು, ಭಾರತ ಜೋಡೋ ಭವನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಈ ಒಂದು ಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಕೆಲ ಸೆಲೆಕ್ಟೆಡ್ ಗ್ರೂಪ್ ಆಫ್ ಮೀಡಿಯಾದಿಂದ ಇತರ ಗೊಂದಲ ಸೃಷ್ಟಿಯಾಗಿದೆ  ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಲ ಹೇಳಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆರೋಪಿಸುತ್ತಿದ್ದಾರೆ. ಸರ್ಕಾರದಲ್ಲಿ ಅಧಿಕಾರ ಬದಲಾವಣೆ, ಹೊಸ ನೇಮಕ ಯಾವುದು ಇಲ್ಲ.ಬಿಜೆಪಿ ಬಸನಗೌಡ ಪಾಟೀಲ ಯತ್ನಾಳ್ ಬಣ…

Read More

ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಹಲವು ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದು, ಇದೀಗ ಮಾಗಡಿ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಶಾಸಕರು ಚರ್ಚೆ ಮಾಡುತ್ತಿಲ್ಲ. ಸದ್ಯ ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಬಳಿಕ ಉಪ ಮುಖ್ಯಮಂತ್ರಿ ಸಿಎಂ ಆಗಬೇಕಲ್ವ? ಎಂದು ತಿಳಿಸಿದರು. ಬೇರೆ ಬೇರೆಯವರು ಆಕಾಂಕ್ಷಿಗಳು ಇದ್ದಾರೆ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಬೇಕು ಎಂದು ಒಕ್ಕಲಿಗರ ಸಭೆಯ ವಿಚಾರವಾಗಿದೆ.ಅವರವರ ಜಾತಿ ಅಭಿಮಾನದ ಮೇಲೆ ಹೇಳಿದ್ದಾರೆ. ಅಷ್ಟೇ ಹೈಕಮಾಣ್ ನಾಯಕರು ಅಂತಿಮವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬೆಂಗಳೂರಿನಲ್ಲಿ ಮಾಗಡಿ ಶಾಸಕ ಹೆಚ್ಚಿಸಿ ಬಾಲಕೃಷ್ಣ ಹೇಳಿಕೆ ನೀಡಿದರು.

Read More

ರಾಯಚೂರು : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿ ಆದಂತಹ ಚಿಂತಕ ಕೆ ಎಸ್ ಭಗವಾನ್ ಅವರು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ ಎಂದು ಭಗವಾನ್ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಹಿಂದೂ ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಅಂತ ಚಿಂತಕ ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ…

Read More

ರಾಯಚೂರು : ನಿನ್ನೆ ರಾಜ್ಯದಲ್ಲಿ ಘೋರ ಕೃತ್ಯ ನಡೆದಿದ್ದು, ರಾಕ್ಷಸನೊಬ್ಬ ರಸ್ತೆಯ ಮೇಲೆ ಮಲಗಿದ್ದ ಹಸುಗಳನ್ನು ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವೇ ಇಂತಹ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದ್ದು, ಒಂದು ವೇಳೆ ಈ ಒಂದು ಘಟನೆಯಿಂದ ರಾಜ್ಯದಲ್ಲಿ ಸಾವು ನೋವು ಸಂಭವಿಸಿದರೆ ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ ಎಂದು ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದರು. ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಚ್ಚಲು ಕೊಯ್ಯುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೆ ಪ್ರೇರಣೆ. ರಾಜ್ಯ ಸರ್ಕಾರ ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಸಾವು ನೋವುಗಳಾದರೆ ಸರ್ಕಾರ ಕಾರಣವೆಂದು ಎಚ್ಚರಿಕೆ ಕೊಡುತ್ತೇನೆ ಬಿಜೆಪಿ ಸರ್ಕಾರ 14 ಗೋಶಾಲೆಗಳನ್ನು ಪ್ರಾರಂಭ ಮಾಡಿತ್ತು. ಕಳೆದ ವಾರ ಸಂಪುಟದಲ್ಲಿ ಗೋಶಾಲೆ ರದ್ದು ಮಾಡುವ ಬಗ್ಗೆ ನಿರ್ಧರಿಸಿದ್ದಾರೆ. ಈ ಘಟನೆ ಯಿಂದ ಹಿಂದೂ ಸಮಾಜಕ್ಕೆ ಅವಮಾನ ಆಗಿದೆ. ಸಿಎಂ ಸೇರಿ ಹಲವರು ಕಠಿಣ ಕ್ರಮ ಕೈಗೊಳ್ಳುತ್ತೇವೆ…

Read More

ಕೇರಳ : ಕೇರಳದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಜಲಾಶಯದ ಹಿನ್ನೀರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂಲ ಸಮೀಪದ ಜಲಾಶಯದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಹೈದ್ರಾಬಾದ್ ನಲ್ಲಿ 5 ಯುವಕರ ಸಾವು ಇನ್ನು ಇದೆ ರೀತಿ ಹೈದ್ರಾಬಾದ್ ನಲ್ಲೂ ನಡೆದಿದ್ದು, ತೆಲಂಗಾಣದ ಸಿದ್ದಿಪೇಟೆಯ ಕೊಂಡಪೋಚಮ್ಮ ಸಾಗರ ಅಣೆಕಟ್ಟಿನ ಜಲಾಶಯದಲ್ಲಿ ರೀಲ್ ಚಿತ್ರೀಕರಣ ಮಾಡುವಾಗ ಇಬ್ಬರು ಸಹೋದರರು ಸೇರಿದಂತೆ ಐವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಮೃತರನ್ನು ಮುಶೀರಾಬಾದ್ ನ ಧನುಷ್ (20), ಆತನ ಸಹೋದರ ಲೋಹಿತ್ (17), ಬನ್ಸಿಲಪೇಟ್ ನ ದಿನೇಶ್ವರ್ (17), ಖೈರತಾಬಾದ್ ನ ಜತಿನ್ (17) ಮತ್ತು ಸಾಹಿಲ್ (19) ಎಂದು ಗುರುತಿಸಲಾಗಿದೆ.

Read More

ಬೆಂಗಳೂರು : ಹಣ ಡಬ್ಬಲಿಂಗ್ ಮಾಡುವುದಾಗಿ ನಂಬಿಸಿ ಸುಮಾರು ಎರಡು ಕೋಟಿ ಹಣ ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದ್ದು, ಸದ್ಯ ಆರೋಪಿಗಳನ್ನು ಇದೀಗ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಇದೀಗ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶ್ಯಾಮ್ ಥಾಮಸ್, ಜೋಶ್ ಕರುವಿಲ್ಲ, ಜಾಫರ್ ಸಾಧಿಕ್ ಅಲಿಯಾಸ್ ದೀಪಕ್, ಜೀನ್ ಕಮಲ್, ವಿಜಯ್ ಚಿಕ್ಲೋಂಕರ್ ಅಲಿಯಾಸ್ ರವಿ, ಅಮಿತ್ ಅಲಿಯಾಸ್ ದೀಪಕ್, ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದ್ದು ಬಂಧಿತರಿಂದ ಸುಮಾರು 44 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. PWD ಕಾಂಟ್ರಾಕ್ಟರ್ ನವೀನ್ ಎಂಬತರಿಗೆ 2 ಕೋಟಿ ಹಣ ವಂಚಿಸಿದ್ದಾರೆ. ಪ್ರಾರಂಭಿಕವಾಗಿ ಒಂದು ಲಕ್ಷ ಹಣ ಆರ್ಟಿಜಿಎಸ್ ಮಾಡಿದ್ದರು. ನಗರದಲ್ಲಿ ಲಾಕರ್ ಇಲ್ಲ ಅಂತ ಆರೋಪಿಗಳು ಹೇಳಿದ್ದರು. ನಗದು ಕೊಟ್ಟರೆ ಡಬಲ್ ಮಾಡಿ ಕೊಡುವುದಾಗಿ ಆಮೀಷ ಒಡ್ಡಿದ್ದಾರೆ. ಆರ್ ಟಿ ಜಿ ಎಸ್ ಮೂಲಕ ಹಣ…

Read More

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಅತ್ಯಂತ ಪ್ರಸಿದ್ಧವಾಗಿದ್ದು, ಈ ಒಂದು ಚಿಕ್ಕಲ್ಲೂರು ಜಾತ್ರೆಯ ಸಿದ್ದಪ್ಪಾಜಿ ಯವರ ಜಾತ್ರೆ ಪ್ರತಿ ವರ್ಷ ಅತ್ಯಂತ ವಿಜ್ರಂಭಣೆಯಿಂದ ನಡೆಯುತ್ತಿದ್ದು,ಕಳೆದ ಹಲವು ವರ್ಷಗಳಿಂದ ಇಲ್ಲಿ ಪ್ರಾಣಿ ಬಲಿ ನೀಡುವ ಪದ್ಧತಿ ಇತ್ತು. ಆದರೆ ಈ ಬಾರಿ ಚಾಮರಾಜನಗರದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರಾಣಿ, ಪಕ್ಷಿ ಬಲಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಹೌದು ಇಂದಿನಿಂದ 5 ದಿನಗಳ ಕಾಲ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ನಡೆಯಲಿದೆ. ಈ ಬಾರಿ ದೇವಸ್ಥಾನದ ಆವರಣ ಗ್ರಾಮದ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ. ಪ್ರಾಣಿ ಬಲಿ ನಿಶದಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಟ್ಯಾಟೂ & ಹಚ್ಚೆ ಹಾಕಿಸ್ಕೊಳ್ಳೋದಕ್ಕೂ ಜಿಲ್ಲಾಡಳಿತ ಇದೀಗ ಬ್ರೇಕ್ ಹಾಕಿದೆ. ಲಕ್ಷಾಂತರ ಭಕ್ತರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಸೇರುತ್ತಾರೆ. ಪ್ರಾಣಿವಧೆ ನಿಷೇಧಿಸಿ ಡಿಸಿ ಆದೇಶ  ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ ಅನ್ವಯ ಜನವರಿ 13…

Read More

ಬೆಂಗಳೂರು : ಇದೆ ಜನವರಿ 26ರಂದು ದೇಶದಲ್ಲೇಡೆ ಗಣರಾಜ್ಯೋತ್ಸವ ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದಂತೆ ಬೆಂಗಳೂರಿನ ವಿವಿಧೆಡೆ, ಬಾಂಬ್ ಸ್ಪೋಟಿಸುವುದಾಗಿ ಅಪರಿಚಿತನ ಬೆದರಿಕೆ ಕರೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಪಚಿತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು ಗಣರಾಜೋತ್ಸವದ ಸಂದರ್ಭದಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಅಪರಿಚಿತನೊಬ್ಬ ಕರೆ ಮಾಡಿದ್ದಾನೆ.ಜನವರಿ 9ರಂದು ಸಂಜೆ 5:30ರ ಸುಮಾರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್‌ಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್‌ಗೆ ಕರೆ ಮಾಡಿದ್ದ ಅಪರಿಚಿತ, 6 ಜನರ ಹೆಸರು ಹಾಗೂ ವಿಳಾಸಗಳನ್ನು ತಿಳಿಸಿ ರಾಮೇಶ್ವರಂ ಕೆಫೆಯಲ್ಲಿ ಈ ಹಿಂದೆ ಬಾಂಬ್ ಸ್ಫೋಟವಾದಂತೆ ಆರು ಜನರು ಗಣರಾಜ್ಯೋತ್ಸವದ ದಿನ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದಾರೆ ಎಂದು ಹೇಳಿದ್ದಾನೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂದು ಕಂಡುಬಂದಿದ್ದು, ಪೊಲೀಸ್ ಕಂಟ್ರೋಲ್…

Read More