Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಶಾರ್ಟ್ ಸರ್ಕ್ಯೂಟ್ ನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಕಚೇರಿಯನ್ನು ಆವರಿಸಿದ ಪರಿಣಾಮ ಕಚೇರಿಯಲ್ಲಿದ್ದ ಕಂಪ್ಯೂಟರ್ ಕೆಲವು ಪೀಠೋಪಕರಣಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಬಿ ಇ ಓ ಕಚೇರಿಯಲ್ಲಿ ಈ ಒಂದು ದುರಂತ ಸಂಭವಿಸಿದೆ. ಹೌದು ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ಪಟ್ಟಣದಲ್ಲಿರುವ ಬಿ ಇ ಓ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಚೇರಿಯಲ್ಲಿನ ಕೆಲ ದಾಖಲಾತಿಗಳು, ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಸೇರಿ ಎಲೆಕ್ಟ್ರಿಕಲ್ ಉಪಕರಣಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಕ್ಷಣ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಅಫ್ಜಲ್ಪುರ ಪೊಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾಗಿದೆ.
BIG NEWS : MP ಎಲೆಕ್ಷನ್ ನಲ್ಲಿ ಸಿ.ಎಸ್ ಮಂಜುನಾಥ್ ಪರ ಕೆಲಸ ಮಾಡಿದ್ದೆ ನನಗೆ ಮುಳುವಾಗಿದೆ : ಶಾಸಕ ಮುನಿರತ್ನ ಹೇಳಿಕೆ
ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಡಾ.ಸಿ.ಎನ್. ಮಂಜುನಾಥ್ ಪರ ಕೆಲಸ ಮಾಡಿದ್ದೇ ಮುಳುವಾಗಿದೆ. ಆ ಕಾರಣಕ್ಕಾಗಿ ನನ್ನನ್ನು ರಾಜೆಯವಾಗಿ ಟಾರ್ಗೆಟ್ ಮಾಡಿ ಹಿಂಸಿಸಲಾಗುತ್ತಿದೆ ಎಂದು ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹೇಳಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಅಂಗವಾಗಿ ಇಂದು ಮಾತನಾಡಿದ ಅವರು, ಅವರು, ಇಂದು ನಾನು ಪ್ರಮಾಣ ಮಾಡುತ್ತಿದ್ದೇನೆ. ನನಗೆ ಬಹಳಷ್ಟು ಕಿರುಕುಳ ಇದೆ.ನನ್ನ ಜೀವಕ್ಕೂ ಕೂಡ ಅಪತ್ತು ಇದೆ.ನಾನು ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಪರ ಕೆಲಸ ಮಾಡಿದ್ದೇ ಮುಳುವಾಗಿದೆ. ಆ ಕಾರಣಕ್ಕಾಗಿ ನನ್ನನ್ನು ರಾಜೆಯವಾಗಿ ಟಾರ್ಗೆಟ್ ಮಾಡಿ ಹಿಂಸಿಸಲಾಗುತ್ತಿದೆ ಎಂದು ಮುನಿರತ್ನ ಹೇಳಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಪ್ರಮಾಣ ಮಾಡಿದ್ದಾರೆ. ತಮ್ಮ ಕ್ಷೇತ್ರದ ಜನತೆಗೆ ಸಂಕ್ರಾಂತಿ ಶುಭ ಕೋರಿಡಾ ಶಾಸಕ ಮುನಿರತ್ನ ತಮಗೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.ನನಗೆ ಕ್ಷೇತ್ರದಲ್ಲಿ ಇಂದು ಬಲವಿಲ್ಲ, ಮತದಾರ ಬಂಧುಗಳ ಆಶೀರ್ವಾದ ಒಂದೇ ನನಗೆ ಶ್ರೀರಕ್ಷೆಯಾಗಿದೆ.ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಕೆಲಸವನ್ನು ಮಾಡುವ ಶಕ್ತಿ ಬರಲಿ ಎಂದು…
ಹುಬ್ಬಳ್ಳಿ : ಸದ್ಯ ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಡಿನ್ನರ್ ಪಾಲಿಟಿಕ್ಸ್ ಜೋರಾಗಿದ್ದು, ಇದರ ಮಧ್ಯ ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಕೂಗು ಜೋರಾಗಿ ಕೇಳಿ ಬರುತ್ತಿದೆ.ಇದರ ಮಧ್ಯ, ಅಬಕಾರಿ ಇಲಾಖೆಯ ಸಚಿವ ಆರ್.ಬಿ ತಿಮ್ಮಾಪೂರ್ ಅವರು, ಇದೀಗ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಒಂದು ವೇಳೆ ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ್ ಹೇಳಿಕೆ ನೀಡಿದರು. ದಲಿತರು ಯಾಕೆ ಸಿಎಂ ಆಗಬಾರದು? ಮುಖ್ಯಮಂತ್ರಿ ಮಾಡಿದರೆ ಯಾರು ಬೇಡ ಅಂತ ಹೇಳುತ್ತಾರೆ ಎಂದರು. ಸಿಎಂ ಆಗಲು ನನಗೆ ಅಷ್ಟು ಶಕ್ತಿ ಇದೆಯೋ ಇಲ್ಲವೋ, ಶಾಸಕಾಂಗ ಪಕ್ಷದ ಸಭೆಯಲ್ಲಿ ನನ್ನ ಒಪ್ಪುತ್ತಾರೋ ಇಲ್ಲವೋ ಅದೆಲ್ಲ ನಂತರದ ಮಾತು. ಆದರೆ ಹೈಕಮಾಂಡ್ ಹೇಳಿದರೆ ನಾನೇ ಸಿಎಂ ಆಗುತ್ತೇನೆ. ದಲಿತರು ಮುಖ್ಯಮಂತ್ರಿ ಆಗಬೇಕೆಂದರೆ…
BREAKING : ಬೆಂಗಳೂರಲ್ಲಿ ಮೊದಲನೇ ಮದುವೆ ಮುಚ್ಚಿಟ್ಟು, ಯುವತಿಗೆ ವಂಚಿಸಿದ ‘BMTC’ ಕಂಡಕ್ಟರ್ : ನ್ಯಾಯಕ್ಕಾಗಿ ಪರದಾಟ!
ಬೆಂಗಳೂರು : ಬೆಂಗಳೂರಿನಲ್ಲಿ ಟಿಕೆಟ್ ಕೊಡುತ್ತಲೇ, ಯುವತಿನ್ನು, ತನ್ನ ಬಲೆಗೆ ಬೀಳಿಸಿಕೊಂಡ ಕಂಡಕ್ಟರ್ ತನಗೆ ಈ ಮುಂಚೆ ಮದುವೆ ಆಗಿರುವುದನ್ನು ಮುಚ್ಚಿಟ್ಟು ಯುವತಿ ಜೊತೆಗೆ ಸುತ್ತಾಡಿ ತಿರುಗಾಡಿ ಮಜಾ ಮಾಡಿದ್ದಾನೆ. ಬಳಿಕ ಆತನಿಗೆ ಮದುವೆಯಾಗಿದೆ ಎಂದು ಯುವತಿಗೆ ತಿಳಿದಿದ್ದೆ ತಡ ನನಗೆ ಯುವತಿ ಬೇಡ ಎಂದು ಕಂಡಕ್ಟರ್ ತಿಳಿಸಿದ್ದಾನೆ. ಹೌದು ಟಿಕೆಟ್ ಕೊಡುತ್ತಲೇ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಕಂಡಕ್ಟರ್‌ನ ಮುಖ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋ ಕಂಡಕ್ಟರ್ ಕಮ್ ಡ್ರೈವರ್ ಆಗಿ ಮಂಜುನಾಥ್ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಎಂ.ಎಸ್.ಪಾಳ್ಯ ಟು ಯಲಹಂಕ ಬಿಎಂಟಿಸಿ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಟಿಕೆಟ್ ಕೊಡುತ್ತಲೇ ಯುವತಿಯನ್ನು ಪರಿಚಯ ಮಾಡ್ಕೊಂಡು ಮಂಜುನಾಥ್ ನಂಬರ್ ಪಡೆದಿದ್ದ. ಕಂಡಕ್ಟರ್ ತನಗೆ ಮದುವೆಯಾಗಿ, ಇಬ್ಬರು ಮಕ್ಕಳಿರುವುದನ್ನು ಮುಚ್ಚಿಟ್ಟು ಯುವತಿಯನ್ನ ಪ್ರೀತಿಸುವುದಾಗಿ ಹೇಳಿದ್ದ. ಈ ವೇಳೆ ಯುವತಿ ಕೂಡ ತನಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು ಎಂದು ತಿಳಿಸಿದ್ದಳು. ಈ ವೇಳೆ ನಿನಗೆ…
BIG NEWS : ಹಸುಗಳ ಕೆಚ್ಚಲು ಕುಯ್ದ ಕೇಸ್ : ಎಷ್ಟೇ ಬಲಿಷ್ಠ ವ್ಯಕ್ತಿಗಳಿದ್ದರು ಕಠಿಣ ಕ್ರಮ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕುಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು ಮಾನವೀಯ ಇರುವವರು ಯಾರು ಕೂಡ ಇಂತಹ ನೀತಿ ಕೃತ್ಯ ಮಾಡಲ್ಲ. ಆತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ. ಪ್ರಕರಣದ ಹಿಂದೆ ಮತ್ತೆ ಯಾರೋ ಇದ್ದರೆ ಆತ ಬಾಯಿ ಬಿಡುತ್ತಾನೆ. ಆಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನಿಗೆ ವಿರುದ್ಧವಾಗಿ ನಡೆಯುವವರಿಗೆ ಕ್ಷಮೆ ಇಲ್ಲ. ಯಾರನ್ನೋ ಕರೆತಂದು ಅರೆಸ್ಟ್ ಮಾಡುವುದಕ್ಕೆ ಆಗಲ್ಲ ಎಂದು ಬಿಜೆಪಿ ಆರೋಪಕ್ಕೆ ಜಿ. ಪರಮೇಶ್ವರ ಹೇಳಿಕೆ ನೀಡಿದರು. ಸದ್ಯ ಪ್ರಕರಣದ ಆರೋಪಿಯ ಬಗ್ಗೆ ಸಾಕ್ಷಿ ಸಿಕ್ಕಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ. ಅವನ ಜೊತೆ ಬೇರೆ ಯಾರಾದರೂ ಇದ್ದಿದ್ದರೆ ಆತ ಬಾಯಿಬಿಡುತ್ತಾನೆ. ಪ್ರಕರಣದಲ್ಲಿ ಎಷ್ಟೇ ದೊಡ್ಡವರಿರ ಲ್ಲಿ ಚಿಕ್ಕವರಿರಲಿ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವವರಿಗೆ ಕ್ಷಮೆ ಇರಲ್ಲ. ಘಟನೆಯಲ್ಲಿ ಇನ್ಯಾರೋರು…
ಬಾಗಲಕೋಟೆ : ರಾಜಸ್ಥಾನದಲ್ಲಿ ಕರ್ತವ್ಯ ನಿರತದಲ್ಲಿದ್ದ ಬಾಗಲಕೋಟೆ ಮೂಲದ ಯೋಧರು ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಯೋಧರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಎಂದು ತಿಳಿದುಬಂದಿದೆ.ಮಾಗೊಂಡಯ್ಯ ಕಳೆದ 14 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮರಾಠಾ ಇನ್‌ಫೆಂಟ್ರಿ ಯುನಿಟ್ 19 ಮೆಕ್ಯಾನಿಕ್ ಸಿ/ಒ 56 ಎಪಿಒ ಬಿಕಾನರ್ ಕಾಂಟ್ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಯೋಧ ಮಾಗೊಂಡಯ್ಯ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಕ್ಕಳೊಂದಿಗೆ ಯೋಧ ರಾಜಸ್ಥಾನದಲ್ಲಿ ನೆಲೆಸಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ. 15ರಂದು ನಂದಿಕೇಶ್ವರ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ.
ಹಾಸನ : ರಸ್ತೆ ಬದಿಯ ಕ್ಯಾಂಟೀನ್ ಗೆ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು ಉಳಿದ ಮೂವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೇ ಎಂಬಲ್ಲಿ ನಡೆದಿದೆ. ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೇ ಗ್ರಾಮದಲ್ಲಿ ರಸ್ತೆ ಬರಿಯ ಕ್ಯಾಂಟೀನ್ ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಮೂಲದ ವೀರೇಶ್ ಹಾಗೂ ಲಾರಿಯಲ್ಲಿದ್ದ ವ್ಯಕ್ತಿ ಸಾವನಪ್ಪಿದ್ದಾನೆ. ಘಟನೆಯಲ್ಲಿ ಮೂವರಿಗೆ ಗಂಭೀರವಾದ ಗಾಯಗಳಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡ ಮೂವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕುರಿತು ಸಕಲೇಶಪುರ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ : ಕಳೆದ ವರ್ಷ ಬೆಂಗಳೂರಿನಲ್ಲಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಟಕ್ಕಿ ಅಥವಾ ಶುಭಾಶಯ ಮಾಡಿಕೊಂಡಿದ್ದರು ಇದೀಗ ಧಾರವಾಡದಲ್ಲೂ ಇಂತಹದ್ದೇ ಘಟನೆ ನಡೆದಿದ್ದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು ಶಿವರಾಜ್ ಎತ್ತಿನಗುಡ್ಡ (35) ಎಂದು ತಿಳಿದುಬಂದಿದೆ. ಕಳೆದ ನವೆಂಬರ್ 16ರಂದು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೊದಲಿಗೆ ಗರಗ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಡೆತ್‌ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್‌ಎಸ್‌ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಗರಗ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಶಿವರಾಜ್ ಎತ್ತಿನಗುಡ್ಡ ಕಳೆದ 2024 ರ ಜುಲೈನಲ್ಲಿ ಮದುವೆಯಾಗಿದ್ದರು. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬುವವಳ ಜೊತೆ ಮದುವೆಯಾಗಿದ್ದರು.ಮದುವೆಯಾದ 15 ದಿನದಲ್ಲೇ ಯಲ್ಲವ್ವ ಪೋಷಕರ ಮನೆಗೆ ಹೋಗಿದ್ದರು. ಶಿವರಾಜ್ ಆಗ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು…
BREAKING : ಹುಬ್ಬಳ್ಳಿಯಲ್ಲಿ ‘ಮುಸ್ಲಿಂ’ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ : ಪತಿಯ ವಿರುದ್ಧ ಪತ್ನಿ ದೂರು ದಾಖಲು!
ಹುಬ್ಬಳ್ಳಿ : ಮುಸ್ಲಿಂ ಯುವಕನನ್ನು ಮದುವೆಯಾಗಿದ್ದ ಹಿಂದೂ ಯುವತಿಗೆ ಪತಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಿದ್ದಾನೆ ಈ ವಿಚಾರವಾಗಿ ಪತ್ನಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಇದೀಗ ದೂರು ದಾಖಲಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪತಿ ಶಫಿ ಅಹ್ಮದ್ ಕರ್ನೂಲ್ ವಿರುದ್ಧ ಪತ್ನಿ ಲಕ್ಷ್ಮೀ ಕಿರುಕುಳ ಆರೋಪ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರನ್ನು ಸಹ ದಾಖಲಿಸಿದ್ದಾರೆ.ಇವರು ಕಳೆದ 2014-15ರಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. 2017ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ದರು. ಬಳಿಕ ಶಫಿ ಮತ್ತು ಲಕ್ಷ್ಮೀ ದಂಪತಿ ಹುಬ್ಬಳ್ಳಿಯ ಮಂಟೂರು ರಸ್ತೆ ವಾಸವಾಗಿದ್ದರು. ಅನಿಲ್ ಎಂಬ ಹೆಸರು ಹೇಳಿ ಶಫಿ ಅಹ್ಮದ್ ಮದುವೆಯಾಗಿದ್ದ. ಶಫಿ ಸುಳ್ಳು ಹೇಳಿ ಮದುವೆಯಾಗಿದ್ದಾನೆಂದು, ಮದುವೆ ಬಳಿಕ ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿರುವುದಾಗಿ ಲಕ್ಷ್ಮೀ ಆರೋಪಿಸಿದ್ದಾರೆ. ಸದ್ಯ ಈ ವಿಚಾರವಾಗಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಲಕ್ಷ್ಮೀ ದೂರು ನೀಡಿದ್ದಾರೆ.
ಕಲಬುರ್ಗಿ : ಬೀದರ್ ನಲ್ಲಿ ರೈಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜು ಕಪನೂರು ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹೌದು ಆರೋಪಿ ರಾಜು ಕಪನೂರು ಮನೆಯ ಮೇಲೆ ಸಿಐಡಿ ದಾಳಿ ಮಾಡಿದೆ. ಇದೆ ವೇಳೆ ರಾಜು ಕಪನೂರ್ ಸೇರಿ ನಾಲ್ವರು ಆರೋಪಿಗಳ ಮೇಲೆ ಮನೆಯ ಮೇಲೆ ಸಿಐಡಿ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಬಂಧಿತ ಎಲ್ಲಾ ಆರೋಪಿಗಳನ್ನು 14 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ. ಕಲಬುರ್ಗಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜು ಕಪನೂರ್ ನಿವಾಸದ ಮೇಲೆ ದಾಳಿ ಮಾಡಿದ್ದು ಅವರಲ್ಲದೆ ಉಳಿದ ಆರೋಪಿಗಳಾದ ಗೊರಖ್ ನಾಥ್, ರಾಮನಗೌಡ, ನಂದಕುಮಾರ್ ನಾಲ್ವರು ಆರೋಪಗಳ ಮನೆಯಲ್ಲಿ ಸಿಐಡಿ ಇದೀಗ ಶೋಧ ಕಾರ್ಯ ನಡೆಸಿದ್ದಾರೆ ಇಬ್ಬರು ಡಿವೈಎಸ್ಪಿ ಇನ್ಸ್ಪೆಕ್ಟರ್ 40 ಸಿಬ್ಬಂದಿಗಳಿಂದ ಇದೀಗ ತನಿಖೆ ಚುರುಕು ಗೊಳಿಸಿದ್ದಾರೆ.














