Author: kannadanewsnow05

ಬೆಂಗಳೂರು : ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸುವ ವೇಳೆ ಇಂದು ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಈಡಾಗಿತ್ತು.ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಂಎಲ್ಸಿ ಸಿಟಿ ರವಿ ಅವರು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಸಹೋದರ ಚನ್ನರಾಜ್ ಹಟ್ಟಿಹೋಳಿ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಕುರಿತು ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಟಿ ರವಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿ.ಟಿ ರವಿ ಅವರು, ಕಿತ್ತೂರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅವರ ಸಹೋದರ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ ರವಿ ಮಧ್ಯೆ ನಡೆದ ಜಟಾಪಟಿ ರಾಜ್ಯಾದ್ಯಂತ ಸದ್ದು…

Read More

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಇದೀಗ ಮಂಗನ ಕಾಯಿಲೆ ಭೀತಿ ಮತ್ತೆ ಆರಂಭವಾಗಿದ್ದು, ಇದೀಗ 25 ವರ್ಷದ ಯುವಕನಿಗೆ ಮಂಗನ ಕಾಯಿಲೆ ರೋಗ ದೃಢವಾಗಿರುವುದು ವರದಿಯಾಗಿದೆ. ಹೌದು ಚಿಕ್ಕಮಂಗಳೂರು ತಾಲೂಕಿನ ಕಾಂಡ್ಯ ಬಳಿಯ ಮತ್ತುಖಂಡ ಗ್ರಾಮದಲ್ಲಿ 25 ವರ್ಷದ ಯುವಕನಿಗೆ ಮಂಗನ ಕಾಯಿಲೆ ದೃಢವಾಗಿದೆ. ಮತ್ತಿಕಂಡ ಗ್ರಾಮದಲ್ಲಿ ಹೆಚ್ಚಿದ ಇದೀಗ ಮಂಗನ ಕಾಯಿಲೆಯಿಂದ ಜನರು ಭಯ ಭೀತರಾಗಿದ್ದಾರೆ.

Read More

ಕಲಬುರ್ಗಿ : ಸಚಿನ್ ಪಾಂಚಾಳ ಆತ್ಮಹತ್ಯೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಅಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಿ ಆರ್ ಅಂಬೇಡ್ಕರ್ ಹಾಗೂ ದಲಿತರಿಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಇದೀಗ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ‘FIR’ ದಾಖಲಾಗಿದೆ. ಹೌದು ಸಚಿನ್ ಪಾಂಚಾಳ ಆತ್ಮಹತ್ಯೆ ಕುರಿತು ಸುದ್ಧಿಗೋಷ್ಠಿ ನಡೆಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರಿಗೆ ಅಪಮಾನವಾಗುವ ರೀತಿಯಲ್ಲಿ ಆಂದೋಲಾ ಶ್ರೀ ಮಾತನಾಡಿದ್ದಾರೆ ಎಂದು ಆರೋಪಿಸಿ ಕಲಬುರಗಿಯ ಬಸವ ನಗರದ ನಿವಾಸಿ, ಹೋರಾಟಗಾರ ಅಮಲಪ್ಪ ಭೀಮಪ್ಪ ಹೊಸಮನಿ ಎಂಬುವವರು ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ವಿರುದ್ಧ ದೂರು ನೀಡಿದ್ದಾರೆ. ಸ್ವಾಮೀಜಿ ವಿರುದ್ಧ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಅಮಲಪ್ಪ ಭೀಮಪ್ಪ ಹೊಸಮನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಸ್ವಾಮೀಜಿ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Read More

ಬೆಳಗಾವಿ : ಇಂದು ದೇಶದಾದ್ಯಂತ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದ ಆಚರಿಸಲಾಗುತ್ತಿದ್ದು, ಇತ್ತ ಬೆಳಗಾವಿಯಲ್ಲಿ ಸಂಕ್ರಾಂತಿ ಹಬ್ಬದಂದೆ ಭೀಕರವಾದ ಕೊಲೆ ನಡೆದಿದೆ ಎಳ್ಳು ಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನೇ ಚಾಕುವಿನಿಂದ ಇರುವುದು ಅಳಿಯನೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಖಾಸಬಾಗದಲ್ಲಿ ನಡೆದಿದೆ. ಹೌದು ಬೆಳಗಾವಿ ನಗರದ ಖಾಸಬಾಗ್ನಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಕುಡಿದ ಮತ್ತಿನಲ್ಲಿ ಅತ್ತೆ ರೇಣುಕಾ (40)ಳನ್ನು ಅಳಿಯ ಶುಭಂ ಬಿರ್ಜೆ ಕೊಲೆ ಮಾಡಿದ್ದಾನೆ. ಪತ್ನಿಯ ಚಿಕಿತ್ಸೆ ಖರ್ಚಿಗೆ ಹಣ ನೀಡುವಂತೆ ಶುಭಂ ಬಿರ್ಜೆ ಅತ್ತೆಗೆ ಆಗಾಗ ಪೀಡಿಸುತ್ತಿದ್ದ. ಇಂದು ಸಂಕ್ರಾಂತಿ ಹಬ್ಬದ ನಿಮಿತ್ಯ ಎಳ್ಳು ಬೆಲ್ಲ ಕೊಡಲು ಬಂದಿದ್ದಾಗ ಅತ್ತೆ ಬಳಿ ಅಳಿಯ ಶುಭಂ ಹಣ ಕೇಳಿದ್ದಾನೆ. ಈ ವೇಳೆ ಹಣ ಕೊಡಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ರೇಣುಕಾ ಗಳನ್ನು ಭೀಕರವಾಗಿಶುಭಂ ಕೊಲೆ ಮಾಡಿದ್ದಾನೆ. ಹಬ್ಬದಂದು ಭೀಕರ ಕೊಲೆ ನೋಡಿ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ. ಘಟನೆ ಕುರಿತು ಬೆಳಗಾವಿಯ ಶಹಪುರ್ ಠಾಣೆಯಲ್ಲಿ…

Read More

ಬೆಂಗಳೂರು : ಇದೇ ಜನವರಿ 26ರಂದು ಗಣರಾಜ್ಯೋತ್ಸವದಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದಂತೆ ಬೆಂಗಳೂರಿನ ವಿವಿಧಡೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಹೌದು ಬಂಧಿತ ಆರೋಪಿಯನ್ನು ಶಿವಾಜಿನಗರದ ಮನ್ಸೂರ್‌ (40) ಎಂದು ತಿಳಿದುಬಂದಿದೆ. ಜನೆವರಿ 9ರಂದು ರಿಯಾಜ್‌ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿಯ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿದ್ದ. ಬಳಿಕ ಈತ 6 ವ್ಯಕ್ತಿಗಳ ಹೆಸರು ಮತ್ತು ಅವರ ಮೊಬೈಲ್‌ ಸಂಖ್ಯೆಗಳ ಮಾಹಿತಿ ನೀಡಿ, ಈ ವ್ಯಕ್ತಿಗಳು ಗಣರಾಜ್ಯೋತ್ಸವದ ದಿನ ನಗರದಲ್ಲಿ ವಿವಿಧೆಡೆ ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ರೀತಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದ. ವಿಷಯ ತಿಳಿದು ಕಂಟ್ರೋಲ್ ರೂಂ ಪಿಎಸ್ಐ ಬೆಂಗಳೂರಿನ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ವಿಧಾನಸೌಧ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಇದೊಂದು ಹೊಸ ಕರೆ…

Read More

ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ಆಲಮಟ್ಟಿ ಎಡದಂಡೆ ಕಾಲುವೆಗೆ ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮಕ್ಕಳನ್ನು ಕಾಲುವೆಗೆ ತಳ್ಳಿದ್ದು ತಾಯಿ ಅಲ್ಲ ತಂದೆ ಎಂದು ಸ್ಪೋಟಕ ವಿಚಾರ ಬಯಲಾಗಿದೆ. ಹೌದು ಈ ಒಂದು ಘಟನೆಯಲ್ಲಿ ತಾಯಿ ಭಾಗ್ಯ ಬದುಕುಳಿದಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಚೇತರಿಸಿಕೊಂಡ ಭಾಗ್ಯ ತನ್ನ ಗಂಡನ ಕರಾಳ ಮುಖವನ್ನು ತೆರೆದಿಟ್ಟಿದ್ದು. ಭಾಗ್ಯಳ ಗಂಡ ನಿಂಗರಾಜ್ ಹಾಗು ಆತನ ಅಣ್ಣತಮ್ಮಂದಿರ ನಡುವೆ ಅಸ್ತಿಯ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ಪತಿ ನಿಂಗರಾಜ್ ತನ್ನ ಮಕ್ಕಳನ್ನು ಕಾಲುವೆಗೆ ತಳ್ಳಿ ಬಳಿಕ ನನ್ನನ್ನು ಕೂಡ ಕಾಲವೆಗೆ ತಳ್ಳಿದ್ದ ಎಂದು ನಿಂಗರಾಜ್ ಭಜಂತ್ರಿಯ ಪತ್ನಿ ಭಾಗ್ಯ ಇದೀಗ ಪತಿಯ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾಳೆ. ಮೃತ ಮಕ್ಕಳು ಕೊಲ್ಹಾರ ತಾಲೂಕಿನ…

Read More

ಬಳ್ಳಾರಿ : ನಿನ್ನೆ ಬೆಂಗಳೂರಿನಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಾಮುಕನೊಬ್ಬ ಭೀಕರವಾಗಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಅಪರಿಚಿತನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಹೌದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಐದು ವರ್ಷದ ಬಾಲಕಿ ಮೇಲೆ ಸೋಮವಾರ ಅಪರಿಚಿತನೊಬ್ಬ ಅತ್ಯಾಚಾರವೆಸಗಿದ್ದಾನೆ.ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆಂದು ಹತ್ತು ವರ್ಷಗಳ ಹಿಂದೆ ತೋರಣಗಲ್ಲಿಗೆ ಬಂದು ನೆಲೆಸಿದ್ದ ಉತ್ತರ ಭಾರತ ದಂಪತಿಯ ಮಗು ಸೋಮವಾರ ಮಕ್ಕಳೊಂದಿಗೆ ಮನೆ ಬಳಿ ಆಟವಾಡುತ್ತಿತ್ತು. ಮಗುವನ್ನು ಪುಸಲಾಯಿಸಿ ಕರೆದೊಯ್ದಿರುವ ದುಷ್ಕರ್ಮಿ ದೌರ್ಜನ್ಯ ವೆಸಗಿದ್ದಾನೆ. ಲೈಂಗಿಕ ದಾಳಿಯಿಂದಾಗಿ ಮಗುವಿಗೆ ಆಂತರಿಕ ಗಾಯವಾಗಿದ್ದು, ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಬಳ್ಳಾರಿಯ ಸರ್ಕಾರಿ ಆರೋಗ್ಯ ಸಂಸ್ಥೆಯೊಂದಕ್ಕೆ ಮಗುವನ್ನು ದಾಖಲಿಸಲಾಯಿತು ಎಂದು ಗೊತ್ತಾಗಿದೆ. ಸೋಮವಾರ ರಾತ್ರಿಯೇ ಮಗುವಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದ್ದು ಮಗು ಅಪಾಯದಿಂದ ಪಾರಾಗಿದೆ.ಘಟನೆ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ…

Read More

ಬೆಂಗಳೂರು : ಈಗಾಗಲೇ ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಕೇಸ್ ನಲ್ಲಿ ಗಂಭೀರವಾದ ಆರೋಪ ಎದುರಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿ ಬರುತ್ತಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡ ವಿರುದ್ಧ ಆರೋಪ ಕೇಳಿ ಬಂದಿದೆ. ಈ ಕುರಿತು ದಯಾಮರಣ ಕೋರಿ ವೆಂಡರ್ಸ್ ಗಳು ಇದೀಗ ಪತ್ರ ಬರೆದಿದ್ದಾರೆ. ಹೌದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಈ ಕುರಿತು ಪತ್ರ ಬರೆದಿದ್ದು ವೆಂಡರ್ಸ್ ಗಳು ಆತ್ಮಹತ್ಯೆ ಮಾಡಿಕೊಂಡರೆ ನಾಲ್ವರು ಹೊಣೆ. ಪ್ರಿಯಾಂಕ್ ಖರ್ಗೆ ಸೇರಿ ನಾಲ್ವರು ಹೊಣೆ ಎಂದು ಪತ್ರ ಬರೆದಿದ್ದಾರೆ. ವೆಂಡರ್ಸ್ ಗಳ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. 400 ರಿಂದ 500 ವೆಂಡರ್ಸ್ ಗಳಿಗೆ ಬಿಲ್ ಪಾವತಿ ಬಾಕಿ ಇದೆ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಕಷ್ಟವನ್ನು ಆಲಿಸುತ್ತಿಲ್ಲ. ಯಾರಾದರೂ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ…

Read More

ಉತ್ತರಪ್ರದೇಶ : 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐತಿಹಾಸಿಕ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ಒಂದು ಕುಂಭಮೇಳದಲ್ಲಿ ಕರ್ನಾಟಕದ ಬ್ರಾಂಡ್ ನಂದಿನಿ ಹಾಲು ಇದೀಗ ಉತ್ತರಪ್ರದೇಶದಲ್ಲೂ ಧೂಳೆಬ್ಬಿಸಿದೆ. ಹೌದು ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲು ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ. ಮಹಾಕುಂಭಮೇಳದಲ್ಲಿ ಕೆಎಂಎಫ್ ಸಹಭಾಗಿತ್ವದಲ್ಲಿ 10 ಟೀ ಪಾಯಿಂಟ್ ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಜೊತೆಗೆ ನಂದಿನಿ ಹಾಲಿನ ಬಳಕೆ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಈ ಟೀ ಪಾಯಿಂಟ್‌ನಿಂದ ಸುಮಾರು ಒಂದು ಕೋಟಿ ಟೀ ಮಾರಾಟ ಮಾಡುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ. ಈ ಮೂಲಕ ಒಂದು ಮೇಳದಲ್ಲಿ ಅತೀ ಹೆಚ್ಚು ಟೀ ಮಾರಾಟ ಮಾಡಿದ ಸಂಸ್ಥೆಯೆಂದು ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಿದೆ. ಇನ್ನೂ ಮಾಹಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದೆ. ಫೆ.26ರ ಮಹಾ ಶಿವರಾತ್ರಿವರೆಗೂ ಮಹಾಕುಂಭಮೇಳ ನಡೆಯಲಿದೆ.ಪ್ರಯಾಗ್‌ರಾಜ್‌ನಲ್ಲಿ…

Read More

ಉತ್ತರಕನ್ನಡ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೂ ಚಿರತೆ ನುಗ್ಗಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಾಗೇರಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿವಾಸದಲ್ಲಿ ಈ ಒಂದು ಘಟನೆ ನಡೆದಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿ ಇರುವಾಗಲೇ ಈ ಒಂದು ಘಟನೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಚಿರತೆ ವಿಶ್ವೇಶ್ವರ ಹೆಗಡೆ ಮನೆಗೆ ನುಗ್ಗಿದೆ. ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿದ್ದ ಸಾಕು ನಾಯಿಗಳನ್ನು ಚಿರತೆ ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ನಾಯಿಗಳು ಚಿರತೆಯಿಂದ ತಪ್ಪಿಸಿಕೊಂಡು ಓಡಿ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read More