Subscribe to Updates
Get the latest creative news from FooBar about art, design and business.
Author: kannadanewsnow05
ಕೋಲಾರ : ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ಹಿಂದೆ ಒತ್ತುವರಿ ಮಾಡಿಕೊಂಡಂತಹ ಜಮೀನು ಸರ್ವೆ ಮಾಡಲು ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಇಂದು ಡಿಸಿ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ. ಸ್ಥಳದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಪಸ್ಥಿತಿಯಿದ್ದು, ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದಿದೆ.ಸರ್ವೆ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ರಮೇಶ್ ಕುಮಾರ್ ಹೇಳಿದ್ದಾರೆ.ಹೈಕೋರ್ಟ್ ನಲ್ಲಿ 2002 ರಲ್ಲಿ ನಾನೇ ಜಂಟಿ ಸರ್ವೆ ಮಾಡಿ ಜಾಗ ಗುರುತಿಸಿ ಕೊಡುವಂತೆ ಮನವಿ ಮಾಡಿದ್ದೇನೆ ನನಗೆ ಒಂದು ಇಂಚು ಅರಣ್ಯ ಭೂಮಿ ಬೇಡ.ನೀವು ಸರ್ವೆ ಮಾಡಿ ಜಾಗ ಗುರುತಿಸಿ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ವಲಯದ ಜಿನಗಲಕುಂಟೆ ಗ್ರಾಮದಲ್ಲಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಸಮೀಕ್ಷೆ ಸಂಖ್ಯೆಯ ಅಡಿಯಲ್ಲಿ ಭೂಮಿಯ ಮೇಲೆ ಜಂಟಿ…
ಹುಬ್ಬಳ್ಳಿ : ಹುಬ್ಬಳ್ಳಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಫೋಟಕವಾದ ಹೇಳಿಕೆ ನೀಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಎಷ್ಟೇ ಪ್ಯಾಚ್ ಅಪ್ ಮಾಡಿದರು ಅದು ಆಗಲ್ಲ. ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಟಕವಾಗಿದೆ.14 ನಿವೇಶನ ಅಷ್ಟೇ ಅಲ್ಲ ಮುಡಾದಲ್ಲಿ 50ಲ್ ಸಾವಿರ ಕೋಟಿಗೂ ದೊಡ್ಡ ಹಗರಣ ನಡೆದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಡಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಹಗರಣ ನಡೆದಿದೆ. ಇಂದು ದೆಹಲಿಗೆ ತೆರಳಿದ್ದು ಅಲ್ಲಿ, ಯಾವುದೇ ಪ್ಯಾಚಪ್ ಆಗುವ ಸಾಧ್ಯತೆ ಇಲ್ಲ ಸಿದ್ದರಾಮಯ್ಯ ರಾಜೀನಾಮೆ ಇಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನಿವೇಶನಗಳನ್ನು ಕೊಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ಹೋರಾಟ ಮಾಡುತ್ತಿದ್ದಾರೆ. ಪೂರಕವಾದ ತೀರ್ಪು ಬರುತ್ತದೆ ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು.…
SHOCKING : ಕಲಬುರ್ಗಿಯಲ್ಲಿ ಘೋರ ದುರಂತ : ಸ್ನೇಹಿತರ ಜೊತೆ ಮಾತನಾಡುತ್ತ ಕುಳಿತಿದ್ದಾಗಲೇ ವಿದ್ಯಾರ್ಥಿಗೆ ‘ಹೃದಯಾಘಾತ’!
ಕಲಬುರ್ಗಿ : ಇತ್ತೀಚಿಗೆ ಹಾರ್ಟ್ ಅಟ್ಯಾಕ್ ಎನ್ನುವುದು ಸಾಮಾನ್ಯವಾದ ಕಾಯಿಲೆಯಾಗಿಬಿಟ್ಟಿದೆ. ಇದೀಗ ಹೃದಯಾಘಾತದಿಂದ17 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ನಡೆದಿದೆ. ಹೃದಯಾಘಾತದಿಂದ ಮೃತಪಟ್ಟಿರುವ ವಿದ್ಯಾರ್ಥಿಯನ್ನು ನಾಲವಾರ ಗ್ರಾಮದ ಕೊರೇಶ್ ಸಿದ್ದಣ್ಣ ಮದ್ರಿ (17) ಎಂದು ಗುರುತಿಸಲಾಗಿದೆ. ಮೃತ ಸಿದ್ದಣ್ಣ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಸ್ನೇಹಿತರ ಜೊತೆ ಕುಳಿತಾಗ ಕೋರೇಶ್‌ಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಗೆಳೆಯನೊಬ್ಬ ಕೋರೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಈ ಮಧ್ಯೆ ಬೈಕ್ ಮೇಲೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಏಕೈಕ ಮಗನನ್ನು ಹೊಂದಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆ ನಡೆಸಿದ ಜಡ್ಜ್ ಜನವರಿ 17ರಂದು ಬಿಎಸ್ ಯಡಿಯೂರಪ್ಪ ಪರ ವಕೀಲರ ವಾದಕ್ಕೆ ವಿಚಾರಣೆ ನಿಗದಿ ಪಡಿಸಿ, ಬಿಎಸ್ ಯಡಿಯೂರಪ್ಪ ಅವರ ಖುದ್ದು ಹಾಜರಾತಿಗೆ ನೀಡಿದ ವಿನಾಯಿತಿ ವಿಸ್ತರಿಸಿ ಆದೇಶ ಹೊರಡಿಸಿದರು. ವಿಚಾರಣೆಯ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಎಸ್‍ಪಿಪಿ ರವಿವರ್ಮ ಕುಮಾರ್ ವಾದ ಮಂಡಿಸಿದ್ದು, ಪೊಲೀಸರಿಗೆ ಬಾಲಕಿಯ ಹೇಳಿಕೆ ಉಲ್ಲೇಖಿಸಿ ವಾದ ಮಂಡನೆ ಆರಂಭಿಸಿದರು. ಹಳೆ ಪೋಕ್ಸೋ ಕೇಸ್ ಬಗ್ಗೆ ನ್ಯಾಯಕ್ಕಾಗಿ ಬಾಲಗೆಯೊಂದಿಗೆ ತಾಯಿ ತೆರಳಿದ್ದರು. ಆಗ ಬಿ ಎಸ್ ಯಡಿಯೂರಪ್ಪ ಬಾಲಕಿಯನ್ನು ರೂಮ್ ಒಳಗೆ ಕರೆದೋಯ್ದು ಲಾಕ್ ಮಾಡಿದರು. ಅವರು ಬಾಲಕಿಯ ಬಳಿ ಬಂದು ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವೇ ಎಂದರು. ಹಿಂದಿನ ಪೋಕ್ಸೋ ಕೇಸ್ ನಡೆದಾಗ ನಿನಗೆ ವಯಸ್ಸು ಎಷ್ಟು ಎಂದು ಕೇಳಿದರು. ಆರೂವರೆ ವರ್ಷ…
ಬೆಂಗಳೂರು : ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ದಯಾ ಮರಣ ಕೋರಿ ಪತ್ರ ಬರೆದಿರುವ ಕುರಿತಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನೀವು ಏಕೆ ದಯಮರಣ ಕೋರಿ ಪತ್ರ ಬರೆಯುತ್ತೀರಿ ತಪ್ಪಿರುವುದು ಸರ್ಕಾರದಲ್ಲಿ ಒಂದು ವರ್ಷದವರೆಗೆ ನೀವು ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯದ ಗುತ್ತಿಗೆದಾರರಿಗೆ ಕರೆ ನೀಡಿದರು. ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಯಾರಿಗೂ ಈ ರೀತಿ ತೊಂದರೆ ಕೊಟ್ಟಿಲ್ಲ. ಈ ರಾಜ್ಯವನ್ನು ನೀವು ಉಳಿಸಬೇಕು ಎಂದು ನಿಮ್ಮಲ್ಲಿ ಒಗ್ಗಟ್ಟು ಇದ್ದರೆ ಗುತ್ತಿಗೆದಾರರಿಗೆ ಮನವಿ ಮಾಡುತ್ತೇನೆ ಒಂದು ವರ್ಷದವರೆಗೆ ಕೆಲಸ ಮಾಡಬೇಡಿ ಎಂದು ಅವರು ಕರೆ ನೀಡಿದರು. ಆಂಧ್ರಪ್ರದೇಶದವರನ್ನಾದರೂ ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಯಾರನ್ನಾದರೂ ಕರೆದುಕೊಂಡು ಬಂದು ಕೆಲಸ ಮಾಡಿಸಲಿ ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ. ಇವೆಲ್ಲ ಸರಿಯಾಗಬೇಕು ಅಂದರೆ ಗುತ್ತಿಗೆದಾರರು ಕೆಲಸ ಮಾಡಬೇಡಿ. ಒಂದು ವರ್ಷ…
ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಡಿನ್ನರ್ ಪಾರ್ಟಿ ಭಾರಿ ಸದ್ದು ಮಾಡಿದ್ದು ಈ ವೇಳೆ ಇದಕ್ಕೆ ಬ್ರೇಕ್ ಹಾಕಲು, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿ ಸಚಿವರಿಗೆ ಕೆಲವು ಸೂಚನೆ ನೀಡಿದ್ದರು. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಹೈಕಮಾಂಡ್ ನಿರ್ಧಾರ ಮಾಡಲಿ. ಸುರ್ಜೆವಾಲ ಜೊತೆಗೆ ಪಕ್ಷದ ಆಗುಹೋಗುಗಳು ಮತ್ತು ಸಂಘಟನೆಯ ಬಗ್ಗೆ ಚರ್ಚೆ ಮಾಡಲಾಗಿದೆ.ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಅಥವಾ ಇವರನ್ನೇ…
ಮೈಸೂರು : ಕರ್ನಾಟಕ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಹಾಸನದ ಮಾಜಿ ಶಾಸಕ ಪ್ರೀತಂ ಜೆ ಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನುವಂತಹ ಸುದ್ದಿ ಇದೀಗ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಕೆಲ ದಿನಗಳಿಂದ ಬಿಜೆಪಿ ಕಾರ್ಯಕ್ರಮಗಳಲ್ಲಿ ಮತ್ತು ಬಿಜೆಪಿ ವೇದಿಕೆಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.ಬಿಜೆಪಿಯ ಯುವ ಮುಖಂಡರಲ್ಲಿ ಒಬ್ಬರಾಗಿರುವ ಪ್ರೀತಂ ಜೆ ಗೌಡ ಚಾಲ್ತಿಯಲ್ಲಿರುವ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಸರಿಯಾದ ಯಾವುದೇ ಭವಿಷ್ಯವಿಲ್ಲ ಎಂದು ಕ್ರಮೇಣ ಪಕ್ಷದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಪ್ರೀತಂ ಗೌಡ ಆಪ್ತರೊಬ್ಬರು ಬಹಿರಂಗ ಪಡಿಸಿದ್ದು, ಇದು ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಆಘಾತವಾಗಿದೆ. ಬಿಜೆಪಿಯ ಯುವ ಮುಖಂಡರಲ್ಲಿ ಪ್ರಮುಖರಾಗಿರುವ ಪ್ರೀತಂ ಗೌಡ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನನಗೆ ಯಾವುದೇ ಭವಿಷ್ಯವಿಲ್ಲ…
ಬೆಂಗಳೂರು : ಇತ್ತೀಚಿಗೆ ಮನುಷ್ಯ ಮಾನವೀಯತೆ ಅನ್ನೋದನ್ನೇ ಮರೆತುಬಿಟ್ಟಿದ್ದಾನೆ. ಇನ್ನು ಪ್ರಾಣಿಗಳಲ್ಲಿ ಮಾನವೀಯತೆ ಪ್ರೀತಿ ಕರುಣೆ ಇದೆ ಹೊರತು ಮನುಷ್ಯ ರಾಕ್ಷಸರಿಗಿಂತಲೂ ಕಡೆಯಾಗಿದ್ದಾನೆ.ಇದೀಗ ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ರಸ್ತೆ ಮೇಲೆ ತನ್ನ ಪಾಡಿಗೆ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿ ಚಾಲಕನೊಬ್ಬ ವ್ಯಕ್ತಿ ಮೆರೆದಿರುವ ಘಟನೆ ವರದಿಯಾಗಿದೆ. ಹೌದು ಬೀದಿ ನಾಯಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ.4 ರಂದು ಸಹಕಾರನಗರದ ಎಫ್ ಬ್ಲಾಕ್‌ನ 14ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ದೀಪಕ್ ಧನಂಜಯ್ ಶೋಧನ್ ಎಂಬುವವರು ನೀಡಿದ ದೂರಿನ ಅನ್ವಯ ಆರೋಪಿ ಥಾರ್ ಕಾರು ಚಾಲಕನ ವಿರುದ್ಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.4ರ ರಾತ್ರಿ ವೇಗವಾಗಿ ಬಂದ ಥಾರ್ ಚಾಲಕ, ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಮಲಗಿದ್ದ ನಾಯಿಮರಿಗಳತ್ತ ಕಾರು ನುಗ್ಗಿಸಿದ್ದಾನೆ. ಈ ವೇಳೆ ಕಾರಿನ ಚಕ್ರಕ್ಕೆ ಸಿಕ್ಕ ನಾಯಿಯೊಂದು ಸ್ಥಳದಲ್ಲೇ ಒದ್ದಾಡಿ ಬಳಿಕ ಪಕ್ಕದ ಚರಂಡಿಯಲ್ಲಿ ಪ್ರಾಣಬಿಟ್ಟಿದೆ. ನಾಯಿಗಳಿಗೆ…
ಧಾರವಾಡ : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ತನಿಖೆಯ ವಿಚಾರವಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ಈ ಒಂದು ಅರ್ಜಿಯ ವಿಚಾರಣೆಯನ್ನು ನ್ಯಾ.ಎಂನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿ ಜನವರಿ 27 ಕ್ಕೆ ಮುಂದೂಡಿ ಆದೇಶ ಹೊರಡಿಸಿತು. ಹೌದು ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ ಅರ್ಜಿ ವಿಚಾರಣೆ ನಡೆದಿದ್ದು, ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಮಣಿಂದರ್ ಸಿಂಗ್ ಹಾಜರಾಗಿದ್ದು, ಸ್ನೇಹಮಯಿ ಕೃಷ್ಣ ಅವರ ಪರವಾಗಿ ಮಣಿಂದರ್ ಸಿಂಗ್ ಅವರು ವಾದ ಮಂಡಿಸಿದರು. ವಿಚಾರಣೆ ಆರಂಭದ ವೇಳೆಯಲ್ಲಿ ನ್ಯಾ.ಎಂ ನಾಗಪ್ರಸನ್ನ ಅವರು ಸಿಬಿಐ ತನಿಖೆಗೆ ವಹಿಸಬೇಕೆ ಬೇಡವೇ ಎಂಬ ಬಗ್ಗೆ ವಾದ ಸೀಮಿತಗೊಳಿಸಿ ಎಂದು ಎರಡು ಕಡೆ ವಕೀಲರಿಗೆ ಸೂಚನೆ ನೀಡಿದರು. ತನಿಖೆ ನಿಷ್ಪಕ್ಷಪಾತವಾಗಿರಬೇಕು ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಭಾಗಿಯಾಗಿರುವಾಗ ನಿಸ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ…
BREAKING : ಸಂಕ್ರಾಂತಿ ದಿನವೇ ನಡೆಯಿತು ಘೋರ ದುರಂತ : ಪ್ರತ್ಯೇಕ ಘಟನೆಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದ ಮೂವರ ಸಾವು!
ಹಾವೇರಿ : ನಿನ್ನೆ ಸಂಕ್ರಾಂತಿ ಹಬ್ಬದ ದಿನದಂದು ಘೋರವಾದ ದುರಂತ ಸಂಭವಿಸಿದ್ದು, ಪ್ರತ್ಯೇಕ ಘಟನೆಯಲ್ಲಿ ಪುಣ್ಯ ಸ್ನಾನಕ್ಕೆ ಎಂದು ನದಿಗೆ ಇಳಿದಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಹಾವೇರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಇಳಿದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಕಣ ಗ್ರಾಮದ ಬಳಿ ವರದಾ ನದಿಯಲ್ಲಿ ಇಳಿದ ರಮೇಶ ಕಡ್ಡೇರ(32) ನೀರು ಪಾಲಾಗಿದ್ದಾರೆ. ಅದೇ ರೀತಿಯಾಗಿ ಕೊಪ್ಪಳ ತಾಲೂಕಿನ ಕಾತರಕಿ ಜಾಕ್ವೆಲ್ ಸಮೀಪ ಸ್ನಾನ ಮಾಡಲು ಹೋಗಿದ್ದ ಶೇಖರಗೌಡ ನಾಗನಗೌಡ್ರ(30) ಎಂಬುವರು ನೀರು ಪಾಲಾಗಿದ್ದಾರೆ.ಇನ್ನು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ತಿಪ್ಪೇಶ್(21) ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.














