Subscribe to Updates
Get the latest creative news from FooBar about art, design and business.
Author: kannadanewsnow05
ಚಿಕ್ಕಮಗಳೂರು : ಹುಟ್ಟಿದ ಎರಡೇ ದಿನಕ್ಕೆ ಮಗುವೊಂದು ತಾಯಿಗೆ ಬೇಡವಾಗಿದ್ದು, ಪಾಪಿ ತಾಯಿಯೊಬ್ಬಳು ತನ್ನ ಎರಡು ದಿನದ ಪುಟ್ಟ ಕಂದಮ್ಮನನ್ನು ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ. ಹೌದು ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಕಂದಮ್ಮನನ್ನು ಹೆತ್ತ ತಾಯಿಯೇ ಬಿಟ್ಟು ಹೋಗಿದ್ದು, ಗುರುವಾರ ಬೆಳಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದೆ. ಸುಮಾರು ಗಂಟೆಗಳವರೆಗೂ ಮಗು ಅಳುತ್ತಿರುವುದು ಕೇಳಿಸಿದೆ. ಈ ವೇಳೆ ಚಂದ್ರಮ್ಮ ತಮ್ಮ ಮಗಳೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ ತಾಯಿಯೊಬ್ಬಳು ಎರಡು ದಿನದ ಹಸುಗೂಸನ್ನು ಕಾಫಿ ತೋಟದಲ್ಲಿ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು…
ಉಡುಪಿ : ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿಯೊಬ್ಬಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಲ್ಲಿ ನಡೆದಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಕುಂದಾಪುರದ ಕೊರಗ ಎಂಬವರ ಮಗಳು ಹಾಗೂ ಗಂಗಾನಾಡು ನಿವಾಸಿ ವಿಷ್ಣು ಎಂಬವರ ಪತ್ನಿ ರಂಜಿತಾ (28) ಎಂದು ಗುರುತಿಸಲಾಗಿದೆ.ಇವರು ಜ.13ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ಹುಡುಕಾಡಿ ದಾಗ ಆಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ರಾಯಚೂರು : ಮನೆಯಲ್ಲೇ ಅಕ್ರಮವಾಗಿ ಕೆಮಿಕಲ್ ನಿಂದ ಸೆಂದಿ ತಯ್ಯಾರಿಸುತ್ತಿದ್ದ ವೇಳೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು 300 ಲೀಟರ್ ಕೆಮಿಕಲ್ ಹಾಗೂ ಸೆಂದಿ ಜಪ್ತಿ ಮಾಡಿದ್ದು ಅಲ್ಲದೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಮಂಗಳವಾರ ಪೇಟೆ ಬಡಾವಣೆಯಲ್ಲಿ ಈ ದಾಳಿ ನಡೆದಿದೆ. ರವಿ, ವಿಶ್ವನಾಥ, ಮಾರೆಪ್ಪ ಎಂಬುವರ ಮನೆಗಳ ಮೇಲೆ ದಾಳಿ ನಡೆಸುವ ಮೂಲಕ ಶೋಧ ಮಾಡಿದ್ದು, ಈ ವೇಳೆ ಕೆಮಿಕಲ್ ಸೇಂದಿ ಪತ್ತೆಯಾಗಿದೆ. ನೀರಿನ ಬಾಟಲ್ನಲ್ಲಿ ತುಂಬಿ ಇಡಲಾಗಿದ್ದ ಸುಮಾರು 300 ಲೀಟರ್ ಕೆಮಿಕಲ್ ಸೇಂದಿ ಕಂಡು ಬಂದಿದ್ದು, ಸೇಂದಿ ಜಪ್ತಿ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.
ಹಾಸನ : ರೆಸಾರ್ಟ್ ಮಾಲೀಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಳಿಸಾರೆ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರೆಸಾರ್ಟ್ ಸಿಬ್ಬಂದಿ ಕಿರಣ್ ಕುಮಾರ್ ಅವರ ಮೇಲೆ ಹಲ್ಲೆಯ ಆರೋಪ ಕೇಳಿಬಂದಿದೆ. ಮಾಲೀಕ ವಿಜಯಕುಮಾರ್ ಎಂಬಾತ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಮಾಲೀಕನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಹಾಸನದ ಸಕಲೇಶಪುರದ ಬಿಳಿಸಾರೆ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಹಲ್ಲೆಯ ಸಂಬಂಧ ರೆಸಾರ್ಟ್ ಮಾಲೀಕ ವಿಜಯಕುಮಾರ್ ಮೇಲೆ FIR ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮುಂಬೈ : ಇಂದು ಬೆಳಗಿನ ಜಾವ ಮುಂಬೈನ ಬಾಂದ್ರಾದ ಸತ್ಗುರು ಶರಣ್ ಕಟ್ಟಡದಲ್ಲಿರುವ ತಮ್ಮ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ಮಾಡಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ಮುಂಬೈ ವಲಯ ಡಿಸಿಪಿ ದೀಕ್ಷಿತ್ ಗೆಡಂ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆರೋಪಿಗಳ ಪತ್ತೆಗೆ 10 ತಂಡ ರಚನೆ ಮಾಡಲಾಗಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಓರ್ವನ ಗುರುತು ಪತ್ತೆಯಾಗಿದ್ದು ಆರೋಪಿಗಳು ರಾತ್ರಿ ಸೈಫ್ ಅಲಿಖಾನ್ ಮನೆಗೆ ನುಗ್ಗಿದ್ದಾರೆ. ದಾಳಿ ಬಳಿಕ ಫೈರ್ ಎಕ್ಸಿಟ್ ಮನೆಯ ಮೂಲಕ ಆರೋಪಿಗಳು ಪರಾರಿ ಆಗಿದ್ದಾರೆ.ಮೇಲ್ನೋಟಕ್ಕೆ ಇದು ದರೋಡೆ ರೀತಿ ಕಾಣುತ್ತದೆ ಆರೋಪಿಗಳ ಪತ್ತೆಗೆ 10 ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ನಟ ಸೈಫ್ ಅಲಿ ಖಾನ್ ಪ್ರಸ್ತುತ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕುಟುಂಬಸ್ಥರು…
ಹುಬ್ಬಳ್ಳಿ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿಹಾರ ಮೂಲದ ವ್ಯಕ್ತಿ ಒಬ್ಬ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ನಡೆದಿತ್ತು. ಘಟನೆ ಸಂಭಂದ ಪೊಲೀಸರು ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಈ ಒಂದು ಘಟನೆ ಮಹೋತ್ಸವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಹೊಟ್ಟೆ ಬಗೆದ ಸ್ಥಿತಿಯಲ್ಲಿ 7 ತಿಂಗಳ ಕರುವಿನ ಶವ ಪತ್ತೆಯಾಗಿದೆ. ಹೌದು ಹುಬ್ಬಳ್ಳಿ ನಗರದ ಬಣಗಾರ ಲೇಔಟ್‌ನಲ್ಲಿ ಹೊಟ್ಟೆ ಬಗೆದ ಸ್ಥಿತಿಯಲ್ಲಿ ಏಳು ತಿಂಗಳ ಕರುವಿನ ಶವ ಪತ್ತೆಯಾಗಿದೆ. ಕರು ಶರಣಪ್ಪ ಬಾರಕೇರ ಎಂಬುವವರಿಗೆ ಸೇರಿದ್ದು, ಕರುವಿನ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಚ್ಚಲು ಕೊಯ್ದ ಪ್ರಕರಣದ ಚರ್ಚೆಗಳು ಇನ್ನೂ ಸಹ ನಡೆಯುತ್ತಿರುವಾಗಲೇ ಇಂತಹದ್ದೇ ಮತ್ತೊಂದು ಕ್ರೌರ್ಯದ ಪ್ರಕರಣ ನಡೆದದ್ದು ಬೆಚ್ಚಿ ಬೀಳಿಸಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪಶು ವೈದ್ಯರು ಸಹ ಭೇಟಿ ನೀಡಿ, ಸತ್ತ ಕರುವಿನ ಶವವನ್ನು ಪರೀಕ್ಷೆ ಮಾಡಿದ್ದಾರೆ.…
ಕೊಪ್ಪಳ : ಒಂದು ಕಡೆ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಎಂದು ಹೇಳಿಕೆ ನೀಡಿದ್ದರೆ, ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಸಿಎಂ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಿಳಿಸಿದರು. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಬಂದಿದೆ. ಕೊಪ್ಪಳದಲ್ಲಿ ಬಿಜೆಪಿ ಇದನ್ನು ಹೇಳಿದರೆ ಭವಿಷ್ಯ ನುಡಿಯುತ್ತಾರಾ ಅಂತ ಕೇಳುತ್ತಾರೆ. ಆದರೆ ನಮಗೆ ಸಿದ್ದರಾಮಯ್ಯ ಮೇಲೆ ಯಾವುದೇ ದ್ವೇಷವಿಲ್ಲ. ರಾಜ್ಯದ ಜನರು ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಆಡಳಿತ ಪಕ್ಷದ ಶಾಸಕರಿಗೂ ಇದೇ ಭಾವನೆ ಇದೆ ಎಂದರು. ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮೊನ್ನೆ 10 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಆದರೆ 10 ಕೋಟಿ ಹಣ ನಮ್ಮ ಕ್ಷೇತ್ರಕ್ಕೆ ಬರಲು ಎಷ್ಟು ತಿಂಗಳು ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ…
ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಡಗುಂದಿ ಠಾಣೆಯಲ್ಲಿ ತಾಯಿ ಭಾಗ್ಯಶ್ರೀ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಹೌದು ಎರಡು ದಿನಗಳ ಹಿಂದೆ ನಿಡಗುಂದಿಯ ಬೇನಾಳ್ ಗ್ರಾಮದಲ್ಲಿ ಆಲಮಟ್ಟಿ ಎಡದಂಡೆಯಲ್ಲಿ ತಾಯಿಯೊಬ್ಬಳು ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಇದೀಗ ಪ್ರತ್ಯಕ್ಷದರ್ಶಿಯಾದ ಫಾರೆಸ್ಟ್ ಗಾರ್ಡ್ ನಾಗೇಶ್ ಹೇಳಿಕೆಯನ್ನು ಪಡೆದಿರುವ ಪೊಲೀಸರು ನಿಡಗುಂದಿ ಠಾಣೆಯಲ್ಲಿ ಸೆಕ್ಷನ್ 302ರ ಅಡಿ ಕೊಲೆ ಕೇಸ್ ದಾಖಲಿಸಿದ್ದಾರೆ.
ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಸಂಭವಿಸಿದ್ದು ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮೈಸೂರು ನಾಗನಹಳ್ಳಿ ಗ್ರಾಮದ ಎಸ್ ಶ್ರೇಯಸ್ ಎಂದು ತಿಳಿದುಬಂದಿದೆ. ಈತ ಪಾಲಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಬಿ.ಇ ಓದುತ್ತಿದ್ದ. ಮೂವರು ಸ್ನೇಹಿತರ ಜೊತೆಗೆ ಬಲಮುರಿಗೆ ಈಜಲೆಂದು ತೆರಳಿದ್ದ ವೇಳೆ ಘಟನೆ ನಡೆದಿದೆ. ಮೂವರು ಸ್ನೇಹಿತರೊಂದಿಗೆ ತೆರಳಿದ ಶ್ರೇಯಸ್ ನನಗೆ ಈಜಲು ಬರುತ್ತದೆ ಎಂದು ನದಿಗೆ ಇಳಿದಿದ್ದ. ಈ ವೇಳೆ ಇಬ್ಬರು ಸ್ನೇಹಿತರು ನದಿ ದರದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ನದಿಯಲ್ಲಿನ ಸುಳಿಗೆ ಸಿಲುಕಿ ಶ್ರೇಯಸ್ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ನಿನ್ನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 6 ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ವ್ಯಕ್ತಿ ಒಬ್ಬ ಅತ್ಯಾಚಾರ ಮಾಡಿದ್ದು ಅಲ್ಲದೆ ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಈ ಒಂದು ಘಟನೆ ವಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಬೆಳಗಾವಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಮೂವರು ರಾಕ್ಷಸರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ. ಹೌದು ಈ ಒಂದು ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಬಂಧಿತರು. ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ.ಅಲ್ಲಿ ಆರೋಪಿ ಅಭಿಷೇಕ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು.…














