Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮುಡಾದಲ್ಲಿ ನಡೆದಿರುವಂತಹ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿ, ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಬಿಜೆಪಿಗರು ಆರ್ ಎಸ್ ಎಸ್ ಹೇಳಿದಂತೆ ಕೇಳುತ್ತಾರೆ ಎಂದು ಶಬ್ ಸಿದ್ದರಾಮಯ್ಯ ವಗ್ಗರಣೆ ನಡೆಸಿದರು. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ. ಬಿಜೆಪಿಗರು ಆರ್ ಎಸ್ ಎಸ್ ನವರು ಹೇಳಿದಂತೆ ಕೇಳುತ್ತಿದ್ದಾರೆ. ನಮಗೆ ಸೇರಿದ ಜಾಗವನ್ನು ಮೂಡಾದವರು ಒತ್ತುವರಿ ಮಾಡಿದ್ದಾರೆ. ನಮಗೆ ಸೇರಿದ 3.16 ಎಕರೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. 50:50 ಅನುಪಾತದಲ್ಲಿ ಜಾಗ ಕೊಡಿ ಎಂದು ಮುಡಾಗೆ ಹೇಳಿದ್ದೆವು. ಇಂತಹ ಜಾಗದಲ್ಲಿ ಸೈಟ್ ಕೊಡಿ ಎಂದು ನಾವು ಹೇಳಿದ್ವಾ? ಎಂದು ಪ್ರಶ್ನಿಸಿದರು. ಜಾಗ ಕೊಟ್ಟಾಗ 2021 ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದರು. ಈಗ ಅವರೇ ಆರೋಪ ಮಾಡಿದರೆ ಹೇಗೆ? ಇಂತಹ ಕಡೆಯಲ್ಲೇ ಜಾಗ ಕೊಡಿ ಎಂದು ನಾವು ಹೇಳಿದ್ವಾ? ಹಾಗಾದರೆ 3.65 ಜಾಗಕ್ಕೆ ಪರಿಹಾರ ಕೊಡಲಿ.ಕಾನೂನು ಪ್ರಕಾರ 62 ಕೋಟಿ ರೂಪಾಯಿ…
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಶಾಂತಿನಗರ ಆರ್ ಟಿ ಓ ಕಚೇರಿಗೆ ಆಟೋ ಹಾಗೂ ಚಾಲಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಘಟನೆ ನಡೆಯಿತು. ಕರ್ನಾಟಕ ರಾಜ್ಯ ಖಾಸಗಿ ಚಾಲಕರ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರಿನ ಶಾಂತಿನಗರದ ಆರ್ ಟಿ ಓ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎಲೆಕ್ಟ್ರಾನಿಕ್ ಬೈಕ್, ಟ್ಯಾಕ್ಸಿಗೆ ಸರ್ಕಾರ ಅನುಮತಿ ಕೊಟ್ಟಿತ್ತು. ಮತ್ತೆ ಸರ್ಕಾರ ಅದನ್ನು ಹಿಂಪಡೆದಿತ್ತು. ಓಲಾ ಉಬರ್ ಅಥವಾ ಇತರೆ ಕಂಪನಿಗಳಾಗಿರಬಹುದು ಗ್ರಾಹಕರಿಂದ ದುಪ್ಪಟ್ಟು ಹಣ ಪಡೆದುಕೊಳ್ಳದಿದ್ದರು. ಹೀಗಾಗಿ ಒಟ್ಟು ಐದು ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಫೆಬ್ರವರಿಯಲ್ಲಿರುವುದು ಜನವರಿ ಆಗಿರಬಹುದು ಎರಡು ಆದೇಶಗಳನ್ನು ಹೊರಡಿಸಿದೆ. ಆದರೆ ಅದನ್ನು ಇಂಪ್ಲಿಮೆಂಟ್ ಮಾಡುವುದಕ್ಕೆ ರಾಜ್ಯ ಅಧಿಕಾರಿಗಳು ಮುಂದಾಗಿಲ್ಲ. ಹಾಗಾಗಿ ಚಾಲಕರು ಆರ್ಟಿಓ ಕಚೇರಿ ಮುತ್ತಿಗೆ ಹಾಕಿ ಪೊಲೀಸರು ಮತ್ತು ಚಾಲಕರ ತಳ್ಳಟ,ನೂಕಾಟ ನಡೆಯಿತು. ಶಾಂತಿನಗರದ ಆರ್ ಟಿ ಓ ಕಚೇರಿಗೆ ಚಾಲಕರ ಮುತ್ತಿಗೆ ಹಾಕಿದ್ದು, ಬಿಟಿಎಸ್ ರೋಡ್ ಬ್ಲಾಕ್ ಮಾಡಿ…
ಬೆಂಗಳೂರು : ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೊಡೆ ತಟ್ಟಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ನೇರ ಸವಾಲು ಹಾಕಿದ ಯಡಿಯೂರಪ್ಪ, ಚುನಾವಣೆಗೆ ಹೋದರೆ ಆಗ ನಿಮಗೆ ಗೊತ್ತಾಗಲಿದೆ, ನಮಗೆ 130 ಸ್ಥಾನ ನಿಶ್ಚಿತ. ಇದನ್ನು ನಾವು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು. ಇಂದಿರಾಗಾಂಧಿಯೂ ಸತತ ಮೂರನೇ ಬಾರಿಗೆ ಪ್ರಧಾನಿ ಆಗಲು ಆಗಿಲ್ಲ, ರಾಜೀವ್ ಗಾಂಧಿಗೆ ಸತತ ಎರಡನೇ ಬಾರಿ ಪ್ರಧಾನಿಯಾಗಲು ಆಗಲಿಲ್ಲ, ರಾಹುಲ್ ಗಾಂಧಿಗೆ ಸತತ ಮೂರನೇ ಬಾರಿ ನೂರು ಸ್ಥಾನ ಗೆಲ್ಲಲಾಗಲಿಲ್ಲ. ಆದರೆ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ ಎಂದು ತಿಳಿಸಿದರು.…
ಉತ್ತರಕನ್ನಡ : ದಕ್ಷಿಣ ಒಳನಾಡಿನಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ಈಗಾಗಲೇ ಹಲವು ಪ್ರದೇಶಗಳಲ್ಲಿ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ.ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಇದೀಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೌದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೋಡಿ ಜಲಪಾತ ಮಲ್ನಾಡು ಭಾಗದಲ್ಲಿ ಮಳೆಯಿಂದ ಫಾಲ್ಸ್ ತುಂಬಿ ತುಳುಕುತ್ತಿದೆ. ಪ್ರವಾಸಿಗರು ನೀರಿಗೆ ಇಳಿದು ಮೋಜು ಮಸ್ತಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಜಾಗ್ರತ ಕ್ರಮವಾಗಿ ಸಾತೋಡಿ ಫಾಲ್ಸ್ ಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು : ಸಂಸತ್ ನಲ್ಲಿ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದನ್ನು ವಿರೋಧಿಸಿ, ಬಿಜೆಪಿ ನಾಯಕರು ರಾಹುಲ್ ಗಾಂಧಿ ಕ್ಷಮೆಗೆ ಆಗಮಿಸಿದ್ದಾರೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ಹೇಳಿದ್ದನ್ನೆಲ್ಲ ಹಿಂದುಗಳು ಕೇಳಬೇಕಾ ಎಂದು ವಾಗ್ದಾಳಿ ನಡೆಸಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಬಿಜೆಪಿಗೆ ಇದೇ ಚಾಳಿ. ಹಿಂದೂಗಳಿಂದ ಹಿಂಸಾಚಾರ ನಡೆಯಲು ಬಿಡಲ್ಲ ಅಂತ ಹೇಳಿದ್ದಾರೆ. ಅಹಮ್ಮದಾಬಾದ್ನಲ್ಲಿ ಹತ್ಯೆಯಾಗಿದೆಯಲ್ಲ ಇದಕ್ಕೆ ಏನ್ ಹೇಳ್ತಾರೆ? ಎಂದು ಸಂಸತ್ನಲ್ಲಿ ರಾಹುಲ್ ಗಾಂಧಿ ಆಡಿದ ಮಾತುಗಳಿಗೆ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ತಿರುಗೇಟು ನೀಡಿದರು. ಹತ್ತುವರ್ಷಗಳಿಂದ ಇದೇ ಕೆಲಸವನ್ನ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಅಲ್ವ ಇವರಿಗೆ ಲೋಕಸಭೆಯಲ್ಲಿ ಬಹುಮತ ಬಂದಿಲ್ಲ. ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ. ಬಿಜೆಪಿ ಐಟಿ ಸೆಲ್ ಸುಳ್ಳಿನಕಾರ್ಖಾನೆ ತಯಾರು ಮಾಡುತ್ತೆ. ರಾಹುಲ್ ಗಾಂಧಿ ಕೊಟ್ಟಿರುವ ಹಿಂದೂ ವಿರೋಧಿ ಸ್ಟೇಟ್ಮೆಂಟ್ ತೋರಿಸಲಿ ಎಂದು ಸವಾಲು ಹಾಕಿದರು. ಮೋದಿ ಹೇಳಿದನ್ನೆಲ್ಲಾ ಹಿಂದೂಗಳು ಕೇಳಬೇಕಾ?…
ಕೋಲಾರ : ನಿನ್ನೆ ಕೋಲಾರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ಶೌಚಾಲಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಗೆ ಸಂಬಂಧಿಸಿದಂತೆ, ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ನಿನ್ನೆ ನಗರದ ಹೊರ ವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ವಿಚಿತ್ರ ಘಟನೆ ನಡೆದಿದೆ. ಕಾಲೇಜು ಶೌಚಾಲಯದಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಳು. ಹೊಟ್ಟೆ ನೋವು ಎಂದು ಬಾಲಕೇಶ್ವರಕ್ಕೆ ಎದ್ದೇಳಿದಾಗ ಬಾಲಕಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಮಗುವಿನ ಅಳುವ ಸದ್ದು ಕೇಳಿ, ಕಾಲೇಜಿನ ಸಿಬ್ಬಂದಿ ಹಾಗೂ ಉಪನ್ಯಾಸಕರು ಓಡಿ ಬಂದು ಬಾಲಕಿ ಮಗುಗೆ ಜನ್ಮ ನೀಡಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಇನ್ನು ಹೆರಿಗೆಯಾದ ಬಾಲಕಿ ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಬಾಲಕಿಗೆ ಹೆರಿಗೆ ಆಗಿರುವುದನ್ನು ಕಂಡು ಕಾಲೇಜಿನ ಆಡಳಿತ ಮಂಡಳಿಯವರು ತಕ್ಷಣವೇ ಸಮೀಪದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಬಾಲಕಿಯ ಕಾಲೇಜಿನ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ.…
ಮಂಗಳೂರು : ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ರಾಜ್ ಕುಮಾರ್ ಎನ್ನುವ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಇದೀಗ ಸತತ 6 ಗಂಟೆಗಳ ಕಾಲ ಚಂದನ್ ಕುಮಾರ್ ಎನ್ನುವ ಮತ್ತೊರ್ವ ಕಾರ್ಮಿಕನನ್ನು ಸಿಬ್ಬಂದಿಗಳು ರಕ್ಷಿಸಿದ್ದಾರೆ ಆದರೆ ಚಂದನ್ ಕುಮಾರ್ ಕೊನೆಯುಸಿರೆಳೆದಿದ್ದಾನೆ ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ. ಅವರು ರಕ್ಷಣಾ ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣಿನಲ್ಲಿ ಬಿಹಾರ್ ಮೂಲದ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇಬ್ಬರು ಕಾರ್ಮಿಕರನ್ನು ಇದೀಗ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಕುಮಾರ್ ಎನ್ನುವ ಕಾರ್ಮಿಕರನ್ನು ಸಿಬ್ಬಂದಿಗಳು ಹೊರತೆಗೆದಿದ್ದರು. ಆದರೆ ಮಣ್ಣಿನ ಅಡಿಯಲ್ಲಿ ನಿತ್ರಾಣಗೊಂಡಿದ್ದ ಚಂದನ್ ಕುಮಾರ್ ಇದೀಗ ಸಾವನ್ನಪ್ಪಿದ್ದಾನೆ. ಹೊರಕ್ಕೆ ತೆಗೆದ ನಂತರ…
ಮಂಗಳೂರು : ನಗರದ ಬಲ್ಮಠ ಬಳಿಯ ಮಂಗಳೂರು ನರ್ಸಿಂಗ್ ಹೋಮ್ ಮುಂಭಾಗದ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಈಗಾಗಲೇ ರಾಜ್ ಕುಮಾರ್ ಎನ್ನುವ ಓರ್ವನನ್ನು ರಕ್ಷಣೆ ಮಾಡಲಾಗಿದ್ದು, ಇದೀಗ ಸತತ 6 ಗಂಟೆಗಳ ಕಾಲ ಚಂದನ್ ಕುಮಾರ್ ಎನ್ನುವ ಮತ್ತೊರ್ವ ಕಾರ್ಮಿಕನನ್ನು ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಕಾರ್ಯಾಚರಣೆ ನಡೆಸುತ್ತಿದ್ದು, ಕಾರ್ಮಿಕರ ಪ್ರಾಣ ಉಳಿಸಲು ಬೆಳಿಗ್ಗೆಯಿಂದ ಹರಸಾಹಸ ಪಡುತ್ತಿದ್ದರು. ಮಣ್ಣಿನಡಿ ಸಿಲುಕಿರುವ ಸಂತ್ರಸ್ತರನ್ನು ಬಿಹಾರ ಮೂಲದ ರಾಜ್ಕುಮಾರ್ ಹಾಗೂ ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ. ಇಂದು ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿತ ಉಂಟಾಗಿತ್ತು. ಮಣ್ಣಿನಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇಬ್ಬರು ಕಾರ್ಮಿಕರನ್ನು ಇದೀಗ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಂದನ್ ಎನ್ನುವ ಕಾರ್ಮಿಕರನ್ನು ಸಿಬ್ಬಂದಿಗಳು ಇದೀಗ ಹೊರಗೆ ತೆಗೆದಿದ್ದಾರೆ. ಹೊರಕ್ಕೆ ತೆಗೆದ…
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ BRTS ಚಿಗರಿ ಬಸ್ ಡಿಕ್ಕಿಯಾಗಿ ವೃದ್ಧರೊಬ್ಬರೂ ಸಾವನ್ನಪ್ಪಿದ್ದಾರೆ. ರಸ್ತೆದಾಟುವಾಗ ಬಿ ಆರ್ ಟಿ ಎಸ್ ಬಸ್ ಗುದ್ದಿ ವೃದ್ಧ ದಾರುಣವಾಗಿ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಬಳಿ ಈ ಒಂದು ಅಪಘಾತ ನಡೆದಿದೆ. ಮಂಜುನಾಥ್ ನಗರದ ನಿವಾಸಿ ಗಂಗಾಧರ್ ಎನ್ನುವ ವೃದ್ಧರು ಸಾವನಪ್ಪಿದ್ದಾರೆ. ಘಟನೆ ನಂತರ ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬಿ ಆರ್ ಟಿ ಎಸ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಪೊಲೀಸರು ಹಾಗೂ ಬಿ ಆರ್ ಟಿ ಎಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆದಿದೆ.ಸ್ಥಳೀಯರು ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಹಾವೇರಿ : ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಶಿಗ್ಗಾಂವ ಕಾಂಗ್ರೆಸ್ ಅಭ್ಯರ್ಥಿ ಅಕಾಂಕ್ಷಿಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬುಧವಾರ ಶಿಗ್ಗಾಂವ ಕ್ಷೇತ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡುವ ಮುನ್ನವೇ ಶಿಗ್ಗಾಂವ ಐಬಿ ಮುಂದೆ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹಾಗೂ ಯಾಸೀರ ಅಹ್ಮದಖಾನ್ ಪಠಾಣ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಹೌದು ಇಂದು ಸಚಿವ ಸತೀಶ್ ಜಾರಕಿಹೊಳಿ ಹಾವೇರಿ ಜಿಲ್ಲೆಯ ಶಿಗ್ಗಾವ್ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದರು ಈ ವೇಳೆ ಅವರನ್ನು ಕಾರಿನಿಂದ ಕೆಳಗೆ ಇಳಿಯಲು ಬಿಡದೆ ಕಾಂಗ್ರೆಸ್ ಆಕಾಂಕ್ಷಿಗಳಾದ ಅಜ್ಜಂಪಿರ್ ಖಾದ್ರಿ ಹಾಗೂ ಯಾಸೀರ ಅಹ್ಮದಖಾನ್ ಪಠಾಣ ಶಕ್ತಿ ಪ್ರದರ್ಶನ ಮಾಡಿದ್ದು, ಸಹಜವಾಗಿ ಸಚಿವ ಸತೀಶ ಜಾರಕಿಹೊಳಿ ಅಸಮಾಧಾನ ಹೊರಹಾಕಿ ಆಕಾಂಕ್ಷಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾಗಿ ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸತೀಶ ಜಾರಕಿಹೊಳಿ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಶಿಗ್ಗಾವಿ…