Subscribe to Updates
Get the latest creative news from FooBar about art, design and business.
Author: kannadanewsnow05
ಬೀದರ್ : ಕಳೆದ ಎರಡು ದಿನಗಳ ಹಿಂದೆ ಬೀದರ್ ನಲ್ಲಿ ಎಟಿಎಂ ಗೆ ಹಣ ತುಂಬವ ವೇಳೆ ಇಬ್ಬರು ದುಷ್ಕರ್ಮಿಗಳು ಎಟಿಎಂ ಹಣ ತುಂಬುವ ಸಿಬ್ಬಂದಿಗಳ ಮೇಲೆ ಬಂದೂಕಿನಿಂದ ದಾಳಿ ಮಾಡಿ ಓರ್ವ ಸಿಬ್ಬಂದಿಯನ್ನು ಕೊಂದು, ಸುಮಾರು 83 ಲಕ್ಷ ಹಣವಿದ್ದ ಬಾಕ್ಸ್ ಸಮೇತ ಕದ್ದು ಪರಾರಿಯಾಗಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈ ಒಂದು ದರೋಡೆಕೋರರ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಹೌದು ಎಟಿಎಂಗೆ ಹಣ ತುಂಬುವಾಗ ಗುಂಡಿನ ದಾಳಿ ಮಾಡಿ ಹಣ ದರೋಡೆ ಮಾಡಿದ ಇಬ್ಬರು ಆರೋಪಿಗಳ ಪೈಕಿ ಒಬ್ಬನ ಗುರುತು ಪತ್ತೆ ಮಾಡಲಾಗಿದೆ. ಆರೋಪಿಯು ಛತ್ತಿಸ್‌ಗಢ ಮೂಲದ ಮನೀಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ದರೋಡೆ ಹಿಂದೆ ಬಿಹಾರ್ ಗ್ಯಾಂಗ್ ಇದೆ ಎನ್ನಲಾಗುತ್ತಿದೆ. ಮೃತರಿಗೆ 8 ಲಕ್ಷ ಪರಿಹಾರ ಘೋಷಣೆ ಜನವರಿ 16 ಗುರುವಾರ ಬೀದರ್‌ನ ಎಸ್‌ಬಿಐ ಬ್ಯಾಂಕ್ ಬಳಿ ಇದ್ದ ಎಟಿಎಂಗೆ ಹಣ…
ಬೆಂಗಳೂರು : ಮಗ ಕುಡಿತದ ಚಟಕ್ಕೆ ದಾಸನಾಗಿದ್ದ. ಈ ವೇಳೆ ತಂದೆ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆ ಮಗನ ನಡುವೆ ಗಲಾಟೆ ನಡೆದು ಈ ವೇಳೆ ಮಗ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಹೌದು ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದ 4ನೇ ಬ್ಲಾಕ್‌ನ 7 ಮುಖ್ಯರಸ್ತೆಯಲ್ಲಿ ನಡೆದಿದೆ. ಕುಡಿತದ ದಾಸನಾಗಿದ್ದ ಮಗ ರಘು (29) ಎಂಬಾತನಿಂದ ತಂದೆ ರಾಮಚಂದ್ರ (59) ಎಂಬಾತನ್ನು ಕೊಲೆ ಮಾಡಲಾಗಿದೆ. ಜನವರಿ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಲಾರಿ ಡ್ರೈವರ್ ಆಗಿದ್ದ ರಘು ಕುಡಿತದ ಚಟದಿಂದ ದಾಸನಾಗಿದ್ದನು. ಕುಡಿತ ಬಿಡುವಂತೆ ತಂದೆ ಮಗನಿಗೆ ದಿನನಿತ್ಯ ಬುದ್ದಿವಾದ ಹೇಳುತ್ತಿದ್ದರು. ನಿತ್ಯ ಕುಡಿದು ಬಂದು ತಂದೆ-ತಾಯಿಗೆ ತೊಂದರೆ ಕೊಡ್ತಿದ್ದ ಆರೋಪಿ ರಘು. ಕೆಲಸಕ್ಕೆ ಹೋಗದೇ ತಂದೆ ಬಳಿ ಎಣ್ಣೆ ಕುಡಿಯಲು ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದನು.…
ಬೆಂಗಳೂರು : ಹಾಸನದ ಮಾಜಿ ಸಂಸದ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಇನ್ ಕ್ಯಾಮೆರಾ ವಿಚಾರಣೆ (ಮುಚ್ಚಿದ ಕೊಠಡಿಯಲ್ಲಿ) ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿ ನೀಡಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ವೇಳೆ ಅರ್ಜಿಗೆ ಎಸ್ಐ ಟಿ ಎಸ್ ಪಿ ಪಿ ಅಶೋಕ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಮುಂದಿಟ್ಟು ಅಶೋಕ್ ನಾಯಕ್ ವಾದ ಮಂಡನೆ ಮಾಡಿದರು. ಪ್ರತಿವಾದ ಮಂಡಿಸಲು ಕಾಲಾವಕಾಶ ಕೋರಿ ಪ್ರಜ್ವಲ್ ರೇವಣ್ಣ ಪರ ವಕೀಲರು ಇದೆ ವೇಳೆ ಮನವಿ ಮಾಡಿದರು. ಫೋಟೋ ವಿಡಿಯೋ ವೀಕ್ಷಿಸಲು ಕೂಡ ಕಾಲಾವಕಾಶಕ್ಕೆ ಮನವಿ ಮಾಡಿದರು. ಕೇಸ್ ನ ವಿಚಾರಣೆ ಮುಚ್ಚಿದ ಕೊಠಡಿಯಲ್ಲಿ ನಡೆಸುವಂತೆ ಇದೆ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಿದರು. ಅತ್ಯಾಚಾರ ಆರೋಪ ಇರುವುದರಿಂದ ಇನ್ ಕ್ಯಾಮೆರಾ ವಿಚಾರಣೆಗೆ ಮನವಿ ಮಾಡಲಾಯಿತು.…
ಬೆಂಗಳೂರು : ಬೆಂಗಳೂರಿನಲ್ಲಿ ಇದೆ ಜನವರಿ 23 ರಿಂದ ಫೆಬ್ರವರಿ 17ರ ವರೆಗೆ ಏರ್ ಶೋ ಆ ಯೋಜನೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ, ಯಲಹಂಕದ ಸುತ್ತಮುತ್ತಲೂ ಇದೀಗ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಆದೇಶ ಹೊರಡಿಸಿದೆ. ಜನವರಿ 23ರಿಂದ ಫೆಬ್ರವರಿ 17ರವರೆಗೂ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ವಾಯುನೆಲೆಯಲ್ಲಿ ವಿಮಾನಗಳ ರಿಹರ್ಸಲ್ ನಡೆಸಲಿವೆ. ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕದ ಸುತ್ತಮುತ್ತ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ. ಯಲಹಂಕದ ಸುಮಾರು 13 ಕಿಲೋ ಮೀಟರ್ ಸುತ್ತಲೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಮಾಂಸ ಮಾರಾಟ ಹಾಗೂ ಉದ್ದಿಮೆಗಳ ಬಂದ್ಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 10 ರಿಂದ 14ರ ವರೆಗೂ ಈ ಒಂದು ಏರ್ ಶೋ ನಡೆಯಲಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಗ್ರಹ ವಿಚಾರವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಮುಡಾದಲ್ಲಿ ರಾಜಕೀಯ ಮಾತನಾಡುವ ಅವಶ್ಯಕತೆ ಇಲ್ಲ. ಯಾವ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ. ಸಿದ್ದರಾಮಯ್ಯ ರಾಜೀನಾಮೆ ಯ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಮೊದಲು ಬಿಜೆಪಿ ಹಗರಣಗಳ ಬಗ್ಗೆ ಚರ್ಚೆ ಮಾಡೋಣ. ಬಿಜೆಪಿಯ ಹಗರಣಗಳು ಬಹಳ ಇವೆ ಅದರ ಬಗ್ಗೆ ಮೊದಲು ಚರ್ಚೆ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಳಗಾವಿ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುರಿತು ಹಗುರವಾಗಿ ಮಾತನಾಡಿದ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪ ಕುರಿತು ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡು ಎಂಬ ಹೇಳಿಕೆಗೆ ಗೋಕಾಕ ಸಾಹುಕಾರ ತಿರುಗೇಟು ನೀಡಿದ್ದು, ನಿಮ್ಮ ಅಪ್ಪನನ್ನು ಮುಖ್ಯಮಂತ್ರಿ ಮಾಡಲು ನಾನು ಬಿಜೆಪಿಗೆ ಬಂದಿದ್ದು ಎಂದು ತಿಳಿಸಿದರು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂಬ ಹೇಳಿಕೆ ವಿಚಾರವಾಗಿ, ವಿಜಯೇಂದ್ರ ನೀನು ಇನ್ನೂ ಬಚ್ಚಾ ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಇಂದಿಗೂ ಯಡಿಯೂರಪ್ಪ ವಿರುದ್ಧ ಅಗೌರವದಿಂದ ನಾನು ಮಾತನಾಡಿಲ್ಲ. ಇಂದಿಗೂ ನನಗೆ ಬಿಎಸ್ ಯಡಿಯೂರಪ್ಪ ಅವರ ಮೇಲೆ ಗೌರವ ಇದೆ.ಆದರೆ ನೀನು ಸುಳ್ಳು ಹೇಳುವುದು ಬಿಡು ಎಂದು ವಾಗ್ದಾಳಿ ನಡೆಸಿದರು. ನಾನು ವಿಜಯೇಂದ್ರ ಮನೆಯಿಂದಲೇ ಪ್ರವಾಸ ಶುರು ಮಾಡುತ್ತೇನೆ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನೇ ದಿನಾಂಕ…
ತುಮಕೂರು :ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ.ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಕಪೋಲಕಲ್ಪಿತ ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕರೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು. ಸ್ವಾತಂತ್ರ್ಯಕ್ಕೂ ಮುನ್ನ ಇಂದಿನ ಪತ್ರಿಕೋದ್ಯಮ ಹೋಲಿಸುವುದು ಉತ್ತಮ. ವಿಜ್ಞಾನ ಬೆಳವಣಿಗೆ ಆದಂತಲ್ಲ ಮಾಧ್ಯಮ ಕೂಡ ಬೆಳವಣಿಗೆ ಕಾಣುತ್ತಿದೆ. ಅಮೇರಿಕಾದಲ್ಲಿ ಬೆಂಕಿ ಬಿದ್ದರೆ ತಕ್ಷಣ ಇಲ್ಲಿ ಸುದ್ದಿ ಬರುತ್ತದೆ. ಯಾವುದೇ ದೇಶದಲ್ಲಿ ಪತ್ರಿಕೋದ್ಯಮ ವೃತ್ತಿಯಾಗಿಯೇ ಉಳಿಯಬೇಕು.ಕೆಲ ವರ್ಷಗಳಿಂದ ಇದು ಉದ್ಯಮವಾಗಿಬಿಟ್ಟಿದೆ.…
ಚಿಕ್ಕಮಗಳೂರು : ಇತ್ತೀಚಿಗೆ ಈ ಹೃದಯಾಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ.ಚಿಕ್ಕ ಮಕ್ಕಳು, ಯುವ ಜನತೆ ಹಾಗೂ ವಯೋವೃದ್ಧರನ್ನು ಸಹ ಈ ಒಂದು ಹೃದಯಘಾತ ಸಹಜ ಕಾಯಿಲೆಯಂತಾಗಿದೆ.ಇದೀಗ ಚಿಕ್ಕಮಂಗಳುರಿನಲ್ಲಿ ಕಾಫಿ ಕಣದಲ್ಲಿ ಇರುವಾಗಲೇ ಬಿಜೆಪಿಯ ಯುವ ಮುಖಂಡನಿಗೆ ಹೃದಯಾಘಾತ ಸಂಭವಿಸಿ ಸವನಪ್ಪಿದ್ದಾರೆ. ಹೌದು ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವ ಕೃಷಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 35 ವರ್ಷ ವಯಸ್ಸಿನ ಹೆಚ್.ಆರ್.ಚೇತನ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಬಿಜೆಪಿಯ ಯುವ ಮುಖಂಡರಾಗಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಿಗ್ಗೆ ಹೊತ್ತು ಕಾಫಿ ಕಣದಲ್ಲಿದ್ದಾಗ, ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಾಳೆ ಹೊನ್ನೂರು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಮಾರ್ಗಮಧ್ಯದಲ್ಲೇ ಚೇತನ್ ಸಾವನ್ನಪ್ಪಿದ್ದಾರೆ. ಮೃತ ಚೇತನ್ ಗೆ ಇಬ್ಬರು ಪುಟ್ಟ ಮಕ್ಕಳು ಇದ್ದರು ಎನ್ನಲಾಗಿದೆ. ಈ ಒಂದು ಸಾವಿನಿಂದ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.
ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಕೋಟೆ ಕಾರು ಸಹಕಾರಿ ಬ್ಯಾಂಕ್ ನಲ್ಲಿ ನಿನ್ನೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಫಿಯೆಟ್ ಕಾರಿನಲ್ಲಿ ದರೋಡೆಕೋರರು ಉಡುಪಿಯ ಟೋಲ್ ಗೇಟ್ ಬಳಿ ಟೋಲ್ ಶುಲ್ಕ ಕಟ್ಟುತ್ತಿದ್ದಾಗ ಓರ್ವ ದರೋಡೆಕೋರನ ಫೋಟೋ ಒಂದು ಇದೀಗ ವೈರಲಾಗಿದೆ. ಹೌದು ನಿನ್ನೆ ಕೋಟೆ ಕಾರು ಸಹಕಾರಿ ಬ್ಯಾಂಕಿಗೆ ನುಗ್ಗಿದ ದರೋಡೆಕೋರರು, ಬ್ಯಾಂಕ್ ಸಿಬ್ಬಂದಿಗಳಿಗೆ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ಹಣ, ಚಿನ್ನಾಭರಣ ಸೇರಿ ಒಟ್ಟು 12 ಕೋಟಿ ರೂಪಾಯಿ ದೋಚಿದ್ದಾರೆ. ಬಳಿಕ ಅಲ್ಲಿಂದ ಅವರು ನೇರವಾಗಿ ಕೇರಳಕ್ಕೆ ತೆರಳಿ ಅಲ್ಲಿಂದ ಅಜ್ಞಾತ ಸ್ಥಳದಿಂದ ತಮಿಳುನಾಡಿನ ಕಡೆ ಬೋಟ್ನಲ್ಲಿ ಹೋಗುತ್ತಿರುವ ಶಂಕೆ ವ್ಯಕ್ತವಾಗಿದೆ. ಕೇರಳದಲ್ಲಿ ಸುತ್ತಾಡಿ ಪೊಲೀಸರ ತಂಡ ಇದೀಗ ದರೋಡೆಕೋರ ಮಾಹಿತಿ ಕಲೆ ಹಾಕುತ್ತಿದೆ. ದರೋಡೆ ಬಳಿಕ ದುಷ್ಕರ್ಮಿಗಳು ಉಡುಪಿಯ ಮಾರ್ಗವಾಗಿ ಕೇರಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ವೇಳೆ ಉಡುಪಿಯ ಬಳಿ ಟೋಲ್ ಗೇಟ್ ಬಳಿ ಕಾರು ಚಾಲನೆ ಮಾಡುತ್ತಿದ್ದ ದರೋಡೆಕೋರನೊಬ್ಬ ಮಾಸ್ಕನ್ನು…
ಚಿಕ್ಕಬಳ್ಳಾಪುರ : MBA ವಿದ್ಯಾರ್ಥಿ ಒಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ವಿಟಿಯು ಕ್ಯಾಂಪಸ್ ನಲ್ಲಿ ಈ ಒಂದು ಘಟನೆ ನಡೆದಿದೆ.ಮೃತ ವಿದ್ಯಾರ್ಥಿಯನ್ನು ವಿ.ಬಾಬು ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ವಿಟಿಯು ಕ್ಯಾಂಪಸ್ ನ ಹಾಸ್ಟೆಲ್ ರೂಮ್ನಲ್ಲಿ ಶವವಾಗಿ ಪತ್ತೆಯಾಗಿರುವ ಎಂಬಿಎ ವಿದ್ಯಾರ್ಥಿ ವಿ.ಬಾಬು, ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದವನೆಂದು ತಿಳಿದುಬಂದಿದೆ. ವಿದ್ಯಾರ್ಥಿ ವಿ ಬಾಬು ಈ ಒಂದು ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ನಂದಿ ಗಿರಿಧಾಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.













