Author: kannadanewsnow05

ಕಲಬುರ್ಗಿ : ನವ ವಿಹಾಹಿತೆಯ ಶವವೊಂದು ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಲಬುರ್ಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮೃತಳನ್ನು ಅವರಾದ (ಬಿ) ಗ್ರಾಮದ ನವವಿವಾಹಿತ ರಂಜಿತ (25) ಎಂದು ಹೇಳಲಾಗುತ್ತಿದ್ದು, ರಂಜಿತಾ ಕುಟುಂಬದವರಿಂದ ಇದೀಗ ಪತಿಯ ಮನೆಯವರಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪತಿ ಉಮೇಶ್ ಕಟ್ಟಿಮನಿ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ನೀರಾವರಿ ಇಲಾಖೆಯಲ್ಲಿ ರಂಜಿತಾ ಪತಿ ಉಮೇಶ್ ಸಹಾಯಕ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ತಿಂಗಳ ಹಿಂದೆ ರಂಜಿತ, ಉಮೇಶ್ ಅವರ ಮದುವೆಯಾಗಿತ್ತು. ಇದೀಗ ರಂಜಿತಾ ಪತಿ, ಅತ್ತೆ ಹಾಗೂ ಮಾವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಲ್ಬುರ್ಗಿ ಸ್ಟೇಷನ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಾದಗಿರಿ : ಕಳೆದ ಜುಲೈ 6 ರಂದು ಯಾದಗಿರಿಯಲ್ಲಿ 2 ತಿಂಗಳ ಹಸುಗೂಸು ಕೊಲೆ ನಡೆದಿತ್ತು. ಆದರೆ ಈ ಒಂದು ಕೊಲೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯೊಬ್ಬಳು ಮಗುವನ್ನೇ ಕೊಂದಿರುವುದಾಗಿ ತಿಳಿದುಬಂದಿದೆ. ಹೌದು ನಾಗೇಶ್ ಹಾಗೂ ಚಿಟ್ಟೆಮ್ಮ ಮಗವನ್ನು ಅಪ್ರಾಪ್ತೆ ಕೊಂದಿದ್ದಾಳೆ ಎಂದು ತಿಳಿದುಬಂದಿದೆ.ನಾಗೇಶ್‌ನ ತಮ್ಮ ಯಲ್ಲಪ್ಪನನ್ನ ಅಪ್ರಾಪ್ತೆ ಪ್ರೀತಿಸುತ್ತಿದ್ದಳಂತೆ. ಸಂಬಂಧದಿಂದ ತಂಗಿಯಾಗಬೇಕೆಂದು ಈ ಪ್ರೀತಿಯನ್ನು ಯಲ್ಲಪ್ಪ ನಿರಾಕರಿಸಿದ್ದನಂತೆ.ಯಲ್ಲಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಅಪ್ರಾಪ್ತೆ ಈ ಪ್ಲ್ಯಾನ್‌ ಮಾಡಿದ್ದಾಳೆ. ಮಗುವನ್ನು ಕೊಲೆ ಮಾಡಿ ಯಲ್ಲಪ್ಪನ ಮೇಲೆ ಹಾಕಲು ಪ್ಲ್ಯಾನ್‌ ಮಾಡಿದ್ದಳು. ಅದರಂತೆ ಜುಲೈ 6ರಂದು ಮಗುವನ್ನು ಬಾವಿಗೆ ಎಸೆದಿದ್ದಾಳೆ. ಬಳಿಕ ಪೋಷಕರ ಜತೆ ಮಗು ಹುಡುಕುವ ಡ್ರಾಮಾ ಮಾಡಿದ್ದಾಳೆ. ಮಗು ಹತ್ಯೆ ಬಳಿಕ ಕಣ್ಣೀರಾಕಿ ನಾಟಕ ಮಾಡಿದ್ದ ಹಂತಕಿ,ಅನುಮಾನ ಬಂದು ಪೊಲೀಸರ ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಿದೆ ಬಂದಿದೆ. ಸದ್ಯ ಪೊಲೀಸರು ಅಪ್ರಾಪ್ತೆಯನ್ನು ವ್ಯಕ್ತಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Read More

ಚಿಕ್ಕಮಗಳೂರು : ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚಿಕ್ಕಮಂಗಳೂರು ದಕ್ಷಿಣಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ನಲ್ಲಿ ಇದೀಗ ಭೂ ಕುಸಿತ ಉಂಟಾಗಿದೆ. ಹೌದು ಚಾರ್ಮಾಡಿ ಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಭೂಕುಸಿತ ಉಂಟಾಗಿದೆ. ಚಿಕ್ಕಮಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕಿಸುವ ಚಾರ್ಮಾಡಿ ಘಾಟ್ ನ ಅಲೆಖಾನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೀಗ ಭೂ ಕುಸಿತ ಉಂಟಾಗಿದೆ. ಘಟನಾ ಸ್ಥಳಕ್ಕೆ ಬಣಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಳೆ ಮುಂದುವರಿದರೆ ಇನ್ನಷ್ಟು ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Read More

ಬೆಂಗಳೂರು : ಆತ ಯುವಕ ಯುವತಿಯರ ನಂಬರ್ ಸಂಗ್ರಹಿಸಿ ಬೇರೆ ಬೇರೆ ಸಿಮ್‌ ಕಾರ್ಡ್ ಬಳಸಿ ಹುಡುಗಿಯರ ಸರ್ವಿಸ್ ಬೇಕಾ ಎಂದು ಕರೆ ಮಾಡುತ್ತಿದ್ದ. ಅದೆ ರೀತಿ ಹುಡುಗಿಯರಿಗೂ ಕೂಡ ಕರೆ ಮಾಡಿ ಹುಡುಗರ ಸರ್ವಿಸ್ ಬೇಕಾ ಎಂದು ಕೇಳುತ್ತಿದ್ದ ಆಸಾಮಿಯನ್ನ ಇದೀಗ ಪೂರ್ವ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಆನಂದ್ ಶರ್ಮಾ ಎಂದು ಹೇಳಲಾಗುತ್ತಿದೆ. ಒಬ್ಬೊಬ್ಬರಿಗೂ ಒಂದೊಂದು ನಂಬರ್‌ನಿಂದ ಕರೆ, ಮಸೇಜ್ ಮಾಡುತ್ತಿದ್ದ.ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್, ಕರೆ ಮಾಡಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಪೂರ್ವ ವಿಭಾಗದ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸುಭಿ ಎಂಬಾಕೆಗೂ ಸರ್ವಿಸ್ ಬೇಕಾ?ಎಂದು ಕರೆ ಮಾಡಿದ್ದ ಆರೋಪಿ. ಬೇರೆ ಬೇರೆ ನಂಬರ್‌ಗಳಿಂದ ಪದೇಪದೆ ಕರೆ ಮಾಡಿ ಆರೋಪಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೂರ್ವ ವಿಭಾಗ ಸೆನ್ ಪೊಲೀಸರು, ಆರೋಪಿ ಬಳಸಿದ ಮೊಬೈಲ್ ನಂಬರ್, ಲೋಕೇಶನ್…

Read More

ಬೆಂಗಳೂರು : ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದಂತಹ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಪರಿಚಿತ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದಾಸನಪುರ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ಹೌದು ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ದಾಸನಪುರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪರಿಚಿತ ಮಹಿಳೆ ಸಾವನ್ನಪ್ಪಿದ್ದಾರೆ.ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಬಳಿ ಈ ಒಂದು ಅಪಘಾತ ಸಂಭವಿಸಿದೆ.ಅಪಘಾತದ ನಂತರ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಗ ಹುಡುಗಿಯರಿಗೆ ಸರ್ವಿಸ್ ಬೇಕಾ ಎಂದವನು ಅಂದರ್ ಹುಡುಗ ಹಾಗೂ ಹುಡುಗಿಯರ ಸರ್ವಿಸ್ ಬೇಕಾ ಎಂದು ಮೆಸೇಜ್ ಕಳುಹಿಸಿದ್ದ ಆರೋಪಿಯನ್ನ ಇದೀಗ ಬೆಂಗಳೂರಿನ ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂನ ವಿ ಸ್ಟೇಜ್ ಪಿಜಿ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯು ಹಲವು ಮೊಬೈಲ್ ನಂಬರ್ ಬಳಸಿ ಕರೆ ಹಾಗೂ ಮೆಸೇಜ್…

Read More

ಒಡಿಶಾ : ದೇಶದ ಅತ್ಯಂತ ಸುಪ್ರಸಿದ್ಧ ದೇವಸ್ಥಾನವಾದ ಒಡಿಶಾದ ಪುರಿ ನಗರದಲ್ಲಿರುವ ಐತಿಹಾಸಿಕ ಜಗನ್ನಾಥ ದೇವಸ್ಥಾನದಲ್ಲಿ ಇಂದು ಘೋರ ದುರಂತ ಒಂದು ಸಂಭವಿಸಿದ್ದು, ಬಲಭದ್ರ ಜೀ ತನ್ನ ರಥವನ್ನು ಎಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿತು. ಈ ವೇಳೆ 400ಕ್ಕೂ ಹೆಚ್ಚು ಭಕ್ತರು ಕೆಳಗೆ ಬಿದ್ದಿದ್ದರು. ಘಟನೆಯಲ್ಲಿ ಓರ್ವ ಭಕ್ತ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 50ಕ್ಕೂ ಹೆಚ್ಚು ಭಕ್ತರನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಬೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಒಡಿಶಾದ ಪೂರಿ ಜಗನ್ನಾಥ ರಥಯಾತ್ರೆಯ ವೇಳೆ ಕಾಲ್ತುಳಿತದಿಂದ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇದೀಗ ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ…

Read More

ಹುಬ್ಬಳ್ಳಿ : ಇಡೀ ಕರ್ನಾಟಕದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಡೆಂಘಿಯಿಂದ ನಾಲ್ವರ ಸಾವಾಗಿದೆ ಎಂದು ಹುಬ್ಬಳ್ಳಿಯಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ ಹೇಳಿಕೆ ನೀಡಿದರು. ಇಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಡೆಂಗ್ಯೂ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಡೆಂಗ್ಯೂಗೆ ಕಿಮ್ಸ್ ನಲ್ಲಿ ಈವರೆಗೆ ನಾಲ್ವರು ಮಕ್ಕಳು ಬಲಿಯಾಗಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 70ಕ್ಕೂ ಹೆಚ್ಚು ರೋಗಿಗಳಾಗಿದ್ದಾರೆ.ಕಿಮ್ಸ್ ಆಸ್ಪತ್ರೆಯಲ್ಲಿ ಈವರಿಗೆ 1,200 ಕ್ಕೂ ಹೆಚ್ಚು ಟೆಸ್ಟ್ ಮಾಡಿದ್ದಾರೆ ಎಂದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಾದ್ಯಂತ ಪ್ರವಾಸ ಮಾಡಬೇಕು. ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಧಾರವಾಡ ಜಿಲ್ಲೆಯಲ್ಲೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಮಕ್ಕಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಡೆಂಗಿ ಕಂಡುಬರುತ್ತದೆ.ಆರೋಗ್ಯ ಸಚಿವರು ಬೆಂಗಳೂರು ನಗರ ಬಿಟ್ಟು ಹೊರಗಡೆ ಬರಬೇಕು ಎಂದು ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಬೆಲ್ಲದ ಹೇಳಿಕೆ ನೀಡಿದರು. ಸ್ಪಷ್ಟನೆ…

Read More

ಉತ್ತರಕನ್ನಡ : ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವರುಣ ಅಬ್ಬರಿಸುತ್ತಿದ್ದು ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು, ನಿನ್ನೆ ಉತ್ತರಕನ್ನಡ ಜಿಲ್ಲೆಯ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಇಂದು ಕೂಡ ಮಳೆ ಮುಂದುವರೆದಿದ್ದರಿಂದ ನಾಳೆ ಕೂಡ 5 ತಾಲೂಕಿನ ಶಾಲೆಗಳಿಗೆ ರಜೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಅಂಕೋಲ, ಭಟ್ಕಳ ತಾಲೂಕು ಹಾಗೂ ಹೊನ್ನಾವರ ತಾಲೂಕಿನ ಶಾಲೆಗಳಿಗೆ ನಾಳೆಯೂ ರಜೆ ಘೋಷಣೆ ಮುಂದುವರೆಯಲಿದೆ. ನಾಳೆ ರಜೆ ನೀಡಿ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಆದೇಶ ಹೊರಡಿಸಿದ್ದಾರೆ .

Read More

ಬಳ್ಳಾರಿ : ಬಳ್ಳಾರಿಯಲಿ ಕರ್ತವ್ಯ ನಿರತ ಸಿಐಎಸ್ಎಫ್ ಯೋಧರೊಬ್ಬರು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈ ಎಂಬಲ್ಲಿ ನಡೆದಿದೆ.ಅನಾರೋಗ್ಯದಿಂದ ಸಿಐಎಸ್ಎಫ್ ಯೋಧ ಯಲ್ಲಪ್ಪ ಬಸವರಾಜ ಸೂರಣಗಿ (34) ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿಮಲೈನಲ್ಲಿ ಅವರು ಸಾವನ್ನಪ್ಪಿದ್ದರೆ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ನಿವಾಸಿ ಎಂದು ಹೇಳಲಾಗುತ್ತಿದೆ. ಯೋಧ ಯಲ್ಲಪ್ಪ ದೋಣಿಮಲೈನಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.

Read More

ಬೆಂಗಳೂರು:ಇತ್ತೀಚಿಗೆ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.ಇದೀಗ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ ಎಂದು ತಿಳಿದುಬಂದಿದೆ. ನಿರೀಕ್ಷಣಾ ಜಾಮೀನು ಕೋರಿ ಭವಾನಿ ಸಲ್ಲಿಸಿದ್ದ ಮನವಿಯನ್ನು ಜೂನ್‌ 18ರಂದು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ಪೀಠ ಪುರಸ್ಕರಿಸಿತ್ತು. ಈ ಆದೇಶವನ್ನು ಕರ್ನಾಟಕ ಸರ್ಕಾರವು ಪ್ರಶ್ನಿಸಿದ್ದು, ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಉಜ್ಜಲ್‌ ಭುಯಾನ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಲಿದೆ. ಸಂತ್ರಸ್ತೆಗೆ ಆಹಾರ ನೀಡಿಲ್ಲ ಮತ್ತು ಉಡುಪು ಬದಲಿಸಲು ಭವಾನಿ ಅವಕಾಶ ನೀಡಿಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಓದಿದಾಗ ಬಟ್ಟೆ ಮತ್ತು ಊಟವನ್ನು ಭವಾನಿ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಭವಾನಿ ರೇವಣ್ಣ ಸೇರಿ ಹಲವರ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 364ಎ, 365 ಮತ್ತು 34 ಅಡಿ ಪ್ರಕರಣ ದಾಖಲಾಗಿದೆ. ಇದೀಗ ಭವಾನಿ ರೇವಣ್ಣಗೆ ಮತ್ತೆ…

Read More