Author: kannadanewsnow05

ತಮಿಳುನಾಡು : ಮನುಷ್ಯರಲ್ಲಿ ಇನ್ನೂ ಮಾನವೀಯತೆ, ಕರುಣೆ ಇದೆ ಎನ್ನುವುದಕ್ಕೆ ಈ ಒಂದು ಘಟನೆ ಪ್ರಮುಖ ಸಾಕ್ಷಿಯಾಗಿದೆ. ಕೆಲವೊಂದು ಬಾರಿ ಗೊತ್ತಿಲ್ಲದೆ ಸಮಯ ಪ್ರಜ್ಞೆಯಿಂದ ಕೆಲವರು ಮತ್ತೊಬ್ಬರ ಜೀವ ಉಳಿಸಿರುತ್ತಾರೆ. ಇದೀಗ ಇಂತಹ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೆ ಕುಳಿತಿದ್ದ ಕಾಗೆ ಒಂದು ಕರೆಂಟ್ ಶಾಕ್ ನಿಂದ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿತ್ತು. ಈ ವೇಳೆ ತಕ್ಷಣ ಅಲ್ಲಿಯೇ ಇದ್ದಂತಹ ಅಗ್ನಿಶಾಮಕ ದಳದ ಸಿಬ್ಬಂದಿ ಒಬ್ಬರು ಕಾಗೆಗೆ ಸಿಪಿಆರ್ ಮೂಲಕ ಮರು ಜೀವ ನೀಡಿ ಮಾನವೀಯತೆ ಮೆರೆದಿದ್ದಾರೆ. ಹೌದು ಈ ಒಂದು ಘಟನೆ ತಮಿಳುನಾಡಿನಲ್ಲಿ ನಡೆದಿದ್ದು,ಕೊಯಮತ್ತೂರಿನ ಕವುಂಡಂಪಾಳ್ಯದಲ್ಲಿ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯೋರ್ವ ತಮ್ಮ ಸಮಯ ಪ್ರಜ್ಞೆಯಿಂದ ಕರೆಂಟ್‌ ಶಾಕ್‌ ಹೊಡೆದು ಕುಸಿದು ಬಿದ್ದ ಕಾಗೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಕರೆಂಟ್‌ ಶಾಕ್‌ ಹೊಡೆದ ಪರಿಣಾಮ ಕಾಗೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿತ್ತು, ಆ ಸಂದರ್ಭದಲ್ಲಿ ಕಾಗೆಯನ್ನು ಎತ್ತಿಕೊಂಡು ಅದರ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಸಿಪಿಆರ್‌…

Read More

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಧಾನ ತಾಲೂಕ್ ಅವರು ಮಂಡ್ಯಾಕೆ ಭೇಟಿ ನೀಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಆಕ್ರೋಶ ಹೊರಹಾಕಿದ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಇವೆಲ್ಲಾ ಗಲಭೆ ನಡೆಯುತ್ತಿವೆ. ಇಂತವರನ್ನು ಶೂಟ್ ಮಾಡಬೇಕು ಎಂದು ಕಿಡಿ ಕಾಡಿದರು. ಮದ್ದೂರಿನ ನಿಡಘಟ್ಟದ ಬಳಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ‌ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಹೋದ ಮೇಲೆ ಏನಾದರೂ ಆದರೆ ನನ್ನ ಮೇಲೆ‌ ಕೇಸ್ ಹಾಕಿ. ನಮ್ಮನ್ನು ತಡೆಯುವ ಕೆಲಸ ಅಕ್ಷಮ್ಯ ಅಪರಾಧ. ನಮ್ಮ ಸಂಘಟನೆ ಹಾಗೂ ನಮ್ಮ ವೈಚಾರಿಕತೆಯನ್ನು ತಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು. ನಾನು ನಾಗಮಂಗಲಕ್ಕೆ ಹೋಗ್ತಾ ಇಲ್ಲ. ನಾನು‌ ಹೋಗ್ತಾ ಇದ್ದು ಮಂಡ್ಯದ ಜೈಲಿಗೆ. ಇಲ್ಲಿನ‌ ನಾನು ಯಾವುದೇ ಸಭೆ ಮಾಡುತ್ತಿರಲಿಲ್ಲ.ನಾನು‌ ಬಂಧತ ಹಿಂದೂ ಯುವಕರನ್ನು‌ ಮಾತಾಡಿಸಲು‌ ಹೋಗ್ತಾ…

Read More

ಮಂಡ್ಯ : ಇತ್ತೀಚಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲುತೂರಾಟ ಹಾಗೂ ಕೋಮುಗಲಭೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ನಾಗಮಂಗಲಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಆದರೆ ಮಂಡ್ಯ ಜಿಲ್ಲೆಯ ಗಡಿಯಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ಗಡಿಯಲ್ಲಿಯೇ ಪ್ರವೇಶಕ್ಕೆ ಬ್ರೇಕ್ ಹಾಕಿರುವ ಪೊಲೀಸರು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ತಡೆಡಿದ್ದಾರೆ.ಸದ್ಯ ಗಲಭೆಗೆ ಸಂಬಂಧಪಟ್ಟಂತೆ ಬದ್ರಿಕೊಪ್ಪಲು ಗ್ರಾಮದ ಯುವಕರು ಮಂಡ್ಯದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಬಂಧಿತ ಯುವಕರನ್ನ ಭೇಟಿ ಮಾಡಲು ಮುತಾಲಿಕ್ ಮುಂದಾಗಿದ್ದರು. ಆದರೆ ಮುತಾಲಿಕ್ ಆಗಮನಕ್ಕೂ ಮುನ್ನವೇ ಮಂಡ್ಯ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿಯೇ ತಡೆದು ಜಿಲ್ಲೆಗೆ ಪ್ರವೇಶಿಸದಂತೆ ತಾಕೀತು ಮಾಡಿದ್ದಾರೆ.ಇದೇ ವೇಳೆ ಪೊಲೀಸರು ಆದೇಶ ಪತ್ರ ತೋರಿಸಿ ವಾಪಾಸ್ ಕಳುಹಿಸಿದ್ದಾರೆ. ಇದೆ ವೇಳೆ ಟೀ ಕುಡಿಯಲು ಹೋಟೆಲ್‌ ಗೆ ತೆರಳಲು…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಆಗಿರುವ ದರ್ಶನ್  ಇದೀಗ ಅವರ ಪರ ವಕೀಲರಿಂದ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟಿಗೆ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿಗೆ ನಟ ದರ್ಶನ್ ಅವರನ್ನು ನೋಡಲು ತಾಯಿ ಮೀನಾ ತೂಗುದೀಪ್, ಅಕ್ಕ ಹಾಗೂ ಭಾವ, ಸೋದರ ಅಳಿಯ ಜೈಲಿಗೆ ಭೇಟಿ ನೀಡಿದ್ದರು. ಅಲ್ಲದೆ ಪತ್ನಿ ವಿಜಯಲಕ್ಷ್ಮಿ ಕೂಡ ಭೇಟಿ ನೀಡಿ ಕಾನೂನು ಹೋರಾಟದ ಕುರಿತು ಚರ್ಚಿಸಿದ್ದರು. ಇದೀಗ ನಟ ದರ್ಶನ್ ಅವರು ಜಾಮೀನು ಕೋರಿ ಬೆಂಗಳೂರಿನ ಸೆಕ್ಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

Read More

ಬೆಂಗಳೂರು : ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು, ಇದೀಗ ಬೆಂಗಳೂರಿನ ಜನರಲ್ಲಿ ನಿಫಾ ವೈರಸ್ ಕುರಿತು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಮೃತ ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ. ಅದರಲ್ಲಿ ಓರ್ವ ವ್ಯಕ್ತಿಗೆ ಸೋಂಕಿನ ಗುಣಲಕ್ಷಣಗಳು ಕೂಡ ಪತ್ತೆಯಾಗಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸದ್ಯ ಕೋವಿಡ್​ನಲ್ಲಿ ಭಯ ಹುಟ್ಟಿಸಿದ್ದ ಕ್ವಾರಂಟೈನ್ ಈಗ ಮತ್ತೆ ನಿಫಾ ಹೆಸರಲ್ಲಿ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬಿ ಅಲರ್ಟ್ ಅಂತಿದ್ದಾರೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ.

Read More

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಪೊಲೀಸ್​ ವಶದಲ್ಲಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಈಗ ಬಯಲಾಗುತ್ತಿವೆ. ಹೂ ಗುಚ್ಛ ನೀಡುವ ನೆಪದಲ್ಲಿ ಇಂಜೆಕ್ಟ್‌ ಮಾಡಲು ಮುನಿರತ್ನ ಅವರು ಪ್ಲ್ಯಾನ್‌ ಹಾಕಿಕೊಂಡಿದ್ದರು ಎಂದು ಹೇಳಲಾಗಿದೆ. ಹೌದು ವಿಪಕ್ಷ ನಾಯಕರದ ಆರ್ ಅಶೋಕ್ ಸೇರಿದಂತೆ ತಮ್ಮ ಪಕ್ಷದವರು ಸೇರಿದಂತೆ ವಿರೋಧಿಗಳಿಗೆ ಈ ಒಂದು ಏಡ್ಸ್ ರಕ್ತ ಬಳಸಿ ಎಚ್‌ಐವಿ ಹಬ್ಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ಒಂದು ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವೆಂಗ್ಯವಾಡಿದೆ. ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್…

Read More

ಆಂಧ್ರಪ್ರದೇಶ : ತಿರುಪತಿ ಲಡ್ಡು ವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್ ಶ್ಯಾಮಲಾ ರಾವ್ ಅವರು ಹೌದು ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವುದು ನಿಜ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಟಿಟಿಡಿ ಎಕ್ಸಿಕ್ಯೂಟಿವ್ ಆಫೀಸರ್ ಶಾಮಲಾ ರಾವ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಿ ಲ್ಯಾಬ್ ಗಳಲ್ಲಿ ನಾವು ಪರೀಕ್ಷೆ ಮಾಡಿದ್ದೆವು. ಆದರೆ ವರದಿ ನೋಡಿ ನಮಗೆ ಆಘಾತ ಉಂಟಾಯಿತು. ದನದ ಕೊಬ್ಬು, ಮೀನಿನ ಎಣ್ಣೆ ನೋಡಿ ಶಾಕ್ ಆಯ್ತು. ಅದರ ಜೊತೆಗೆ ಹಂದಿಯ ಮಾಂಸ, ಪಾಮ್ ಆಯಿಲ್, ಬೀಫ್ ಟಾಲ್ಲೋ, ಫಿಶ್ ಆಯಿಲ್, ಸೂರ್ಯಕಾಂತಿ ಎಣ್ಣೆ ಇತ್ತು. ಹಿಂದಿನ ಸರ್ಕಾರ ತೂಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು. ಲಡ್ಡುಗೆ ಪೂರೈಕೆ ಆದ ತುಪ್ಪ ಅತ್ಯಂತ ಕಲಬೆರಿಕೆ ಆಗಿತ್ತು. ಅತ್ಯಂತ ಕಳಪೆ ಮಟ್ಟದ ತುಪ್ಪವನ್ನು…

Read More

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನಗೆ ರಾಜಾತಿಥ್ಯ ನೀಡಿದ ಪ್ರಕರಣದ ಬಳಿಕ ಸೆಂಟ್ರಲ್ ಜೈಲ್​ನಲ್ಲಿ 26 ಮೊಬೈಲ್​ಗಳು ಪತ್ತೆಯಾಗಿದ್ದವು. ಅವುಗಳ ಜಾಡು ಹಿಡಿದ ಹೊರಟ ಪೊಲೀಸರು ಇದೀಗ ಕೊನೆಗೂ ಜೈಲ್​ನಲ್ಲಿ ಮೊಬೈಲ್​ ರವಾನೆ ಮಾಡುತ್ತಿದ್ದ ಖೈದಿಯನ್ನು ಲಾಕ್​ ಮಾಡಿದ್ದಾರೆ. ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜತಿಥ್ಯ ಕೇಸ್​​ಗೆ ಸಂಬಂಧಿಸಿದಂತೆ ಸೆಂಟ್ರಲ್ ಜೈಲ್​ನಲ್ಲಿ ಮೊಬೈಲ್​ ರವಾನೆ ಮಾಡುತ್ತಿದ್ದ ಕಿಂಗ್​ ಪಿನ್​ನನ್ನು ಪೊಲೀಸರು ಕೊನೆಗೂ ಲಾಕ್​ ಮಾಡಿದ್ದಾರೆ. ಇತ್ತೀಚೆಗೆ ಪತ್ತೆಯಾದ 26 ಮೊಬೈಲ್​ಗಳ ಜಾಡು ಹಿಡಿದ ಖಾಕಿ, ಕೆಜಿಎಫ್ ಮೂಲದ ವಿಜಯ್ ಎಂಬಾತನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ದಾಳಿ ವೇಳೆ 1.3 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಫೋನ್​ಗಳು, 7 ಎಲೆಕ್ಟ್ರಿಕ್ ಸ್ಟವ್‌ಗಳು, 5 ಚಾಕುಗಳು, 3 ಮೊಬೈಲ್ ಫೋನ್ ಚಾರ್ಜರ್‌ಗಳು, 2 ಪೆನ್ ಡ್ರೈವ್‌ಗಳು, 36,000 ರೂಪಾಯಿ ನಗದು, ಸಿಗರೇಟ್, ಬೀಡಿ ಮತ್ತು ಬೆಂಕಿಕಡ್ಡಿ ಬಾಕ್ಸ್‌ಗಳು ಸೇರಿದಂತೆ 15 ಮೊಬೈಲ್ ಫೋನ್‌ಗಳು ಕೂಡ ಪತ್ತೆಯಾಗಿದ್ದವು. ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿದಾಗ ಮತ್ತೆ ಕೆಲ…

Read More

ವಿಜಯನಗರ : ಸಾವು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇದೀಗ ವಿಜಯನಗರದಲ್ಲಿ ಭೀಕರ ಅಪಘಾತ ಒಂದು ನಡೆದಿದ್ದು, ವಾಕಿಂಗ್ ಮಾಡುತ್ತಿದ್ದ ಪಾದಚಾರಿಗಳ ಮೇಲೆ ವೇಗವಾಗಿ ಬಂದಂತಹ ಲಾರಿ ಒಂದು ಹರಿದಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದರೆ ಒಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಹೌದು ಇಂದು ಬೆಳಿಗ್ಗೆ ಬೆಂಗಳೂರಿನಿಂದ ರಾಜಸ್ಥಾನದತ್ತ ಹೊರಟಿದ್ದ ಲಾರಿಯೊಂದು ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಆಲೂರಿನ ಸಿದ್ದಲಿಂಗಯ್ಯ(39) ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ದೇವಸಮುದ್ರದ ಕೊಟ್ರಯ್ಯ(26) ಮೃತ ರ್ದುದೈವಿಗಳು ಎನ್ನಲಾಗಿದೆ. ಗಾಯಗೊಂಡ ಮತ್ತೊಬ್ಬ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಪಡೆದುಕೊಂಡು ಬಿಡುಗಡೆಯಾದ ತಕ್ಷಣ ಅತ್ಯಾಚಾರ ಪ್ರಕಾರದಲ್ಲಿ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೋಲಿಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪೋಟಕ ವಾದಂತಹ ಮಾಹಿತಿ ಹೊರ ಬಿದ್ದಿದ್ದು, ಅದರಲ್ಲೂ ಮುನಿರತ್ನ ಮಾಡಿದ್ದ ಪ್ಲ್ಯಾನ್ ಗಳನ್ನ ಕೇಳಿದರೆ ಎಂಥವರಿಗೆ ಆದರೂ ಎದೆ ನಡುಗುತ್ತದೆ. ಅದರಲ್ಲೂ ತಮ್ಮದೇ ಪಕ್ಷದಲ್ಲಿದ್ದ ವ್ಯಕ್ತಿಗಳ ಜೀವನವನ್ನೇ ಹಾಳು ಮಾಡುವ ಹುನ್ನಾರ ಶಾಸಕ ಮುನಿರತ್ನ ಮಾಡಿದ್ದಾರೆ ಎನ್ನಲಾಗಿದೆ. ಹೌದು ವಿಪಕ್ಷ ನಾಯಕರಾದ ಆರ್ ಅಶೋಕ್ ಅವರಿಗೆನೆ ಬಿಜೆಪಿ ಶಾಸಕ ಮುನಿರತ್ನ ಏಡ್ಸ್ ರಕ್ತದ ಇಂಜೆಕ್ಟ್ ಮಾಡಲು ಹೋಗಿದ್ರಂತೆ. ಈ ಒಂದು ವಿಷಯ ತಿಳಿದು ತಕ್ಷಣನಾಯಕ ಆರ್ ಅಶೋಕ್ ಸಹಜವಾಗಿ ಬೆಚ್ಚಿಬಿದ್ದಿದ್ದಾರೆ. ಈ ವಿಚಾರವಾಗಿ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಮುನಿರತ್ನ ಅವರನ್ನ ನಾವ್ಯಾರು ಬೆಂಬಲಿಸಲ್ಲ. ಉಪ್ಪು ತಿಂದವ ನೀರು ಕುಡಿಯಲೇಬೇಕು. ಈ ಬಗ್ಗೆ ಪೊಲೀಸರು ತನಿಖೆ…

Read More