Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರ ದುರಂತ ಒಂದು ನಡೆದಿದ್ದು, ಮಹಿಳೆ ಒಬ್ಬರು ಹೇರ್ ಡ್ರೈಯರ್ ಬಳಸುತ್ತಿರುವ ಸಂದರ್ಭದಲ್ಲಿ ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈಗಳ ಬೆರಳುಗಳು ಛಿದ್ರ ಛಿದ್ರವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಈ ಒಂದು ಅವಘಡ ಸಂಭವಿಸಿದೆ. ಹೌದು ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೇರ್ ಡ್ರೈಯರ್ ಸ್ಫೋಟವಾಗಿ ಮಹಿಳೆಯ ಎರಡು ಕೈಗಳು ಛಿದ್ರವಾಗಿವೆ. ತಕ್ಷಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಶಿಕಲಾ ಎನ್ನುವವರು ಹೇರ್ ಡ್ರೈಯರ್ ಅನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದರು. ಆದರೆ ಅವರು ಇಲ್ಲದ ವೇಳೆ ಬಸಮ್ಮ ಎನ್ನುವವರು ಆ ಹೇರ್ ಡ್ರೈಯರ್ ಪಾರ್ಸಲ್ ಅನ್ನು ತೆಗೆದುಕೊಂಡಿದ್ದರು. ಈ ವೇಳೆ ಅವರು ಹೇರ್ ಡ್ರೈಯರ್ ಅನ್ನು ಓಪನ್ ಮಾಡಿ ಸ್ವಿಚ್ ಆನ್ ಮಾಡಿದ ಕೂಡಲೇ ಬ್ಲಾಸ್ಟ್ ಆಗಿದೆ. ಮೃತ ಯೋಧನ ಪತ್ನಿ ಬಸಮ್ಮಗೆ…
ಬೆಂಗಳೂರು : ಸುಮಾರು 46 ಪ್ರಕರಣಗಳ ಭಾಗಿಯಾಗಿದ್ದ, ಹಾಗೂ 25 ವರ್ಷಗಳ ಹಿಂದಿನ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಿ ಹಳ್ಳಿಯ ಠಾಣೆಯ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ. ಹೌದು ಕಳೆದ 25 ವರ್ಷಗಳ ಬಳಿಕ ಸರದಾರ (50) ಸುಹೇಲ್ (51) ಎನ್ನುವವರ ಬಂಧನವಾಗಿದೆ. ಬಂಧಿತರು, ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಬನಶಂಕರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಕಳೆದ 25 ವರ್ಷಗಳಿಂದ ಇವರಿಬ್ಬರು ತಲೆ ಮರೆಸಿಕೊಂಡಿದ್ದರು. 46 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ತಿರುಮಲ ಶೆಟ್ಟಿ ಹಳ್ಳಿ ಠಾಣೆಯಲ್ಲಿ 5 ಕೇಸ್, ಹೊಸಕೋಟೆಯಲ್ಲಿ 5, ಅನುಬಂಧನ ಹಳ್ಳಿಯಲ್ಲಿ 5, ನಂದಗುಡಿ ಠಾಣೆಯಲ್ಲಿ 7, ಕೆಂಗೇರಿ ಠಾಣೆಯಲ್ಲಿ 1, ಸರ್ಜಾಪುರದಲ್ಲಿ 1, ವರ್ತುರ್ ಠಾಣೆಯಲ್ಲಿ 1, ಜ್ಞಾನಭಾರತಿ ಠಾಣೆಯಲ್ಲಿ 1, ಕೋಲಾರ ಜಿಲ್ಲೆಯ ಮಾಲೂರು ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಇಬ್ಬರು ಭಾಗಿಯಾಗಿದ್ದರು…
ರಾಯಚೂರು : ಪ್ರೌಢಶಾಲೆ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ಅಕ್ರಮವಾಗಿ ಸಿಎ ಸೈಟ್ನಲ್ಲಿ ನಿರ್ಮಿಸಿದ್ದ ಶಿವ ಹಾಗೂ ಗಣೇಶನ ದೇವಸ್ಥಾನ ನಿರ್ಮಾಣ ಮಾಡಿದ್ದಕ್ಕೆ ರಾತ್ರೋರಾತ್ರಿ ಬುಲ್ಡೋಜರ್ ಬಂದು ಪೊಲೀಸರ ಬಿಗಿ ಭದ್ರತೆಯಲ್ಲಿ ಎರಡು ದೇವಸ್ಥಾನಗಳನ್ನು ತೆರವುಗೊಳಿಸಿರುವ ಘಟನೆ ರಾಯಚೂರು ನಗರದ ಸಂತೋಷ ನಗರದಲ್ಲಿ ನಡೆದಿದೆ. ಹೌದು ನಿನ್ನೆ ರಾತ್ರಿ ಈ ಒಂದು ತೆರವು ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಿಎ ಸೈಟ್ನಲ್ಲಿ ನಿರ್ಮಿಸಿದ್ದ ಶಿವ ಮತ್ತು ಗಣೇಶನ ಗುಡಿಗಳನ್ನು ನಿನ್ನೆ ರಾತ್ರಿ ತೆರವು ಮಾಡಲಾಗಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು, ಜೆಸಿಬಿಗಳ ಮೂಲಕ ಗುಡಿಗಳನ್ನು ಧ್ವಂಸಗೊಳಿಸಲಾಗಿದೆ. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಕಟ್ಟಲಾಗಿದ್ದ ಶೆಡ್ ಅನ್ನೇ ಗುಡಿ ಮಾಡಿಕೊಂಡು ಕೆಲ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು. 2022ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಜಾಗ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಸ್ಥಳೀಯರಿಂದ ಗುಡಿಗಳ…
ಉಡುಪಿ : ನಿನ್ನೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ನಾಯಕ ವಿಕ್ರಂ ಗೌಡ ಮಧ್ಯ ಗುಂಡಿನ ಚಕಮಕಿ ನಡೆದಿದ್ದು ಈ ಒಂದು ಶೂಟ್ ಔಟ್ ನಲ್ಲಿ ವಿಕ್ರಂ ಗೌಡನ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡನ ಅಂತ್ಯಕ್ರಿಯೆಯನ್ನು ಆತನ ಸ್ವಂತ ಮನೆಯಲ್ಲಿಯೇ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೌದು ವಿಕ್ರಂ ಮನೆ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಲಾಗಿದ್ದು, ಸದ್ಯ ವಿಕ್ರಂ ಗೌಡ ಮೂಲ ಮನೆಯಲ್ಲಿ ಯಾರು ಇಲ್ಲ ಎನ್ನಲಾಗಿದೆ. ಆತನ ಹಳೆ ಮನೆಯನ್ನ ಕೆಡವಿ ಹೊಸ ಮನೆ ಕಟ್ಟಿಸುಲಾಗುತ್ತಿದೆ. ಹಾಗಾಗಿ ಮನೆ ಆವಣದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಉಡುಪಿಯ ಕೂಡ್ಲು ಗ್ರಾಮದಲ್ಲಿ ವಿಕ್ರಂ ಅತ್ಯಸಂಸ್ಕಾರ ನೆರವೇರಲಿದೆ ಎಂದು ವಿಕ್ರಂ ಗೌಡನ ಸಂಬಂಧಿಕರು ತಿಳಿಸಿದ್ದಾರೆ.ಈಗಾಗಲೇ ವಿಕ್ರಂ ಗೌಡನ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು, ಕೆಲವೇ ಕ್ಷಣಗಳಲ್ಲಿ ಆತನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಇನ್ನು ನಿನ್ನೆ ನಡೆದ ಈ ಒಂದು ಗುಂಡಿನ ಚಕಮಕಿಯಲ್ಲಿ ವಿಕ್ರಂ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಹಣ ವಾಪಸ್ಸು ಬರ ಬೇಕಂದ್ರೆ ಈ ವಿಶೇಷವಾದಂತ ಒಂದು ಮಂತ್ರವನ್ನು 21 ಬಾರಿ ಪಠಿಸಿದರೆ ಸಾಕು ವೀಕ್ಷಕರೇ ಯಾವ ಜಾಗದಲ್ಲಿ ಇದು ಕೂಡ ಆ ವ್ಯಕ್ತಿ ಬಂದು ನಿಮಗೆ ಹಣ ಅನ್ನೋದು ಕೊಡ್ತಾನೆ. ಸಾಕ್ಷಾತ್ ಬ್ರಹ್ಮ ದೇವನ ಅನುಗ್ರಹದಿಂದ ಈ ಒಂದು ಮಂತ್ರವನ್ನ ನೀವು ನಾನು ಹೇಳಿದ ರೀತಿಯಲ್ಲಿ ಪಡಿಸಿ ಬಿಟ್ಟರೆ ಸಾಕು ನಿಮಗೆ ಕೊಟ್ಟಂತಹ ಅನ್ನೋದು ವಾಪಸ್ ಬರುತ್ತದೆ. ಹೌದು ಇದು ಸತ್ಯ. ಹಲವಾರು ಜನಗಳಿಗೆ ಈ ಒಂದು ಮಂತ್ರವನ್ನು ಕೊಟ್ಟಿದೆ. ಕೊಟ್ಟಿದ್ದ ಮೇಲೆ ಅವರಿಗೆ ಆ ವ್ಯಕ್ತಿಗಳು ಬಂದು ದುಡ್ಡು ಕೊಟ್ಟಿದ್ದಾರೆ. ಆ ರೀತಿಯಲ್ಲಿ ಒಂದು ಮಿರಾಕಲ್ ಅಂದ್ರೆ ಒಂದು ಪವಾಡ ಅಂತಾನೇ ಹೇಳಬಹುದು ಕೊಟ್ಟಂತಹವರು ಬಂದು ನಿಮಗೆ ವಾಪಸ್ ಕೊಡುತ್ತಾರೆ. ತಂತ್ರವನ್ನು ಹೇಗೆ ಮಾಡಬೇಕು ಅಂತ ನೀವು ಕೇಳುತ್ತೀರಾ ಈ ತಂತ್ರವನ್ನು ಹೇಗೆ ಮಾಡಬೇಕು ಅಂದ್ರೆ ಈ…
ಬೆಂಗಳೂರು : ನಾಳೆ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡಲು ಬಾರ್ ಅಸೋಸಿಯೇಷನ್ ಈ ಹಿಂದೆ ನಿರ್ಧರಿಸಿತ್ತು. ಇದೀಗ ಇಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಬಾರ್ ಅಸೋಸಿಯೇಷನ್ ನಾಳೆ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡುವ ನಿರ್ಧಾರವನ್ನು ವಾಪಸ್ ಪಡೆದಿದೆ. ಹೌದು ನಾಳೆ ರಾಜ್ಯಾದ್ಯಂತ ಯಾವುದೇ ಕಾರಣಕ್ಕೂ ಬಾರ್ಗಳನ್ನು ಬಂದ್ ಮಾಡುವುದಿಲ್ಲ ಎಂದು ಬಂದ್ ನಿರ್ಧಾರವನ್ನು ಬಾರ್ ಅಸೋಸಿಯೇಷನ್ ಇದೀಗ ಹಿಂಪಡೆದಿದೆ. ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಇದೀಗ ಯಶಸ್ವಿಯಾಗಿದೆ. ಹಾಗಾಗಿ ನಾಳೆ ಯಾವುದೇ ಕಾರಣಕ್ಕೂ ರಾಜ್ಯದ ಎಲ್ಲಾ ಬಾರ್ ಗಳನ್ನು ಬಂದ್ ಮಾಡುವುದಿಲ್ಲ. ಕರುಣಾಕರ ಹೆಗಡೆ ನೇತೃತ್ವದ ತಂಡವು ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಿ, ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಸಂಧಾನ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಎಂದಿನಂತೆ ಬಾರ್ ಗಳಲ್ಲಿ ಮದ್ಯ ಮಾರಾಟ ನಡೆಯಲಿದೆ.…
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೀಗ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಒಟ್ಟು 12 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಸರ್ಕಾರ ರದ್ದು ಮಾಡಲು ಸಂಚು ರೂಪಿಸಿದೆ ಎಂದು ಗಂಭೀರವಾದಂತಹ ಆರೋಪ ಮಾಡಿದರು. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಸಂಚು ಮಾಡುತ್ತಿದ್ದಾರೆ. ಬಡವರ ರೇಷನ್ ಕಾರ್ಡ್ ರದ್ದಾಗುತ್ತಿರುವುದರಿಂದ ಕಾಂಗ್ರೆಸ್ ರಕ್ತ ಹೀರುವ ಸರ್ಕಾರವಾಗಿದೆ. ರೇಷನ್ ಕಾರ್ಡ್ ರದ್ದು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ರೇಷನ್ ಕಾರ್ಡ್ ಕೊಡುವಾಗ ಅಧಿಕಾರಿಗಳು ಕತ್ತೆ ಕಾಯುತಿದ್ರ? ಅನರ್ಹರಿಗೆ ಬಿಪಿಎಲ್ ಕಾರ್ಡ್ ನೀಡಿದ್ದಾರೆ ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಬಿಜೆಪಿ ಆರ್ ಎಸ್ ಎಸ್ ವಿಷ ಇದ್ದಂತೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ನವರು ಬರಿ ವಿಷ ಅಲ್ಲ ಕಾರ್ಕೋಟ ವಿಷವಿದ್ದಂತೆ.ಆರ್ ಎಸ್ ಎಸ್ ಇಲ್ಲದಿದ್ದರೆ ದೇಶವನ್ನು ಒಡೆದು ಕ್ಷೆದ್ರ ಛಿದ್ರ…
ಶಿವಮೊಗ್ಗ : ಕೀಟನಾಶಕ ಸೇವಿಸಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಒಬ್ಬ ಅಸ್ವಸ್ಥಗೊಂಡಿದ್ದ, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಮಣತಿ ಗ್ರಾಮದಲ್ಲಿ ನಡೆದಿದೆ. ಹೌದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಅನುದೀಪ್ (16) ಎಂದು ತಿಳಿದುಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಆತ ಕೀಟನಾಶಕ ಸೇವಿಸಿದ್ದತಕ್ಷಣ ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದರ ಕುರಿತು ಇನ್ನು ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
xಧಾರವಾಡ : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ತಂದೆಯ ತಲೆಯ ಮೇಲೆ, ಕಲ್ಲು ಎತ್ತಿ ಹಾಕಿ ಜಜ್ಜಿ ಭೀಕರವಾಗಿ ಮಗನೊಬ್ಬ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ನಿವಾಸಿ ಅಡಿವೆಪ್ಪ ತಡಕೋಡ (57) ಎಂಬುವವರು ಹೆತ್ತ ಮಗನಿಂದಲೇ ಕೊಲೆಗೆ ಈಡಾಗಿದ್ದಾರೆ. ಇನ್ನು ಕೊಲೆ ಮಾಡಿದ ಮಗನನ್ನು ಶಿವಯೋಗಿ ಎಂದು ತಿಳಿದುಬಂದಿದೆ. ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದ. ಇದಕ್ಕೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿ ತನ್ನ ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡುವ ಶಾಸ್ತ್ರ ಕೂಡ ಇಟ್ಟುಕೊಂಡಿದ್ದ. ಅಡಿವೆಪ್ಪನ ಹತ್ಯೆಯಾಗುವ ಹಿಂದಿನ ರಾತ್ರಿ ಇದೇ ವಿಷಯಕ್ಕೆ ಮನೆಯಲ್ಲಿ ಮಗನೊಂದಿಗೆ ಜಗಳ ಕೂಡ ನಡೆದಿತ್ತಂತೆ. ಕಳೆದ ನ.13 ರಂದು ತನ್ನ ಮನೆಯ ಪಕ್ಕದ ಶೆಡ್‌ನಲ್ಲಿ ಮಲಗಿದ ಜಾಗದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ. ಅಡಿವೆಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳಗಾಗುವಷ್ಟರಲ್ಲಿ ಅಡಿವೆಪ್ಪ ಹೆಣವಾಗಿದ್ದನ್ನು ಕಂಡು ಆತನ ಮನೆಯವರು ಕಕ್ಕಾಬಿಕ್ಕಿಯಾಗಿದ್ದರು.…
ರಾಮನಗರ : ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರ ಬೀಳಲಿದೆ.ಆದರೆ ಮೂರೂ ಕ್ಷೇತ್ರಗಳ ಪೈಕಿ ಹೈ ವೋಲ್ಟೇಜ್ ಕಣವಾಗಿ ಚನ್ನಪಟ್ಟಣ ಕ್ಷೇತ್ರ ಗಮನ ಸೆಳೆದಿದೆ. ಇದೀಗ ಫಲಿತಾಂಶಕ್ಕೂ ಮುನ್ನ ಚೆನ್ನಪಟ್ಟಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದ್ದು ಜನರು ಭೂಮಿ ಕುರಿ ಕೋಳಿ ಜಾನುವಾರುಗಳನ್ನು ಅಡವಿಟ್ಟಿದ್ದಾರೆ. ಹೌದು NDA ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರು ಸ್ಪರ್ಧೆ ಮಾಡಿದ್ದಾರೆ. ಇನ್ನು ಉಪಚುನಾವಣೆಗೂ ಮುನ್ನ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸಿಪಿ ಯೋಗೇಶ್ವರ್ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇವರಿಬ್ಬರ ಮಧ್ಯ ಇದೀಗ ಜನರು ಬೆಟ್ಟಿಂಗ್ ನಡೆಸಿದ್ದಾರೆ.ಈ ಬೆಟ್ಟಿಂಗ್ ದಂಧೆ ಬರೀ ಚನ್ನಪಟ್ಟಣದ ವ್ಯಾಪ್ತಿಯಲ್ಲಷ್ಟೇ ನಡೆಯುತ್ತಿಲ್ಲ, ಬದಲಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಬುಕ್ಕಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯರಿಗೆ ಸಿಪಿ. ಯೋಗೀಶ್ವರ್ ಗೆಲ್ಲುವ ಕಂಟೆಸ್ಟೆಂಟ್ ಆಗಿದ್ರೆ ಹೊರಗಿನವರಿಗೆ ನಿಖಿಲ್ ಕುಮಾರಸ್ವಾಮಿ ಆಗಿದ್ದಾರೆ. ಬೆಟ್ಟಿಂಗ್ ಕಟ್ಟುವವರು ಸಹ…













