Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಇತ್ತೀಚಿಗೆ ವಿಜಯಪುರ ನಗರದಲ್ಲಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ವ್ಯಕ್ತಿ ಒಬ್ಬ ಕಿಡ್ನ್ಯಾಪ್ ಮಾಡಿದ್ದ. ಬಳಿಕ ಮತ್ತೆ ಆಸ್ಪತ್ರೆಗೆ ಬಂದು ತಾಯಿಯ ಕೈಗೆ ಒಪ್ಪಿಸಿದ್ದ ಘಟನೆ ನಡೆದಿತ್ತು. ಇದೀಗ ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ದಿನದ ಗಂಡು ಮಗುವನ್ನು ಮಹಿಳೆಯರಿಬ್ಬರೂ ನರ್ಸ್ ವೇಷದಲ್ಲಿ ಬಂದು ಅಪಹರಿಸಿರುವ ಘಟನೆ ನಡೆದಿದೆ. ಹೌದು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ವಾರ್ಡ್ ನಂಬರ್ 115ರಲ್ಲಿ ಮಗು ಅಪಹರಣವಾಗಿದೆ. ನಿನ್ನೆ ಮುಂಜಾನೆ ನಾಲ್ಕು ಗಂಟೆಗೆ ಗಂಡು ಮಗುವಿಗೆ ಕಸ್ತೂರಿ ಎನ್ನುವ ಮಹಿಳೆ ಜನ್ಮ ನೀಡಿದ್ದರು. ರಕ್ತಪಾಸಣೆಗೆ ಮಗು ಕರೆದುಕೊಂಡು ಬನ್ನಿ ಎಂದು ನಕಲಿ ನರ್ಸ್ ಗಳು ಹೇಳಿದ್ದರು. ಸಂಪೂರ್ಣವಾಗಿ ಇಬ್ಬರು ಮಹಿಳೆಯರು ಮುಖ ಮುಚ್ಚಿಕೊಂಡು ಬಂದಿದ್ದರು. ರಕ್ತ ತಪಾಸಣೆಗಾಗಿ ಮಗುವನ್ನು ತೆಗೆದುಕೊಂಡು ಸಂಬಂಧಿಕರು ಹೋಗಿದ್ದರು. ಈ ವೇಳೆ ನಕಲಿ ನರ್ಸ್ಗಳು ಮಗುವನ್ನು ನಮಗೆ ಕೊಡಿ ಅಂತ ಹೇಳಿದ್ದಾರೆ ಬಳಿಕ ಮಗುವನ್ನು ಎತ್ತಿಕೊಂಡು ಮಹಿಳೆಯರು ಪರಾರಿಯಾಗಿದ್ದಾರೆ. ಹೆತ್ತ ಮಗುವನ್ನು ಕಳೆದುಕೊಂಡು ಇದೀಗ ಕಸ್ತೂರಿ ಕಣ್ಣೀರು ಇಡುತ್ತಿದ್ದಾರೆ. ಮೂಲತಃ ಚಿತಾಪುರ…
ಹಾಸನ : ತನ್ನನ್ನು ಮದುವೆಯಾಗುವಂತೆ ಯುವಕನೊಬ್ಬ ಯುವತಿಗೆ ಪೀಡಿಸುತ್ತಿದ್ದ. ಈ ವೇಳೆ ಮದುವೆಗೆ ಒಪ್ಪದ ಯುವತಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾರಗೋಡು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಮದುವೆಗೆ ಒಪ್ಪದ ಯುವತಿಯ ಕೊಲೆಗೆ ಯತ್ನ ನಡೆದಿರುವ ಘಟನೆ ನಡೆದಿದೆ. ಮದುವೆಗೆ ನಿರಾಕರಿಸಿದ ಗಾನವಿ ಎನ್ನುವ ಯುವತಿಗೆ ಮೋಹಿತ್ ಎನ್ನುವ ಯುವಕ ಕೊಲೆಗೆ ಯತ್ನಿಸಿದ್ದಾನೆ. ಆಲೂರು ತಾಲೂಕಿನ ಕಾರುಗೋಡು ಗ್ರಾಮದ ಮೋಹಿತ್ ಮತ್ತು ಗಾನವಿ ಎರಡು ವರ್ಷದಿಂದ ಸ್ನೇಹಿತರಾಗಿದ್ದರು. ಮೋಹಿತ್ ನಿಂದ ಕೆಲ ದಿನಗಳಿಂದ ಗಾನವಿ ಅಂತರವನ್ನು ಕಾಯ್ದುಕೊಂಡಿದ್ದಳು. ಆದರೂ ಮದುವೆ ಆಗುವಂತೆ ಮೋಹಿತ್ ಒತ್ತಾಯ ಮಾಡುತ್ತಿದ್ದ. ಮೋಹಿತ್ ಕಾಟದ ಬಗ್ಗೆ ಗಾನವಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಯಾರ ತಂಟೆಗೂ ಯಾರು ಬರದಂತೆ ಎರಡು ಕುಟುಂಬಗಳು ಮಾತುಕತೆ ನಟಿಸಿದ್ದವು. ಗ್ರಾಮಸ್ಥರ ಜೊತೆಗೆ ಮುಚ್ಚಳಿಕೆ ಬರಿಸುವ ತಯಾರಿಯಲ್ಲಿ ಕುಟುಂಬಗಳು ಇದ್ದವು. ಈ ವೇಳೆ ಪಟ್ಟಣ ಪಂಚಾಯಿತಿ ಮುಂಭಾಗ ನಿಂತಿದ್ದ ಗಾನವಿ…
ಬೆಂಗಳೂರು : ಸೌದಿಯಲ್ಲಿ ನಡೆದ 2 ದಿನಗಳ ಕಾಲ ನಡೆದ 2025 IPL ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಮೊದಲನೇ ದಿನ ಕನ್ನಡಿಗ KL ರಾಹುಲ್ ಅವರನ್ನು ಕೈಬಿಟ್ಟ RCB ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಸಹಜವಾಗಿ ಅಸಮಾಧಾನಗೊಂಡಿದ್ದರು. ಬಳಿಕ ನಿನ್ನೆ ನಡೆದ ಮತ್ತೊಂದು ಹರಾಜು ಪ್ರಕ್ರಿಯೆಯಲ್ಲಿ ಹಲವು ಸ್ಟಾರ್ ಆಟಗಾರರನ್ನು ಆರ್ ಸಿ ಬಿ ಖರೀದಿಸುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಳ ತಂದಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಸ್ಟ್ರಾಂಗ್ ಟೀಮ್ ಆಗಿದ್ದು, ಈ ಒಂದು ತಂಡಕ್ಕೆ ನಾಯಕ ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ. ಆರ್‌ಸಿಬಿ ಖರೀದಿಸಿರುವ ಎಲ್ಲಾ ಆಟಗಾರರಲ್ಲಿ ಒಳ್ಳೆಯ ಬ್ಯಾಟ್ಸ್ಮ ಮ್ಯಾನ್ ಮತ್ತು ಬೌಲರ್ಸ್ ಗಳಿದ್ದಾರೆ. ಆದರೆ ನಾಯಕತ್ವ ಜವಾಬ್ದಾರಿ ವಹಿಸುವ ಆಟಗಾರ ಯಾರು ಇಲ್ಲ. ಹೀಗಾಗಿ ಸಹಜವಾಗಿ ಕಿಂಗ್ ವಿರಾಟ್ ಕೊಹ್ಲಿ ಅವರೇ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್‌ಸಿಬಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ…
ತೆಲಂಗಾಣ : ಹೈದರಾಬಾದ್ ನಲ್ಲಿ ಮಧ್ಯಾಹ್ನದ ಊಟದ ವೇಳೆ ಒಟ್ಟಿಗೆ ಮೂರು ಪೂರಿಗಳನ್ನು ತಿಂದು ಉಸಿರುಗಟ್ಟಿ 11 ವರ್ಷದ ಶಾಲಾ ಬಾಲಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ, ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿಗಳನ್ನು ತಿಂದು ಉಸಿರು ಗಟ್ಟಿ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ ಎಂದು ಕರೆ ಬಂದಿತ್ತು ಎಂದು ಮೃತ ಬಾಲಕನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಸ್ವಸ್ಥನಾಗಿದ್ದ ಬಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಚನ್ನಪಟ್ಟಣ : ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದಂತಹ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವಂತಹ ಬಿವೈ ವಿಜಯೇಂದ್ರ ಅವರ ಪಿತೂರಿಯಿಂದ ನಾನು ಬಿಜೆಪಿಯಿಂದ ಹೊರ ಬಂದೆ ಹೊರತು, ನಾನಾಗೆ ಬಿಟ್ಟು ಬರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ತಿಳಿಸಿದರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಬರಲಿಲ್ಲ ಪಿತೂರಿಯಿಂದಾಗಿ ಹೊರ ಬಂದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು. ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಪಿತೂರಿ ಮಾಡಿದರು. ಇವರ ಪಿತೂರಿಯಿಂದಾಗಿ ನಾನು ಬಿಜೆಪಿಯಿಂದ ಹೊರ ಬಂದೆ. ಅನಿವಾರ್ಯ ರಾಜಕೀಯ ಸ್ಥಿತಿ ನನ್ನನ್ನು ಆ ರೀತಿ ಮಾಡಿಸಿದೆ.ನಾನು ಪಕ್ಕ ಕಾಂಗ್ರೆಸ್ಸಿಗ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಜೆಡಿಎಸ್ ನವರು ಸೋತು ಸೋಣವಾಗಿದ್ದಾರಲ್ಲ ಅದಕ್ಕೇನು ಹೇಳುತ್ತಾರೆ? ಮಗನ್ನೇ ಗೆಲ್ಲಿಸಿಕೊಳ್ಳದವರು ಕೇಂದ್ರ ಸಚಿವರಾಗಿ ಏನು ಪ್ರಯೋಜನ? ಕುಮಾರಸ್ವಾಮಿಗೆ ಇದ್ರೆ ಈ ಊರು ಬಿಟ್ಟರೆ ಇನ್ನೊಂದು ಊರು ಎಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್…
ಮೈಸೂರು : ಚನ್ನಪಟ್ಟಣ ಉಪಚುನಾವಣೆಯ ಪ್ರಚಾರಕ್ಕೆ ಎಚ್ ಡಿ ದೇವೇಗೌಡರು ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಕರೆ ಮಾಡಿ ಕರೆದರೂ ಕೂಡ ಅವರು ಬಂದಿಲ್ಲ ಎಂದು ಶಾಸಕ ಸಾರಾ ಮಹೇಶ್ ತಿಳಿಸಿದ್ದರು. ಇವರ ಈ ಒಂದು ಹೇಳಿಕೆಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿರುಗೇಟು ನೀಡಿದ್ದು, ಉಪಚುನಾವಣೆಯ ಪ್ರಚಾರಕ್ಕೆ ಎಚ್ ಡಿ ದೇವೇಗೌಡರು ನನ್ನನ್ನು ಕರೆದೇ ಇಲ್ಲ. ಒಂದು ವೇಳೆ ಕರೆದಿದ್ದೇನೆ ಎಂದು ಹೇಳಿದರೆ ಈಗಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರಕ್ಕೆ ದೇವೇಗೌಡರು ನನ್ನನ್ನು ಕರೆದಿಲ್ಲ. ಸಾರ ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿ ಚಾಮುಂಡಿ ಬೆಟ್ಟಕ್ಕೆ ಬಾ ಅಂದರೆ ಆಗುತ್ತಾ? ಈ ಹಿಂದೆ ವಿಶ್ವನಾಥ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಹೋದರು ಅವರ ಕಥೆ ಏನಾಯ್ತು? ಆ ಕಥೆ ನನಗೂ ಆಗಬೇಕಾ? ನಾನು ಹೇಳುತ್ತಿರುವುದೇ ಸತ್ಯ. ನಾನು ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು…
ಬೆಂಗಳೂರು : ಶಿಗ್ಗಾವಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯವೆದಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಇದೀಗ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಶಿಗ್ಗಾವಿ ಉಪಚುನಾವಣೆ ಗೆಲುವಿನ ಬೆನ್ನಲ್ಲೇ ಅಜ್ಜಂಪಿರ್ ಖಾದ್ರಿಗೆ ಬಿಗ್ ಗಿಫ್ಟ್ ಸಿಕ್ಕಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷರಾಗಿ ಇದೀಗ ಖಾದ್ರಿ ಇದೀಗ ನೇಮಕಗೊಂಡಿದ್ದಾರೆ. ಶಿಗ್ಗಾವಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಬಂಡಾಯವೇದಿದ್ದ ಅಜ್ಜಂಪಿರ್ ಖಾದ್ರಿಗೆ ಭರವಸೆ ನೀಡಿದ್ದರು. ಹೀಗಾಗಿ ಖಾದ್ರಿಗೆ ಹುದ್ದೆ ನೀಡಿ ಸಿಎಂ ಸಿದ್ದರಾಮಯ್ಯ ಮಾತು ಉಳಿಸಿಕೊಂಡಿದ್ದಾರೆ. ಹೀಗಾಗಿ ಅಜ್ಜಂಪೀರ್ ಖಾದ್ರಿಗೆ ಸಿಎಂ ಸಿದ್ದರಾಮಯ್ಯ ಪ್ರಮುಖವಾದ ಹುದ್ದೆ ನೀಡಿ ಇದೀಗ ಮಾತು ಉಳಿಸಿಕೊಂಡಿದ್ದಾರೆ. ಇನ್ನು ಶಿಗ್ಗಾವಿ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಪಠಾಣ್ ಖಾನ್ ಸ್ಪರ್ಧಿಸಿ ಭರತ್ ಬೊಮ್ಮಾಯಿ ವಿರುದ್ಧ ಗೆದ್ದಿದ್ದಾರೆ.
ಮಂಡ್ಯ : ಸಾಮಾನ್ಯವಾಗಿ ಚಿನ್ನಾಭರಣ ಆಗಿರಲಿ ಅಥವಾ ನಗದು ಹಣವಾಗಿರಲಿ ಯಾವುದೇ ವಸ್ತುಗಳನ್ನು ಕಳ್ಳರು ಕದ್ದರು ಸಹ, ಕಳೆದುಕೊಂಡವರು ಅದರ ಮೇಲಿನ ಆಸೆ ಬಿಡಬೇಕು. ಆದರೆ ಮಂಡ್ಯದಲ್ಲಿ ವಿಚಿತ್ರವಾದಂತಹ ಘಟನೆ ನಡೆದಿದ್ದು, ಚಿನ್ನಾಭರಣ ಕದ್ದಂತಹ ಕಳ್ಳರು ಪ್ರಾಮಾಣಿಕವಾಗಿ ಎಲ್ಲಿಂದ ಕದ್ದರೋ ಅಲ್ಲಿಯೇ ಮರಳಿ ಇಟ್ಟಿರುವ ಘಟನೆ ನಡೆದಿದೆ. ಹೌದು ರಾಗಿಮುದ್ದನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆ ದೇವರ ಪೂಜೆಗೆ ಹೋಗಿದ್ದ ವೇಳೆ ಕಳ್ಳತನ ನಡೆದಿತ್ತು. ಮನೆಯ ಹೆಂಚುಗಳನ್ನ ತೆಗೆದು ಒಳನುಗ್ಗಿದ್ದ ಕಳ್ಳರು, ಬೀರುವನ್ನ ಹೊಡೆದು ಕಳ್ಳತನ ಮಾಡಿದ್ದರು. 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂ ಮೂರು ಜೊತೆ ಓಲೆಗಳನ್ನು ಕದಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ಸಿದ್ದೇಗೌಡ ದೂರು ನೀಡಿದ್ದರು. ಯಾವಾಗ ಪೊಲೀಸರಿಗೆ ದೂರು ಹೋಯಿತೋ ಕೂಡಲೇ ಪೊಲೀಸರಿಗೆ ಹೆದರಿ ಕದ್ದ ಚಿನ್ನಾಭರಣಗಳನ್ನು ಕಳ್ಳರು,ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಕದ್ದ ಚಿನ್ನಾಭರಣವನ್ನು ಮನೆಯ ಮುಂಭಾಗದ ಜಗಲಿ ಮೇಲೆ ಇಟ್ಟುಹೋಗಿದ್ದಾರೆ.…
ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕಾಗಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಮಗ ಕೋಪದಲ್ಲಿ ಸುತ್ತಿಗೆಯಿಂದ ತಂದೆಗೆ ಹೊಡೆದು ಗಾಯಗೊಳಿಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಆಶ್ರಯ ಕಾಲೋನಿಯಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಸ್ತಫಾ ಬೇಗ್ (42) ಎಂದು ತಿಳಿದುಬಂದಿದ್ದು, ಇನ್ನು ಶಾಹಿದ್ ಬೇಗ್ ಎನ್ನುವ ಪಾಪಿ ಮಗ ಹತ್ಯೆ ಮಾಡಿದಾವನಾಗಿದ್ದಾನೆ. ಈ ಒಂದು ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಶಿಕಾರಿಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಗ ಶಾಹಿದ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದಂತಹ ಕೊಲೆ ನಡೆದಿದ್ದು, ಕುಡಿಯಬೇಡ ಎಂದು ತಂದೆ ಬುದ್ಧಿ ಹೇಳಿದ್ದಕ್ಕೆ ಪಾಪಿ ಪುತ್ರನೊಬ್ಬ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗನಿಂದ ಕೊಲೆಯಾದ ತಂದೆಯನ್ನು ನಾಗರಾಜ್ ಮೈಸೂರು (77) ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಮಗನನ್ನು ಅಣ್ಣಪ್ಪ ಎಂದು ತಿಳಿದುಬಂದಿದೆ. ಈ ಕುರಿತು ಮೃತನ ಪತ್ನಿ ರೇಣುಕಾ, ಮಗನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ.19 ರಂದು ತಂದೆ ಮತ್ತು ಮಗನ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಮದ್ಯದ ಅಮಲಿನಲ್ಲಿ ಅಣ್ಣಪ್ಪ ತಂದೆ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ನಾಗರಾಜ್ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಾಗರಾಜ್ ಮೃತಪಟ್ಟಿದ್ದಾರೆ. ಆರೋಪಿ ಮಗ ತನ್ನ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಅಣ್ಣಪ್ಪನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.














