Author: kannadanewsnow05

ಬೆಂಗಳೂರು : ಕಳೆದ ಜುಲೈ 17 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಗೆ ರೈತ ಫಕೀರಪ್ಪಗೆ ಪಂಚೇ ಧರಿಸಿದ್ದಾನೆ ಎಂದು ಮಾಲ್ ಒಳಗಡೆ ಪ್ರವೇಶ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಫಕೀರಪ್ಪ ಕುಟುಂಬ ಸ್ಪೀಕರ್ ಯುಟಿ ಖಾದರ್ ಅವರನ್ನು ಭೇಟಿ ಮಾಡಿದರು.ಈ ವೇಳೆ ಸ್ಪೀಕರ್ ಯುಟಿ ಖಾದರ್ ಅವರು ಫಕೀರಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು. ಹೌದು ಜುಲೈ 17 ರಂದು ರೈತ ಫಕೀರಪ್ಪಗೆ ಜಿಟಿ ಮಾಲ್ ಪ್ರವೇಶಕ್ಕೆ ಬಿಟ್ಟಿರಲಿಲ್ಲ. ಹೀಗಾಗಿ ಪಂಚೇ ಧರಿಸಿ ಬಂದಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಪ್ರವೇಶ ನಿರಾಕರಿಸಿದ್ದ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ಗೆ ಪ್ರವೇಶವನ್ನು ನಿರಾಕರಿಸಿದ್ದರು. ನಂತರ ಜಿಟಿ ವರ್ಲ್ಡ್ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದರು. ಘಟನೆ ನಡೆದ ನಂತರ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿಸಿದರು. ಹಾಗಾಗಿ ಇಂದು ಫಕೀರಪ್ಪ ಕುಟುಂಬ ಸಮೇತ ವಿಧಾನಸೌಧದಲ್ಲಿ ಸ್ಪೀಕರ್ ಯುಟಿ ಖಾದರ್ ಅವರನ್ನು…

Read More

ರಾಯಚೂರು : ರಾಯಚೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಎಂಎಲ್ಸಿ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್ ಬಿದ್ದು ಮೂವರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಹೌದು ನೂತನ ಎಂಎಲ್ಸಿಗೆ ಬಸನಗೌಡ ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಫ್ಲೇಕ್ಸ್ ಬಿದ್ದು ಮೂವರಿಗೆ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದ್ದು, ಎಂಎಲ್‌ಸಿ ಬಸನಗೌಡ ಬಾದರ್ಲಿ ಸ್ವಾಗತಕ್ಕೆ ಈ ಒಂದು ಫ್ಲೆಕ್ಸ್ ಹಾಕಲಾಗಿತ್ತು. ಸಿಂಧನೂರು ಪಟ್ಟಣದ ಸಿಗ್ನಲ್ ಬಳಿ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ಏಕಾಏಕಿ ಬೃಹತ್ ಫ್ಲೆಕ್ಸ್ ಕುಸಿದು ಬಿದ್ದು ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ವೀರಾಪುರದ ಯಮನಪ್ಪ, ಅಂಬಮ್ಮ, ಚಿಟ್ಟಿಬಾಬುಗೆ ಗಾಯಗಳಾಗಿವೆ. ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಧನೂರು ಟೌನ್ ಪೊಲೀಸ್ ಹಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆಯ ವೇಳೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ ಮನಸೋ ಇಚ್ಛೆ ಹಲ್ಲೆ ನಡೆಸಿದ ಬಳಿಕ ಕ್ಷಮಾಪಣಾ (ಅಫಾಲಜಿ) ವಿಡಿಯೋ ಮಾಡಲು ಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಹೌದು ಕೊಲೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿರುವ ಪೊಲೀಸರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಮತ್ತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅಚ್ಚರಿ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿಗೆ ಹಿಗ್ಗಾಮಗ್ಗಾ ಥಳಿಸಿ ಬಳಿಕ ಘಟನೆ ಬಗ್ಗೆ ಅವನಿಂದಲೇ ಕ್ಷಮಾಪಣೆ ಕೇಳಿಸಲು ದರ್ಶನ್ ಅಂಡ್ ಗ್ಯಾಂಗ್ ಪ್ರಯತ್ನಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಹಿರಂವಾಗಿದೆ. ಇನ್ಮುಂದೆ ಈ ರೀತಿ ಮಾಡೊಲ್ಲ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜಾಗಲಿ, ಫೋಟೊಗಳಾಗಲಿ ಕಳಿಸುವುದಿಲ್ಲ ನನ್ನ ಕ್ಷಮಿಸಿ ಎಂದು ಕ್ಷಮಾಪಣೆ ಕೇಳುವಂತೆ ಗ್ಯಾಂಗ್ ಒತ್ತಾಯ ಮಾಡಿತ್ತು. ಆದರೆ ಅಷ್ಟೊತ್ತಿಗಾಗಲೇ ನಿಲ್ಲಲು, ಕೂರಲು ಆದಷ್ಟು ಮನಬಂದಂತೆ ಬಡಿದಿದ್ದರಿಂದ ರೇಣುಕಾಸ್ವಾಮಿ ಮಾತಾಡುವ…

Read More

ಬೆಳಗಾವಿ : ಯುವಕನನ್ನು ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಬಳಿ ನಡೆದಿದೆ. ಲಕ್ಷ್ಮೇಶ್ವರ ನಿವಾಸಿ ಮೌಲಾಸಾಬ ಯಾಸಿನ್​ ಮೋಮಿನ್​ (28) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ. ಕೊಲೆ ಆರೋಪಿ ಅಮೋಘ ಢವಳೇಶ್ವರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮೋಘನ ಪತ್ನಿಯನ್ನು ಬೈಕ್ ಮೇಲೆ ಕೊಲೆಯಾದ ಯಾಸಿನ್ ಮೋಮಿನ್ ಕರೆದುಕೊಂಡು ಹೋಗುತ್ತಿದ್ದ. ಇದೇ ವೇಳೆ ದಾಳಿ ಮಾಡಿದ ಅಮೋಘ, ಯಾಸಿನ್ ಮೋಮಿನ್‌ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯಾಸಿನ್ ಸ್ಥಳದಲ್ಲಿಯೇ ಕೊನೆಯುಸಿರೆಳೆದ್ದಾನೆ. ಘಟನೆಯಲ್ಲಿ ಆರೋಪಿಯ ಪತ್ನಿ ತೀವ್ರ ಗಾಯಗೊಂಡಿದ್ದು, ಢವಳೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಮಚ್ಚು ಹಿಡಿದು ಬಂದ ತಂಡದಿಂದ ಏಕಾಏಕಿ ದಾಳಿ ನಡೆದಿದೆ. ನೋಡ ನೋಡುತ್ತಿದ್ದಂತೆ ಯುವಕನ ಮೇಲೆ ದಾಳಿ ಮಾಡಿ ಗ್ಯಾಂಗ್ ಪರಾರಿಯಾಗಿದೆ. ಘಟನೆಯಿಂದ ಲಕ್ಷ್ಮೇಶ್ವರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಜಮೀನಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿರುವ ಘಟನೆ ಚಿಕ್ಕಬಳ್ಳಾಪುರದ ಮೋಟ್ಲುರು ಗ್ರಾಮದಲ್ಲಿ ನಡೆದಿದೆ. ಪೊಲೀಸರ ಎದುರೇ ಕುಟುಂಬಸ್ಥರು ಹೊಡಿಬಡಿ ನಡೆಸಿದ್ದಾರೆ. ಇದೆ ವೇಳೆ ಕಲ್ಲು ಮಣ್ಣಿನ ಪಾಟ್ ನಿಂದ ಮಹಿಳೆಯ ಮೇಲೆ ದಾಳಿ ನಡೆಸಲಾಗಿದೆ. 1 ಎಕರೆ 9 ಗುಂಟೆ ಜಮೀನಿಗಾಗಿ ಇಂದ್ರಮ್ಮ ಕುಟುಂಬ ಹಾಗೂ ಜಗದೀಶ್ ಕುಟುಂಬಸ್ಥರ ನಡುವೆ ಹೊಡೆದಾಟ ಆರಂಭವಾಗಿದ್ದು, ಜಮೀನಿನಲ್ಲಿ ಜಗದೀಶ್ ಕುಟುಂಬ ಮಹಾಗಣಿ ಸಸಿ ನೆಟ್ಟಿದ್ದರು. ಇಂದ್ರಮ್ಮ ಅನ್ನೋರ ಹೆಸರಿನಲ್ಲಿರುವ ಆರ್ ಟಿ ಸಿ ದಾಖಲೆ ಇದೆ. ಹೀಗಾಗಿ ಜಗದೀಶ್ ಕುಟುಂಬದವರು ನೆಟ್ಟಿದ್ದ ಮಹಾಗಣಿ ಸಸಿಗಳನ್ನು ಇಂದ್ರಮ್ಮ ಕಿತ್ತುಹಾಕಿದ್ದರು. ಈ ವಿಚಾರಕ್ಕೆ ಇಂದ್ರಮ್ಮ ಹಾಗೂ ಜಗದೀಶ್ ಕುಟುಂಬ ನಡುವೆ ಮಾರಾಮಾರಿ ನಡೆದಿದೆ. ಜಮೀನಿನ ವಿವಾದ ಇನ್ನೂ ಕೋರ್ಟ್ ನಲ್ಲಿದ್ದು ಈಗ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.

Read More

ಶಿವಮೊಗ್ಗ : ಮಳೆಗಾಲದಲ್ಲಿ ಎಷ್ಟೇ ಜಾಗೃತರಾಗಿದ್ದರು ಕೂಡ ಅನಾಹುತಗಳು ಸಂಭವಿಸುತ್ತವೆ. ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತೆರಳುವ ಜನರಿಗೆ ಎಷ್ಟೇ ಎಚ್ಚರಿಸಿದರು ಕೂಡ ನಿರ್ಲಕ್ಷದಿಂದ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾರೆ. ಇದೀಗ ಯುವಕನೊಬ್ಬ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಆದರೆ ವೀಕ್ಷಣೆಗೆ ಎಂದು ಬಂದವನು ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಹೌದು ಗದಗ ಮೂಲದ ಆನಂದ್ (24) ಕಣ್ಮರೆಯದ ಯುವಕ ಎಂದು ಹೇಳಲಾಗುತ್ತಿದ್ದು, ಜೂನ್ 15 ರಂದು ಆನಂದ್ ಜೋಗ ಜಲಪಾತ ವೀಕ್ಷಿಸಲು ಬೆಂಗಳೂರಿನಿಂದ ಆಗಮಿಸಿದ್ದನು. ಬೆಂಗಳೂರಲ್ಲಿ ಆನಂದ್ ಟೀ ಪಾಯಿಂಟ್ ಇಟ್ಟುಕೊಂಡಿದ್ದ. ಇದೀಗ ಪೋಲೀಸರು ಆನಂದ್ ಗಾಗಿ ಶೋಧ ನಡೆಸುತ್ತಿದ್ದು, ದಟ್ಟ ಮಂಜು ಇದ್ದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಸಹಕಾರದೊಂದಿಗೆ ಯುವಕನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಳೆದ ಕೆಲವು ತಿಂಗಳಗಳ ಹಿಂದೆ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ಆ ಘಟನೆಗಳಿಂದಲೇ ಜನರು ಇನ್ನೂ ಹೊರ ಬಂದಿಲ್ಲ, ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪೂಜಾರಿ ಒಬ್ಬರನ್ನು ಕೊಲೆ ಮಾಡಿದ್ದಾರೆ. ಹೌದು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ಆಗಿದೆ. ಹುಬ್ಬಳ್ಳಿಯ ಈಶ್ವರನಗರದಲ್ಲಿ ವೈಷ್ಣವಿ ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವಂತಹ ಘಟನೆ ಇಂದು ನಡೆದಿದೆ. ನವನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಲ್ಲದೆ ಇದೆ ಪೂಜಾರಿಯ ಮೇಲೆ ಕಳೆದ ಒಂದು ವರ್ಷದ ಹಿಂದೆ ಕೂಡ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದರು. ಅಂದು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಇಂದು ಸಾವನ್ನಪ್ಪಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಡಿಮೆ ಸುಳ್ಳಕ್ಕೆ ನಾವಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ದುಷ್ಕರ್ಮಿಗಳಿಗಾಗಿ ಬಲೇ ಬೀಸಿದ್ದಾರೆ.

Read More

ಬೆಂಗಳೂರು : ಮಹಿಳೆಗೆ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಲವ್ ಮಾಡಿ ನಂತರ ಆಕೆಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, 41 ಲಕ್ಷ ಹಣ 5 ಲಕ್ಷ ಮೌಲ್ಯದ ಎಲ್ಐಸಿ ಬಾಂಡ್ ಕಿತ್ತುಕೊಂಡು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮಹಿಳೆಯರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಹೌದು ಚಿಕ್ಕಬಾಣಾವರದ ವಿಶ್ವನಾಥ್ ಅಲಿಯಾಸ್ ವಿಷ್ಣುಗೌಡ ವಿರುದ್ಧ ಮಹಿಳೆ ಇದೀಗ ದೂರು ದಾಖಲಿಸಿದ್ದಾಳೆ. ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವುದಾಗಿ ವಿಶ್ವನಾಥ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೆ, ಚೆಕ್ ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿಯ ಮೇಲೆ ವಿಶ್ವನಾಥ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತ ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ವಿಶ್ವನಾಥ ವಿಕೃತಿ ಮೆರೆದಿದ್ದಾನೆ. ತನ್ನನ್ನು ದೈಹಿಕವಾಗಿ ಬಳಸಿಕೊಂಡು ವಂಚನೆ ಮಾಡಿರುವುದಾಗಿ ದೂರು ಸಲ್ಲಿಸಲಾಗಿದೆ. ವಿಶ್ವನಾಥ್ ಅಲಿಯಾಸ್ ವಿಷ್ಣು ಗೌಡ ವಿರುದ್ಧ 40 ವರ್ಷದ…

Read More

ಮೈಸೂರು : ಪತಿ ತೀರಿಹೋದ ಬಳಿಕ ಆಕೆಗೆ ಪತಿಯ ವಿಮೆಯಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಇದೆ ಆಕೆಯ ಸಂಬಂಧಿಕರ ನಿದ್ದೆಗೆಡಿಸಿದೆ. ಹಾಗಾಗಿ ಮಾರಕಾಸ್ತ್ರಗಳಿಂದ ಮಹಿಳೆಯನ್ನು ಭೀಕರವಾಗಿ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ನಡೆದಿದೆ. ಹೌದು ಭಾಗ್ಯವತಿ(32) ಮೃತ ಮಹಿಳೆ. ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಇವರಿಗೆ ಸಂಪತ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ, 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪತಿಯನ್ನು ಕಳೆದುಕೊಂಡ ಆಕೆ ಧೈರ್ಯ ಕಳೆದುಕೊಳ್ಳದೆ ಇದ್ದ ಎರಡೂವರೆ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ತನ್ನ ಕಾಲುಗಳ ಮೇಲೆ ನಿಂತುಕೊಂಡಿದ್ದಳು.ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು…

Read More

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 469 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಲ್ಲಿ 292 ಕೇಸ್ ಗಳು ದಾಖಲಾಗಿವೆ. ಇದುವರೆಗೂ ರಾಜ್ಯದಲ್ಲಿ ಡೆಂಘಿಗೆ 10 ಜನರು ಸಾವನ್ನಪ್ಪಿದ್ದರೆ. ಹಾಗಾಗಿ ರಾಜ್ಯದಲ್ಲಿ ಇವರೆಗೆ ಡೆಂಘಿ ಪ್ರಕರಣಗಳ ಸಂಖ್ಯೆ ಒಟ್ಟು 14,223ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಇತ್ತೀಚಿಗೆ ಬೆಂಗಳೂರಿನ ಜನತೆಗೆ ಆರೋಗ್ಯ ಇಲಾಖೆಯು ಡೆಂಘಿ ರೋಗಕ್ಕೆ ಉಚಿತ ಸಹಾಯವಾಣಿ ಆರಂಭಿಸಿದ್ದು, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಟೋಲ್ ಫ್ರೀ ಸಂಖ್ಯೆ 1800-425-8330 ಆರಂಭಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗೆ ಕರೆ ಮಾಡಿ ಸೂಕ್ತ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Read More